ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿ ಕಾಯಿ ಉದುರುವಿಕೆ, ಮುಂಗಾರಿನ ಕೊಳೆ ರೋಗಗಳ ನಿರ್ವಹಣೆ ಸಲಹೆ

|
Google Oneindia Kannada News

ಮಡಿಕೇರಿ ಜು.21: ಕಾಫಿ ಕಾಯಿ ಉದುರುವಿಕೆ, ಮುಂಗಾರಿನ ಕೊಳೆ ರೋಗಗಳ ನಿರ್ವಹಣೆ ಸಲಹೆ ಬಗ್ಗೆ ಕಾಫಿ ಸಂಶೋಧನಾ ಸಂಸ್ಥೆಯ ಸಂಶೋಧನಾ ವಿಭಾಗದವರು ಕೊಟ್ಟ ಮಾಹಿತಿಯಂತೆ ವಿವರ ಇಲ್ಲಿದೆ. ಕಾಯಿ ಬೆಳವಣಿಗೆಯ ಆರಂಭಿಕ ಹಂತದಲ್ಲಿ, ನಿರಂತರ ಮಳೆ ಬೇರು ವಲಯದ ಜಲಾವೃತ ಮತ್ತು ತೇವಾಂಶ ಹೆಚ್ಚಿಸುವುದರ ಮೂಲಕ ವೆಟ್‍ಫೀಟ್ ಸ್ಥಿತಿಯನ್ನು ಉಂಟುಮಾಡಿ ಬಲಿಯುವ ಮುನ್ನವೇ ಕಾಯಿಗಳ ಉದುರುವಿಕೆಗೆ ಕಾರಣವಾಗುತ್ತದೆ.

ಇಂತಹ ಬಿಕ್ಕಟ್ಟಿನ ವಾತಾವರಣವು, ಅರೇಬಿಕಾ ಹಾಗೂ ರೊಬಸ್ಟಾ ಕಾಫಿ ಎರಡರಲ್ಲೂ ಕೊಳೆ ರೋಗ ಹಾಗೂ ತೊಟ್ಟು ಕೊಳೆ ರೋಗಗಳು ಹೆಚ್ಚಾಗಲು ಅನುಕೂಲಕರವಾಗಿದೆ. ಸಾಮಾನ್ಯವಾಗಿ, ಅರೇಬಿಕಾ ಹಾಗೂ ರೊಬಸ್ಟಾ ಕಾಫಿಯಲ್ಲಿ ಅನುಕ್ರಮವಾಗಿ 5-8 ಹಾಗೂ 10-15 ಕಾಯಿ ಉದುರುವಿಕೆ ನೈಸರ್ಗಿಕ ಪ್ರಕ್ರಿಯೆಯಾಗಿ ಕಂಡುಬರುತ್ತದೆ.

ಕಾಯಿ ಉದುರುವಿಕೆ ಸಾಮಾನ್ಯಕ್ಕಿಂತ ಹೆಚ್ಚಾದಲ್ಲಿ, ಅದು ವೆಟ್‍ಫೀಟ್ ಸ್ಥಿತಿ ಹಾಗೂ ಮುಂಗಾರಿನ ಕೊಳೆ ರೋಗಗಳಿಂದಾಗಿ ಆಗಿರುತ್ತದೆ.

How to Prevent Coffee Plant and Seed from root rot disease during Monsoon

ಈ ವರ್ಷದ ಬೇಸಿಗೆಯಲ್ಲಿ ಬಂದ ಮಧ್ಯಂತರ ಮಳೆಗಳು ಮುಂಗಾರಿನಲ್ಲಿ ಕೊಳೆ ರೋಗಗಳು ಉಲ್ಬಣಿಸಲು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿವೆ. ಆದ್ದರಿಂದ ವೆಟ್‍ಫೀಟ್ ಕಾರಣದಿಂದಾಗಿ ಆದ ಹಾರ್ಮೋನ್ ಅಸಮತೋಲನದಿಂದ ಕಾಯಿ ಉದುರುವುದನ್ನು ತಡೆಯಲು, ಹಲವು ಕ್ರಮ ಕೈಗೊಳ್ಳಬೇಕಿದೆ.

ಹೆಚ್ಚಿನ ನೀರು ಬಸಿದು ಹೋಗಲು ಚರಂಡಿಗಳು ಹಾಗೂ ತೊಟ್ಟಿಲು ಗುಂಡಿಗಳನ್ನು ಸ್ವಚ್ಛಗೊಳಿಸುವುದು, ಮುಂಗಾರಿನಲ್ಲಿ ಬೇರು ವಲಯದಲ್ಲಿ ನೀರು ನಿಲ್ಲುವುದನ್ನು ತಡೆಯಲು ಹಾಗೂ ನೀರು ತ್ವರಿತವಾಗಿ ಆವಿಯಾಗಲು, ಗಿಡಗಳ ಬುಡದಿಂದ ದರಗನ್ನು ತೆಗೆದು ನಾಲ್ಕು ಗಿಡಗಳ ನಡುವೆ ರಾಶಿ ಮಾಡುವುದು ಗಿಡಗಳಲ್ಲಿ ಸಾಕಷ್ಟು ಗಾಳಿಯಾಡಲು, ಗಿಡಗಳ ನೆತ್ತಿ ಬಿಡಿಸುವುದು ಹಾಗೂ ಪುಡಿ ಚಿಗುರು ಮತ್ತು ಕಂಬ ಚಿಗುರುಗಳನ್ನು ತೆಗೆಯುವುದು.

How to Prevent Coffee Plant and Seed from root rot disease during Monsoon

ಯೂರಿಯಾ ಗೊಬ್ಬರ ಬಳಸಿ:
ಮುಂಗಾರಿನಲ್ಲಿ ಮಳೆಯು ಬಿಡುವು ಕೊಟ್ಟ ಸಮಯದಲ್ಲಿ, ಬೇರುಗಳ ಕ್ರಿಯಾಶೀಲವಾಗಿಸಲು ಹಾಗೂ ಕಾಯಿಗಳು ಬೆಳೆಯಲು ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರ ಹಾಕುವುದು. ಈಗಿನ ಪರಿಸ್ಥಿತಿಯಲ್ಲಿ, ಗಿಡಗಳ ಸ್ವಚ್ಛತೆಯನ್ನು ಕಾಪಾಡಲು ಸಲಹೆ ನೀಡಲಾಗಿದೆ.

ರೋಗದ ಸೋಂಕನ್ನು ಕಡಿಮೆ ಮಾಡಲು ಹಾಗೂ ಹರಡದಂತೆ ತಡೆಯಲು, ಬಾಧಿತ ಗಿಡಗಳ ಎಲ್ಲಾ ಸೋಂಕಿತ ಭಾಗಗಳನ್ನು, ಅಂದರೆ ಎಲೆಗಳು, ಕಾಯಿಗಳು, ಗಿಡಗಳ ಮೇಲೆ ಬಿದ್ದಿರುವ ನೆರಳು ಮರದ ಎಲೆಗಳು ಎಲ್ಲವನ್ನು ತೆಗೆದು ಮಣ್ಣಿನಲ್ಲಿ ಹೂತು ಹಾಕಿ ನಾಶ ಮಾಡುವುದು.

How to Prevent Coffee Plant and Seed from root rot disease during Monsoon

ಗಿಡಗಳನ್ನು ಸ್ವಚ್ಛಗೊಳಿಸಿದ ನಂತರ ಮತ್ತು ಮಳೆ ಬಿಡುವು ಕೊಟ್ಟಾಗ, ಶಿಲೀಂಧ್ರನಾಶಕದ ಸಿಂಪರಣೆಯನ್ನು ಮಾಡುವುದು. ಪೈರಕ್ಲೊಸ್ಟ್ರೊಬಿನ್ ಮತ್ತು ಎಪಿಕೊನಝೋಲ್ (ಒಪೆರಾ) ಅಥವಾ ಟೆಬುಕೊನಝೋಲ್ ಶೇ.25.9 ಇಸಿ (ಫಾಲಿಕ್ಯೂರ್) ಶಿಲೀಂಧ್ರ ನಾಶಕವನ್ನು 200 ಲೀಟರ್ ನೀರಿಗೆ 200 ಮಿಲಿ ಮತ್ತು 50 ಮಿಲಿ ಪ್ಲಾನೋಫಿಕ್ಸ್ ಹಾರ್ಮೋನ್ ಜೊತೆಗೆ ಯಾವುದಾದರೂ ಅಂಟು ದ್ರಾವಣದೊಂದಿಗೆ ಬೆರೆಸಿ ಸಿಂಪಡಿಸುವುದು.

ಎಲೆಗಳ ಮೇಲೆ ಮತ್ತು ಕೆಳಭಾಗ, ಬೆಳೆಯುತ್ತಿರುವ ಕಾಯಿಗಳು ಮತ್ತು ಹೊಸ ರೆಕ್ಕೆಗಳು, ಸೋಂಕಿತ ಎಲ್ಲಾ ಭಾಗಗಳಿಗೆ ತಾಗುವಂತೆ ಶಿಲೀಂದ್ರ ನಾಶಕವನ್ನು ಸಿಂಪಡಿಸುವಂತೆ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.

English summary
How to Prevent from Coffee leaf rust, root rot disease? Here are the simple method to control it during Monsoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X