ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಂಕಷ್ಟದ ನಡುವೆಯೂ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಳ

|
Google Oneindia Kannada News

ಕೊರೊನಾ ವೈರಸ್ ಸಂಕಷ್ಟದ ನಡುವೆಯೂ 2020 ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಶೇಕಡಾ 43.4 ರಷ್ಟು ಕೃಷಿ ಉತ್ಪನ್ನಗಳ ರಫ್ತು ಹೆಚ್ಚಾಗಿದೆ. ಸರ್ಕಾರದ ಸತತ ಪ್ರಯತ್ನದ ಫಲ ಇದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ತಿಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 37397.3 ಕೋಟಿ ರುಪಾಯಿ ಇದ್ದದ್ದು ಈಗ 53,626.6 ಕೋಟಿ ರೂ. ವಹಿವಾಟು ನಡೆದಿದೆ. ಶೇಂಗಾ, ಗೋಧಿ, ಬಾಸುಮತಿ ಅಕ್ಕಿ, ಹಾಗೂ ಇತರೆ ಅಕ್ಕಿ ತಳಿಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗಿದೆ. ಇದೇ ಸೆಪ್ಟೆಂಬರ್ ತಿಂಗಳಲ್ಲಿ 9296 ಕೋಟಿ ರುಪಾಯಿಗಳು ಮೌಲ್ಯದ ಕೃಷಿ ಉತ್ಪನ್ನಗಳ ರಫ್ತಾಗಿವೆ.

2020 ವರ್ಷಾಂತ್ಯದಲ್ಲಿ ಘೋರ ಪರಿಸ್ಥಿತಿಯ ಎಚ್ಚರಿಕೆ ಕೊಟ್ಟ WFP2020 ವರ್ಷಾಂತ್ಯದಲ್ಲಿ ಘೋರ ಪರಿಸ್ಥಿತಿಯ ಎಚ್ಚರಿಕೆ ಕೊಟ್ಟ WFP

ಕಳೆದ ಸಾಲಿನಲ್ಲಿ ಇದೇ ಸಮಯಕ್ಕೆ 5114 ಕೋಟಿ ರೂಪಾಯಿ ಮೌಲ್ಯದ ಪದಾರ್ಥಗಳು ರಫ್ತಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದರೆ ಇದೀಗ ಶೇಕಡಾ 81.7 ರಷ್ಟು ವಹಿವಾಟು ಹೆಚ್ಚಳವಾಗಿದೆ.

Increased Exports Of Agricultural Products In Spite Of Corona Hardship

ಕೃಷಿ ಉತ್ಪನ್ನಗಳ ರಫ್ತು ವಹಿವಾಟು ಹೆಚ್ಚಿಸಲು 2018 ರಲ್ಲಿ ಸರ್ಕಾರ ಕೃಷಿ ರಫ್ತು ನೀತಿ ರೂಪಿಸಿಸಿತ್ತು, ತನ್ಮೂಲಕ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಕ್ಲಸ್ಟರ್ (ಗುಂಪು) ಗಳನ್ನು ಮಾಡಿ ಪ್ರೋತ್ಸಾಹಿಸಲಾಗಿದೆ. ಹಣ್ಣು, ತರಕಾರಿ, ಮಸಾಲೆ ಬೆಳೆಗಳು ಮುಂತಾದವನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗಿದೆ.

ಇತ್ತೀಚೆಗೆ ಕೃಷಿ, ವಾಣಿಜ್ಯವನ್ನು ಪ್ರೋತ್ಸಾಹಿಸಲು ಸರ್ಕಾರ "ಅಗ್ರಿ ಇನ್ಪ್ರಾ ಫಂಡ್" ಎಂದು ಒಂದು ಲಕ್ಷ ಕೋಟಿ ರುಪಾಯಿ ಮೀಸಲಿಟ್ಟಿದೆ. ಇದರ ಮೂಲಕ ಕೃಷಿ ರಫ್ತು ಕೂಡಾ ಹೆಚ್ಚಾಗಲು ಅನುಕೂಲವಾಗಲಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

English summary
Exports of agricultural products increased by 43.4 percent between April and September 2020. The central agriculture and farmers' welfare department said this was the result of the government's continuous efforts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X