ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ಬದಲಾವಣೆ; ಆಲೂಗಡ್ಡೆ ಬೆಳೆಯ ರಕ್ಷಣೆ ಹೇಗೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರೈತರು ಆಲೂಗಡ್ಡೆ ಬೆಳೆಯನ್ನು ಬೆಳೆಯುತ್ತಾರೆ. ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣ ಇರುವುದರಿಂದ ಬೆಳೆಗೆ ಅಂಗಮಾರಿ ಸೇರಿದಂತೆ ವಿವಿಧ ರೋಗ ತಗಲುವ ಸಾಧ್ಯತೆ ಇದೆ.

ರೈತರು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಆಲೂಗಡ್ಡೆಗೆ ಬರುವ ರೋಗಗಳಲ್ಲಿ ಕೊನೆಯ ಅಂಗಮಾರಿ ರೋಗ ಅತ್ಯಂತ ಅಪಾಯಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಅಂಗಮಾರಿ ರೋಗದಿಂದ ಆಲೂಗಡ್ಡೆ ಬೆಳೆ ಸಂರಕ್ಷಣೆ ಹೇಗೆ? ಅಂಗಮಾರಿ ರೋಗದಿಂದ ಆಲೂಗಡ್ಡೆ ಬೆಳೆ ಸಂರಕ್ಷಣೆ ಹೇಗೆ?

ಆಲೂಗಡ್ಡೆ ಬೆಳೆಯುವ ರೈತರು ರೋಗದ ಲಕ್ಷಣಗಳನ್ನು ಮೊದಲು ಪತ್ತೆ ಹಚ್ಚಬೇಕು. ರೋಗ ಬಂದಿದ್ದರೆ ನೀರಿನಿಂದ ಆವೃತವಾದ ಕಂದು ಮಿಶ್ರಿತ ಕಪ್ಪು ಬಣ್ಣದ ಚುಕ್ಕೆಗಳು ಎಲೆ, ಕಾಂಡ ಮತ್ತು ಗಡ್ಡೆಗಳ ಮೇಲೆ ಕಂಡು ಬರುತ್ತದೆ.

ಲಾಭದಾಯಕ ಆಲೂಗಡ್ಡೆ ಬೇಸಾಯಕ್ಕೆ ರೈತರಿಗೆ ಸಲಹೆಗಳು ಲಾಭದಾಯಕ ಆಲೂಗಡ್ಡೆ ಬೇಸಾಯಕ್ಕೆ ರೈತರಿಗೆ ಸಲಹೆಗಳು

ಎಲೆಯ ಮೇಲಿನ ಚುಕ್ಕೆಗಳು ಕಂದು ಬಣ್ಣದಿಂದ ಕೂಡಿರುತ್ತದೆ ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಎಲೆಯ ಕೆಳಗಡೆ ಅರಳೆಯಂತಹ ಬಿಳಿ ಬಣ್ಣದ ಶಿಲೀಂದ್ರದ ಬೆಳವಣಿಗೆ ಕಂಡು ಬರುತ್ತದೆ.

ಆಲೂಗಡ್ಡೆ ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ ಆಲೂಗಡ್ಡೆ ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

ಎಲೆಯನ್ನು ಆವರಿಸುತ್ತದೆ

ಎಲೆಯನ್ನು ಆವರಿಸುತ್ತದೆ

ಅಂಗಮಾರಿ ರೋಗ ಹೆಚ್ಚು ಆದ್ರತೆಯುಳ್ಳ ಹವಾಗುಣ ಮತ್ತು ಮೋಡ ಕವಿದ ವಾತಾವರಣ ಇದ್ದಲ್ಲಿ ಚುಕ್ಕೆಗಳು ಒಂದುಗೂಡಿ ಪೂರ್ತಿ ಎಲೆಯನ್ನು ಆವರಿಸುತ್ತದೆ. ಗಿಡದ ಕಾಂಡಕ್ಕೂ ಸಹ ಹಬ್ಬಿ ನಂತರ ಗಿಡವು ಒಣಗುತ್ತದೆ. ಅಲ್ಲದೆ ರೋಗಾಣು ಮಣ್ಣಿನಲ್ಲಿರುವ ಗಡ್ಡೆಗಳಿಗೆ ತಗುಲಿ ಗಡ್ಡೆಗಳು ಕಂದು ಬಣ್ಣಕ್ಕೆ ತಿರುಗಿ ಕೊಳೆಯಲು ಆರಂಭವಾಗುತ್ತದೆ. ರೋಗದಿಂದ ಬಳಲುತ್ತಿರುವ ಗಿಡ ಕೆಲವೇ ದಿನಗಳಲ್ಲಿ ಒಣಗುತ್ತದೆ.

ರೋಗದ ಹತೋಟಿ ಹೇಗೆ?

ರೋಗದ ಹತೋಟಿ ಹೇಗೆ?

ಮೋಡ ಕವಿದ ವಾತಾವರಣ, ತುಂತುರು ಮಳೆ ಹವಾಮಾನದಲ್ಲಿ ಈ ರೋಗ ಹೆಚ್ಚು ಉಲ್ಬಣವಾಗುತ್ತದೆ. ರೈತರು ವಾತಾವರಣ ಬದಲಾಗುತ್ತಿರುವುದನ್ನು ಗಮನಿಸಬೇಕು. ರೋಗ ರಹಿತ ಶಿಫಾರಿತ ಗಡ್ಡೆಗಳನ್ನೇ ಬಿತ್ತನೆಗಾಗಿ ಆಯ್ದು ಕೊಳ್ಳಬೇಕು. ಕತ್ತರಿಸಿದ ಬೀಜದ ಗಡ್ಡೆಯನ್ನು 2 ಗ್ರಾಂ ಮ್ಯಾಂಕೋಜೆಬ್ ಒಂದು ಲೀಟರ್ ನೀರಿನಲ್ಲಿ ಕರಗಿಸಿ ತಯಾರಿಸಿದ ದ್ರಾವಣದಲ್ಲಿ 5 ನಿಮಿಷ ಅದ್ದಿ ಉಪಚರಿಸಿ ಬಿತ್ತನೆ ಮಾಡಬೇಕು.

ಔಷಧಿಗಳ ಮೂಲಕ ನಿಯಂತ್ರಣ

ಔಷಧಿಗಳ ಮೂಲಕ ನಿಯಂತ್ರಣ

ಅಂಗಮಾರಿ ರೋಗದ ಪ್ರಾರಂಭಿಕ ಹಂತದಲ್ಲಿ 2.0 ಗ್ರಾಂ ಮ್ಯಾಂಕೋಜೆಬ್ ಅಥವಾ 3.0 ಗ್ರಾಂ ತಾಮ್ರದ ಆಕ್ಸಿಕ್ಲೊರೈಡ್ ಅಥವಾ 2.0 ಗ್ರಾಂ ಮೆಟಲಾಕ್ಷಿಲ್ + ಮ್ಯಾಂಕೋಜೆಬ್ ನ್ನು ಪ್ರತಿ ಲೀಟರ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ನಂತರದ ಹಂತಗಳಲ್ಲಿ/ ರೋಗದ ತೀವ್ರತೆ ಹೆಚ್ಚಾಗಿದ್ದಾಗ 2.0 ಗ್ರಾಂ ಫೊಸ್ಟೈಲ್-ಎಲ್ ಅಥವಾ 1.0 ಗ್ರಾಂ ಡೈಮಿಥೋಮಾರ್ಪ ಜೊತೆಗೆ 2.0 ಗ್ರಾಂ ಮೆಟಿರಾಮ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

3 ಹಂತದ ಸಿಂಪರಣೆ

3 ಹಂತದ ಸಿಂಪರಣೆ

ಮೂರನೆಯ ಹಂತದಲ್ಲಿ ಸಿಂಪರಣೆಯಾಗಿ 2.0 ಗ್ರಾಂ ಸೈಮಾಕ್ಸಾನಿಲ್ + ಮ್ಯಾಂಕೋಜೆಬ್ ಅಥವಾ 3.0 ಗ್ರಾಂ ಫೆನಾಮಿಡೊನ್ + ಮ್ಯಾಂಕೋಜೆಬ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 4ನೇಯ ಸಿಂಪರಣೆಯಾಗಿ 1.0 ಮಿ.ಲೀ. ಅಜೋಕ್ಸಿಸ್ಟ್ರೋಬಿನ್ ಅಥವಾ 2.0 ಗ್ರಾಂ ಪೈರಾಕ್ಲೋಸ್ಟ್ರೊಬಿನ್ + ಮೆಟಿರಾಮ ಅಥವಾ 1.0 ಮಿ.ಲೀ. ಫ್ಯಾಮೊಕ್ಸಾಡೋನ್ + ಸೈಮಾಕ್ಸಾನಿಲ್ ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.

English summary
Horticulture department tips to farmers to take care of Potato crops form blight disease. Due to change in weather disease may attack crop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X