ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಧಿ ಆಯ್ತು ಈಗ ಆಲೂಗಡ್ಡೆ ಆಮದಿಗೆ ಮುಕ್ತ ಅವಕಾಶ ನೀಡಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಜುಲೈ 5: ಭೂತಾನ್‌ನಿಂದ ತಾಜಾ ಆಲೂಗಡ್ಡೆಯನ್ನು ಆಮದು ಮಾಡಿಕೊಳ್ಳಲು ಭಾರತ ಸರ್ಕಾರ ಮಂಗಳವಾರ ಅನುಮತಿ ನೀಡಿದೆ. ಜೂನ್ 2023 ರವರೆಗೆ ಯಾವುದೇ ಪರವಾನಗಿ ಇಲ್ಲದೆ ಆಮದು ಮಾಡಿಕೊಳ್ಳಬಹುದು ಎಂದು ಹೇಳಿದೆ.

ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಅಧಿಸೂಚನೆಯ ಪ್ರಕಾರ, ಜೂನ್ 30ರವರೆಗೆ ಯಾವುದೇ ಪರವಾನಗಿ ಇಲ್ಲದೆ ಭೂತಾನ್‌ನಿಂದ ಆಲೂಗಡ್ಡೆ ಆಮದು ಮಾಡಿಕೊಳ್ಳಲು ಮುಕ್ತವಾಗಿ ಅನುಮತಿಸಲಾಗುವುದು ಎಂದು ತಿಳಿಸಿದೆ.

ಕೃಷಿ ಮಾರುಕಟ್ಟೆ ಮೇಲೆ ಉಕ್ರೇನ್ ರಷ್ಯಾ ಯುದ್ಧದ ಪರಿಣಾಮವೇನು?ಕೃಷಿ ಮಾರುಕಟ್ಟೆ ಮೇಲೆ ಉಕ್ರೇನ್ ರಷ್ಯಾ ಯುದ್ಧದ ಪರಿಣಾಮವೇನು?

ಕಳೆದ ಮೇ 13ರ ನಿಷೇಧದ ಆದೇಶದ ನಂತರದಲ್ಲಿ ವಾಣಿಜ್ಯ ಸಚಿವಾಲಯದ ಡಿಜಿಎಫ್‌ಟಿಯು ಮಾನ್ಯ ಸಾಲಪತ್ರವನ್ನು ಹೊಂದಿರುವ ರಫ್ತುದಾರರಿಗೆ ಸುಮಾರು 1.6 ಮಿಲಿಯನ್ ಟನ್ ಗೋಧಿ ರಫ್ತಿಗಾಗಿ ನೋಂದಣಿ ಪ್ರಮಾಣಪತ್ರವನ್ನು ನೀಡಿದೆ. ದೇಶದಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಆಹಾರಧಾನ್ಯದ ರಫ್ತಿನ ಮೇಲಿನ ಮೇ.13ರಂದು ನಿಷೇಧವನ್ನು ವಿಧಿಸಿದ್ದು, ಅದಕ್ಕಿಂತ ಮೊದಲು ನೀಡಿದ ಸಾಲದ ಪತ್ರಗಳಿಗೆ (L/C) ಗೋಧಿ ಸಾಗಣಿಕೆ ಮಾಡಲು ಸರ್ಕಾರವು ಅನುಮತಿ ನೀಡಿದೆ.

ಉಕ್ರೇನ್-ರಷ್ಯಾ ಯುದ್ಧದ ಕರಿನೆರಳು ಗೋಧಿಯ ಮೇಲೆ

ಉಕ್ರೇನ್-ರಷ್ಯಾ ಯುದ್ಧದ ಕರಿನೆರಳು ಗೋಧಿಯ ಮೇಲೆ

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು ಜಾಗತಿಕ ಮಟ್ಟದಲ್ಲಿ ಹಣದುಬ್ಬರಕ್ಕೆ ಕಾರಣವಾಯಿತು. ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಯುದ್ಧವು ಗೋಧಿ ಸೇರಿದಂತೆ ಆಹಾರ ಪದಾರ್ಥಗಳ ಆಮದು ಮತ್ತು ರಫ್ತಿನ ಮೇಲೆ ಪರಿಣಾಮ ಬೀರಿದ್ದು, ದಿಢೀರ್ ಬೆಲೆ ಏರಿಕೆಗೆ ಎಡೆಮಾಡಿಕೊಟ್ಟಿತು.

ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದಲ್ಲಿ ನೋಂದಣಿ

ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದಲ್ಲಿ ನೋಂದಣಿ

ಮಾನ್ಯವಾದ ಪರವಾನಗಿಯನ್ನು ಹೊಂದಿರುವ ರಫ್ತುದಾರರು ಕೂಡಾ ತಮ್ಮ ಸರಕುಗಳನ್ನು ಸಾಗಿಸಲು ಒಪ್ಪಂದಗಳ (RCs) ನೋಂದಣಿಯನ್ನು ಪಡೆಯಲು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದ (DGFT) ಪ್ರಾದೇಶಿಕ ಪ್ರಾಧಿಕಾರಗಳೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕಾಗಿತ್ತು. "ಇದುವರೆಗೆ ಸುಮಾರು 1.6 ಮಿಲಿಯನ್ ಟನ್‌ಗಳಷ್ಟು ಗೋಷಿಯನ್ನು ರಫ್ತು ಮಾಡುವುದಕ್ಕೆ ಅನುಮತಿ ನೀಡಲಾಗಿದೆ," ರಷ್ಯಾ ಟರ್ಕಿಯ ಮೂಲಕ ಗೋಧಿ ರಫ್ತು ಮಾಡಲು ಪ್ರಾರಂಭಿಸಿದ್ದು, ಇದರಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಬೆಲೆಗಳು ಸ್ಥಿರವಾಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

2021ರಲ್ಲಿ ಭಾರತ ರಫ್ತು ಮಾಡಿದ ಗೋಧಿ ಪ್ರಮಾಣವೆಷ್ಟು?

2021ರಲ್ಲಿ ಭಾರತ ರಫ್ತು ಮಾಡಿದ ಗೋಧಿ ಪ್ರಮಾಣವೆಷ್ಟು?

ಭಾರತದಲ್ಲಿ ಬೆಳೆಯುವ ಗೋಧಿಗೆ ವಿದೇಶಗಳಲ್ಲಿ ಸಖತ್ ಡಿಮ್ಯಾಂಡ್ ಸೃಷ್ಟಿಯಾಗಿದೆ. 2.05 ಬಿಲಿಯನ್ ಮೌಲ್ಯದ 7 ದಶಲಕ್ಷ ಟನ್ ಗೋಧಿಯನ್ನು ರಫ್ತು ಮಾಡಲಾಗಿದ್ದು, 2021-22ನೇ ಸಾಲಿನಲ್ಲಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಭಾರತವು ರಫ್ತು ಮಾಡಿರುವ ಒಟ್ಟು ಗೋಧಿಯಲ್ಲಿ ಶೇ.50ರಷ್ಟು ಗೋಧಿಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಿ ಕೊಡಲಾಗಿದೆ.

ಭಾರತದಿಂದ ಗೋಧಿ ಆಮದು ಮಾಡಿಕೊಳ್ಳುವ ಟಾಪ್-10 ರಾಷ್ಟ್ರಗಳು

ಭಾರತದಿಂದ ಗೋಧಿ ಆಮದು ಮಾಡಿಕೊಳ್ಳುವ ಟಾಪ್-10 ರಾಷ್ಟ್ರಗಳು

ವಿಶ್ವ ಗೋಧಿ ರಫ್ತಿನಲ್ಲಿ ಭಾರತವು ಶೇಕಡಾ 1ಕ್ಕಿಂತ ಕಡಿಮೆ ಪಾಲನ್ನು ಹೊಂದಿದೆ. ಭಾರತವು ಗೋಧಿಯ ಎರಡನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಕಳೆದ 2020ರಲ್ಲಿ ವಿಶ್ವದ ಒಟ್ಟು ಉತ್ಪಾದನೆಯ ಸುಮಾರು ಶೇ.14ರಷ್ಟಿದೆ. 2020-21ರಲ್ಲಿ ಭಾರತದ ಗೋಧಿಯನ್ನು ಆಮದು ಮಾಡಿಕೊಳ್ಳುವ ಟಾಪ್-10 ರಾಷ್ಟ್ರಗಳು ಯಾವುವು ಎಂಬುದಕ್ಕೆ ಇಲ್ಲಿ ಪಟ್ಟಿ ಮಾಡಲಾಗಿದೆ.

1. ಬಾಂಗ್ಲಾದೇಶ

2. ನೇಪಾಳ

3. ಯುನೈಟೆಡ್ ಅರಬ್ ಎಮಿರೇಟ್ಸ್

4 ಶ್ರೀಲಂಕಾ

5 ಯೆಮೆನ್

6. ಅಫ್ಘಾನಿಸ್ತಾನ

7 ಕತಾರ್

8. ಇಂಡೋನೇಷಿಯಾ

9. ಓಮನ್

10. ಮಲೇಷ್ಯಾ

Recommended Video

ಆಧಾರ್ ಕಾರ್ಡ್ ನಿಂದ 2 ವರ್ಷಗಳಾದ್ಮೇಲೆ ಹೆತ್ತವರನ್ನು ಸೇರಿದ ಯುವತಿಯ ಕಥೆ ಹೇಳಿದ PM ಮೋದಿ | OneIndia Kannada

English summary
Indian Govt allows imports of potatoes from Bhutan till June 2023.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X