ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಟಲ್ ಸ್ಪರ್ಷದೊಂದಿಗೆ ಹಾಪ್ಕಾಮ್ಸ್ ಮಾವು-ಹಲಸು ಮೇಳ ಆರಂಭ

By Sachhidananda Acharya
|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಇಂದಿನಿಂದ ಈ ಬಾರಿಯ ಹಾಪ್ಕಾಮ್ಸ್ ಮಾವು-ಹಲಸು ಮೇಳ ಆರಂಭವಾಗಿದೆ. ಜುಲೈವರಗೆ ಈ ಮೇಳ ನಡೆಯಲಿದೆ.

ಇಂದು ಸಂಜೆ 4 ಗಂಟೆಗೆ ಹಡ್ಸನ್ ವೃತ್ತದಲ್ಲಿರುವ ಹಾಪ್ಕಾಮ್ಸ್ ಶೀಥಲೀಕರಣ ಘಟಕದಲ್ಲಿ ಮಾವು ಮತ್ತು ಹಲಸು ಮೇಳಕ್ಕೆ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಚಾಲನೆ ನೀಡಿದರು.

ಮೇಳದ ಪ್ರಯುಕ್ತ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹಣ್ಣುಗಳನ್ನು ಮಾರಲಾಗುತ್ತದೆ. ಶೇಕಡಾ 10ರ ರಿಯಾಯಿತಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರದ ಎಲ್ಲಾ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಮಾವು ಮತ್ತು ಹಲಸು ದೊರೆಯಲಿದೆ.

HOPCOMS Mango- Jack fruit Mela begins from Today

10-15 ಬಗೆಯ ಮಾವು

ಮೇಳದಲ್ಲಿ ಬಾದಾಮಿ, ಆಲ್ಫೋನ್ಸೋ, ಮಲಗೋವ, ಕಾಲಪಾಡ್, ರಸಪುರಿ, ಮಲ್ಲಿಕಾ, ಸಿಂಧೂರಾ, ದಶೇರಿ, ಬಂಗನಪಲ್ಲಿ, ಕೇಸರ್, ಸಕ್ಕರೆಗುತ್ತಿ, ತೋತಾಪುರಿ ಸೇರಿದಂತೆ ಸುಮಾರು 10-15 ತಳಿಗಳ ಮಾವಿನ ಹಣ್ಣುಗಳ ಮಾರಾಟ ನಡೆಯಲಿದೆ.

ಇನ್ನು ಸಕ್ಕರಾಯಪಟ್ಟಣ, ಚಂದ್ರ, ತೂಬಿಗೆರೆ, ಜಾನಗೆರೆ, ಬೈರಸಂದ್ರ ಹಾಗೂ ಗಮ್ ಲೆಸ್ ಹಲಸು ತಳಿಗಳ ಮಾರಾಟವೂ ನಡೆಯಲಿದೆ.

ಮೇಳದಲ್ಲಿ ಸಂಪೂರ್ಣ ನೈಸರ್ಗಿಕವಾಗಿ ಹಣ್ಣಾದ ಮಾವುಗಳಿಗೆ ಮಾತ್ರ ಮಾರಲು ಅವಕಾಶ ನೀಡಲಾಗಿದೆ. ಇನ್ನು ರೈತರಿಂದ ನೇರವಾಗಿ ಖರೀದಿಸಿ ಹಣ್ಣುಗಳನ್ನು ಇಲ್ಲಿ ಮಾರಲಾಗುತ್ತದೆ. ಈ ಬಾರಿಯ ಮೇಳದಲ್ಲಿ 1000 ಮೆಟ್ರಿಕ್ ಟನ್ ಮಾವು ಹಾಗೂ 250 ಮೆಟ್ರಿಕ್ ಟನ್ ಹಲಸು ಮಾರಾಟದ ಗುರಿ ಹಾಕಿಕೊಳ್ಳಲಾಗಿದೆ.

HOPCOMS Mango- Jack fruit Mela begins from Today

ಮೇಳಕ್ಕೆ ಡಿಜಿಟಲ್ ಸ್ಪರ್ಷ

ಈ ಬಾರಿಯ ಹಾಪ್ಕಾಮ್ಸ್ ಮಾವು ಮತ್ತು ಹಲಸಿನ ಮೇಳಕ್ಕೆ ಡಿಜಿಟಲ್ ಸ್ಪರ್ಷ ನೀಡಲಾಗಿದೆ. ಫ್ಲಿಪ್‍ಕಾರ್ಟ್ ಪೇಮೆಂಟ್ ಆ್ಯಪ್ 'ಫೋನ್‍ಪೇ' ಜತೆ ಹಾಪ್ಕಾಮ್ಸ್ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಮೊಟ್ಟ ಮೊದಲ ಬಾರಿಗೆ ಆ್ಯಪ್ ಮೂಲಕ ಪೇಮೆಂಟ್ ಮಾಡುವವರು ರೂ. 50 ರಿಯಾಯಿತಿಯನ್ನೂ ಪಡೆದುಕೊಳ್ಳಬಹುದು.

English summary
Horticultural Producers and Cooperative Marketing and Processing Society (HOPCOMS) will be holding ‘Mango and Jackfruit Mela 2017’ from Friday at its outlets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X