ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ವಿಧದ ರಸಗೊಬ್ಬರ ಪೂರೈಕೆ; ರಷ್ಯಾ ಜತೆ ಭಾರತದ ಒಪ್ಪಂದ

|
Google Oneindia Kannada News

ನವದೆಹಲಿ, ಜು.1: ದೇಶದಲ್ಲಿ ರಸಗೊಬ್ಬರ ಉತ್ಪಾದನೆ ಹೆಚ್ಚಿಸಲು ಹಾಗೂ ಸಮರ್ಪಕ ಗೊಬ್ಬರ ಪೂರೈಕೆಗಾಗಿ ಭಾರತೀಯ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು) ರಷ್ಯಾದ ಉದ್ಯಮದ ಫೋಸ್ ಆಗ್ರೋದೊಂದಿಗೆ ದೀರ್ಘಕಾಲದ ಒಪ್ಪಂದ ಮಾಡಿಕೊಂಡಿವೆ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸೂಖ್ ಮಾಂಡವೀಯ ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಡಿಕೊಂಡ ಈ ಒಪ್ಪಂದದಿಂದಾಗಿ ಡೈಅಮೋನಿಯಂ ಫಾಸ್ಫೇಟ್ (ಡಿಎಪಿ) ಸೇರಿದಂತೆ ಐದು ರೀತಿಯ ರಸಗೊಬ್ಬರಗಳು ಭಾರತಕ್ಕೆ ಪೂರೈಕೆ ಆಗಲಿವೆ ಎಂದು ಮನ್ಸೂಖ್ ಮಾಂಡವೀಯ ರಾಜ್ಯಸಭೆಗೆ ಸಲ್ಲಿಸಿದ ಕಡತದಲ್ಲಿ ಉಲ್ಲೇಖಿಸಲಾಗಿದೆ.

ಮೊದಲ ಬಾರಿಗೆ ಬೆಂಗಳೂರಲ್ಲಿ ಎಲ್ಲಾ ರಾಜ್ಯದ ಕೃಷಿ ಸಚಿವರ ಸಭೆಮೊದಲ ಬಾರಿಗೆ ಬೆಂಗಳೂರಲ್ಲಿ ಎಲ್ಲಾ ರಾಜ್ಯದ ಕೃಷಿ ಸಚಿವರ ಸಭೆ

ಭಾರತಕ್ಕೆ ಡೈ ಅಮೋನಿಯಂ ಫಾಸ್ಫೇಟ್ (ಡಿಎಪಿ) ಹಾಗೂ ಅದರ ಕಚ್ಚಾ ಸಾಮಗ್ರಿಗಳ ನಿಯಮಿತ ಮತ್ತು ಸಕಾಲಕ್ಕೆ ಸಮರ್ಪಕ ಒದಗಿಸುವ ಪ್ರಮಾಣವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಗೊಬ್ಬರದ ಕಚ್ಚಾ ಸಾಮಾಗ್ರಿಗಳನ್ನು ಪೈಪೋಟಿ ದರದಲ್ಲಿ ಭಾರತಕ್ಕೆ ನೀಡಲು ಸೌದಿ ಅರೇಬಿಯಾ, ರಷ್ಯಾ ಸೇರಿದಂತೆ ಇತರ ದೇಶಗಳು ಸಿದ್ಧವಿರುವುದಾಗಿ ವಿವರಿಸಿದ್ದಾರೆ.

ರಷ್ಯಾ ಭಾರತದ ಅತಿದೊಡ್ಡ ಗೊಬ್ಬರ ರಫ್ತುದಾರ ರಷ್ಯಾ ಭಾರತದ ಅತಿದೊಡ್ಡ ಗೊಬ್ಬರ ರಫ್ತುದಾರ

ರಸಗೊಬ್ಬರ ಕಚ್ಚಾ ವಸ್ತು ಅನ್ವೇಷಣೆಗೆ ಚರ್ಚೆ

ರಸಗೊಬ್ಬರ ಕಚ್ಚಾ ವಸ್ತು ಅನ್ವೇಷಣೆಗೆ ಚರ್ಚೆ

ದೇಶದಲ್ಲಿ ರಸಗೊಬ್ಬರ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಪ್ರತಿ ವರ್ಷ 1.20 ಲಕ್ಷ ಟನ್ ರಸಗೊಬ್ಬರ ಉತ್ಪಾದಿಸಲು ಮಧ್ಯ ಭಾರತ್ ಆಗ್ರೋ ಪ್ರಾಡಕ್ಟ ಲಿಮಿಟೆಡ್(2) ಗೆ ಅನುಮತಿ ನೀಡಿದೆ. ಇದಕ್ಕೆ ಪೂರವಾಗಿ ದೇಶದಲ್ಲಿ ಡಿಎಪಿ ಮತ್ತು ಇತರ ರಸಗೊಬ್ಬರಗಳಿಗೆ ಅಗತ್ಯವಾದ ಕಚ್ಚಾ ಸಾಮಗ್ರಿಗಳ ಖನಿಜ ಅನ್ವೇಷಣೆಯ ಬಗ್ಗೆ ಮಧ್ಯಸ್ಥಗಾರರೊಂದಿಗೆ ಈಗಾಗಲೇ ಕೆಲವು ಬಾರಿ ಚರ್ಚೆಗಳನ್ನು ನಡೆಸಲಾಗಿದೆ.

ದೇಶದಲ್ಲಿ ಗೊಬ್ಬರ ಕೊರತೆ ಇಲ್ಲ

ದೇಶದಲ್ಲಿ ಗೊಬ್ಬರ ಕೊರತೆ ಇಲ್ಲ

ಸರ್ಕಾರದ ಸೂಕ್ತ ಮುಂಜಾಗ್ರತೆ ವಹಿಸಿರುವ ಕಾರಣ ಈ ಬಾರಿಯ ಚಳಿಗಾಲಕ್ಕೆ ಕೊಯ್ಲಿಗೆ ಬರುವ ಅಥವಾ ರಾಬಿ ಸೀಸನ್ ಬೆಳೆಗಳ (ಗೋಧಿ, ಬಾರ್ಲಿ, ಕಡಲೆ) ಅವಧಿಯಲ್ಲಿ ಮಣ್ಣಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬಲ್ಲ ಡಿಎಪಿ ಮತ್ತು ಯೂರಿಯಾ ಗೊಬ್ಬರ ಸಮರ್ಪಕ ಲಭ್ಯತೆ ಇದೆ. ದೇಶದಲ್ಲಿರುವ ಸಾಕಷ್ಟು ಪ್ರಮಾಣದ ಗೊಬ್ಬರವನ್ನು ಸಕಾಲಕ್ಕೆ ಆಯಾ ಪ್ರದೇಶಗಳಿಗೆ ತಲುಪಿಸಲು ಆದ್ಯತೆ ನೀಡಲಾಗುವುದು ಎನ್ನುವ ಮೂಲಕ ದೇಶದಲ್ಲಿ ರಸಗೊಬ್ಬರ ಕೊರತೆ ಇದೆ ಎಂಬ ಮಾತಿನಲ್ಲಿ ಹುರಳಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ರೈತರಲ್ಲಿ ಆತಂಕ ಬೇಡ

ರೈತರಲ್ಲಿ ಆತಂಕ ಬೇಡ

ಕೇಂದ್ರ ಸರ್ಕಾರ ವ್ಯಾಪ್ತಿಯ ರಾಜ್ಯ ಸರ್ಕಾರಗಳು, ರಸಗೊಬ್ಬರ ವ್ಯವಹಾರಗಳು ಮತ್ತು ರೈಲು ಮಾರ್ಗಗಳು ಸೇರಿದಂತೆ ನಿಯಂತ್ರಣ ಕೊಠಡಿ, ಆನ್‌ಲೈನ್ ವೇದಿಕೆಗಳ ಮೂಲಕ ವಿವಿಧ ರಾಜ್ಯಗಳಿಗೆ ರಸಗೊಬ್ಬರಗಳನ್ನು ಸುಸುತ್ರವಾಗಿ ತಲುಪಿಸಲಾಗುತ್ತಿದೆ. ಇದನ್ನು ಖಾತರಿಪಡಿಸಲೆಂದೆ 24x7 ಸಹಾಯವಾಣಿಯನ್ನು ಸರ್ಕಾರ ಆರಂಭಿಸಿದೆ. ಈ ಬಗ್ಗೆ ರೈತರಲ್ಲಿ ಅನಗತ್ಯ ಆತಂಕ ಬೇಡ ಎಂದು ಸಚಿವರು ಭರವಸೆ ನೀಡಿದರು.

ಗೊಬ್ಬರ ಸಾಗಾಣೆ, ಪೂರೈಕೆಯ ನಿತ್ಯ ಮೇಲ್ವಿಚಾರಣೆ

ಗೊಬ್ಬರ ಸಾಗಾಣೆ, ಪೂರೈಕೆಯ ನಿತ್ಯ ಮೇಲ್ವಿಚಾರಣೆ

ವಿದೇಶಗಳಿಂದ ಆಮದಾದ ಡಿಎಪಿ ಗೊಬ್ಬರ ಸರಕುಗಳ ಮಾಹಿತಿ ಮತ್ತು ಪ್ರಯಾಣದ ಅವಧಿ ಇನ್ನಿತರ ಅಂಶಗಳ ಬಗ್ಗೆ ನಿತ್ಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ಗೊಬ್ಬರ ತಯಾರಕರು, ಬಂದರುಗಳು ಮತ್ತು ರೈಲು ಮಾರ್ಗ ಸಿಬ್ಬಂದಿ ಮತ್ತು ಅಧಿಕಾರಿಗಳು, ಲೋಡ್ ಹಾಗೂ ಅನ್ ಲೋಡ್, ಸಾಗಾಣೆಗಳಲ್ಲಿ ಪೂರ್ಣ ಸಾಮರ್ಥ್ಯ ಸಹಿತ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದ್ದೇವೆ. ಹೀಗಾಗಿ ಗೊಬ್ಬರ ಪೂರೈಕೆ ವಿಚಾರದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿಲ್ಲ ಎಂದು ತಿಳಿದುಬಂದಿದೆ.

ಇನ್ನು ಆಮದಾಗುವ ಹಾಗೂ ಉತ್ಪಾದಿತ ಗೊಬ್ಬರ ಪೈಕಿ ಶೇ.90ರಷ್ಟು ಗೊಬ್ಬರ ರೈಲು ಮಾರ್ಗದ ಮೂಲಕವೇ ಸಾಗಿಸಲಾಗುತ್ತಿದೆ. ಈವೇಳೆ ಸಾಗಾಣೆ, ಲೋಡ್, ಅನ್ ಲೋಡ್ ಎಲ್ಲಿಯೂ ಸಮಸ್ಯೆ ಉಂಟಾಗದಂತೆ ಆಯಾ ರಾಜ್ಯಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Recommended Video

July 1 ರಿಂದ‌ ಪ್ಲಾಸ್ಟಿಕ್ ಬ್ಯಾನ್: ಯಾವ್ಯಾವ ಪ್ಲಾಸ್ಟಿಕ್‌ ವಸ್ತುಗಳಿಗೆ‌ ನಿಷೇಧ? | *India | OneIndia Kannada

English summary
India's PSU has deal with Russia's Fos Agro for supply Fertilizer of Diammonium Phosphate (DAP) and five others to India, Central Chemical and Fertilizer minister Mansukh Mandaviya said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X