ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆ ಬೆಳೆಯಲ್ಲಿ ಹಳದಿ ಎಲೆ ರೋಗ ತಡೆಗಟ್ಟುವುದು ಹೇಗೆ?

|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 13 : ಅಡಿಕೆ ಬೆಳೆಯುವ ರೈತರು ಹಳದಿ ಎಲೆ ರೋಗದ ಬಗ್ಗೆ ಮಾಹಿತಿ ತಿಳಿದುಕೊಂಡಿರಬೇಕು. ರೈತರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಅನುಸರಿಸಲು ಕೃಷಿ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅತಿಹೆಚ್ಚಿನ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಕೊಪ್ಪ, ಶೃಂಗೇರಿ, ಸುಳ್ಯ ಮುಂತಾದ ತಾಲೂಕುಗಳಲ್ಲಿ ಅಡಿಕೆ ಬೆಳೆ ಹಳದಿ ಎಲೆ ರೋಗಕ್ಕೆ ತುತ್ತಾಗಿರುವ ವರದಿ ಬಂದಿದೆ. ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರದಲ್ಲಿಯೂ ಬೆಳೆಯು ಈ ರೋಗಕ್ಕೆ ತುತ್ತಾಗುವ ನಿರೀಕ್ಷೆ ಇದೆ.

ಶಿವಮೊಗ್ಗ; ಅಡಿಕೆ ಬೆಳೆಗಾರರಿಗೆ ಮಿಡತೆ ಬಗ್ಗೆ ಆತಂಕ ಬೇಡ ಶಿವಮೊಗ್ಗ; ಅಡಿಕೆ ಬೆಳೆಗಾರರಿಗೆ ಮಿಡತೆ ಬಗ್ಗೆ ಆತಂಕ ಬೇಡ

ರೈತರು ಹಳದಿ ಎಲೆ ರೋಗದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ತಮ್ಮ ತಾಲೂಕಿನ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಹತ್ತಿರದ ತೋಟಗಾರಿಕೆ ವಿಜ್ಞಾನಿಗಳನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಲಾಗಿದೆ.

How To Control Yellow Leaf Disease Of Arecanut Crop

ಅಡಿಕೆ ಬೆಳೆಯುವ ರೈತರು ಈ ಕೆಳಕಂಡಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಅನುಸರಿಸಲು ಸಹ ಸಲಹೆ ನೀಡಲಾಗಿದೆ. ಈ ರೋಗ ಭಾದಿಸಿದ ಅಡಿಕೆ ಮರಗಳಲ್ಲಿ ಮೊದಲು ಹೊರಸುತ್ತಿನ ಎಲೆಯ ತುದಿ ಭಾಗ ಹಳದಿಯಾಗುತ್ತದೆ.

ಅಡಿಕೆ ಬೆಳೆಯುವ ರೈತರು ಕೈಗೊಳ್ಳಬೇಕಾದ ಚಟುವಟಿಕೆಗಳು ಅಡಿಕೆ ಬೆಳೆಯುವ ರೈತರು ಕೈಗೊಳ್ಳಬೇಕಾದ ಚಟುವಟಿಕೆಗಳು

ನಂತರ ಇದು ಎಲೆಯ ಮಧ್ಯಭಾಗಕ್ಕೂ ಹರಡುತ್ತದೆ. ಮುಂದಿನ ದಿನಗಳಲ್ಲಿ ಇಡೀ ಮರವೇ ಹಳದಿ ಬಣ್ಣಕ್ಕೆ ತಿರುಗಿ ಮರ ಉತ್ಪಾದನಾ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ರೋಗ ತೀವ್ರವಾದಂತೆ ಎಲ್ಲಾ ಎಲೆಗಳು ಹಳದಿಯಾಗಿ, ಒಣಗಿ ಕೆಳಗೆ ಬೀಳುತ್ತವೆ.

ದಾವಣಗೆರೆ; ಮೆಕ್ಕೆಜೋಳ, ಅಡಿಕೆ ಖರೀದಿ ಕೇಂದ್ರ ಇನ್ನೂ ತೆರೆದಿಲ್ಲದಾವಣಗೆರೆ; ಮೆಕ್ಕೆಜೋಳ, ಅಡಿಕೆ ಖರೀದಿ ಕೇಂದ್ರ ಇನ್ನೂ ತೆರೆದಿಲ್ಲ

ಬಾಧೆಗೊಳಗಾದ ಗಿಡಿದ ಅಡಿಕೆಯು ಕಂದು ಬಣ್ಣದಲ್ಲಿದ್ದು, ತಿನ್ನಲು ಯೋಗ್ಯವಾಗಿರುವುದಿಲ್ಲ, ರೋಗಕ್ಕೆ ತುತ್ತಾದ ಮರದ ಬೇರುಗಳು ಗಡುಸಾಗಿದ್ದು, ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಈ ರೋಗವು ನಿಧಾನಗತಿಯಲ್ಲಿ ಒಂದು ಭಾಗದಿಂದ ಮತ್ತೊಂದು ಪ್ರದೇಶಕ್ಕೆ ಹರಡುತ್ತದೆ. ರೋಗಕ್ಕೆ ತುತ್ತಾದ ಮರಗಳು ಬಹಳ ವರ್ಷಗಳವರೆಗೆ ಬದುಕುಳಿಯುತ್ತವೆ. ಆದರೆ, ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ.

ಮುಂಜಾಗೃತ ಕ್ರಮಗಳು: ಬಸಿಗಾಲುವೆಗಳನ್ನು ನಿರ್ಮಿಸುವುದು. ಬೇಸಿಗೆಯಲ್ಲಿ ಮರಗಳಿಗೆ ಸೂಕ್ತವಾದ ನೀರು ನಿರ್ವಹಣಾ ಕ್ರಮಗಳನ್ನು ಅನುಸರಿಸುವುದು. ಹಸಿರೆಲೆ ಮತ್ತು ತಿಪ್ಪೆಗೊಬ್ಬರಗಳನ್ನು ಪ್ರತಿ ವರ್ಷ ಮರಗಳಿಗೆ ಒದಗಿಸುವುದು.

ಅಡಿಕೆಗೆ ಶಿಫಾರಸ್ಸು ಮಾಡಲಾದ ರಸಗೊಬ್ಬರಗಳನ್ನು ಹಾಗೂ ಲಘು ಪೋಷಕಾಂಶಗಳನ್ನು ತಪ್ಪದೇ ಮುಂಗಾರು ಮತ್ತು ಹಿಂಗಾರು ಸಮಯದಲ್ಲಿ ಸಮರ್ಪಕವಾಗಿ ನೀಡಬೇಕು. 1 ಕಿ. ಗ್ರಾಂ. ನಷ್ಟು ಫಾಸ್ಫೇಟ್ ಗೊಬ್ಬರ, 2 ಕಿ. ಗ್ರಾಂ. ಬೇವಿನ ಹಿಂಡಿಯನ್ನು ಎರಡು ಕಂತುಗಳಲ್ಲಿ ಪ್ರತಿ ಗಿಡಕ್ಕೆ ಕೊಡಬೇಕು.

ಅಲಸಂದಿ ಅಥವಾ ಇನ್ನಿತರ ಹಸಿರೆಲೆ ಬೆಳೆಗಳನ್ನು ಗಿಡಗಳ ನಡುವಿನ ಸ್ಥಳದಲ್ಲಿ ಬೆಳೆದು, ನಂತರ ಎಲ್ಲಾ ಮರಗಳಿಗೆ ಹೊದಿಕೆ ರೂಪದಲ್ಲಿ ಬುಡಕ್ಕೆ ಹಾಕಬೇಕು. ರೋಗ ಬಂದು ಒಣಗಿದ ಮರಗಳನ್ನು ಬೇರು ಸಮೇತ ತೆಗೆದು ಸುಟ್ಟುಹಾಕುವುದು.

English summary
Agriculture department tips for the farmers to control Yellow leaf disease in Arecanut crop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X