ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಇಸ್ರೇಲ್ ಮಾದರಿ ಕೃಷಿಗೆ ಮುಂದಾದ ಕುಮಾರಸ್ವಾಮಿ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 3: ರಾಜ್ಯದಲ್ಲಿ ತಮ್ಮ ಕನಸಿನ ಇಸ್ರೇಲ್ ಮಾದರಿ ಕೃಷಿ ಜಾರಿಗೆ ತರಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ. ಪ್ರಯೋಗಾರ್ಥವಾಗಿ ಇದನ್ನು ಜಾರಿಗೆ ತರಲು ಮಂಡ್ಯ ಜಿಲ್ಲೆಯನ್ನು ಆಯ್ದುಕೊಂಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಇಸ್ರೇಲ್ ಮಾದರಿ ಕೃಷಿಪದ್ಧತಿ ಜಾರಿಗೆ ಮಂಡ್ಯದಲ್ಲಿ 900 ಎಕರೆ ಭೂಮಿಯನ್ನು ಗೊತ್ತುಪಡಿಸಲಾಗಿದೆ. "ಇದು ಪೈಲೆಟ್ ಪ್ರಾಜೆಕ್ಟ್ ಆಗಲಿದೆ. ಇದಕ್ಕೆ ಇಸ್ರೇಲ್ ನಿಂದ ಪರಿಣತರನ್ನು ಕರೆಸಿ ಅಗತ್ಯ ಮಾಹಿತಿ ಮತ್ತು ತರಬೇತಿಯನ್ನು ಕೊಡಿಸಲು ಉದ್ದೇಶಿಸಿದ್ದೇನೆ," ಎಂದು ಸಿಎಂ ತಮ್ಮ ಟ್ಟಿಟ್ಟರಿನಲ್ಲಿ ಹೇಳಿಕೊಂಡಿದ್ದಾರೆ.

ಅನಗತ್ಯ ವೆಚ್ಚ ಕಡಿತಕ್ಕೆ ಸಿಎಂ ಕುಮಾರಸ್ವಾಮಿ ಸೂಚನೆಅನಗತ್ಯ ವೆಚ್ಚ ಕಡಿತಕ್ಕೆ ಸಿಎಂ ಕುಮಾರಸ್ವಾಮಿ ಸೂಚನೆ

ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಕುಮಾರಸ್ವಾಮಿ, "ರಾಜ್ಯದಲ್ಲಿ ಮಳೆಗಾಲಕ್ಕೆ ಮುನ್ನವೇ ಶೇ 51 ರಷ್ಟು ಹೆಚ್ಚು ಮಳೆ ಬಿದ್ದಿದೆ. ಇನ್ನೂ ಮೂರು ದಿನ ಉತ್ತಮ ಮಳೆಯಾಗಲಿದೆ. ಕೃಷಿ ಚಟುವಟಿಕೆ ಭರದಿಂದ ಸಾಗಿದೆ. ರೈತರಿಗೆ ಭಿತ್ತನೆ ಬೀಜ, ರಾಸಾನಿಕಗಳ ಪೂರೈಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ," ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Israel model farm in the state: HD Kumaraswamy

ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮಕ್ಕೆ ಸಿಎಂ ಕುಮಾರಸ್ವಾಮಿ ನಿರ್ದೇಶನಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮಕ್ಕೆ ಸಿಎಂ ಕುಮಾರಸ್ವಾಮಿ ನಿರ್ದೇಶನ

ಇನ್ನು ಕಳಪೆ ಗುಣಮಟ್ಟದ ಭಿತ್ತನೆ ಬೀಜ, ರಾಸಾನಿಕಗಳ ಪೂರೈಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶಕೊಟ್ಟಿದ್ದಾರೆ. "ತಪ್ಪು ಮಾಡಿದವರು ಯಾರೇ ಆದರೂ ಅಂಥವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಆದೇಶ ಕೊಟ್ಟಿದ್ದೇನೆ," ಎಂದಿದ್ದಾರೆ.

English summary
Chief Minister HD Kumaraswamy has come forward to implement his dream Israel model farm in the state. Mandya district has chosen to implement it in experimental basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X