ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ವೇಳೆಗೆ ರೇಷ್ಮೆಯಿಂದ 1 ಕೋಟಿ ಉದ್ಯೋಗ, ಕರ್ನಾಟಕಕ್ಕೆ ಹೆಚ್ಚಿನ ಲಾಭ

By Sachhidananda Acharya
|
Google Oneindia Kannada News

ನವದೆಹಲಿ, ಮಾರ್ಚ್ 22: 2020ರ ವೇಳೆಗೆ ರೇಷ್ಮೆ ಉದ್ಯಮದಲ್ಲಿ 1 ಕೋಟಿ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿರುವ ಸಮಗ್ರ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಜವುಳಿ ಮಂತ್ರಾಲಯವು ಕೇಂದ್ರ ವಲಯದ ಇಂಟಿಗ್ರೇಟೆಡ್ ಯೋಜನೆಯ ಅಡಿಯಲ್ಲಿ ರೇಷ್ಮೆ ಕೃಷಿ ಕ್ಷೇತ್ರದ ಅಭಿವೃದ್ದಿಗಾಗಿ ರೂ. 2161.68 ಕೋಟಿ ಅನುದಾನ ನೀಡಿದೆ.

ಮೈಸೂರು ಸಿಲ್ಕ್ ಸೀರೆ ಹಿಂದಿದೆ ಕುತೂಹಲಕಾರಿ ಕಥೆಮೈಸೂರು ಸಿಲ್ಕ್ ಸೀರೆ ಹಿಂದಿದೆ ಕುತೂಹಲಕಾರಿ ಕಥೆ

ಈ ಯೋಜನೆಯನ್ನು ಬೆಂಗಳೂರಿನಲ್ಲಿರುವ ಕೇಂದ್ರ ರೇಷ್ಮೆ ಮಂಡಳಿ ಅನುಷ್ಠಾನಗೊಳಿಸಲಿದೆ. ಇದರಿಂದ ರಾಜ್ಯದಲ್ಲಿ ಹೆಚ್ಚಾಗಿರುವ ರೇಷ್ಮೆ ಬೆಳೆಗಾರರು ಸೇರಿದಂತೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ 85 ಲಕ್ಷ ಉದ್ಯಮಿಗಳು ಮತ್ತು ಕೃಷಿಕರಿಗೆ ಅನುಕೂಲವಾಗಲಿದೆ.

Increase employment in silk sector from current 85 lakhs to 1 crore by 2020

ಮೂರು ವರ್ಷಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. 2017ರಿಂದ 2020ರ ಕಾಲಮಿತಿಯನ್ನು ಇದಕ್ಕೆ ಹಾಕಿಕೊಳ್ಳಲಾಗಿದೆ.

2016-17 ರಲ್ಲಿ ಉತ್ಪಾದನೆಯಾದ ರೇಷ್ಮೆ ಪ್ರಮಾಣ 30,348 ಮೆಟ್ರಿಕ್ ಟನ್ ಆಗಿದ್ದು ಇದನ್ನು 2019-20ರ ವೇಳೆಗೆ 38,500 ಮೆಟ್ರಿಕ್ ಟನ್ ಗೆ ಏರಿಸುವುದು, ಜೊತೆಗೆ ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ರೇಷ್ಮೆ ಉತ್ಪಾದನೆಯನ್ನು ಈಗಿರುವ 100 ಕೆಜಿ ಪರ್ ಹೆಕ್ಟೇರ್ ನಿಂದ 111ಕೆಜಿ ಪರ್ ಹೆಕ್ಟೇರ್ ಗೆ ಏರಿಕೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಇದಲ್ಲದೆ ರೇಷ್ಮೆ ಬೆಳೆಯಲ್ಲಿ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸುವ ಉದ್ದೇಶವೂ ಈ ಸಮಗ್ರ ಯೋಜನೆಯಲ್ಲಿ ಸೇರಿದೆ.

English summary
The Union Cabinet has approved a comprehensive plan to promote silk industries development. 'Integrated Scheme for Development of Silk Industry' is a initiative aims at making India self-sufficient in silk production through research and development, technology upgradation and improvement in silk quality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X