ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಪ್‌ಕಾಮ್ಸ್‌ನಲ್ಲಿ ಬಾಯಲ್ಲಿ ನೀರೂರಿಸುವ ದ್ರಾಕ್ಷಿ-ಕಲ್ಲಂಗಡಿ ಮೇಳ

|
Google Oneindia Kannada News

ಬೆಂಗಳೂರು, ಫೆಬ್ರವರಿ 18: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ(ಹಾಪ್‌ಕಾಮ್ಸ್‌) ಲಾಲ್‌ಬಾಗ್‌ನಲ್ಲಿರುವ ಹಾಪ್‌ಕಾಮ್ಸ್ ಕೇಂದ್ರ ಕಚೇರಿಯಲ್ಲಿ ದ್ರಾಕ್ಷಿ-ಕಲ್ಲಂಗಡಿ ಮೇಳವನ್ನು ಆಯೋಜಿಸಿದೆ.

ದ್ರಾಕ್ಷಿ ಹಾಗೂ ಕಲ್ಲಂಗಡಿ ಬೆಳಗಾರರನ್ನು ಪ್ರೋತ್ಸಾಹಿಸುವ , ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಹಣ್ಣು ಒದಗಿಸಲು ಮೇಳ ಏರ್ಪಡಿಸಿದ್ದೇವೆ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಎಎಸ್ ಚಂದ್ರಶೇಖರ್ ತಿಳಿಸಿದ್ದಾರೆ.

ಈ ಮೇಳದ ಅವಧಿಯಲ್ಲಿ ನಗರದಲ್ಲಿರುವ 200 ಕ್ಕೂ ಅಧಿಕ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಗ್ರಾಹಕರು ಹಣ್ಣುಗಳನ್ನು ಖರದೀದಿಸಬಹುದು.

grapes

ಶರದ್ ಸೀಡ್‌ಲೆಸ್, ಕೃಷ್ಣ ಶರದ್, ಥಾಮ್ಸನ್ , ಜಂಬೂ ಸೇರಿದಂತೆ ಅಂದಾಜು ತಳಿಯ ದ್ರಾಕ್ಷಿ, ಐದು ಬಗೆಯ ಕಲ್ಲಂಗಡಿ ಜೊತೆಗೆ ಖರ್ಬೂಜ, ಕಿತ್ತಳೆ, ಚಕ್ಕೋತ, ಒಣದ್ರಾಕ್ಷಿ ಮತ್ತಿತರ ಡ್ರೈಫ್ರೂಟ್ಸ್ಗಳು ಶೇ.10 ರಿಯಾಯಿತಿ ದರದಲ್ಲಿ ದೊರೆಯುತ್ತವೆ.

ಕೇಂದ್ರ ಬಜೆಟ್ 2020: ಹಣ್ಣು, ತರಕಾರಿ ಶೇಖರಣೆಗೆ ದೇಶದಲ್ಲಿ ಜಾಲ ನಿರ್ಮಾಣಕೇಂದ್ರ ಬಜೆಟ್ 2020: ಹಣ್ಣು, ತರಕಾರಿ ಶೇಖರಣೆಗೆ ದೇಶದಲ್ಲಿ ಜಾಲ ನಿರ್ಮಾಣ

ಬೆಳಗಾವಿ, ಬಿಜಾಪುರ, ಬಾಗಲಕೋಟೆ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಒಟ್ಟು 26,600 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ , ಕಲ್ಲಂಗಡಿ ಬೆಳೆಯಲಾಗಿದೆ. ಆ ಭಾಗಗಳಲ್ಲಿ ರೈತರಿಗೆ ಮೇಳದ ಲಾಭ ಪಡೆಯುವಂತೆ ಕೋರಲಾಗಿದೆ. ಈ ಬಾರಿ 500 ಟನ್ ದ್ರಾಕ್ಷಿ ಹಾಗೂ 1500 ಕಲ್ಲಂಗಡಿ ಮಾರಾಟ ಮಾಡುವ ಗುರಿಯನ್ನು ಹೊಂದಿದ್ದಾರೆ.

ತೋಟಗಾರಿಕೆ ಸಚಿವ ನಾರಾಯಣ ಗೌಡ ಅವರು ಫೆ.19ರಂದು ಮೇಳ ಉದ್ಘಾಟಿಸಲಿದ್ದಾರೆ. ಸಚಿವ ವಿ. ಸೋಮಣ್ಣ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಆಗಮಿಸಲಿದ್ದಾರೆ.

English summary
Hopcoms Grape And melon Mela From Tomorrow From February 19. Over 15-20 different varieties of grapes like Thomson seedless, Flame seedless, Krishna Sharad, Indian Black Globe, Red Globe, Bangalore Blue, Dilkush and others along with four varieties of watermelon – Namdhari, Kiran, Sun Melon and Honey Due Melon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X