• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆಗೆ ಶೋಭೆ ತರುವ ಡೇಲಿಯಾ ಬೆಳೆಸೋದು ಬಲು ಸುಲಭ...

|

ಮನೆ ಮುಂದೆ ಸುಂದರ ಹೂದೋಟ ನಿರ್ಮಾಣ ಮಾಡುವವರು ತಾವು ನೆಟ್ಟು ಬೆಳೆಸುವ ಹೂ ಗಿಡಗಳ ನಡುವೆ ಡೇಲಿಯಾಗೆ ಅವಕಾಶ ಮಾಡಿಕೊಡಬಹುದು.

ಇವು ವಿವಿಧ ಆಕಾರ, ಬಣ್ಣಗಳಿಂದ ಅರಳಿ ಕಂಗೊಳಿಸುವುದರಿಂದ ಹೂದೋಟಕ್ಕೆ ಶೋಭೆ ತರುವುದರೊಂದಿಗೆ ಮನಸ್ಸಿಗೂ ಸಂತಸ ನೀಡುತ್ತದೆ.

ರುಚಿಕರ ಮಡಹಾಗಲಕಾಯಿ ಕಾಡಿನಿಂದ ನಾಡಿಗೆ ಬಂತು...

ಡೇಲಿಯಾ ಹೂಗಳು ಮೊಗ್ಗಾಗಿ ಅರಳಿ ಬಹಳಷ್ಟು ದಿನಗಳ ಕಾಲ ಗಿಡದಲ್ಲಿರುವುದರಿಂದ ಅಂದ ಹೆಚ್ಚುವುದಲ್ಲದೆ, ನೋಡಲು ಆಕರ್ಷಕವಾಗಿ, ಹೆಚ್ಚು ಖರ್ಚಿಲ್ಲದೆ ಅದರ ಪಾಡಿಗೆ ಅದು ಬೆಳೆಯುವುದರಿಂದ ಬೆಳೆಸುವುದೂ ಕಷ್ಟವಾಗಲಾರದು. ಇದನ್ನು ಬೆಳೆಸುವುದು ಹೇಗೆ, ಈ ಹೂಗಳಲ್ಲಿ ಎಷ್ಟು ಬಗೆಗಳಿವೆ? ಇದರ ಕುರಿತು ಇನ್ನಷ್ಟು ಮಾಹಿತಿ ಮುಂದಿದೆ...

 ಡೇಲಿಯಾದಲ್ಲಿದೆ ಹತ್ತಾರು ಬಗೆ...

ಡೇಲಿಯಾದಲ್ಲಿದೆ ಹತ್ತಾರು ಬಗೆ...

ಡೇಲಿಯಾದಲ್ಲಿ ಸುಮಾರು ಹತ್ತು ಬಣ್ಣಗಳಿದ್ದು, ಒಂದೊಂದು ಬಣ್ಣದಲ್ಲಿಯೂ ಹಲವು ತಳಿಗಳಿವೆ. ಹಳದಿ ಬಣ್ಣದಲ್ಲಿ ಅಲ್ವಾಸ್ ಸುಪ್ರೀಮ್, ಸನ್‌ಬರ್ಸ್ಟ್ ಕೆನ್ಯಾಯಲೋ, ಕ್ವೀನ್ ಎಲಿಜಬೆತ್, ದೇವನ್ ‌ಪೋರ್ಟ್, ಸನ್‌ಲೈಟ್, ಗಿನಿ, ಗೋಲ್ಡನ್ ಸ್ಟಾರ್, ಕಿತ್ತಳೆ ಬಣ್ಣದಲ್ಲಿ ಕಿಂಗ್ ಸಕರ್, ಮಾಂಡರಿನ್, ನೆಪೋಲಿನ್ ತಳಿಯಿವೆ. ಕೆಂಪುಬಣ್ಣಗಳಲ್ಲಿ ಬಾರ್ಬರಾ ಮಾರ್ಷೆಲ್, ಅಲ್ಡನ್ ಗ್ಯಾಲಕ್ಸಿ ಸೂಪರ್, ಬ್ಯಾಂಕರ್ ಇಸ್ಟೀಡರ್, ವಿಲೋ ನೈಟ್, ಮಾರ್ಷ್, ನೀಲಿ ಬಣ್ಣದಲ್ಲಿ ನಿಯರೆಸ್ಟ್ ಬ್ಲೂ ರಿಸ್ಕಾ ಮೈನರ್, ಐರಿಸ್, ಮೂರ್‌ಪ್ಲೇಸ್, ವಿಲೋವೈಲೆಟ್ ತಳಿಗಳಿವೆ.

ಗುಲಾಬಿ ಬಣ್ಣದಲ್ಲಿ ಐಲ್ಯಾಂಡರ್, ಏಪ್ರಿಲ್‌ಡಾನ್, ಪಿಂಕ್ ‌ಜುಪಿಟರ್, ಸುಲ್ತಾನ್, ಸ್ಲೋಹಿಲ್ ರೋಜ್, ಫಿಂಕ್ ಜಿರಾಫೆ, ಬಿಳಿಬಣ್ಣದಲ್ಲಿ ಸಿಲ್ವರ್ ಸಿಟಿ, ಕಾರ್ಟನ್ ಲಿಂಡಾ, ನೀನಾ ಚೆಸ್ಟರ್, ಡೇಟ್‌ವೇ, ಈಸ್ಟ್‌ವುಡ್ ಸ್ನೋ, ಲೇಸ್ ‌ಮೇಕರ್, ಪೊರ್ಸೆಲೀನ್, ಸ್ನೋಫಾಲ್, ಲಿಟಲ್‌ಸ್ನೋಡ್ರಾಫ್ ತಳಿಯಿವೆ. ಬೂದು ಬಣ್ಣದಲ್ಲಿ ಕ್ರೋಡಾನ್ ಜಂಬೋ, ಕಾಮೆಟ್, ಬಾದಾಮಿ ಬಣ್ಣದಲ್ಲಿ ಸಿಂಬಲ್, ಕ್ರೋಡಾನ್ ಮಾಸ್ಟರ್‌ಫೇಸ್, ಮಿಶ್ರಬಣ್ಣದಲ್ಲಿ ಡಿಸ್ನಿಲ್ಯಾಂಡ್, ಜೋತ್ಸ್ನಾ, ನೀತಾ, ಪೆನಾಮನನ್, ಕಾಂಪ್ಲಿಮೆಂಟ್ ಹೀಗೆ ನೂರಾರು ತಳಿಗಳಿದ್ದು, ಎಲ್ಲಾ ಹೂಗಳು ಒಂದಕ್ಕಿಂತ ಒಂದು ಸುಂದರವಾಗಿದ್ದು ನೋಡುಗರ ಗಮನಸೆಳೆಯುತ್ತವೆ.

 ಕೃಷಿ ಮಾಡುವವರಾದರೆ ಹೀಗೆ ಮಾಡಿ...

ಕೃಷಿ ಮಾಡುವವರಾದರೆ ಹೀಗೆ ಮಾಡಿ...

ಡೇಲಿಯಾ ಕೃಷಿ ಮಾಡಲು ಮೇ ಅಥವಾ ಜೂನ್ ತಿಂಗಳು ಸೂಕ್ತ. ನೀರು ಬಸಿದು ಹೋಗುವ ಮಣ್ಣು, ಚೆನ್ನಾಗಿ ಬಿಸಿಲು ಬೀಳುವ ತಂಪಾದ ವಾತಾವರಣ ಉತ್ತಮವಾಗಿದೆ. ಡೇಲಿಯಾದ ಸಸ್ಯಾಭಿವೃದ್ಧಿಯನ್ನು ಗೆಡ್ಡೆಗಳಿಂದ ಹಾಗೂ ಕಾಂಡಗಳಿಂದ ಮಾಡಬಹುದು. ಆದರೆ ಹೆಚ್ಚಿನವರು ನಾಟಿಗೆ ಗೆಡ್ಡೆಗಳನ್ನೇ ಬಳಸುವುದು ಹೆಚ್ಚಾಗಿ ಕಂಡುಬರುತ್ತದೆ. ನಾಟಿಗೆ ಕನಿಷ್ಠ ಒಂದಾದರೂ ಕಣ್ಣಿರುವ ಗೆಡ್ಡೆಗಳನ್ನೇ ಆಯ್ದುಕೊಳ್ಳಬೇಕು. ಡೇಲಿಯಾ ನೆಡಲು ಆಯ್ಕೆ ಮಾಡಿಕೊಂಡಿರುವ ಜಾಗವನ್ನು ಚೆನ್ನಾಗಿ ಉಳುಮೆ ಮಾಡಿ ಮಣ್ಣಿಗೆ ಕೊಟ್ಟಿಗೆ ಗೊಬ್ಬರ ಬೆರೆಸಿ ಹದ ಮಾಡಬೇಕು. ಬಳಿಕ ಎರಡರಿಂದ ಮೂರು ಅಡಿ ಅಂತರದಲ್ಲಿ ಹದಿನೈದು ಸೆಂಟಿಮೀಟರ್ ಆಳದಲ್ಲಿ ನಾಟಿ ಮಾಡಬೇಕು. ಆ ನಂತರ ವಾತಾವರಣ ನೋಡಿಕೊಂಡು ವಾರಕ್ಕೊಮ್ಮೆ ನೀರು ಹಾಯಿಸಬೇಕು. ಜೊತೆಗೆ ಕಳೆ ಬಾರದಂತೆಯೂ ಎಚ್ಚರವಾಗಿರಬೇಕು.

ಹವಾಮಾನ ಬದಲಾವಣೆ; ಟೊಮ್ಯಾಟೊ ಬೆಳೆ ರಕ್ಷಣೆ ಹೇಗೆ?

 ಗಿಡಗಳಿಗೆ ಕೋಲಿನ ಆಸರೆ ನೀಡಬೇಕು

ಗಿಡಗಳಿಗೆ ಕೋಲಿನ ಆಸರೆ ನೀಡಬೇಕು

ಗಿಡಗಳು ಬೆಳೆಯುತ್ತಿದ್ದಂತೆಯೇ ರಾಸಾಯನಿಕ ಗೊಬ್ಬರದ ಬದಲು ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ ನೀಡುವುದು ಒಳ್ಳೆಯದು. ಗಿಡಗಳು ಬೆಳೆದು ಸುಮಾರು 25 ರಿಂದ 30 ಸೆಂ.ಮೀ. ಎತ್ತರ ತಲುಪಿದಾಗ ಗಿಡದ ತುದಿಯನ್ನು ಚಿವುಟಿ ಹಾಕಬೇಕು. ಹೀಗೆ ಮಾಡುವುದರಿಂದ ಕಾಂಡದಲ್ಲಿ ಹೆಚ್ಚು ಕವಲೊಡೆದು ಅಧಿಕ ಹೂಗಳನ್ನು ಬಿಡುತ್ತವೆ. ಹೂಗಳು ಬಿಡುವ ಸಂದರ್ಭದಲ್ಲಿ ಗಿಡಕ್ಕೆ ಆಧಾರವಾಗಿ ಕೋಲನ್ನು ಕಟ್ಟಬೇಕು. ಹೀಗೆ ಮಾಡುವುದರಿಂದ ಗಿಡವು ಹೂವಿನ ಭಾರಕ್ಕೆ ಮುರಿದು ಬೀಳುವುದನ್ನು ತಪ್ಪಿಸಬಹುದು. ಸಾಮಾನ್ಯವಾಗಿ ಗಿಡನೆಟ್ಟು ಎರಡು ತಿಂಗಳೊಳಗೆ ಗಿಡದಲ್ಲಿ ಹೂ ಬಿಡಲಾರಂಭಿಸುತ್ತದೆ. ಒಂದು ಗಿಡದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಹೂಗಳನ್ನು ಪಡೆಯಬಹುದಾಗಿದೆ.

 ಡೇಲಿಯಾ ಗೆಡ್ಡೆಗಳನ್ನು ಸಂರಕ್ಷಿಸಿಡಬಹುದು

ಡೇಲಿಯಾ ಗೆಡ್ಡೆಗಳನ್ನು ಸಂರಕ್ಷಿಸಿಡಬಹುದು

ಹೂಬಿಟ್ಟು ಮುಗಿದ ನಂತರ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತವೆ. ಈ ಸಂದರ್ಭ ಗಿಡವನ್ನು ಭೂಮಿಯಿಂದ 20 ಸೆಂ.ಮೀ ಎತ್ತರದಿಂದ ಕತ್ತರಿಸಬೇಕು. ಆ ಬಳಿಕ ಕೆಲವು ದಿನಗಳ ನಂತರ ಭೂಮಿಯಿಂದ ಅಗೆದು ನೋವಾಗದಂತೆ ಗೆಡ್ಡೆಗಳನ್ನು ಹೊರತೆಗೆದು ಅಂಟಿಕೊಂಡಿದ್ದ ಮಣ್ಣನ್ನು ಬೇರ್ಪಡಿಸಿ ಸ್ವಚ್ಛಗೊಳಿಸಿ ನಂತರ ಎರಡು ವಾರಗಳ ಕಾಲ ಒಣಗಿಸಿ ಶೇ.5ರ ಬಿಎಚ್ ‌ಸಿ ಹಾಗೂ ಗಂಧಕದ ಪುಡಿಯಿಂದ ಉಪಚರಿಸಿ ಮರಳಿನಲ್ಲಿ ಮುಚ್ಚಿಟ್ಟು ಮುಂದಿನ ನಾಟಿಗೆ ಅದನ್ನು ಬಳಸಿಕೊಳ್ಳಬಹುದು.

ಮನೆಯ ಕುಂಡದಲ್ಲಿ ಬೆಳೆಸುವವರು ಗೆಡ್ಡೆಯನ್ನು ಕುಂಡದಲ್ಲಿ ಗೊಬ್ಬರಮಿಶ್ರಿತ ಮಣ್ಣಿನಲ್ಲಿ ಬಿತ್ತಿ ನೀರು ಹಾಕಬೇಕು. ಅದು ಮೊಳಕೆ ಬಂದು ಗಿಡವಾಗುತ್ತಿದ್ದಂತೆಯೇ ಹೆಚ್ಚು ಎತ್ತರ ಬೆಳೆಯಲು ಬಿಡದೆ ಗಿಡದ ಮೇಲಿನ ಚಿಗುರನ್ನು ಚಿವುಟಬೇಕು. ಹೆಚ್ಚು ಬಿಸಿಲು ಬೀಳದ ತಂಪಾದ ಸ್ಥಳದಲ್ಲಿಟ್ಟು ಅಗತ್ಯತೆ ನೋಡಿಕೊಂಡು ನೀರು ಗೊಬ್ಬರ ಹಾಕಿದರೆ ಬಹುಬೇಗ ಬೆಳೆದು ಹೂ ಬಿಡುತ್ತದೆ.

English summary
Here are useful tips to grow dahlia flower in home and also for commercial purpose,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X