ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಕ್ಕೆಜೋಳದ ಬೆಳೆಗೆ ಫಾಲ್ ಸೈನಿಕ ಹುಳು ಕಾಟ; ನಿರ್ವಹಣೆ ಹೇಗೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 09 : ಮೆಕ್ಕೆಜೋಳದ ಬೆಳೆಗೆ ಫಾಲ್ ಸೈನಿಕ ಹುಳು ಕೀಟದ ಹಾವಳಿ ಕಂಡು ಬಂದಿದೆ. ಈ ಕೀಟದಿಂದ ರೈತರು ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಹಾಗೂ ಕೀಟ ನಿರ್ವಹಣಾ ಕ್ರಮಗಳ ಬಗ್ಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶರಣಪ್ಪ ಮದಗಲ್ ವಿವರಣೆ ನೀಡಿದ್ದಾರೆ.

ಈ ಕೀಟ ಪ್ರಮುಖವಾಗಿ ಮೆಕ್ಕೆ ಜೋಳದ ಪೀಡೆಯಾಗಿದೆ. ಭತ್ತ, ಜೋಳ, ಹತ್ತಿ ಮತ್ತು ಕೆಲವು ತರಕಾರಿ ಬೆಳೆಗಳನ್ನು ಸಹ ಹಾನಿ ಮಾಡುತ್ತದೆ. ಮೋಡ ಕವಿದ ವಾತಾವರಣ, ಹೆಚ್ಚಿನ ಮಳೆ, ಹೆಚ್ಚಿನ ತೇವಾಂಶ ಮತ್ತು ಕಡಿಮೆ ಉಷ್ಣಾಂಶವಿದ್ದಲ್ಲಿ ಇದರ ಹಾವಳಿ ಹೆಚ್ಚು.

ರೈತ ವಿರೋಧಿ ಕಾಯ್ದೆ, ಯಡಿಯೂರಪ್ಪ ಮುಂದೆ 7 ಪ್ರಶ್ನೆಗಳುರೈತ ವಿರೋಧಿ ಕಾಯ್ದೆ, ಯಡಿಯೂರಪ್ಪ ಮುಂದೆ 7 ಪ್ರಶ್ನೆಗಳು

ಮುಂಚಿತವಾಗಿ ಬಿತ್ತನೆಯಾದ ಪ್ರದೇಶದಲ್ಲಿ ಇದರ ಹಾವಳಿ ಕಡಿಮೆ ಇದ್ದು, ತಡವಾಗಿ ಬಿತ್ತನೆಯಾದ ಪ್ರದೇಶದಲ್ಲಿ ಇದರ ಹಾವಳಿ ಕಂಡುಬರುತ್ತಿದೆ. ನೀರಾವರಿ ಮೆಕ್ಕೆಜೋಳದಲ್ಲಿ ಇದರ ಹಾನಿ ಹೆಚ್ಚಾಗಿರುತ್ತದೆ. ಆದ್ದರಿಂದ, ರೈತರು ಎಚ್ಚರಿಕೆ ವಹಿಸಬೇಕು.

ಭತ್ತದ ಬೆಳೆಯಲ್ಲಿ ಬೆಂಕಿ ರೋಗ; ನಿಯಂತ್ರಣಕ್ಕೆ ಸಲಹೆ ಭತ್ತದ ಬೆಳೆಯಲ್ಲಿ ಬೆಂಕಿ ರೋಗ; ನಿಯಂತ್ರಣಕ್ಕೆ ಸಲಹೆ

How To Control Fall Armyworm In Maize Crops

ಜೀವನ ಚಕ್ರ; ಕೀಟವು ಮೊಟ್ಟೆಗಳನ್ನು ಗುಂಪಾಗಿ ಇಡಲಿದೆ. ಒಂದು ಹೆಣ್ಣು ಪತಂಗವು ಸುಮಾರು 900-1500 ಮೊಟ್ಟೆಗಳನ್ನು ಇಡುತ್ತದೆ. ಮರಿ ಹುಳದ ಜೀವಿತಾವಧಿ ಸುಮಾರು 20 ದಿನ. ಒಂದು ತಿಂಗಳಿನಲ್ಲಿ ತನ್ನ ಜೀವನ ಚಕ್ರವನ್ನು ಇದು ಮುಗಿಸುತ್ತದೆ.

ಬಾಳೆ ಬೆಳೆಯುವ ರೈತರಿಗೆ ತೋಟಗಾರಿಕಾ ಇಲಾಖೆ ಸಲಹೆಗಳು ಬಾಳೆ ಬೆಳೆಯುವ ರೈತರಿಗೆ ತೋಟಗಾರಿಕಾ ಇಲಾಖೆ ಸಲಹೆಗಳು

ಕೀಟ ಮುಖ್ಯವಾಗಿ ಮೆಕ್ಕೆಜೋಳದ ಸುರಳಿಯಲ್ಲಿ ಅತಿ ಹೆಚ್ಚು ಹಾನಿಯನ್ನು ಮಾಡುತ್ತದೆ. ಮೊದಲೆರಡು ಹಂತದ ಮರಿಹುಳುಗಳಿಂದ ಹೊರಬರುವ ಎಲೆಗಳ ಮೇಲೆ ರಂಧ್ರಗಳನ್ನು ಕಾಣಬಹುದು. ಮೂರನೆ ಮತ್ತು ನಂತರ ಹಂತದ ಹುಳುಗಳು ಎಲೆಗಳ ಅಂಚನ್ನು ತಿನ್ನುವುದರಿಂದ, ಎಲೆಗಳು ಹರಿದಂತೆ ಕಾಣುತ್ತದೆ.

ದೊಡ್ಡ ಹಂತದ ಮರಿಹುಳುಗಳು ಕಂಡುಬಂದರೆ ಕೈಯಿಂದ ಆರಿಸಿ ನಾಶಪಡಿಸಬೇಕು. ಜೈವಿಕ ಶೀಲೀಂದ್ರ ಕೀಟನಾಶಕ ಗಳಾದ ನೊಮೊರಿಯಾ ರಿಲೈ ಅಥವಾ ಮೆಟಾರೈಜಿಯಮ್ ಅನಿಸೋಪ್ಲಿಯೆಯನ್ನು ಪ್ರತಿ ಲೀ. ನೀರಿಗೆ 2 ಗ್ರಾಂ ಬೆರೆಸಿ ಸಿಂಪಡಿಸಬೇಕು. ಹೊಲದಲ್ಲಿ ದೀಪಾಕರ್ಷಕ ಬಲೆಗಳನ್ನು ಅಲ್ಲಲ್ಲಿ ಅಳವಡಿಸಿ ಪತಂಗಗಳನ್ನು ಆಕರ್ಷಿಸಿ ನಾಶಪಡಿಸಬಹುದು.

ರೈತರು ಮೋನೊಕ್ರೊಟೋಫಾಸ್ ವಿಷ ಪಾಷಾಣವನ್ನು ತಯಾರಿಸಿ ಮೆಕ್ಕೆಜೋಳದ ಸುಳಿಗೆ ಹಾಕಬೇಕು. ವಿಷಪಾಷಾಣವನ್ನು ತಯಾರಿಸಲು 2 ಕೆ.ಜಿ. ಬೆಲ್ಲವನ್ನು ಪುಡಿಮಾಡಿ 4 ಲೀ. ನೀರಿನಲ್ಲಿ ಕರಗಿಸಿ 250 ಮಿ.ಲೀ. ಮೋನೊಕ್ರೊಟೋಫಾಸ್ 36 ಎಸ್.ಎಲ್. ಕೀಟನಾಶಕವನ್ನು ಸೇರಿಸಿದ ಮೇಲೆ ಈ ಮಿಶ್ರಣವನ್ನು 20 ಕೆ.ಜಿ. ಭತ್ತ/ಗೋದಿ ತೌಡಿನಲ್ಲಿ ಬೆರೆಸಿ ಚೆನ್ನಾಗಿ ಕಲಸಿ ಗಾಳಿಯಾಡದಂತೆ 48 ಗಂಟೆಗಳ ಕಾಲ ಗೊಬ್ಬರದ ಚೀಲ ಅಥವಾ ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ಮುಚ್ಚಿಟ್ಟು ಕಳಿಯಲು ಬಿಡಬೇಕು. ಈ ರೀತಿ ತಯಾರಿಸಿ ಪಾಷಾಣವನ್ನು ಮೆಕ್ಕೆಜೋಳದ ಸುಳಿಯಲ್ಲಿ ಹಾಕಬೇಕು.

English summary
Tips to farmers to control armyworm in maize crops. Large number of armyworms in the field will destroy the crops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X