ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್‌ಗೆ ಮಾಹಿತಿ ತುಂಬುವುದು ಹೇಗೆ?

|
Google Oneindia Kannada News

ಕೋಲಾರ, ಆಗಸ್ಟ್ 14 : " ರೈತರು ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ತಾವು ಬೆಳೆದ ಬೆಳೆಗಳ ವಿವರವನ್ನು ಆಪ್‍ಲೋಡ್ ಮಾಡುವ ಮೂಲಕ ಬೆಳೆ ಸಮೀಕ್ಷೆ ಮಾಡಬಹುದಾಗಿದೆ" ಎಂದು ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯ ಪಕ್ಕದ ಕುಂಬಾರಹಳ್ಳಿಯ ರೈತರ ಜಮೀನಿನಲ್ಲಿ ಬೆಳೆ ಸಮೀಕ್ಷೆ ಆಪ್‍ಗೆ ಅವರು ಚಾಲನೆ ನೀಡಿದರು. ಕುಂಬಾರಹಳ್ಳಿ ಸರ್ವೆ ನಂಬರ್ 48/1ರ ಮಲ್ಲಮ್ಮನವರ ಜಮೀನಿನನ್ನು ವೆಂಕಟೇಶಗೌಡ ಎಂಬುವವರು ಗುತ್ತಿಗೆ ಪಡೆದು ಟೊಮೆಟೊ ಬೆಳೆದಿದ್ದಾರೆ. ಇವರಿಂದ ಸ್ಥಳದಲ್ಲಿ ಬೆಳೆ ಸಮೀಕ್ಷೆ ಮಾಡಿಸಲಾಯಿತು.

ರೈತರ ಸಹಾಯಕ್ಕಾಗಿ 'ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್' ಬಿಡುಗಡೆ ರೈತರ ಸಹಾಯಕ್ಕಾಗಿ 'ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್' ಬಿಡುಗಡೆ

'ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್'ನಲ್ಲಿ ಬೆಳೆ ಸಮೀಕ್ಷೆಯನ್ನು ರೈತರು ಮಾಡು ಆಗಸ್ಟ್ 24ರ ತನಕ ಅವಕಾಶ ನೀಡಲಾಗಿದೆ. ಆಂಡ್ರಾಯ್ಡ್ ಮೊಬೈಲ್ ಇಲ್ಲದ ರೈತರು ಪಕ್ಕದ ಜಮೀನಿನ ರೈತರ ಮೊಬೈಲ್‍ನಲ್ಲೂ ಮಾಹಿತಿ ಆಪ್‍ಲೋಡ್ ಮಾಡಬಹುದಾಗಿದೆ. ಬೆಳೆ ಸಮೀಕ್ಷೆಯಿಂದಾಗಿ ಯಾವ ರೈತರು ಯಾವ ಬೆಳೆ ಬೆಳೆದಿದ್ದಾರೆ ಎಂಬ ನಿಖರವಾದ ಮಾಹಿತಿ ದೊರೆಯುತ್ತದೆ.

 ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ರೈತ ಮುಖಂಡ ಬಡಗಲಪುರ ನಾಗೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ರೈತ ಮುಖಂಡ ಬಡಗಲಪುರ ನಾಗೇಂದ್ರ

'ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್'ನಲ್ಲಿ ರೈತರು ಬೆಳೆಗಳ ಮಾಹಿತಿ ಅಪ್‌ಲೋಡ್ ಮಾಡಿದರೆ ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪದಿಂದಾಗಿ ಬೆಳೆಹಾನಿ ಆದ ಸಂದರ್ಭದಲ್ಲಿ ಬೆಳೆ ವಿಮೆ ನೀಡಲು ಸಹಕಾರಿಯಾಗಲಿದೆ. ಬೆಳೆ ನಾಶದ ಸಂದರ್ಭದಲ್ಲಿ ಪರಿಹಾರ ಧನ ವಿತರಣೆಗೂ ಸಹಕಾರಿಯಾಗುತ್ತದೆ.

ಅಡಿಕೆ ಬೆಳೆಯುವ ರೈತರು ಕೈಗೊಳ್ಳಬೇಕಾದ ಚಟುವಟಿಕೆಗಳು ಅಡಿಕೆ ಬೆಳೆಯುವ ರೈತರು ಕೈಗೊಳ್ಳಬೇಕಾದ ಚಟುವಟಿಕೆಗಳು

ಕೋಲಾರ ಜಿಲ್ಲೆ

ಕೋಲಾರ ಜಿಲ್ಲೆ

ಕೋಲಾರ ಜಿಲ್ಲೆಯಲ್ಲಿ 1 ಲಕ್ಷ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳನ್ನು ಬೆಳೆಯಲಾಗಿದೆ. ರೈತರೇ ಸಮೀಕ್ಷೆಯನ್ನು ಮಾಡಿ ವಿವರಗಳನ್ನು ಭರ್ತಿ ಮಾಡಬೇಕು. ಸಮೀಕ್ಷೆ ಬಗ್ಗೆ ಮಾಹಿತಿ ನೀಡಲು ಪ್ರವೈಟ್ ರೆಸಿಡೆನ್ಸ್ ಅನ್ನು ನೇಮಿಸಲಾಗಿದ್ದು, ಇವರು ರೈತರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಗುತ್ತಿಗೆ ಪಡೆದವರಿಗೂ ಪರಿಹಾರ

ಗುತ್ತಿಗೆ ಪಡೆದವರಿಗೂ ಪರಿಹಾರ

ರೈತರು ಬೆಳೆದ ಬೆಳೆಗಳ ಮಾಹಿತಿಗಳನ್ನು ಅಪ್‌ ಲೋಡ್ ಮಾಡಲು ಕನ್ನಡದಲ್ಲಿ ಪ್ರದರ್ಶನವಾದರೆ ಅನುಕೂಲವಾಗುತ್ತದೆ ಹಾಗೂ ಗುತ್ತಿಗೆ ಪಡೆದು ಬೆಳೆಯನ್ನು ಬೆಳೆದ ರೈತರಿಗೆ ಪರಿಹಾರ ದೊರೆತರೆ ಅನುಕೂಲವಾಗುತ್ತದೆ ಎಂದು ರೈತರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಸಮೀಕ್ಷೆ ಆಪ್ ವಿವರ

ಸಮೀಕ್ಷೆ ಆಪ್ ವಿವರ

ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಡೌನ್‌ ಲೋಡ್ ಮಾಡಿಕೊಂಡ ಬಳಿಕ ನಂತರ ವರ್ಷ, ಮುಂಗಾರು / ಹಿಂಗಾರು ಬೆಳೆ, ದೂರವಾಣಿ ಸಂಖ್ಯೆ ನಮೂದಿಸಬೇಕು. ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಲೋಕೇಶನ್, ಮಾಲೀಕರ ವಿವರ ದಾಖಲು ಮಾಡಬೇಕು.

3 ಫೋಟೋಗಳನ್ನು ಅಪ್‌ಲೋಡ್ ಮಾಡಿ

3 ಫೋಟೋಗಳನ್ನು ಅಪ್‌ಲೋಡ್ ಮಾಡಿ

ರೈತರು ಬೆಳೆ ವಿವರ, ತಾಕಿನಲ್ಲಿ ಬಳಕೆಯಾಗದ ಪ್ರದೇಶ, ಬೆಳೆ ವಿಧ, ನೀರಾವರಿ ವಿಧ, ಬೆಳೆ ವಿಸ್ತಿರ್ಣ, ಈ ಮಾಹಿತಿಯನ್ನು ನೀಡಿಬೇಕು. ನಂತರ ಬೆಳೆಯ 3 ಛಾಯಾಚಿತ್ರಗಳನ್ನು ತೆಗೆದು ಆಪ್‍ಲೋಡ್ ಮಾಡಬೇಕು.

English summary
Karnataka agriculture department launched farmers crop survey application. Farmers can enter crop details in application by downloading application in mobile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X