ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರೂಪದ ಹಳದಿ ಕಲ್ಲಂಗಡಿ ಬೆಳೆದು ಲಾಭ ಪಡೆದ ಕಲಬುರಗಿ ರೈತ

|
Google Oneindia Kannada News

ಕಲಬುರಗಿ, ಫೆಬ್ರವರಿ 24: ಬೇಸಿಗೆ ಕಾಲ ಆರಂಭವಾಗುತ್ತಿದೆ. ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಕೆಂಪು ಬಣ್ಣದ ಕಲ್ಲಂಗಡಿಯನ್ನು ನಾವು ನೋಡಿದ್ದೇವೆ. ಆದರೆ, ಹಳದಿ ಕಲ್ಲಂಗಡಿ ಹಣ್ಣು ಸಹ ಉತ್ತಮ ರುಚಿಯನ್ನು ಹೊಂದಿದೆ.

ಕಲಬುರಗಿ ಜಿಲ್ಲೆಯ ಕೊರಳ್ಳಿ ಗ್ರಾಮದ ರೈತ ಬಸವರಾಜ್ ಪಾಟೀಲ್ ತಮ್ಮ ತೋಟದಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ಬೇಡಿಕೆ ಇದ್ದು, ಉತ್ತಮ ಆದಾಯಗಳಿಸಿದ್ದಾರೆ.

ಚಿತ್ರದುರ್ಗದಲ್ಲಿ ಬಾಗಿಲು ತೆರೆಯಲಿದೆ ಖಾಸಗಿ ಕೃಷಿ ಮಾರುಕಟ್ಟೆಚಿತ್ರದುರ್ಗದಲ್ಲಿ ಬಾಗಿಲು ತೆರೆಯಲಿದೆ ಖಾಸಗಿ ಕೃಷಿ ಮಾರುಕಟ್ಟೆ

ಪದವೀಧರರಾಗಿರುವ ರೈತ ಬಸವರಾಜ್ ಪಾಟೀಲ್ 2 ಲಕ್ಷ ರೂಪಾಯಿ ಖರ್ಚು ಮಾಡಿ ಹಳದಿ ಕಲ್ಲಂಗಡಿ ಬೆಳೆದಿದ್ದರು. ಈಗ ಹಣ್ಣುಗಳನ್ನು ಮಾರಾಟ ಮಾಡಿ 3 ಲಕ್ಷ ರೂ. ಆದಾಯ ಪಡೆದಿದ್ದಾರೆ.

91ನೇ ದಿನಕ್ಕೆ ಕಾಲಿಟ್ಟ ದಿಲ್ಲಿ ರೈತ ಚಳವಳಿ 91ನೇ ದಿನಕ್ಕೆ ಕಾಲಿಟ್ಟ ದಿಲ್ಲಿ ರೈತ ಚಳವಳಿ

 Kalaburagi Farmer Cultivated Yellow Watermelons

ಹಳದಿ ಕಲ್ಲಂಗಡಿ ಹಣ್ಣುಗಳನ್ನು ನಗರದ ಮಾರ್ಟ್‌ಗಳು, ಬಿಗ್ ಬಜಾರ್‌ಗೆ ಮಾರಾಟ ಮಾಡಿದ್ದಾರೆ. ಕೆಂಪು ಬಣ್ಣದ ಕಲ್ಲಂಗಡಿ ಹಣ್ಣಿಗಿಂತ ಇದು ರುಚಿ ಇದ್ದು, ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದೆ.

 ಸಂಘಟಿತ ರೈತ ಚಳವಳಿ ಅನಿವಾರ್ಯ - ರಾಜಕೀಯ ಪಕ್ಷಗಳೊಂದಿಗಿನ ಹೊಂದಾಣಿಕೆ ಅಲ್ಲ- ಕೆ.ಟಿ.ಜಿ ಸಂಘಟಿತ ರೈತ ಚಳವಳಿ ಅನಿವಾರ್ಯ - ರಾಜಕೀಯ ಪಕ್ಷಗಳೊಂದಿಗಿನ ಹೊಂದಾಣಿಕೆ ಅಲ್ಲ- ಕೆ.ಟಿ.ಜಿ

ಕೆಂಪು ಕಲ್ಲಂಗಡಿ ಹಣ್ಣು ಟನ್‌ಗೆ 5 ರಿಂದ 7 ಸಾವಿರ ರೂ.ಗಳಿಗೆ ಮಾರಾಟವಾಗುತ್ತಿದೆ. ಆದರೆ, ಹಳದಿ ಕಲ್ಲಂಗಡಿ ಟನ್‌ಗೆ 15 ಸಾವಿರ ರೂ. ತನಕ ಮಾರಾಟವಾಗುತ್ತಿದೆ.

 Kalaburagi Farmer Cultivated Yellow Watermelons

ಜರ್ಮನಿಯಿಂದ ಬೀಜಗಳನ್ನು ತರಿಸಿ ರೈತ ಬಸವರಾಜ್ ಪಾಟೀಲ್ ತಮ್ಮ ಹೊಲದಲ್ಲಿ ಹಳದಿ ಕಲ್ಲಂಗಡಿ ಬೆಳೆದಿದ್ದಾರೆ. ಆಫ್ರಿಕಾ ಖಂಡಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಲಬುರಗಿಯಲ್ಲಿ ಉಷ್ಣಾಂಶ ಹೆಚ್ಚಾಗಿ ಇರುವುದರಿಂದ ಬೆಳೆಯೂ ಚೆನ್ನಾಗಿ ಬಂದಿದೆ.

English summary
Farmer Basavaraj from Koralli village in Kalaburagi has cultivated yellow watermelons in his field. He invested Rs 2 lakhs & have earned profit of over Rs 3 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X