ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್‌ನಲ್ಲಿ ಮಾವು ಬೆಳೆ ನಿರ್ವಹಣೆ; ಸಲಹೆಗಳು

|
Google Oneindia Kannada News

ಕಲಬುರಗಿ, ಡಿಸೆಂಬರ್ 07: ಮಾವು ಬೆಳೆಯುವ ರೈತರಿಗೆ ತೋಟಗಾರಿಕಾ ಇಲಾಖೆ ಡಿಸೆಂಬರ್‌ ತಿಂಗಳಿನ ಸಲಹೆಗಳನ್ನು ನೀಡಿದೆ. ರೈತರು ಮಾವಿನ ಗಿಡಗಳಿಗೆ ನೀರು ಹಾಯಿಸುವುದನ್ನು ನಿಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಮಾವು ಬೆಳೆದ ರೈತರು ಈ ತಿಂಗಳಿನಲ್ಲಿ ಮಾವು ಬೆಳೆಗಳಿಗೆ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಸಲಹೆಗಳನ್ನು ನೀಡಿದ್ದಾರೆ.

ಹವಾಮಾನ ಬದಲಾವಣೆ; ಮಾವು ಬೆಳೆಯುವ ರೈತರಿಗೆ ಸಲಹೆಗಳು ಹವಾಮಾನ ಬದಲಾವಣೆ; ಮಾವು ಬೆಳೆಯುವ ರೈತರಿಗೆ ಸಲಹೆಗಳು

ಮಾವಿನ ಗಿಡಗಳಿಗೆ ನೀರು ಹಾಯಿಸುವುದನ್ನು ನಿಲ್ಲಿಸಬೇಕು. ವಿಕೃತಗೊಂಡಿರುವ ಹೂ ಗೊಂಚಲು ಮತ್ತು ರೆಂಬೆಗಳನ್ನು ಕತ್ತರಿಸಿ, ಕತ್ತರಿಸಿದ ಭಾಗಕ್ಕೆ ತಾಮ್ರದ ಆಕ್ಸಿಕ್ಲೋರೈಡ್ ಮುಲಾಮನ್ನು ಹಚ್ಚಬೇಕು. ನಂತರ ನ್ಯಾಪ್ತಾಲ್ ಆಸಿಟಿಕ್ ಆಸಿಡ್ (ಫ್ಲಾನೋಪಿಕ್ಸ್) 0.25 ಮಿ.ಲೀ./ಲೀ ದ್ರಾವಣದಿಂದ ಸಿಂಪಡಣೆ ಮಾಡಬೇಕು ಎಂದು ತಿಳಿಸಲಾಗಿದೆ.

ಮಾವು ಬೆಳೆಗೆ ನೀಡಬೇಕಾದ ಪೋಷಕಾಂಶಗಳ ವಿವರಗಳು ಮಾವು ಬೆಳೆಗೆ ನೀಡಬೇಕಾದ ಪೋಷಕಾಂಶಗಳ ವಿವರಗಳು

Horticulture Department Tips To Mango Crop Maintenance In December

ಮಾವಿನ ಜಿಗಿಹುಳು ಹತೋಟಿಗೆ ಮೊದಲನೆಯದಾಗಿ ಹೂ-ಗೊಂಚಲು ಅರಳುವ ಮುಂಚೆ/ ಹೂವಿನ ಮೊಗ್ಗು ಒಡೆಯುವ ಸಂದರ್ಭದಲ್ಲಿ ಇಮಿಡಾಕ್ಲೋಪ್ರಿಡ್ 17.8 (ಕಾನ್ಫಿಡಾರ್, ಇಮಿಡಾಗೋಲ್ಡ್, ಟಾಟಾಮಿಡಾ) (0.3 ಮಿ.ಲೀ./ಲೀ.) ನ್ನು ಸಿಂಪಡಣೆ ಮಾಡಬೇಕು ಎಂದು ಮಾಹಿತಿ ನೀಡಲಾಗಿದೆ.

ಮಾವು ಬೆಳೆಯುವ ರೈತರಿಗೆ ಇಸ್ರೇಲ್ ತಂತ್ರಜ್ಞಾನದ ಸಲಹೆಗಳುಮಾವು ಬೆಳೆಯುವ ರೈತರಿಗೆ ಇಸ್ರೇಲ್ ತಂತ್ರಜ್ಞಾನದ ಸಲಹೆಗಳು

ಮಾವಿನ ಬೆಳೆಗಳ ನಿರ್ವಹಣೆ ಕುರಿತು ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ರೈತರು ತೋಟಗಾರಿಕೆ ಇಲಾಖೆಯ (ಹಾರ್ಟಿ ಕ್ಲಿನಿಕ್) ವಿಷಯ ತಜ್ಞರಾದ ಮಂಜುನಾಥ್ ಅವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 7259984026.

English summary
Horticulture department tips to farmers for Mango crop maintenance in the month of December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X