ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 5: ಸಂಪೂರ್ಣ ಕ್ರಾಂತಿ ದಿವಸ; ಕಾರಣ?

|
Google Oneindia Kannada News

ನಾಳೆ, ಅಂದರೆ ಜೂನ್ 5ಕ್ಕೆ ಕೇಂದ್ರ ಸರ್ಕಾರ ಜನವಿರೋಧಿ ಮೂರು ಕೃಷಿ ಕಾಯಿದೆಗಳನ್ನು ಸುಗ್ರೀವಾಜ್ಞೆ ಮೂಲಕ ತಂದು ಒಂದು ವರ್ಷವಾಯಿತು.

ಕೊರೊನಾ ಸಂಕಷ್ಟದ ನಡುವೆ, ರೈತರು ಮತ್ತು ಜನಸಾಮಾನ್ಯರ ವಿರೋಧಗಳ ನಡುವೆಯೇ ಈ ಕಾನೂನುಗಳನ್ನು ಕೇಂದ್ರ ನಮ್ಮ ಮೇಲೆ ಹೇರಿತು. ಈ ಕಾಯಿದೆಗಳ ವಿರುದ್ಧ ಕಳೆದ ಆರು ತಿಂಗಳುಗಳಿಂದ ಬಹುದೊಡ್ಡ ರೈತ ಚಳುವಳಿ ದಿಲ್ಲಿಯ ಗಡಿಗಳಲ್ಲಿ ನಡೆಯುತ್ತಿದೆ.

ಈ ಚಳುವಳಿಯು ಸರ್ಕಾರ ಹೇಗೆ ಶೋಷಣೆ ಮಾಡುತ್ತಿದೆ ಮತ್ತು ಕಾರ್ಪೋರೇಟ್ ಕಂಪನಿಗಳ ಪರ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. 1974ರಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಮುಂದಾಳತ್ವದಲ್ಲಿ ಇನ್ನೂ ಅನೇಕ ಮಹನೀಯರು ಅಂದಿನ ಸರ್ಕಾರದ ವಿರುದ್ಧ ದೇಶದಲ್ಲಿ ಬಹುದೊಡ್ಡ ಜನ ಚಳವಳಿ ನಡೆಸಿದ್ದರು.

Indian Farmers To Observe Total Revolution Day On June 5; Here Is The Reason Why

1974 ಜೂನ್ 5 ರಂದು ಜಯಪ್ರಕಾಶ್ ನಾರಾಯಣ್ ಅವರು "ಸಂಪೂರ್ಣ ಕ್ರಾಂತಿ" ಎಂಬ ಘೋಷಣೆಯನ್ನು ಕೊಟ್ಟರು. ಅದರಿಂದ ಆಗಿನ ಕೇಂದ್ರ ಸರ್ಕಾರಕ್ಕೆ ಪೆಟ್ಟು ಬಿತ್ತು.

ಇದೀಗ 2021 ಜೂನ್ 5 ರಂದು ಸಂಯುಕ್ತ ಕಿಸಾನ್ ಮೋರ್ಚಾವು ಭಾರತೀಯ ಜನತಾ ಪಕ್ಷದ ಮತ್ತು ಅವರ ಮೈತ್ರಿ ಪಕ್ಷಗಳ ನಾಯಕರು ಮನೆ ಹಾಗೂ ಕಚೇರಿಗಳ ಮುಂದೆ ಮೂರು ಕೃಷಿ ಕಾಯಿದೆಗಳನ್ನು ಸುಡುವ ಮೂಲಕ "ಸಂಪೂರ್ಣ ಕ್ರಾಂತಿ ದಿವಸ" ಆಚರಿಸುತ್ತಿದೆ.

ಈ ನಾಯಕರುಗಳ ಅನುಪಸ್ಥಿತಿ ಇದ್ದಲ್ಲಿ ಆಯಾ ಜಿಲ್ಲಾ ತಾಲ್ಲೂಕು ಕಚೇರಿಗಳ ಮುಂದೆ ಕಾಯಿದೆಗಳನ್ನು ಸುಡಲಾಗುವುದು. ಈ ಚಳವಳಿಯು ಸಂಪೂರ್ಣ ಅಹಿಂಸೆಯಿಂದ ಕೂಡಿರುತ್ತದೆ, ಜೊತೆಗೆ ಈ ಕಾಯಿದೆಗಳು ದೇಶದ ಜನತೆಗೆ ಬೇಡವೆಂಬ ಸ್ಪಷ್ಟ ಸಂದೇಶ ಮತ್ತು ಎಚ್ಚರಿಕೆಯನ್ನು ಕೇಂದ್ರಕ್ಕೆ ನೀಡುತ್ತದೆ.

English summary
The central government will enact three agriculture acts and become one year on June 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X