ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟಿ ಬಗ್ಗೆ ವಕಾಲತ್ತು ವಹಿಸಿರುವ ರೈತ ಮುಖಂಡರ ಆಸ್ತಿ ಲೆಕ್ಕ ಕೇಳಿ!

|
Google Oneindia Kannada News

ಮಹಾರಾಷ್ಟ್ರದಲ್ಲಿ ಕೆಲವು ರೈತರು ಕುಲಾಂತರಿ ಕಳೆನಾಶಕ ನಿರೋಧಕ ಹತ್ತಿ (HTBT), ಕುಲಾಂತರಿ ಮೆಕ್ಕೆ ಜೋಳ ಹಾಗೂ ಬದನೆಯನ್ನು ಕಾನೂನು ಬಾಹಿರವಾಗಿ ಬೆಳೆಯಲು ಮುಂದಾಗಿದ್ದಾರೆ. ಮುಂದುವರೆದು, ತಮ್ಮ ಆ ನಿಲುವನ್ನು "ತಂತ್ರಜ್ಞಾನ ಸ್ವಾತಂತ್ರ್ಯ" ಎಂದು ಬಣ್ಣಿಸಿದ್ದಾರೆ. ಇದೊಂದು ಕೇಡಿನ ಕೆಲಸವಾಗಿದ್ದು, ದೇಶದಲ್ಲಿ HTBT ಹತ್ತಿ ಬೆಳೆಯಲು ಕಾನೂನು ರೀತ್ಯಾ ಅವಕಾಶವಿಲ್ಲ. ಆಹಾರ ಬೆಳೆಗಳಾದ ಕುಲಾಂತರಿ ಬದನೆ (BT Brinjal) ಮತ್ತು ಮೆಕ್ಕೆ ಜೋಳ ಬೆಳೆಯಲು ಅಪ್ಪಿತಪ್ಪಿಯೂ ಅವಕಾಶ ಕಲ್ಪಿಸಲಾಗಿಲ್ಲ. ಭಾರತದಲ್ಲಿ ಅವು ಇನ್ನೂ ಪ್ರಯೋಗಾಲಯಕ್ಕೆ ಸೀಮಿತವಾದ ಬೆಳೆಗಳು.

Recommended Video

ಹುಚ್ಚ ವೆಂಕಟ್ ಗೆ ಹೊಡೆದವರ ಮೇಲೆ FIR ದಾಖಲು | Huccha Venkat | Srirangapatna

ಕೃಷಿ ಭೂಮಿಯಲ್ಲಿ ಪ್ರಯೋಗಾತ್ಮಕವಾಗಿ ಬೆಳೆಯಲು ಕೂಡಾ ನೂರೆಂಟು ಪರಿಸರ ಕಾಳಜಿಯ ತಕರಾರುಗಳಿವೆ. ನೈಜ ತಕರಾರುಗಳವು. ಆದರೂ ಮಹಾರಾಷ್ಟ್ರಕೃಷಿ ಭೂಮಿಯಲ್ಲಿ ಪ್ರಯೋಗಾತ್ಮಕವಾಗಿ ಬೆಳೆಯಲು ಕೂಡಾ ನೂರೆಂಟು ಪರಿಸರ ಕಾಳಜಿಯ ತಕರಾರುಗಳಿವೆ. ನೈಜ ತಕರಾರುಗಳವು. ಆದರೂ ಮಹಾರಾಷ್ಟ್ರದ ಕೆಲವು ರೈತರು "ತಂತ್ರಜ್ಞಾನ ಸ್ವಾತಂತ್ರ್ಯ" ದ ಹೆಸರಿನಲ್ಲಿ ಕುಲಾಂತರಿ ಆಹಾರ ಬೆಳೆಗಳನ್ನು ಹೋರಾಟದ ಹೆಸರಿನಲ್ಲಿ ಬೆಳೆಯಲು ಮುಂದಾಗಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈವರೆಗೆ ದೇಶದ ರೈತ ಸಂಘಟನೆಗಳು ಮಾತನಾಡುತ್ತಾ ಬಂದದ್ದು ಬಿತ್ತನೆ ಬೀಜ ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆಯ ಬಗ್ಗೆ. ಇದನ್ನು ಪ್ರೊ. ಎಂ.ಡಿ ನಂಜುಂಡಸ್ವಾಮಿ ಅವರು ""ಬೀಜ ಸಾರ್ವಭೌತ್ವ'' ಎಂದರು.

ಕರ್ನಾಟಕ ಸರ್ಕಾರದಿಂದ ದೇಶ ದ್ರೋಹದ ಕೆಲಸ: ರೈತ ಸಂಘಕರ್ನಾಟಕ ಸರ್ಕಾರದಿಂದ ದೇಶ ದ್ರೋಹದ ಕೆಲಸ: ರೈತ ಸಂಘ

HTBT ಹತ್ತಿಯ ವಿಚಾರಕ್ಕೆ ಬರೋಣ

HTBT ಹತ್ತಿಯ ವಿಚಾರಕ್ಕೆ ಬರೋಣ

ಬಂದ ಫಸಲಿನಲ್ಲಿ ಉತ್ತಮ ಗುಣಮಟ್ಟದ "ಬೀಜದ ಕಾಯಿ"ಗಳನ್ನು ಶೇಖರಿಸಿ ಮುಂದಿನ ಹಂಗಾಮಿಗೆ ಬಳಸುತ್ತಿದ್ದದ್ದು ವಾಡಿಕೆ. ಅದು ನಮ್ಮ ರೈತರ ಬೀಜ ಸ್ವಾತಂತ್ರ್ಯ, ಸ್ವಾವಲಂಬನೆ. ಇದೀಗ ಮಹಾರಾಷ್ಟ್ರದ ಕೆಲ ರೈತರು ಬಿತ್ತನೆ ಬೀಜ ಕೊಳ್ಳುವುದನ್ನೇ ‘ತಂತ್ರಜ್ಞಾನ ಸ್ವಾತಂತ್ರ್ಯ'ವೆಂದು ಬಣ್ಣಿಸಿರುವುದರ ಹಿಂದೆ ಬಹುದೊಡ್ಡ ಜಾಲವಿರಬಹುದಾದ ಗುಮಾನಿ ನಿನ್ನೆ ಮೊನ್ನೆ ಕೃಷಿ ಕ್ಷೇತ್ರದ ಅರ್ಥ ಮಾಡಿಕೊಳ್ಳಲೆತ್ನಿಸುತ್ತಿರುವವರೂ ಊಹಿಸಬಹುದು! Herbicide Tolerant- ಕಳೆನಾಶಕ ಸಹಿಷ್ಣು ಹತ್ತಿ ಬೀಜವಿದು. ಇದು ಬೆಳೆಯಲು ಕಾನೂನು ರೀತ್ಯಾ ಅವಕಾಶವಿಲ್ಲ. ಆದರೂ ಬೆಳೆಯಲಾಗುತ್ತಿದೆ. ಗುಜರಾತ್ ರಾಜ್ಯದಲ್ಲಿ ಬೆಳೆವ ಒಟ್ಟಾರೆ ಹತ್ತಿಯ ಶೇಕಡಾ 70 ರಷ್ಟು HTBT ಬೆಳೆಯಲಾಗುತ್ತಿದೆ. ಅಲ್ಲಿಂದ ಮಹಾರಾಷ್ಟ್ರಕ್ಕೂ ಬೀಜಗಳು ರವಾನೆಯಾಗುತ್ತಿವೆ.

ದೇಸಿ ಹತ್ತಿ ತಳಿಗಳನ್ನು ನೋಡುವುದೇ ದುಸ್ತರ

ದೇಸಿ ಹತ್ತಿ ತಳಿಗಳನ್ನು ನೋಡುವುದೇ ದುಸ್ತರ

ಈ ಬಗ್ಗೆ ಮಹಾರಾಷ್ಟ್ರದ ಹಿರಿಯ ರೈತ ಹೋರಾಟಗಾರ ವಿಜಯ್ ಜವಂದಿಯಾ ಅವರನ್ನು ಒನ್ಇಂಡಿಯಾ ಸಂಪರ್ಕಿಸಿದಾಗ, ಅವರು ಹೇಳುವ ಪ್ರಕಾರ "ಬೀಜ ಕಂಪನಿಗಳ ವಕ್ತಾರರಂತೆ ಕೆಲಸ ಮಾಡುವ ರೈತ ಸಂಘಟನೆಗಳ ಬಗ್ಗೆ ಏನು ಹೇಳಬೇಕೋ ತಿಳಿಯುವುದಿಲ್ಲ, ಇದೊಂದು ದೊಡ್ಡ ಜಾಲವಾಗಿದೆ. ಹಿಂದೆ ಕುಲಾಂತರಿ ಹತ್ತಿ (BT COTTON) ಬೆಳೆಯಲು ಭಾರತದಲ್ಲಿ ಇನ್ನೂ ಅವಕಾಶ ನೀಡದೆ ಇದ್ದಾಗ ನಾವೆಲ್ಲಾ, ಪ್ರೊ. ಎಂಡಿಎನ್ ಅವರೊಂದಿಗೆ ಅದರ ವಿರುದ್ಧ ಹೋರಾಟ ನಡೆಸಿದ್ದೆವು. ಆದರೆ ತಡೆಯಲಾಗಲಿಲ್ಲ. ಇದೀಗ ದೇಸಿ ಹತ್ತಿ ತಳಿಗಳನ್ನು ನೋಡುವುದೇ ದುಸ್ತರವಾಗಿದೆ. ದೇಶದಲ್ಲಿ ಶೇಕಡಾ 99 ರಷ್ಟು ಹತ್ತಿ ಬಿ.ಟಿ ಯಿಂದ ತುಂಬಿ ಹೋಗಿದೆ. ಅದರಿಂದ ಪರಿಸರ ಹಾಗೂ ರೈತರ ಆರ್ಥಿಕತೆಯ ಮೇಲಾದ ದುಷ್ಪರಿಣಾಮಗಳು ಎಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ಬಿಟಿ ಆಹಾರ ಬೆಳೆಗಳನ್ನೂ ಬೆಳೆಯಲು ಮುಂದಾಗಿರುವ ರೈತರು ಅಪಾಯ ಮೇಲೆಳೆದುಕೊಳ್ಳುತ್ತಿದ್ದಾರೆ.

"CALM BEFORE STORM" ಎಂಬಂತೆ ಮುಂದಿನ ದಿನಗಳಲ್ಲಿ ಮಿಡತೆಗಳ ದಾಳಿ ಭೀಕರವಾಗಲಿದೆ

ಬಿಟಿ ಹತ್ತಿ ಬಗ್ಗೆ ಮಾತನಾಡುತ್ತಿದ್ದೆ: ಜವಂದಿಯಾ

ಬಿಟಿ ಹತ್ತಿ ಬಗ್ಗೆ ಮಾತನಾಡುತ್ತಿದ್ದೆ: ಜವಂದಿಯಾ

ನೋಡಿ ಈಗ ಯೂರೋಪ್ ನ ಅನೇಕ ದೇಶಗಳಲ್ಲಿ ಕುಲಾಂತರಿ ಆಹಾರ ಬೆಳೆಯ ವಿರುದ್ಧ ಹೋರಾಟ ನಡೆದಿದೆ. ಅಲ್ಲಿ ಇನ್ನೊಂದು ಕಾನೂನಿದೆ. ಕುಲಾಂತರಿ ಆಹಾರ ಬೆಳೆಗಳಿಂದ ತಯಾರಾದ ಯಾವುದೇ ತಿನಿಸಿನ ಪೊಟ್ಟಣಗಳ ಮೇಲೆ ಅದು ಕುಲಾಂತರಿ ಎಂದು ನಮೂದಿಸಿರಬೇಕು. ಆಗ ತಿನ್ನುವವರಿಗೆ ನೀವು ಆಯ್ಕೆಯ ಸ್ವಾತಂತ್ರ್ಯವನ್ನಾದರೂ ಕೊಡುತ್ತೀರಿ. ನಮ್ಮ ದೇಶದಲ್ಲಿ ಇನ್ನೂ ಅಂಥ ಯಾವುದೇ ಕಾನೂನುಗಳೂ ಇಲ್ಲ.

ಬಿ.ಟಿ ಹತ್ತಿ ಬೀಜಗಳು ರೈತರ ಹೊಲದಲ್ಲೇ ಉತ್ಪಾದನೆಯಾಗುತ್ತಿವೆ. ಒಂದು ಕೇಜಿ ಬಿತ್ತನೆ ಬೀಜ ಬೆಳೆದು ಕೊಡಲು ರೈತರಿಗೆ 400 ರುಪಾಯಿ ಕೊಡುತ್ತಿರುವ ಕಂಪನಿಗಳು, ಅವನ್ನೇ ಪ್ಯಾಕ್ ಮಾಡಿ 2000 ರೂಪಾಯಿ ಕೇಜಿಗೆ ಮಾರಾಟ ಮಾಡುತ್ತಾರೆ. ಮಾಹಾರಾಷ್ಟ್ರವೊಂದೆ ರಾಜ್ಯಕ್ಕೇ ಒಂದು ವರ್ಷದಲ್ಲಿ 2 ಕೋಟಿ ಹತ್ತಿ ಬೀಜ ಪೊಟ್ಟಣಗಳು ಬೇಕು. ಇದು ಗುಜರಾತ್ ಮತ್ತು ಆಂಧ್ರಪ್ರದೇಶದಿಂದ ಸರಬರಾಜಾಗುತ್ತಿದೆ.

ರೈತರೇ.. ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಬೇಡ: ಕೃಷಿ ತಜ್ಞರ ಅಭಿಪ್ರಾಯರೈತರೇ.. ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಬೇಡ: ಕೃಷಿ ತಜ್ಞರ ಅಭಿಪ್ರಾಯ

ನಾನು ತಂತ್ರಜ್ಞಾನದ ವಿರೋಧಿಯಲ್ಲ

ನಾನು ತಂತ್ರಜ್ಞಾನದ ವಿರೋಧಿಯಲ್ಲ

ಇದೆಲ್ಲಾ ಹಿನ್ನೆಲೆ ನಿಮಗ್ಯಾಕೆ ಹೇಳಿದೆ ಅಂದರೆ, ಬಿತ್ತನೆ ಬೀಜ ಕಂಪನಿಗಳ ವಹಿವಾಟು ಮತ್ತು ಇಡೀ ಮಾರುಕಟ್ಟೆಯನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಳ್ಳಬಯಸುವ ಅವರ ಗುರಿಗೆ ರೈತರೆನಿಸಿಕೊಂಡವರು ಬಲಿಯಾಗಿದ್ದಾರೆ. ಕೆಲವು ರೈತ ಸಂಘಗಳು ಅವರ ಪರವಾಗಿ ಕೆಲಸ ಮಾಡುತ್ತಿವೆ. ಹಾಗಾಗಿ ಇಂಥವೆಲ್ಲಾ ಸುದ್ದಿ ಕಿವಿಗೆ ಬಿದ್ದಾಗ ನಮ್ಮ ನಿಮ್ಮಂಥವರಿಗೆ ಆಘಾತವಾಗುತ್ತದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ವಿಜಯ್ ಜವಂದಿಯಾ, ನಾನು ತಂತ್ರಜ್ಞಾನದ ವಿರೋಧಿಯಲ್ಲ. ಬಿತ್ತನೆ ಬೀಜ ಕೊಡುವುದಾದರೆ straight line variety ಕೊಡಲಿ. ಈ ಬಾರಿ ಬಿತ್ತನೆಗೆ ಬಳಸಿದ ಬೀಜಗಳು ಫಸಲು ಬಂದಾದ ಮೇಲೆ ಮುಂದಿನ ಬೆಳೆಗೆ ಅದರಿಂದಲೇ ಗುಣಮಟ್ಟದ ಬೀಜಗಳನ್ನು ಹೆಕ್ಕಿ ತೆಗೆದಿಟ್ಟುಕೊಳ್ಳುವಂತಿರಬೇಕು. ಅಂಥ ತಂತ್ರಜ್ಞಾನ ಇರಲಿ ಎಂದು ಮಾರ್ಮಿಕವಾಗಿ ನುಡಿದರು.

ಕರ್ನಾಟಕ ಮತ್ತು ಕುಲಾಂತರಿ ಬೆಳೆಗಳು

ಕರ್ನಾಟಕ ಮತ್ತು ಕುಲಾಂತರಿ ಬೆಳೆಗಳು

ಕರ್ನಾಟಕ ರಾಜ್ಯ ಕುಲಾಂತರಿ ಆಹಾರ ಬೆಳೆಗಳನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ರಾಜ್ಯದೊಳಗೆ ಯಾವುದೇ ಕಾರಣಕ್ಕೂ ಕುಲಾಂತರಿ ಆಹಾರ ಬೆಳೆಗಳನ್ನು ಬೆಳೆಯಲು ಅವಕಾಶ ಕಲ್ಪಿಸುವುದಿಲ್ಲವೆಂದು ಹಿಂದೆ ಯಡಿಯೂರಪ್ಪನವರೇ ಹೇಳಿದ್ದರು. ಈ ಹಿಂದಿನ ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ ಅವರು ಎಂಡಿಎನ್ ಮಾರ್ಗ ರೈತ ಪರ ವೇದಿಕೆ ನೀಡಿದ್ದ ಮನವಿ ಪತ್ರಕ್ಕೆ ಉತ್ತರವೆಂಬಂತೆ ರಾಜ್ಯದೊಳಗೆ ಕುಲಾಂತರಿ ಆಹಾರ ಬೆಳೆಗಳನ್ನು ಬಾರದೆ ಇರುವಂತೆ ನೋಡಿಕೊಳ್ಳಲು ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿದ್ದರು. ಕೃಷಿ ಇಲಾಖೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಜಿಲ್ಲಾ ಕೃಷಿ ಅಧಿಕಾರಿಗಳಿಗೆ ಕುಲಾಂತರಿ ಆಹಾರ ಬೆಳೆ ಎಲ್ಲಿಯೂ ಕಣ್ತಪ್ಪಿ ಬೆಳೆಯಲು ಅವಕಾಶವಾಗದಂತೆ ನೋಡಿಕೊಳ್ಳಬೇಕೆಂದು ಆದೇಶ ಹೊರಡಿಸಿತ್ತು.

ಮುಂಗಾರು ಆರಂಭ; ರೈತರ ನೆರವಿಗೆ ಬಂದ ಕೇಂದ್ರ ಸರ್ಕಾರಮುಂಗಾರು ಆರಂಭ; ರೈತರ ನೆರವಿಗೆ ಬಂದ ಕೇಂದ್ರ ಸರ್ಕಾರ

ರೈತ ಮುಖಂಡರು ಮತ್ತು ಚಳವಳಿ

ರೈತ ಮುಖಂಡರು ಮತ್ತು ಚಳವಳಿ

ಇದೀಗ ಮಹಾರಷ್ಟ್ರದಲ್ಲಿ ಕುಲಾಂತರಿ ಬೆಳೆಗಳು ನಮಗೆ ಬೇಕು ಎಂದು ವಕಾಲತ್ತು ವಹಿಸುತ್ತಿರುವ ರೈತ ಮುಖಂಡರನ್ನು ಗಮನಿಸಿದಾಗ ಬೀಜ ಕಂಪನಿಗಳ ಲಾಬಿ ಎಷ್ಟರಮಟ್ಟಿಗೆ ಇದೆಯೆಂಬುದು ಅರ್ಥವಾಗುತ್ತದೆ. ಹಾಗಾಗಿ ನಿಜ ರೈತಪರ ಕಾಳಜಿಯ ಸಂಘಟನೆಗಳು ಇದೀಗ ಮಹಾರಾಷ್ಟ್ರದಲ್ಲಿ ಕುಲಾಂತರಿ ಆಹಾರ ಬೆಳೆಯಬೇಕೆಂದು ಕೇಳುತ್ತಿರುವ ಸಂಘಟನೆಗಳ ಮುಖ್ಯಸ್ಥರ ಚಲನವಲನಗಳ ಬಗ್ಗೆ ನಿಗಾವಹಿಸಿ ಅವರ ಆಸ್ತಿಯ ವಿವರಗಳನ್ನು ಕೇಳಬೇಕಿದೆ.

ಇನ್ನು ಮುಂದೆ ಹೋರಾಟ, ಚಳವಳಿಗಳಲ್ಲಿ ತೊಡಗಿರುವವರು ಕೂಡಾ ರಾಜಕಾರಣಿಗಳಂತೆ ತಮ್ಮ ಆಸ್ತಿ ಘೋಷಿಸಿಕೊಳ್ಳಬೇಕು. ಪ್ರತಿ ವರ್ಷ ಆ ಪ್ರಕ್ರಿಯೆ ನಡೆಯಬೇಕು. ಅಂದಾಗ ರೈತ ಸಂಘಗಳ ಹೆಸರಿನಲ್ಲಿ ಹೋರಾಟಗಾರರು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ.

English summary
Some farmers in Maharashtra have come up with illegal cultivation of cottonseed (HTBT), maize and Brinjal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X