ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಂಗಿನಲ್ಲಿ ರುಗೋಸ್ ಬಿಳಿ ನೊಣದ ಹತೋಟಿ ಹೇಗೆ? ಇಲ್ಲಿದೆ ಸಲಹೆ

|
Google Oneindia Kannada News

ತೆಂಗನ್ನು ಕಲ್ಪ ವೃಕ್ಷ ಎಂದೇ ಮಾನ್ಯ ಮಾಡಲಾಗುತ್ತದೆ. ರೈತರ ಪಾಲಿನ ಆಪತ್ಭಾಂಧವನಾಗಿ ಸದಾ ಕಾಯುವ ಈ ತೆಂಗುಗಳೂ ಸಹ ರೋಗ ಹಾಗೂ ಕೀಟಗಳ ಬಾಧೆಯಿಂದ ಹೊರತಲ್ಲ. ಇತ್ತೀಚಿನ ದಿನಗಳಲ್ಲಿ ತೆಂಗು ಬೆಳೆಗಳಲ್ಲಿ ಅಲ್ಯೂರೋಡಿಕಸ್ ರುಗಿಯೋಪರ್ಕುಲೇಟಸ್ ಅಥವಾ ರುಗೋಸ್ ಬಿಳಿ ನೊಣದ ಬಾಧೆ ತೀವ್ರತರದಲ್ಲಿ ಕಾಣಿಸಿಕೊಂಡಿದೆ. ಈ ಬಾಧೆಯ ಲಕ್ಷಣ ಹಾಗೂ ಹತೋಟಿ ಕ್ರಮಗಳಿಗೆ ತೋಟಗಾರಿಕೆ ಇಲಖೆ ಸಲಹೆ ಮಾಡಿದೆ.

ರುಗೋಸ್ ಬಿಳಿ ನೊಣ ಹೇಗಿರಲಿದೆ?: ರುಗೋಸ್ ಬಿಳಿ ನೊಣ ಸಣ್ಣ ರಸ ಹೀರುವ ಕೀಟವಾಗಿದ್ದು, ಸುರುಳಿ ಸುತ್ತುವಾಗ ಸಣ್ಣ ಚಿಟ್ಟೆಯ ರೀತಿಯೂ, ಬಿಳಿ ನೊಣಗಳಿಗೆ ಹೋಲಿಸಿದಲ್ಲಿ ಕೊಂಚ ದೊಡ್ಡದಾಗಿಯೂ ಕಾಣುತ್ತದೆ. ಇದರ ಮೊಟ್ಟೆಗಳ ದೀರ್ಘ ವೃತ್ತದ ಹಳದಿ ಬಣ್ಣದಲ್ಲಿದ್ದು, ಮೊಟ್ಟೆಯ ಸುತ್ತಲೂ ಮೇಣದ ಅನಿಯಮಿತ ಸುರುಳಿ ಆಕಾರದ ನಿಕ್ಷೇಪಗಳೊಂದಿಗೆ ಕಾಣಿಸುತ್ತದೆ. ಇದರಿಂದಲೇ ಇದನ್ನು ಸುರುಳಿ ಸುತ್ತುವ ಬಿಳಿ ನೊಣ ಎಂದೂ ಕರೆಯಲಾಗುತ್ತದೆ.

ಬಿಳಿ ನೊಣ ಬಾಧೆಯ ಲಕ್ಷಣಗಳು: ಈ ಬಾಧೆಯು ಆರಂಭವಾದಾಗ ತೆಂಗಿನ ಎಲೆಗಳ ಕೆಳಭಾಗದಲ್ಲಿ ಬಿಳಿ ಮೊಟ್ಟೆಯ ಸುರುಳಿಗಳು ಕಾಣಿಸಿಕೊಳ್ಳುತ್ತದೆ. ನಂತರ ಎಲ್ಲಾ ಸುರುಳಿಗಳು ಒಟ್ಟುಗೂಟಿ ಸಂಪೂರ್ಣವಾಗಿ ಎಲೆಗಳ ಕೆಳಭಾಗವನ್ನು ಆವರಿಸಿಕೊಳ್ಳುತ್ತದೆ. ಜತೆಗೆ ಎಲೆಗಳ ಕೆಳಭಾಗದಲ್ಲಿ ಬಿಳಿ ನೊಣ ಉತ್ಪಾದಿಸುವ ಬಿಳಿ ಮೇಣದ ವಸ್ತುವಿನ ಹೊದಿಕೆ ಕಂಡು ಬರುತ್ತದೆ. ರಸ ಹೀರುವ ಬಿಳಿ ನೊಣವು ಅಂಟಿನಂತಹ ಸಿಹಿ ದ್ರವ ಸ್ರವಿಸುವುದು ಕಂಡು ಬಂದಲ್ಲಿ ತೆಂಗು ಕೀಟ ಬಾಧೆಗೆ ಒಳಗಾಗಿದೆ ಎಂದೇ ಅರ್ಥ. ಅಲ್ಲದೇ ರುಗೋಸ್ ಬಾಧೆ ಅಂಟಿದ ಸಂದರ್ಭದಲ್ಲಿ ಎಲೆಗಳ ಮೇಲ್ಭಾಗದಲ್ಲಿ ಕಪ್ಪು ಮಸಿಯಂತಹ ಶಿಲೀಂಧ್ರವು ಆವರಿಸಿರುವುದನ್ನು ದೂರದಿಂದಲೇ ಗುರುತಿಸಬಹುದಾಗಲಿದೆ.

How to get rid of Rugos whitefly attack on Coconut

ಕೀಟ ನಿರ್ವಹಿಸುವ ಬಗೆ ಹೇಗೆ?
* ಕೀಟ ಬಾಧಿತ ತೆಂಗಿನ ಸಸಿ ಹಾಗೂ ಗರಿಗಳನ್ನು ತೋಟದಿಂದ ಮುನ್ನೆಚರಿಕೆ ವಹಿಸಿ ಸಾಗಿಸಬೇಕು. ಪ್ರತಿ ಎಕರೆಗೆ 5 ರಿಂದ 6 ಹಳದಿ ಬಲೆಗಳನ್ನು ಅಳವಡಿಸಬೇಕು.
* ಎಲೆಗಳ ಮೇಲೆ ಶೇ.1ರಷ್ಟು ಸ್ಟಾರ್ಚ್(ಗಂಜಿ ತಿಳಿ) ಸಿಂಪಡಿಸುವುದರಿಂದ ಕಪ್ಪು ಶಿಲೀಂದ್ರ ಉದುರಿ ಹೋಗಲಿದೆ. 1 ಕೆ.ಜಿ ಮೈದಾ ಹಿಟ್ಟನ್ನು 100 ಲೀಟರ್ ನೀರಿನಲ್ಲಿ ಬೆರೆಸಿ ಅಥವಾ ಶೇ.1ರ ಸಾಂದ್ರತೆಯ ಬೇವಿನ ಎಣ್ಣೆಯನ್ನು ಯಾವುದಾದರು ಡಿಟರ್ಜೆಂಟ್ ಪುಡಿಯೊಂದಿಗೆ ಮಿಶ್ರ ಮಾಡಿ ಸಿಂಪಡಿಸಿ ಕಪ್ಪು ಶಿಲೀಂದ್ರದಿಂದ ಮುಕ್ತಿ ಹೊಂದಬಹುದಾಗಿದೆ.
* 1 ಗ್ರಾಂ ಅಸಿಟಮಪ್ರಿಡ್ ಅಥವಾ 1ಗ್ರಾಂ ಡೈಫೆನ್‍ಥ್ಯೂರಾನ್ ಅನ್ನು ಪ್ರತಿ ಲೀಟರ್‍ಗೆ ಬೆರೆಸಿ ಸಿಂಪಡಿಸಬಹುದು. 10 ಮಿ.ಲೀ ಮೋನೊಕ್ರೋಟೋಫಾಸ್ ಅನ್ನು 10 ಮಿ.ಲೀ ನೀರಿನಲ್ಲಿ ಬೆರೆಸಿ ತೆಂಗಿನ ಬೇರಿನ ಮುಖಾಂತರ ನೀಡಿದ್ದಲ್ಲಿ ಕೀಟ ಬಾಧೆಯನ್ನು ಹತೋಟಿಗೆ ತರಬಹುದು. ಈ ಎಲ್ಲಾ ಕ್ರಮಗಳನ್ನು ನಿರ್ವಹಿಸಿದ್ದಲ್ಲಿ ರುಗೋಸ್ ಕೀಟ ಬಾಧೆಯಿಂದ ತೆಂಗು ಬೆಳೆಯನ್ನು ರಕ್ಷಿಸಬಹುದು ಎಂದು ತೋಟಗಾರಿಕಾ ಉಪನಿರ್ದೇಶಕರು ತಿಳಿಸಿದ್ದಾರೆ.
English summary
How to get rid of Rugos whitefly attack on Coconut? Here is solution from Karnataka Horticulture department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X