ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ: ಐಐಟಿ ಕಾನ್ಪುರದಿಂದ ಕೃಷಿ ಸ್ಟಾರ್ಟ್ಅಪ್‌ಗಳಿಗೆ 50 ಲಕ್ಷದವರೆಗೆ ನೆರವು

|
Google Oneindia Kannada News

ನವದೆಹಲಿ, ಜುಲೈ. 27: ಸ್ಟಾರ್ಟ್ಅಪ್ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಸೆಂಟರ್, ಐಐಟಿ ಕಾನ್ಪುರದ ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್ ಅಡಿಯಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ನೀರ್ಮಾನ್ (NIRMAN) ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ.

ಪ್ರೋಟೋಟೈಪ್- ಟು- ಮಾರ್ಕೆಟ್‌ಗೆ ಸಂಬಂಧಿಸಿದ ಸವಾಲುಗಳನ್ನು ಜಯಿಸಲು ಸಹಾಯ ಮಾಡಲು ಹಾಗೂ ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಉತ್ಪಾದನಾ (ಮ್ಯಾನ್ಯುಫ್ಯಾಕ್ಚರ್‌) ಸ್ಟಾರ್ಟ್‌ಅಪ್‌ಗಳ ಮೇಲೆ ಕಾರ್ಯಕ್ರಮವು ಕೇಂದ್ರೀಕರಿಸ್ಪಟ್ಟಿದೆ.

ಈ ಕಾರ್ಯಕ್ರಮದ ಅಡಿಯಲ್ಲಿ, 15 ಸ್ಟಾರ್ಟ್ ಅಪ್‌ಗಳನ್ನು ಆಯ್ಕೆ ಮಾಡಲಾಗುತ್ತದೆ. ಕೇಂದ್ರದಿಂದ ಮಾರುಕಟ್ಟೆಗೆ ತಮ್ಮ ಉತ್ಪನ್ನದ ಮಾರಾಟದ ಪ್ರಯಾಣವನ್ನು ವೇಗಗೊಳಿಸಲು ಇದು ಅವಕಾಶವನ್ನು ನೀಡಲಾಗುತ್ತದೆ. ಉತ್ತಮ ಪ್ರದರ್ಶನ ನೀಡುವ ಸ್ಟಾರ್ಟ್‌ಅಪ್‌ಗಳು ಒಟ್ಟು 15 ಸಂಸ್ಥೆಗಳು ರೂ. 10 ಲಕ್ಷದವರೆಗೆ ನಗದು ಬಹುಮಾನವನ್ನು ಪಡೆಯುತ್ತವೆ. ಕಾರ್ಯಕ್ರಮವು ಆಗಸ್ಟ್ 5, 2022 ರವರೆಗೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ.

IIT Kanpur Assistance up to 50 lakhs for agriculture and health manufacturing startups

ಐಐಟಿ ಕಾನ್ಪುರದ ಇನ್ನೋವೇಶನ್ ಮತ್ತು ಇನ್‌ಕ್ಯುಬೇಶನ್‌ನ ಪ್ರಭಾರಿ ಪ್ರೊಫೆಸರ್ ಪ್ರೊ. ಅಮಿತಾಭ ಬಂಡೋಪಾಧ್ಯಾಯ ಅವರು ಈ ಬಗ್ಗೆ ಮಾಹಿತಿ ನೀಡಿ, ನಮ್ಮ ದೇಶವು ಉತ್ಪಾದನಾ ವಲಯದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಆದ್ದರಿಂದ ನಮಗೆ ಆರೋಗ್ಯ ಮತ್ತು ಕೃಷಿಯಲ್ಲಿ ಕೆಲಸ ಮಾಡುವ ನವೋದ್ಯಮಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ತುರ್ತಾಗಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಪ್ರಶಸ್ತಿ ಆಯ್ಕೆಯ ಮಾನದಂಡದ ಬಗ್ಗೆ, ಎಲ್ಲವೂ ನೀವು ಯಾವ ರೀತಿಯ ಉತ್ಪಾದನಾ ಪ್ರಾರಂಭ ಮತ್ತು ನಿಮಗೆ ಎಷ್ಟು ನೆರವು ಬೇಕು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಯೋಜನೆಗೆ ಆಯ್ಕೆ ಮಾಡುವಾಗ ನಿಮ್ಮ ನೂತನ ಕಲ್ಪನೆಯ ಕಾರ್ಯಸಾಧ್ಯತೆ ಮತ್ತು ಸೇವೆಯ ಗುಣಮಟ್ಟವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆಯ್ಕೆಯಾದ ಸ್ಟಾರ್ಟ್‌ಅಪ್‌ಗಳು ಕಾರ್ಯಕ್ರಮ ಪೂರ್ಣಗೊಂಡ ನಂತರ ರೂ. 50 ಲಕ್ಷದವರೆಗೆ ಹಣಕಾಸಿನ ಬೆಂಬಲವನ್ನು ಪಡೆಯುತ್ತವೆ ಎಂದು ತಿಳಿಸಿದರು.

IIT Kanpur Assistance up to 50 lakhs for agriculture and health manufacturing startups

ಐಐಟಿ ಕಾನ್ಪುರ, ಎಐಐಡಿಇಯ ಸಿಇಒ ಡಾ. ನಿಖಿಲ್ ಅಗರ್ವಾಲ್ ಪ್ರಕಾರ, ಎಸ್ಐಐಸಿ ಭರವಸೆಯ ನಾವೀನ್ಯಕಾರರು ಮತ್ತು ಸ್ಟಾರ್ಟ್- ಅಪ್‌ಗಳೊಂದಿಗೆ ಕೆಲಸ ಮಾಡುವ ವ್ಯಾಪಕ ಆಕಾಂಕ್ಷೆಯನ್ನು ಹೊಂದಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯೊಂದಿಗೆ ಈ ಸಹಯೋಗವು ದೇಶದ ಉತ್ಪಾದನಾ ವಲಯವನ್ನು ಪುನಶ್ಚೇತನಗೊಳಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಆರು ತಿಂಗಳ ಈ ಕಾರ್ಯಕ್ರಮವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಉತ್ಪನ್ನದ ಬೆಳವಣಿಗೆಯ ತತ್ವಗಳು, ಎಂಜಿನಿಯರಿಂಗ್ ವೇಗವರ್ಧನೆ, ಅನುಸರಣೆ ಬದಲಾವಣೆಗಳನ್ನು ಗಣನೆ ಮಾಡುವುದು ಮತ್ತು ಮುಂದಿನ ಹಂತದ ಬೆಳವಣಿಗೆಗೆ ದಾರಿ ಮಾಡಿಕೊಡುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮವು ಜ್ಞಾನದ ಕಾರ್ಯಾಗಾರಗಳು, ಒಬ್ಬರಿಗೊಬ್ಬರು ಮಾರ್ಗದರ್ಶನದ ಬೆಂಬಲವನ್ನು ಒದಗಿಸುತ್ತದೆ. ಕ್ಲಿನಿಕಲ್ ಮೌಲ್ಯೀಕರಣಕ್ಕಾಗಿ ವ್ಯಾಪಾರ ಮತ್ತು ಹೂಡಿಕೆದಾರರ ಸಂಪರ್ಕಗಳನ್ನು ಒದಗಿಸುತ್ತದೆ. ಐಐಟಿ ಸ್ಟಾರ್ಟ್ಅಪ್ ಕಾನ್ಪುರದ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಸೆಂಟರ್ ಅನ್ನು 2000ರಲ್ಲಿ ಸ್ಥಾಪಿಸಲಾಗಿದೆ.

Recommended Video

Siddaramaiah ನಮ್ಮ ಮುಂದಿನ ಮುಖ್ಯ ಮಂತ್ರಿ !! *Politics | OneIndia Kannada

English summary
The Startup Incubation and Innovation Centre, IIT Kanpur's technology business incubator, is launching the NIRMAN Accelerator Programme, which is supported by the Government of India's Department of Science and Technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X