ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಂಗ್ ದೇ' ಸಂಸ್ಥೆಯಿಂದ ರೈತರಿಗೆ ಬಡ್ಡಿ ರಹಿತ ಸಾಲ!

|
Google Oneindia Kannada News

ಬೆಂಗಳೂರು, ಮೇ.28: ಭಾರತೀಯ ರೈತರ ಕೃಷಿ ಬದುಕು ಮಾನ್ಸೂನ್ ಮಳೆಯ ಜೊತೆಗಿನ ಜೂಜಾಟ ಎಂದೇ ಕರೆಯಲ್ಪಡುತ್ತದೆ. ಬಡ-ಮಧ್ಯಮ ವರ್ಗದ ರೈತರು ವರ್ಷದ ಬೆಳೆ ಬೆಳೆಯುವುದಕ್ಕೂ ಪರಿತಪಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಅತಿವೃಷ್ಠಿ ಮತ್ತು ಅನಾವೃಷ್ಠಿ ನಡುವೆ ಕೊರೊನಾ ವೈರಸ್ ಕಾಟ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

Recommended Video

120 ಅಡಿ ಆಳದ ಬೋರ್ ವೆಲ್ ಗೆ ಬಿದ್ದ ಬಾಲಕನನ್ನು ಮೇಲೆತ್ತಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ | Oneindia Kannada

ಭಾರತದಲ್ಲಿ ಕೊರೊನಾ ವೈರಸ್ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಸಂದಿಗ್ಘ ಸ್ಥಿತಿಯಲ್ಲಿ ಸಿಲುಕಿರುವ ರೈತರ ನೆರವಿಗೆ 'ರಂಗ್ ದೇ' ಸಂಸ್ಥೆಯು ಮುಂದಾಗಿದೆ. ದೇಶದ ಅನ್ನದಾತರಿಗೆ 1,000 ದಿಂದ 50,000ವರೆಗೆ ಬಡ್ಡಿರಹಿತ ಸಾಲ ನೀಡಲು ಹಾಗೂ ಹಣ ಉಳಿತಾಯಕ್ಕೆ ಯೋಜನೆ ರೂಪಿಸಿದೆ.

ಉದ್ಯೋಗಿನಿ, ಕಿರುಸಾಲ, ಸಮೃದ್ಧಿ ಯೋಜನೆ : ಅರ್ಜಿ ಆಹ್ವಾನಉದ್ಯೋಗಿನಿ, ಕಿರುಸಾಲ, ಸಮೃದ್ಧಿ ಯೋಜನೆ : ಅರ್ಜಿ ಆಹ್ವಾನ

ದೇಶದಲ್ಲಿ ಆಹಾರ, ಹಣ್ಣು ಮತ್ತು ತರಕಾರಿ ಬೆಳೆಯುವ ರೈತರಿಗೆ ಅಗತ್ಯ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ರಂಗ್ ದೇ ಯೋಜನೆ ಜಾರಿಗೊಳಿಸಲಾಗಿದೆ. ರಂಗ್ ದೇ ಸಂಸ್ಥೆಯಲ್ಲಿ ನೀವು ಹೂಡಿಕೆ ಮಾಡಿರುವ ಹಣವನ್ನು ನೇರವಾಗಿ ರೈತರಿಗೆ ಸಾಲದ ರೂಪದಲ್ಲಿ ನೀಡಲಾಗುತ್ತದೆ.

 Interest Free Loan For Farmers From Rang De

ಜನರಿಂದ ಜನರಿಗೆ ಸಾಲ ಸೌಲಭ್ಯ:

ಜನರಿಂದ ಜನರಿಗೆ ಸಾಲ ಸೌಲಭ್ಯವನ್ನು ಒದಗಿಸುವ ಮೊದಲ ಸಾಮಾಜಿಕ ವೇದಿಕೆಯಾಗಿ 'ರಂಗ್ ದೇ' ಕೆಲಸ ಆರಂಭಿಸಿದೆ. ಜನರು ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಹಣವನ್ನೇ ರೈತರ ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಲವಾಗಿ ನೀಡಲಾಗುತ್ತದೆ. ಮೈಕ್ರೋಫೈನ್ಯಾನ್ಸ್ ಕಂಪನಿ ಹಾಗೂ ರಂಗ್ ದೇ ಸಂಸ್ಥೆಗೂ ವ್ಯತ್ಯಾಸವಿದೆ.

'ರಂಗ್ ದೇ' ಸಂಸ್ಥೆಯು 1,000 ದಿಂದ 50,000ದವರೆಗೂ ಸಾಲ ಪಡೆಯುವ ರೈತರು ಮತ್ತು ವ್ಯಾಪಾರಿಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ನೀಡುತ್ತದೆ. ಕಾರಣ ಈ ಪ್ರಮಾಣದಲ್ಲಿ ಸಾಲ ಪಡೆಯುವವರು ಹಣವನ್ನು ಆದಾಯ ಉತ್ಪಾದನಾ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದರಿಂದ ಮೊದಲೇ ನಿಗದಿಗೊಳಿಸಿದ ಯೋಜನೆಯ ಪ್ರಕಾರದಲ್ಲಿ ಬಡ್ಡಿ ಸಹಿತ ಸಾಲವನ್ನು ಮರು ಪಾವತಿ ಮಾಡುತ್ತಾರೆ.

ಪಂಜಾಬ್, ಸಿಕ್ಕಿಂ, ತ್ರಿಪುರಾ, ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್ ಛತ್ತೀಸ್ ಗಢ್, ಮಹಾರಾಷ್ಟ್ರ. ತೆಲಂಗಾಣ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ 'ರಂಗ್ ದೇ' ಸಂಸ್ಥೆಯು ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲು ಯೋಜನೆ ರೂಪಿಸಿದೆ. ಇನ್ನು, ಕೆಲವು ದಿನಗಳಲ್ಲೇ ದೇಶಾದ್ಯಂತ ರೈತರಿಗೆ ಈ ಯೋಜನೆಯನ್ನು ತಲುಪಿಸಲು ಪ್ರಯತ್ನಿಸಲಾಗುತ್ತಿದೆ.

English summary
Interest-free loan for farmers from 'Rang De'. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X