ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆ ಬೆಳೆಗೆ 5 ರಿಂದ 20ರಷ್ಟು ಬೆಂಬಲ ಬೆಲೆ: ರೈತರಿಗೇನು ಲಾಭ; ಸರ್ಕಾರಕ್ಕೇನು ಲಾಭ?

|
Google Oneindia Kannada News

ನವದೆಹಲಿ, ಜೂನ್ 6: ಭಾರತದಲ್ಲಿ ಕೃಷಿ ಬೆಳೆಗಳನ್ನು ಬೆಳೆಯುವುದು ದುಬಾರಿ ಆಗುತ್ತಿದೆ. ಕೃಷಿಗೆ ಅಗತ್ಯ ವಸ್ತುಗಳ ಮೇಲಿನ ವೆಚ್ಚವು ಹೆಚ್ಚಾಗುತ್ತಿದ್ದರೂ, ಅಂತಿಮವಾಗಿ ಬೆಳೆಗಳಿಗೆ ಬೆಲೆಯು ಕಡಿಮೆಯೇ ಆಗುತ್ತಿದೆ. ರೈತರು ತಾವು ಖರ್ಚು ಮಾಡಿದಷ್ಟು ಹಣವನ್ನೂ ಸಹ ವಾಪಸ್ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

ದೇಶದಲ್ಲಿ ಬೇಸಿಗೆಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸುವುದಕ್ಕೆ ಕೇಂದ್ರ ಸರ್ಕಾರ ಆಲೋಚಿಸುತ್ತಿದೆ. ಬೇಸಿಗೆಯ ಬೆಳೆಗಳಿಗೆ ಶೇ.5 ರಿಂದ 20ರಷ್ಟು ಕನಿಷ್ಠ ಬೆಂಬಲ ಬೆಲೆಯನ್ನು ನೀಡುವುದಕ್ಕೆ ಸರ್ಕಾರ ನಿರ್ಧರಿಸಿದೆ.

ಸೂರ್ಯಕಾಂತಿ ಎಣ್ಣೆ, ಕಚ್ಚಾ ಸೋಯಾಬಿನ್ ಆಮದು ಮೇಲಿನ ಸುಂಕಕ್ಕೆ ವಿನಾಯಿತಿ ಸೂರ್ಯಕಾಂತಿ ಎಣ್ಣೆ, ಕಚ್ಚಾ ಸೋಯಾಬಿನ್ ಆಮದು ಮೇಲಿನ ಸುಂಕಕ್ಕೆ ವಿನಾಯಿತಿ

2022-23 ವರ್ಷದಲ್ಲಿ ಬೇಸಿಗೆ-ಬಿತ್ತನೆಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ಸಾಮಾನ್ಯಕ್ಕಿಂತ ಹೆಚ್ಚಿನ ಹೆಚ್ಚಳವನ್ನು ಸರ್ಕಾರವು ಶೀಘ್ರದಲ್ಲೇ ಘೋಷಿಸಬಹುದು ಎಂದು ತಿಳಿದು ಬಂದಿದೆ. ಹಾಗಿದ್ದರೆ ಈ ಬೇಸಿಗೆ ಬೆಲೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವುದರ ಹಿಂದಿನ ಕಾರಣಗಳೇನು?, ಕೇಂದ್ರ ಸರ್ಕಾರದ ನಿರ್ಧಾರದಿಂದ ಆಗುವ ಪರಿಣಾಮವೇನು?, ಇದು ರೈತರಿಗೆ ಎಷ್ಟರ ಮಟ್ಟಿಗೆ ಸಹಾಯಕಾರಿ ಆಗಲಿದೆ ಎಂಬುದನ್ನು ಈ ವರದಿಯಿಂದ ತಿಳಿದುಕೊಳ್ಳೋಣ.

ಗೋಧಿ ಹಿಟ್ಟಿಗೂ ಬಂಗಾರದ ಬೆಲೆ; ಭಾರತದಲ್ಲಿ 12 ವರ್ಷಗಳ ದಾಖಲೆ ಬರೆದ ಗೋಧಿ! ಗೋಧಿ ಹಿಟ್ಟಿಗೂ ಬಂಗಾರದ ಬೆಲೆ; ಭಾರತದಲ್ಲಿ 12 ವರ್ಷಗಳ ದಾಖಲೆ ಬರೆದ ಗೋಧಿ!

3 ವರ್ಷದಲ್ಲೇ ಗರಿಷ್ಠ ಪ್ರಮಾಣದಲ್ಲಿ ಕನಿಷ್ಠ ಬೆಂಬಲ ಬೆಲೆ ಏರಿಕೆ

3 ವರ್ಷದಲ್ಲೇ ಗರಿಷ್ಠ ಪ್ರಮಾಣದಲ್ಲಿ ಕನಿಷ್ಠ ಬೆಂಬಲ ಬೆಲೆ ಏರಿಕೆ

ಕಳೆದ ಮೂರು ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಬೇಸಿಗೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ. 2022-23ನೇ ಸಾಲಿನಲ್ಲಿ ಶೇ.5 ರಿಂದ 20ರಷ್ಟು ಎಂಎಸ್ ಪಿ ಅನ್ನು ಹೆಚ್ಚಿಸಲಾಗುತ್ತಿದೆ. ಇದು 2018-19ನೇ ಸಾಲಿನ ನಂತರದಲ್ಲಿ ಅತಿಹೆಚ್ಚಿನ ಏರಿಕೆಯಾಗಿದೆ. ಈ ಮೊದಲಿನ ಮೂರು ವರ್ಷಗಳಲ್ಲಿ ಎಂಎಸ್ ಪಿ ಅನ್ನು ಶೇ.1 ರಿಂದ 5ರಷ್ಟು ಏರಿಕೆ ಮಾಡಲಾಗಿತ್ತು. ಉತ್ಪಾದನಾ ವೆಚ್ಚದ ಮೇಲೆ ಕನಿಷ್ಠ ಶೇ.50ರಷ್ಟು ಲಾಭ ಗಳಿಸುವ ನೀತಿಯ ಆಧಾರದ ಮೇಲೆ ಈ ಏರಿಕೆಯನ್ನು ಮಾಡಲಾಗುತ್ತಿದೆ.

ದೇಶೀಯವಾಗಿ ಎಣ್ಣೆಕಾಳು ಉತ್ಪಾದನೆ ಹೆಚ್ಚಳಕ್ಕೆ ಕ್ರಮ

ದೇಶೀಯವಾಗಿ ಎಣ್ಣೆಕಾಳು ಉತ್ಪಾದನೆ ಹೆಚ್ಚಳಕ್ಕೆ ಕ್ರಮ

ಮೂಲಗಳ ಪ್ರಕಾರ, ಸೋಯಾಬೀನ್ ಮತ್ತು ಕಡಲೆಕಾಯಿಯಂತಹ ಎಣ್ಣೆಕಾಳುಗಳ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗವು ಈ ವರ್ಷ ಕನಿಷ್ಠ ಬೆಂಬಲ ಬೆಲೆಯಲ್ಲಿ ತೀಕ್ಷ್ಣವಾದ ಹೆಚ್ಚಳವನ್ನು ಶಿಫಾರಸು ಮಾಡಿದೆ. ಬೇಳೆಕಾಳುಗಳಲ್ಲಿ, ಹೆಸರ ಕಾಳು ಮತ್ತು ಹೆಸರು ಬೇಳೆಯ ಬೆಂಬಲ ಬೆಲೆಗಳಲ್ಲೂ ಸಹ ಏರಿಕೆಯಾಗಿದೆ. ಏಕೆಂದರೆ, ಕಳೆದ ವರ್ಷ ದೇಶೀಯ ಆಹಾರ ಪೂರೈಕೆಯಲ್ಲಿನ ಬಿಕ್ಕಟ್ಟಿನಿಂದಾಗಿ ಈ ವಸ್ತುಗಳ ಆಮದು ಬೆಲೆಯೂ ಹೆಚ್ಚಳವಾಗಿತ್ತು. ಇತರೆ ಎಣ್ಣೆಕಾಳುಗಳನ್ನು ದೇಶೀಯವಾಗಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆ ಮಾಡುವುದರಿಂದ ತಾಳೆ ಎಣ್ಣೆಯ ಆಮದು ವೆಚ್ಚವು ಕಡಿಮೆಯಾಗುತ್ತದೆ ಎನ್ನುವುದು ಕೇಂದ್ರ ಸರ್ಕಾರದ ಲೆಕ್ಕಾಚಾರವಾಗಿದೆ.

ದೇಶದ ಸಗಟು ಹಣದುಬ್ಬರದಲ್ಲಿ 17 ವರ್ಷಗಳ ಗರಿಷ್ಠ ದಾಖಲೆ

ದೇಶದ ಸಗಟು ಹಣದುಬ್ಬರದಲ್ಲಿ 17 ವರ್ಷಗಳ ಗರಿಷ್ಠ ದಾಖಲೆ

ಭಾರತದಲ್ಲಿ ಸಗಟು ಹಣದುಬ್ಬರದ ಪ್ರಮಾಣ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಸಗಟು ಹಣದುಬ್ಬರ ಶೇ.15.08ಕ್ಕೆ ಏರಿಕೆಯಾಗಿದ್ದು, ಇದು 17 ವರ್ಷಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವುದಕ್ಕೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನೆ, ಬೆಳೆಗಳ ಸಂಗ್ರಹಣೆ ಮತ್ತು ಕೊಳ್ಳುವ ಶಕ್ತಿಯು ಹೆಚ್ಚಾಗುತ್ತದೆ. ಆ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಆಲೋಚಿಸಿದೆ.

ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಆಹಾರ ಪೂರೈಕೆಯ ಹಣದುಬ್ಬರವೂ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಚಿಲ್ಲರೇ ಹಣದುಬ್ಬರವು ಶೇ.8.1ರಷ್ಟಿದ್ದರೆ, ಮೇ ತಿಂಗಳಿನಲ್ಲಿ ಅದು ಶೇ.7.79ರಷ್ಟಾಗಿದೆ. ಉತ್ಪಾದನಾ ವೆಚ್ಚಕ್ಕಾಗಿ ರೈತರಿಂದ ನೇರವಾಗಿ ನಗದು ರೂಪದಲ್ಲಿ ಪಾವತಿಸಿದ ಎಲ್ಲಾ ವೆಚ್ಚಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಲಾಗುತ್ತದೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು, ಕೂಲಿ ಕಾರ್ಮಿಕರು, ಗುತ್ತಿಗೆ ಪಡೆದ ಭೂಮಿ, ಇಂಧನ ಮತ್ತು ನೀರಾವರಿ ಹಾಗೂ ಕೂಲಿ ಪಡೆಯದ ಕುಟುಂಬ ಸದಸ್ಯರ ದುಡಿಮೆಯನ್ನೂ ಇದು ಒಳಗೊಂಡಿರುತ್ತದೆ.

ಯಾವೆಲ್ಲ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

ಯಾವೆಲ್ಲ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

"ಎಣ್ಣೆಕಾಳುಗಳು, ಬೇಳೆಕಾಳುಗಳು ಮತ್ತು ಪೌಷ್ಠಿಕ ಧಾನ್ಯಗಳಾದ ಜೋಳ, ಜೋಳ, ರಾಗಿ ಮತ್ತು ಹತ್ತಿಯಂತಹ ಸರಕುಗಳ ಕನಿಷ್ಠ ಬೆಂಬಲ ಬೆಲೆಗಳಲ್ಲಿ ಏರಿಕೆಯು ಭತ್ತಕ್ಕಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ," ಎಂದು ತಿಳಿದು ಬಂದಿದೆ. ಇದರಿಂದ ನೀರು-ಅವಶ್ಯಕವಾಗಿರುವ ಬೆಳೆಗಳ ಉತ್ಪಾದನೆಯನ್ನು ತಗ್ಗಿಸುವ ಮತ್ತು ವೈವಿಧ್ಯೀಕರಣ ಬೆಳೆಗಳನ್ನು ಬೆಳೆಯುವುದಕ್ಕೆ ರೈತರಿಗೆ ಉತ್ತೇಜನ ನೀಡಿದಂತೆ ಆಗುತ್ತದೆ.

"ಎಣ್ಣೆಕಾಳುಗಳು, ಬೇಳೆಕಾಳುಗಳು ಮತ್ತು ಒರಟಾದ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಮರುಹೊಂದಿಸುವುದು ನಮ್ಮ ಲಕ್ಷ್ಯವಾಗಿದೆ. ಈ ಬೆಳೆಗಳತ್ತ ರೈತರು ಗಮನ ಹರಿಸುವಂತೆ ಉತ್ತೇಜಿಸಲಾಗುತ್ತದೆ. ಇದು ಪರಿಸರಕ್ಕೆ ಸಮರ್ಥವಾದ ಮತ್ತು ಆ ಮೂಲಕ ಆಮದುಗಳ ಮೇಲೆ ದೇಶದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಷ್ಟು ಪ್ರಮಾಣದಲ್ಲಿ ಬೇಳೆಕಾಳು ಆಮದು ಮಾಡಿಕೊಳ್ಳುತ್ತೆ ಭಾರತ?

ಎಷ್ಟು ಪ್ರಮಾಣದಲ್ಲಿ ಬೇಳೆಕಾಳು ಆಮದು ಮಾಡಿಕೊಳ್ಳುತ್ತೆ ಭಾರತ?

ಭಾರತವು ತನ್ನ ಒಟ್ಟು ದೇಶೀಯ ಖಾದ್ಯ ತೈಲದ ಶೇ. 55-56ರಷ್ಟು ಆಮದು ಮಾಡಿಕೊಳ್ಳುತ್ತದೆ, ಆದರೆ ಶೇ.15 ಬೇಳೆಕಾಳುಗಳ ಬಳಕೆಯನ್ನು ಆಮದು ಮಾಡಿಕೊಳ್ಳುವ ಮೂಲಕ ಪೂರೈಸಿಕೊಳ್ಳಲಾಗುತ್ತದೆ. ಏರಿಕೆ ಆಗುತ್ತಿರುವ ಆಹಾರ ಹಣದುಬ್ಬರದ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಕಚ್ಚಾ ಸೋಯಾಬಿನ್ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದನ್ನು ಸುಂಕಮುಕ್ತಗೊಳಿಸುವುದಕ್ಕೆ ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ವಾರ್ಷಿಕ 20 ಟನ್ ವರೆಗಿನ ಕಚ್ಚಾ ಸೋಯಾಬಿನ್ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಸುಂಕಮುಕ್ತವಾಗಿ ಆಮದು ಮಾಡಿಕೊಳ್ಳಬಹುದು, ಆದರೆ ಅದರ ನಂತರದ ಆಮದಿಗೆ ತೆರಿಗೆ ಅನ್ವಯವಾಗುತ್ತದೆ. ಸರ್ಕಾರದ ಈ ಕ್ರಮವು ದೇಶೀಯ ಅಗತ್ಯತೆಯನ್ನು ಪೂರೈಸುವುದಕ್ಕೆ ಕಂಡುಕೊಂಡಿರುವ ಮಾರ್ಗವಾಗಿದೆ.

ಜುಲೈ 1ರ ವೇಳೆಗೆ ಅಕ್ಕಿ ದಾಸ್ತುನು ಸಂಗ್ರಹಣೆ

ಜುಲೈ 1ರ ವೇಳೆಗೆ ಅಕ್ಕಿ ದಾಸ್ತುನು ಸಂಗ್ರಹಣೆ

ಭಾರತದಲ್ಲಿ ಜುಲೈ 1ರ ಹೊತ್ತಿಗೆ ಗಿರಣಿದಾರರಿಂದ ಪಡೆಯಬಹುದಾದ 17 ಮೆಟ್ರಿಕ್ ಟನ್ ಧಾನ್ಯವನ್ನು ಹೊರತುಪಡಿಸಿ, ಭಾರತೀಯ ಆಹಾರ ನಿಗಮವು ಸುಮಾರು 29 ರಿಂದ 30 ಮಿಲಿಯನ್ ಟನ್ (MT) ಅಕ್ಕಿ ದಾಸ್ತಾನು ಹೊಂದುವ ನಿರೀಕ್ಷೆಯಿದೆ.

"ಕಳೆದ ಒಂದು ವರ್ಷದಲ್ಲಿ ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದು, ಖಾರಿಫ್ ಬೆಳೆಗಳಿಗೆ ಎಂಎಸ್‌ಪಿಯು ಗಣನೀಯವಾಗಿ ಹೆಚ್ಚಳವಾಗಿರಬೇಕು. ಇದರಿಂದ ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಶೇ.50ರಷ್ಟಟು ಹೆಚ್ಚಿನದನ್ನು ಒದಗಿಸುವ ತನ್ನ ಬದ್ಧತೆಯನ್ನು ಸರ್ಕಾರ ಪೂರೈಸುತ್ತದೆ," ಎಂದು ಆಯೋಗದ ಮಾಜಿ ಅಧ್ಯಕ್ಷ ಹಾಗೂ ಕೃಷಿ ವೆಚ್ಚಗಳು ಮತ್ತು ಬೆಲೆಗಳು ಮತ್ತು ಚೇರ್ ಪ್ರೊಫೆಸರ್ ಅಶೋಕ್ ಗುಲಾಟಿ ತಿಳಿಸಿದ್ದಾರೆ.

ವಿದ್ಯುತ್, ಟ್ರಾನ್ಸ್ಪೊರರಿಯನ್ ಮತ್ತು ಕೀಟನಾಶಕಗಳಂತಹ ಕೃಷಿ ಇನ್ಪುಟ್ಗಳ ಬೆಲೆಗಳು ದೊಡ್ಡ ಏರಿಕೆ ಕಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆಗಳು ಮತ್ತು ಪ್ರಮುಖ ರಸಗೊಬ್ಬರದ ಆಮದು ಹೆಚ್ಚಿದ್ದರೂ, ಸರ್ಕಾರದಿಂದ ಸಬ್ಸಿಡಿಗಳ ತೀವ್ರ ಹೆಚ್ಚಳವು ವೆಚ್ಚದ ಹೆಚ್ಚಳದಿಂದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿನಾಯಿತಿ ನೀಡುತ್ತದೆ.

ಸರ್ಕಾರದ ಆಹಾರ ಸಬ್ಸಿಡಿ ವೆಚ್ಚದಲ್ಲಿ ಗಣನೀಯ ಏರಿಕೆ

ಸರ್ಕಾರದ ಆಹಾರ ಸಬ್ಸಿಡಿ ವೆಚ್ಚದಲ್ಲಿ ಗಣನೀಯ ಏರಿಕೆ

ಕೇಂದ್ರ ಸರ್ಕಾರದ ಆಹಾರ ಸಬ್ಸಿಡಿ ವೆಚ್ಚಗಳು 2022-23ಕ್ಕೆ ಬಜೆಟ್‌ನ 2.06 ಟ್ರಿಲಿಯನ್‌ಗಳಿಂದ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ರಸಗೊಬ್ಬರ ಬೆಲೆಗಳ ಏರಿಕೆಯ ಗಣನೀಯ ಭಾಗವನ್ನು ನಿರ್ವಹಿಸುವುದಕ್ಕೆ ಸರ್ಕಾರವೇ ನಿರ್ಧರಿಸಿದೆ. ಜಾಗತಿಕ ಮಟ್ಟದಲ್ಲಿ ಪ್ರಮುಖವಾಗಿ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (P&K) ಬೆಲೆಗಳು ಏರಿಕೆ ಆಗಿರುವುದರಿಂದ ರಸಗೊಬ್ಬರಗಳು ಮತ್ತು ಯೂರಿಯಾ ಬೆಲೆಯು ಹೆಚ್ಚಳವಾಗಲಿದೆ. ಇದರಿಂದಾಗಿ ಕಳೆದ 2021-22ರಲ್ಲಿ 1.62 ಟ್ರಿಲಿಯನ್ ಆಗಿದ್ದ ಆಹಾರ ಸಬ್ಸಿಡಿ ವೆಚ್ಚಗಳು 2022-23 ರಲ್ಲಿ 2.15 ಟ್ರಿಲಿಯನ್ ತಲುಪುವ ನಿರೀಕ್ಷೆಯಿದೆ.

"ಎಂಎಸ್‌ಪಿ ಆಡಳಿತದ ಒತ್ತಡವು ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಬೇಕು. ಇದರಿಂದಾಗಿ ಆಮದು ಅವಲಂಬನೆ ಕಡಿಮೆಯಾಗುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ" ಎಂದು ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ (ದಕ್ಷಿಣ ಏಷ್ಯಾ) ಪಿ. ಕೆ. ಜೋಶಿ ಹೇಳಿದ್ದಾರೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಗತ್ಯತೆಗಳನ್ನು ಪೂರೈಸಲು ಧಾನ್ಯದ ಹೆಚ್ಚುವರಿ ರಾಜ್ಯಗಳಾದ ಪಂಜಾಬ್, ಹರಿಯಾಣ, ಛತ್ತೀಸ್‌ಗಢ, ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಎಫ್‌ಸಿಐ ಅಕ್ಟೋಬರ್-ಸೆಪ್ಟೆಂಬರ್ ಅವಧಿಯಲ್ಲಿ ಅಕ್ಕಿಯನ್ನು ಸಂಗ್ರಹಿಸಿದರೆ, ರೈತ ಸಹಕಾರಿ ನಾಫೆಡ್ ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳನ್ನು ಎಂಎಸ್‌ಪಿಗಿಂತ ಕಡಿಮೆಯಾದಾಗ ಖರೀದಿಸುತ್ತದೆ.

Recommended Video

Sidhu Moosewala ತಂದೆ ಹಾಗು Amit Shah ಭೇಟಿ ಹಿಂದಿನ ಕಾರಣವೇನು | #India | OneIndia Kannada

English summary
Indian Govt likely to hike minimum support prices by 5-20 per cent for summer crops. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X