ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಸ್ನೇಹಿ ವಿಧಾನ ಬಳಸಿ ಕೃಷಿಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ

By ಜಹೀರ್ ಅಹಮದ್ ಬಿ., ರಾಜು ಜಿ. ತೆಗ್ಗೆಳ್ಳಿ
|
Google Oneindia Kannada News

ಜನಸಂಖ್ಯೆಗೆ ಆಹಾರ ಒದಗಿಸಲು ಕೃಷಿಯಲ್ಲಿ ಅತಿ ಹೆಚ್ಚಾಗಿ ಬಳಸಲಾದ ರಸಗೊಬ್ಬರ ಮತ್ತು ಪೀಡೆನಾಶಕಗಳಿಂದ ಪರಿಸರ ಮಲಿನಗೊಳ್ಳುತ್ತಿದ್ದು, ನೆಲ, ಜಲ, ವಾಯು ಮಾಲಿನ್ಯಗೊಂಡು ಮಣ್ಣು ತನ್ನ ಫಲವತ್ತತೆಯ ಅಸ್ತಿತ್ವವನ್ನು ದಿನೇ ದಿನೇ ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಕೀಟ ಮತ್ತು ರೋಗಗಳು ರಾಸಾಯನಿಕಗಳಿಗೆ ನಿರೋಧಕತೆಯನ್ನು ಬಳಸಿಕೊಂಡು ಅವುಗಳ ನಿಯಂತ್ರಣ ಕಷ್ಟವಾಗುತ್ತಿದೆ.

ಆದ್ದರಿಂದ ರಾಸಾಯನಿಕವಲ್ಲದ ಸಸ್ಯ ಸಂರಕ್ಷಣಾ ವಿಧಾನಗಳಿಗೆ ಹೆಚ್ಚು ಒತ್ತುಕೊಟ್ಟು ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಪರಿಸರ ಸ್ನೇಹಿ ಸಸ್ಯ ಸಂರಕ್ಷಣಾ ವಿಧಾನದ ಮೂಲ ಉದ್ದೇಶ. ಇದರಲ್ಲಿ ಸ್ವಚ್ಛ ಬೇಸಾಯ ಪರ್ಯಾಯ, ಆಸರೆ ಸಸ್ಯಗಳನ್ನು ನಾಶಪಡಿಸುವುದು ವ್ಯವಸ್ಥಿತ ನೀರು ಮತ್ತು ಗೊಬ್ಬರ ನಿರ್ವಹಣೆ, ಬೆಳೆಗಳ ಪರಿವರ್ತನೆ, ಬೆಳೆ ಪದ್ಧತಿಗಳು, ಮಿಶ್ರ ಬೆಳೆಗಳು, ಸರಿಯಾದ ನಾಟಿ ಸಮಯ, ರೋಗ ನಿರೋಧಕ ತಳಿಗಳ ಬಳಕೆ ಇವಲ್ಲದೇ ಭೌತಿಕ ಮತ್ತು ಯಾಂತ್ರಿಕ ಕ್ರಮಗಳಿಂದ ಪೀಡೆಗಳನ್ನು ನಿರ್ವಹಣೆ ಮಾಡಿ ಬೆಳೆಗಳಿಗೆ ರೋಗ ಮತ್ತು ಕೀಟಗಳಿಂದ ಆರ್ಥಿಕ ನಷ್ಟವಾಗುವುದನ್ನು ತಡೆಯಬಹುದಾಗಿದೆ.

ಅಡಿಕೆ ಬೆಳೆಯುವ ರೈತರು ಕೈಗೊಳ್ಳಬೇಕಾದ ಚಟುವಟಿಕೆಗಳು ಅಡಿಕೆ ಬೆಳೆಯುವ ರೈತರು ಕೈಗೊಳ್ಳಬೇಕಾದ ಚಟುವಟಿಕೆಗಳು

ಕೆಲವು ಪರಿಸರ ಸ್ನೇಹಿ ಕೀಟ ಮತ್ತು ರೋಗ ನಿರ್ವಹಣಾ ವಿಧಾನಗಳು
ಮಾಗಿ ಹುಳುಮೆ ಮಾಡುವುದು: ಮಾಗಿ ಉಳುಮೆಯಿಂದ ಹಿಂದಿನ ಬೆಳೆಯುಳಿಕೆಯಿಂದ ಮಣ್ಣಿನಲ್ಲಿರುವ ಕೀಟದ ಮೊಟ್ಟೆ, ಮರಿಹುಳು, ರೋಗಕಾರಕ, ಕಳೆಗಳ ಬೀಜಗಳನ್ನು ಸೂರ್ಯನ ರಶ್ಮಿಗೆ ಒಡ್ಡುವುದರಿಂದ ಮಣ್ಣಿನಿಂದ ಪ್ರಸಾರವಾಗುವ ರೋಗ ಮತ್ತು ಕೀಟಗಳನ್ನು ನಿರ್ವಹಿಸಬಹುದು. ಇನ್ನಷ್ಟು ಮುಂದೆ ಓದಿ....

ರೋಗ ನಿರೋಧಕ ತಳಿಗಳ ಆಯ್ಕೆ

ರೋಗ ನಿರೋಧಕ ತಳಿಗಳ ಆಯ್ಕೆ

ರೋಗ ನಿರೋಧಕ ತಳಿಗಳ ಆಯ್ಕೆ: ಅನೇಕ ಕೀಟ ಹಾಗೂ ರೋಗ ನಿರೋಧಕ ತಳಿಗಳನ್ನು ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೇಂದ್ರೀಯ ಸಂಶೋಧನಾ ಕೇಂದ್ರಗಳು ಬಿಡುಗಡೆ ಮಾಡಿವೆ. ಭತ್ತದಲ್ಲಿ ಗಂಗಾವತಿ ಸೋನಾ, ತುಂಗಾ ಹಾಗೂ ಐಇಟಿ ಗಿಡ್ಡ ಉತ್ತಮ ತಳಿಗಳಾಗಿವೆ. ಬಾಳೆ ತಳಿಗಳಲ್ಲಿ ಗ್ರ್ಯಾಂಡ್-9 ಜಂತು ಹುಳ ನಿರೋಧಕ ತಳಿಯಾಗಿವೆ. ಶೇಂಗಾದಲ್ಲಿ ಜಿ.ಪಿ.ಬಿ.ಡಿ.-4 ತಳಿ ಬಳಸುವುದರಿಂದ ಶೇಂಗಾ ಎಲೆಚುಕ್ಕಿ ರೋಗ ತಡೆಗಟ್ಟಬಹುದು. ಸೂರ್ಯಕಾಂತಿ ಸಂಕರಣ ತಳಿ ಕೆ.ಬಿ.ಎಸ್.ಹೆಚ್.-53 ಬೂದುರೋಗ ನಿರೋಧಕ ತಳಿ. ಮೆಕ್ಕೆಜೋಳ ಸಂಕರಣ ತಳಿ ಎನ್.ಎ.ಹೆಚ್-2049 (ನಿತ್ಯಶ್ರೀ) ಬೂಜುರೋಗ ನಿರೋಧಕ ತಳಿ. ನಂದಿ ಸಂಕ್ರಾತಿ ವೈಭವ್ ಟೊಮ್ಯಾಟೋ ಎಲೆ ಮುದುಡು ನಂಜುರೋಗ ನಿರೋಧಕ ತಳಿ.

ಸಾಗುವಳಿ ಪದ್ಧತಿದಲ್ಲಿ ಬದಲಾವಣೆ

ಸಾಗುವಳಿ ಪದ್ಧತಿದಲ್ಲಿ ಬದಲಾವಣೆ

ಸಾಗುವಳಿ ಪದ್ಧತಿ: ಭತ್ತದಲ್ಲಿ ನಾಟಿ ಮಾಡುವಾಗ ಪ್ರತಿ ಸಾಲಿನ ಅಂತರದಲ್ಲಿ ಎರಡು ಸಾಲು ನಾಟಿ ತಪ್ಪಿಸಿ ಜಾಗ ಬಿಡುವುದರಿಂದ ಕಂದು ಜಿಗಿ ನಿರ್ವಹಣೆ ಮಾಡಬಹುದು. ಭತ್ತದ ಗದ್ದೆಯ ಸುತ್ತ ಕಳೆ ಮತ್ತು ಆಸರೆಯ ಸಸ್ಯಗಳನ್ನು ಸ್ವಚ್ಛಗೊಳಿಸುವುದರಿಂದ ಹಾಗೂ ಪ್ರತಿ ಎಕರೆಗೆ 800 ಕೆ.ಜಿ. ಭತ್ತದ ಹೊಟ್ಟಿನ ಬೂದಿಯನ್ನು ಕೆಸರು ಮಡಿಗೆ ಹಾಕುವುದರಿಂದ ಬೆಂಕಿ ರೋಗ ತಡೆಗಟ್ಟಬಹುದು. ಹತ್ತಿಯಲ್ಲಿ ಬೆಂಡೆ, ಚೆಂಡುಹೂವು, ಸಾಸುವೆಯನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ ರಸಹೀರುವ ಕೀಟಗಳನ್ನು ತಡೆಗಟ್ಟಬಹದು. ಅದರಂತೆ ಟ್ಯೊಮ್ಯಾಟೊದಲ್ಲಿ ಸಾಸಿವೆ ಮತ್ತು ಚೆಂಡು ಹೂವನ್ನು 4 ಸಾಲುಗಳಿಗೆ ಒಂದರಂತೆ ಹಾಗೂ ಹೊಲದ ಸುತ್ತ ಬೆಳೆಯುವುದರಿಂದ ಬೇರುಗಂಟು ಜಂತು ರೋಗಕ್ಕೆ ಆಕರ್ಷಕ ಬೆಳೆಗಳಾಗುತ್ತವೆ. ಸಾವಯವ ಕೃಷಿಯಲ್ಲಿ ಬಳಕೆಯಾಗುತ್ತಿರುವ ಬೂದಿ ಗೊಬ್ಬರ, ಎರೆ ಹುಳ ಗೊಬ್ಬರ ಹಾಗೂ ಜೀವಾಮೃತ ಅನೇಕ ರೋಗ ರುಜೀನುಗಳನ್ನು ಹತೋಟಿಯಲ್ಲಿಟ್ಟು ಸಸಿ ಬೆಳೆಯುವ ಹಂತದಲ್ಲಿ ಉತ್ತಮ ಬೆಳೆ ಪ್ರಚೋದನಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ದೆಹಲಿಗೂ ಪಪ್ಪಾಯ ಕಳಿಸಿ ಮಾದರಿಯಾದ ಕೊಪ್ಪಳದ ರೈತದೆಹಲಿಗೂ ಪಪ್ಪಾಯ ಕಳಿಸಿ ಮಾದರಿಯಾದ ಕೊಪ್ಪಳದ ರೈತ

ಲಿಂಗಾಕರ್ಷಕ ಬಲೆಗಳ ಬಳಕೆ

ಲಿಂಗಾಕರ್ಷಕ ಬಲೆಗಳ ಬಳಕೆ

ಲಿಂಗಾಕರ್ಷಕ ಬಲೆಗಳ ಬಳಕೆ : ಲೈಂಗಿಕ ಸಂಪರ್ಕಕ್ಕೆ ಸಿದ್ಧವಾಗಿರುವ ಹೆಣ್ಣು ಪತಂಗಗಳು ಅಥವಾ ದುಂಬಿಗಳು ಒಂದು ತರವಾದ ನಿರ್ದಿಷ್ಟವಾದಂತಹ ವಾಸನೆಯನ್ನು ವಿಸರ್ಜಿಸುತ್ತವೆ. ಈ ದ್ರವದ ರಾಸಾಯನಿಕ ಸಂಯೋಜನೆಗಳನ್ನು ಉಪಯೋಗಿಸಿಕೊಂಡು ಕೃತಕ ರೀತಿಯಲ್ಲಿ ಮೋಹಕ ಬಲೆಗಳನ್ನು ಉತ್ಪಾದಿಸಿ ಗಂಡು ಪತಂಗಗಳನ್ನು ಆಕರ್ಷಿಸಿ ನಾಶಪಡಿಸಬಹುದು. ಉದಾಹರಣೆ: ತೊಗರಿ, ಅವರೆ, ಕಡಲೆ ಮತ್ತು ಹತ್ತಿ ಕಾಯಿಕೊರಕ ಲಿಂಗಾಕರ್ಷಕಗಳು ತೆಂಗಿನ ರೈನೋಸರಸ್ ದುಂಬಿ ಮತ್ತು ಕೆಂಪು ಮೂತಿ ಹುಳು ಆಕರ್ಷಕ ಬಲೆಗಳನ್ನು ಪ್ರತಿ ಎಕರೆಗೆ 2-3 ಬಲೆ ಬಳಸುವುದು. ಬದನೆಕಾಯಿ ಮತ್ತು ಕಾಂಡಕೊರಕ ನಿರ್ವಹಣೆಗೆ ನಾಟಿ ಮಾಡಿದ 15 ದಿನಗಳಲ್ಲಿ ಎಕರೆಗೆ 12-16 ಲೂಸಿನಲ್ಯೊರ್ (ವೋಟಾ-ಟಿ) ಬಲೆಗಳನ್ನು ಬಳಸುವುದು.

ಟ್ರೈಕೊಡರ್ಮಾ ಜೈವಿಕ ಶಿಲೀಂಧ್ರ ಬಳಕೆ ಹೇಗೆ?

ಟ್ರೈಕೊಡರ್ಮಾ ಜೈವಿಕ ಶಿಲೀಂಧ್ರ ಬಳಕೆ ಹೇಗೆ?

ಟ್ರೈಕೊಡರ್ಮಾ ಜೈವಿಕ ಶಿಲೀಂಧ್ರ ಬಳಕೆ: ಟ್ರೈಕೊಡರ್ಮಾ ಶಿಲೀಂಧ್ರ ಸೂಕ್ಷ್ಮ ಜೀವಿಗಳಲ್ಲಿ ಒಂದು ಜಾತಿ. ಇದು ಎಲ್ಲಾ ತರಹದ ಬೆಳೆಗಳ ಮಣ್ಣಿನಲ್ಲಿ ಇರುತ್ತದೆ. ಈ ಟ್ರೈಕೋಡರ್ಮಾವು ಮಣ್ಣಿನಿಂದ ಬರುವಂತಹ ಸಸ್ಯ ರೋಗಕ್ಕೆ ಕಾರಣವಾದ ಶಿಲೀಂಧ್ರದ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿರುವ ಪರಿಸರ ಸ್ನೇಹಿ ಶಿಲೀಂಧ್ರ. ಮಣ್ಣು ಹಾಗೂ ಬೇರಿನಿಂದ ಉದ್ಭವವಾಗುವ ಹಾನಿಕಾರಕ ಶಿಲೀಂಧ್ರವನ್ನು ಟ್ರೈಕೋಡರ್ಮಾವು ನಿಯಂತ್ರಿಸುತ್ತದೆ.

ಬಳಸುವ ವಿಧಾನ: ಒಂದು ಕೆ.ಜಿ. ಟ್ರೈಕೋಡರ್ಮಾವನ್ನು 100 ಕೆ.ಜಿ. ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ/ಕಾಂಪೋಸ್ಟ್ ಗೊಬ್ಬರದಲ್ಲಿ ಮಿಶ್ರಣಮಾಡಿ ತಂಪಾದ ಜಾಗದಲ್ಲಿ ಗೋಣಿಚೀಲ ಹೊದಿಕೆಯಿಂದ 15-20 ದಿನಗಳ ಕಾಲ ಮುಚ್ಚಿಡಬೇಕು. ಪ್ರತಿ 4 ದಿನಗಳಿಗೊಮ್ಮೆ ಮರು ಮಿಶ್ರಣ ಮಾಡುವುದರಿಂದ ಟ್ರೈಕೋಡರ್ಮಾ ಸಂಖ್ಯೆಯೂ ದ್ವಿಗುಣಗೊಳ್ಳುತ್ತದೆ. ಇಂತಹ ಕಾಂಪೋಸ್ಟ್ ಮಿಶ್ರಿತ ಮಿಶ್ರಣವನ್ನು ಬಿತ್ತನೆಗೆ ಮುಂಚೆ ಮಣ್ಣಿಗೆ ಬೆಳೆಗಳಿಗೆ ಅನುಸಾರವಾಗಿ ಬಳಸುವುದರಿಂದ ಮಣ್ಣಿನಿಂದ ಪ್ರಸಾರವಾಗುವ ಬುಡಕೊಳೆ, ಬೇರುಕೊಳೆ, ಗಡ್ಡೆಕೊಳೆ, ಸೊರಗು ರೋಗದಂತಹ ರೋಗಗಳನ್ನು ತಡಯಬಹುದು. 10 ಗ್ರಾಂ ಟ್ರೈಕೋಡರ್ಮಾವನ್ನು ಒಂದು ಕೆ.ಜಿ. ಬಿತ್ತನೆ ಬೀಜಕ್ಕೆ ಬೀಜೋಪಚರಿಸಿಯೂ ಬಳಸಬಹುದು.

ಮುಂಗಾರು ಹಂಗಾಮು; ಕೃಷಿ ಚಟುವಟಿಕೆಗೆ ರೈತರ ತಯಾರಿಮುಂಗಾರು ಹಂಗಾಮು; ಕೃಷಿ ಚಟುವಟಿಕೆಗೆ ರೈತರ ತಯಾರಿ

ಪ್ಲೋರೋಸೆನ್ಸ್ ಬ್ಯಾಕ್ಟೀರಿಯಾ ಬಳಕೆ

ಪ್ಲೋರೋಸೆನ್ಸ್ ಬ್ಯಾಕ್ಟೀರಿಯಾ ಬಳಕೆ

ಸುಡೋಮೋನಾಸ್ ಪ್ಲೋರೋಸೆನ್ಸ್ ಬ್ಯಾಕ್ಟೀರಿಯಾ ಬಳಕೆ: ಇದೊಂದು ಸಸ್ಯ ಬೆಳವಣಿಗೆ ಪ್ರಚೋದಕ ದುಂಡಾಣುವಾಗಿದ್ದು, ಎಲ್ಲಾ ತರಹದ ಮಣ್ಣಿನ ಬೆಳೆಗಳಲ್ಲಿ ಇರುತ್ತದೆ. ಈ ಬ್ಯಾಕ್ಟೀರಿಯಾವು ಮಣ್ಣಿಗೆ ಬಳಸುವುದರಿಂದ ಮಣ್ಣಿನಿಂದ ಬರುವಂತಹ ಸಸ್ಯ ರೋಗಕ್ಕೆ ಕಾರಣವಾದ ಬ್ಯಾಕ್ಟೀರಿಯಾ ಮತ್ತು ಜಂತು ಹುಳು ವಿರುದ್ಧ ಹೋರಾಡುವ ಶಕ್ತಿಯ ಜೊತೆ ಸಸ್ಯಗಳ ಬೆಳವಣಿಗೆಯನ್ನು ಪ್ರಚೋದಿಸಿ ರೋಗ ನಿರೋಧಕ ಶಕ್ತಿಯನ್ನು ಕೊಡುತ್ತದೆ.

ಬಳಸುವ ವಿಧಾನ: ಒಂದು ಕೆ.ಜಿ. ಸುಡೋಮೋನಾಸ್ ಪ್ಲೊರೋಸೆನ್ಸ್‌ನ್ನು 100 ಕೆ.ಜಿ. ಚೆನ್ನಾಗಿ ಕಳಿತ ಕೊಟ್ಟಿಗೆ/ಕಾಂಪೋಸ್ಟ್ ಗೊಬ್ಬರದಲ್ಲಿ ಮಿಶ್ರಣ ಮಾಡಿ ತಂಪಾದ ಜಾಗದಲ್ಲಿ ಗೋಣಿಚೀಲ ಹೊದಿಕೆಯಿಂದ 15-20 ದಿನಗಳ ಕಾಲ ಮುಚ್ಚಿಡಬೇಕು. ಪ್ರತಿ 4 ದಿನಗಳಿಗೊಮ್ಮೆ ಮರು ಮಿಶ್ರಣ ಮಾಡುವುದರಿಂದ ಸುಡೋಮೋನಾಸ್ ಸಂಖ್ಯೆಯೂ ದ್ವಿಗುಣಗೊಳ್ಳುತ್ತದೆ. ಇಂತಹ ಕಾಂಪೋಸ್ಟ್ ಮಿಶ್ರಿತ ಮಿಶ್ರಣವನ್ನು ಬಿತ್ತನೆಗೆ ಮುಂಚೆ ಮಣ್ಣಿಗೆ ಬೆಳೆಗಳಿಗೆ ಅನುಸಾರವಾಗಿ ಬಳಸುವುದರಿಂದ ಮಣ್ಣಿನಿಂದ ಪ್ರಸಾರವಾಗುವಂತಹ ದುಂಡಾಣು ಸೊರಗು ರೋಗ ಮತ್ತು ಬೇರುಗಂಟು ಜಂತು ಹುಳುಗಳ ನಿರ್ವಹಣೆ ಮಾಡಬಹುದು.

ಬೇವು ಆಧಾರಿತ ಕೀಟನಾಶಕಗಳು

ಬೇವು ಆಧಾರಿತ ಕೀಟನಾಶಕಗಳು

ಬೇವು ಆಧಾರಿತ ಕೀಟನಾಶಕಗಳು: ಸಸ್ಯ ರೋಗ ಮತ್ತು ಕೀಟಗಳ ಹತೋಟಿ ಗುಣವಿರುವ ಸಾವಿರಾರು ಜಾತಿ ಗಿಡ ಮರಗಳಲ್ಲಿ ಬೇವು ಅತಿ ಉಪಯುಕ್ತ ಹಾಗೂ ಔಷಧಿಗಳ ಆಗರವೆಂದು ಗುರುತಿಸಲಾಗಿದೆ. ಬೇವಿನ ಎಲೆ, ಬೀಜ, ಎಣ್ಣೆ, ಕಾಂಡ ಹಾಗೂ ಕಾಯಿ ಔಷಧೀಯ ಗುಣಗಳನ್ನು ಹೊಂದಿದೆ. ಬಾಳೆ, ಅಡಿಕೆ, ತೆಂಗು ಹಾಗೂ ಅನೇಕ ಕೃಷಿ ಬೆಳೆಗಳಲ್ಲಿ ಬೇರಿನಿಂದ ಕಂಡುಬರುವ ರೋಗಗಳನ್ನು ಹಾಗೂ ಬೇರು ಹುಳಗಳನ್ನು ಹತೋಟಿ ಮಾಡುತ್ತದೆ.

English summary
Insect and disease control in Agriculture via Nature friendly methods by Kalaburagi university faculty Zaheer Ahmed and Raju G Tegelli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X