ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಧ ಶತಕದ ಗಡಿ ದಾಟಿದ ತರಕಾರಿಗಳ ಬೆಲೆ!

|
Google Oneindia Kannada News

ಬೆಂಗಳೂರು, ನವೆಂಬರ್ 22 : ಕಳೆದ ವಾರ ಈರುಳ್ಳಿ, ಟೊಮೆಟೋ ದರ ಹೆಚ್ಚಳವಾಗಿತ್ತು. ಈಗ ಬ್ಯಾಗು ಹಿಡಿದು ಅಂಗಡಿಗೆ ಹೋದವರು ಎಲ್ಲಾ ತರಕಾರಿಗಳ ಬೆಲೆ ಕೇಳಿ ಕಂಗಾಲಾಗಿದ್ದಾರೆ.

ಅರ್ಧ ಶತಕ ಬಾರಿಸಿದ ಈರುಳ್ಳಿ, ಟೊಮೆಟೋ ಬೆಲೆ!ಅರ್ಧ ಶತಕ ಬಾರಿಸಿದ ಈರುಳ್ಳಿ, ಟೊಮೆಟೋ ಬೆಲೆ!

ಬೆಂಗಳೂರು ನಗರದ ಮಾರುಕಟ್ಟೆ, ಹಾಪ್‌ ಕಾಮ್ಸ್‌ಗಳಲ್ಲಿ ತರಕಾರಿಗಳ ಬೆಲೆಗಳಲ್ಲಿ ಹೆಚ್ಚಳವಾಗಿದೆ. ಕೆಲವು ತರಕಾರಿಗಳನ್ನು ಹೊರತುಪಡಿಸಿದರೆ ಉಳಿದವುಗಳ ಬೆಲೆ 50 ರೂ. ದಾಟಿದೆ.

Hike in vegetables prices in Bengaluru

ಹಾಪ್ ಕಾಮ್ಸ್ ಇಂದಿನ ದರ ಪಟ್ಟಿ ಪ್ರಕಾರ ಬೀನ್ಸ್ 36, ಬೀಟ್ ರೋಟ್ 57, ಬದನೆಕಾಯಿ (ಬಿಳಿ) 50, ಕ್ಯಾಪ್ಸಿಕಂ 54, ಕ್ಯಾರೆಟ್ (ನಾಟಿ) 92, ಕ್ಯಾರೆಟ್ (ಊಟಿ) 96, ಹೂ ಕೋಸು 50, ಈರುಳ್ಳಿ 57, ಆಲೂಗೆಡ್ಡೆ 23, ಟೊಮೆಟೋ 49 ರೂ. ದರವಿದೆ.

ಪೂರೈಕೆ ಕೊರತೆ, ಮೊಟ್ಟೆ ದರದಲ್ಲಿ ಭಾರೀ ಏರಿಕೆಪೂರೈಕೆ ಕೊರತೆ, ಮೊಟ್ಟೆ ದರದಲ್ಲಿ ಭಾರೀ ಏರಿಕೆ

'ಆಗಸ್ಟ್ ತಿಂಗಳ ಬಳಿಕ ಬೆಂಗಳೂರು ಸುತ್ತ-ಮುತ್ತ ಸುರಿದ ಮಳೆಯಿಂದಾಗಿ ತರಕಾರಿ ಉತ್ಪಾದನೆ ಕುಸಿತಗೊಂಡಿದೆ. ಇದರಿಂದಾಗಿ ಪೂರೈಕೆ ಕಡಿಮೆಯಾಗಿ ಬೆಲೆ ಹೆಚ್ಚಾಗಿದೆ' ಎನ್ನುತ್ತಾರೆ ಹನುಮಂತನಗರ ಹಾಪ್‌ಕಾಮ್ಸ್‌ನ ರವೀಂದ್ರ.

ಸತತವಾಗಿ ಸುರಿದ ಮಳೆಯಿಂದಾಗಿ ತರಕಾರಿ ಉತ್ಪಾದನೆ ಕಡಿಮೆಯಾಗಿದೆ. ಒಂದು ವಾರದಲ್ಲಿ ಅಗತ್ಯದಷ್ಟು ಪೂರೈಕೆಯಾಗಲಿದೆ. ನಂತರ ಬೆಲೆಗಳು ಕಡಿಮೆಯಾಗಲಿವೆ ಎನ್ನುತ್ತಾರೆ ವ್ಯಾಪಾರಿಗಳು.

English summary
Vegetables prices have increased in Bengaluru city. Horticultural Products Co-operative Marketing and Processing Society (Hopcoms) officials said, shortage of supply main reason form price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X