ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬು: ಪ್ರತಿ ಕ್ವಿಂಟಲ್‌ಗೆ ಶೇ 10ರಷ್ಟು ಚೇತರಿಕೆ ದರ ಘೋಷಿಸಿದ ಮೋದಿ

|
Google Oneindia Kannada News

ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವಹಿವಾಟು ಸಚಿವಾಲಯ ಮಂಡಳಿಯು, 2021-22ನೇ ಸಾಲಿಗೆ ಅಕ್ಟೋಬರ್‌-ಸೆಪ್ಟೆಂಬರ್‌ ಅವಧಿಯ ಬೆಳೆಗೆ ಲಾಭಕರ ಹಾಗೂ ನ್ಯಾಯಯುತ ಬೆಲೆಯನ್ನು ನೀಡುವ ತೀರ್ಮಾನ ಕೈಗೊಂಡಿದೆ. ₹290/ಪ್ರತಿಕ್ವಿಂಟಲ್‌ಗೆ ನೀಡುತ್ತಿದ್ದು, ಪ್ರತಿ ಕ್ವಿಂಟಲ್‌ಗೆ ಶೇ 10ರಷ್ಟು ಚೇತರಿಕೆ ದರ ನೀಡಲಾಗುವುದು. ಪ್ರತಿ ಕ್ವಿಂಟಲ್‌ಗೆ ₹2.90ಯಷ್ಟು ವಿಮೆಯನ್ನೂ ನೀಡಲಾಗುವುದು. ಶೇ 10ಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ 0.1ರ ದರದಲ್ಲಿ ಚೇತರಿಕೆ ಹಾಗೂ ಹಿಂಪಡೆಯುವ ದರವನ್ನು ಹೆಚ್ಚಿಸಲಾಗಿದೆ.

ವಿಮೆಯಲ್ಲಿ ಶೇ 0.1ರಷ್ಟು ಹೆಚ್ಚಳವನ್ನೂ, ಚೇತರಿಕೆಯಲ್ಲಿ ಕಡಿತವನ್ನೂ ಮಾಡಲಾಗಿದೆ. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡುವಲ್ಲಿ ಸರ್ಕಾರದ ತೀರ್ಮಾನವು ಸಕ್ಕರೆ ಕಾರ್ಖಾನೆಗಳು ಯಾವುದೇ ಕಡಿತ ಮಾಡಿದ್ದಲ್ಲಿ, ಶೇ9.5ಕ್ಕಿಂತ ಕಡಿಮೆ ವಹಿವಾಟಿರುವ ಕಾರ್ಖಾನೆಗಳಿಂದಾಗಿ ಬೆಳೆಗಾರರಿಗೆ ತೊಂದರೆಯಾದರೆ, ಅಂಥ ಬೆಳೆಗಾರರಿಗೆ ಪ್ರತಿ ಕ್ವಿಂಟಲ್‌ಗೆ ₹275.50 ನೀಡಲಾಗುವುದು. ಈ ಸಾಲಿನಲ್ಲಿ ಈ ಬೆಲೆಯು ₹270.75ರಷ್ಟಾಗಿದೆ.

ಎಥನಾಲ್ ಬೆಲೆ ಶೇ.25ರಷ್ಟು ಹೆಚ್ಚಳಕ್ಕೆ ನಿರ್ಧಾರ: ರೈತರ ಮೊಗದಲ್ಲಿ ಹರ್ಷಎಥನಾಲ್ ಬೆಲೆ ಶೇ.25ರಷ್ಟು ಹೆಚ್ಚಳಕ್ಕೆ ನಿರ್ಧಾರ: ರೈತರ ಮೊಗದಲ್ಲಿ ಹರ್ಷ

2021-2022ರ ಸಾಲಿನಲ್ಲಿ ಕಬ್ಬು ಉತ್ಪಾದನಾ ವೆಚ್ಚವನ್ನು ₹155 ಎಂದು ತೀರ್ಮಾನಿಸಲಾಗಿದೆ. ಪ್ರತಿ ಕ್ವಿಂಟಲ್‌ಗೆ ₹290 ಕೊಡುವುದರಿಂದ ಶೇ 10ರಷ್ಟು ಚೇತರಿಕೆ ದರ ನೀಡುತ್ತಿರುವುದು, ಒಟ್ಟಾರೆ ಉತ್ಪಾದನಾ ವೆಚ್ಚಕ್ಕಿಂತ ಶೇ 87.1ರಷ್ಟು ಹೆಚ್ಚುವರಿ ಬೆಲೆ ನಿಗದಿಯಾದಂತಿದೆ. ಕೃಷಿ ಬೆಳೆಗಾರರ ವೆಚ್ಚದ ಅರ್ಧದಷ್ಟು ಹಣವನ್ನು ಅವರಿಗೆ ನೀಡಲಾಗುತ್ತಿದೆ. ಇದು ನಿಜವಾಗಿಯೂ ನ್ಯಾಯಯುತವಾದ ಹಾಗೂ ಲಾಭಕರವಾದ ಬೆಲೆಯಾಗಿದೆ.

Highest ever Fair and Remunerative Price of 290 Rs per qtl approved for Sugarcane Farmers

ಈ 2020-21ರ ಕಬ್ಬು ಬೆಳೆ ಹಂಗಾಮಿನಲ್ಲಿ 2976 ಲಕ್ಷ ಟನ್‌ಗಳಷ್ಟು ₹91,000 ಕೋಟಿಗಳಷ್ಟು ಮೌಲ್ಯದ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಂದ ಖರೀದಿಸಲಾಗಿದೆ. ಇದು ಈ ವರೆಗಿನ ಗರಿಷ್ಠಮಟ್ಟದ ಖರೀದಿಯಾಗಿದೆ. ಕನಿಷ್ಠ ಬೆಂಬಲಬೆಲೆಯಲ್ಲಿ ಖರೀದಿಸುವ ಭತ್ತವನ್ನು ಪರಿಗಣಿಸಿದರೆ ಇದು ಎರಡನೆಯ ಅತಿ ಹೆಚ್ಚು ಮೌಲ್ಯದ ಖರೀದಿಯಾಗಿದೆ. 2021-22ರ ಹಂಗಾಮಿನಲ್ಲಿ ಕಬ್ಬಿನ ಇಳುವರಿ ಹೆಚ್ಚಾಗುವುದನ್ನು ಗಮನದಲ್ಲಿರಿಸಿಕೊಂಡು 3,088 ಲಕ್ಷ ಟನ್‌ ಸಕ್ಕರೆ ಕಾರ್ಖಾನೆಗಳಿಂದ ಖರೀದಿಸುವ ನಿರೀಕ್ಷೆ ಇದೆ. ಒಟ್ಟಾರೆಯಾಗಿ ರೈತರೊಂದಿಗೆ 1,00,000 ಕೋಟಿ ರೂಪಾಯಿ ಮೌಲ್ಯದ ವಹಿವಾಟು ಆಗುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಮುಂದಿನ ಹಂಗಾಮಿನಲ್ಲಿ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಹಾಗೂ ಲಾಭಕರ ಬೆಲೆ ನೀಡಿ, ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಿದಂತಾಗಿದೆ.

ಬೆಲ್ಲದ ಕಾರ್ಖಾನೆಗಳಾಗಿದ್ದ ಆಲೆಮನೆಗಳು ನೇಪಥ್ಯಕ್ಕೆ ಸರಿಯುತ್ತಿರುವುದೇಕೆ?ಬೆಲ್ಲದ ಕಾರ್ಖಾನೆಗಳಾಗಿದ್ದ ಆಲೆಮನೆಗಳು ನೇಪಥ್ಯಕ್ಕೆ ಸರಿಯುತ್ತಿರುವುದೇಕೆ?

ಈ ಹಂಗಾಮು ಆರಂಭವಾದೊಡನೆ 2021ರ ಅಕ್ಟೋಬರ್‌ನಿಂದ, 2022ರ ಸೆಪ್ಟೆಂಬರ್‌ ವರೆಗೆ ಈ ಲಾಭಕರ, ನ್ಯಾಯಯುತ ಬೆಲೆಯು ಕಬ್ಬು ಬೆಳೆಗಾರರಿಗೆ ಅನ್ವಯವಾಗುತ್ತದೆ. ಸಕ್ಕರೆ ಕ್ಷೇತ್ರವು ಕೃಷಿ ಆಧಾರಿತ ಅತಿ ಮುಖ್ಯವಾದ ಕ್ಷೇತ್ರವಾಗಿ ಬೆಳೆದಿದೆ. ಕಬ್ಬು ಬೆಳೆಗಾರರು, ಅವರ ಅವಲಂಬಿತರು ಹಾಗೂ ಸಕ್ಕರೆ ಕ್ಷೇತ್ರದ ಐದು ಲಕ್ಷ ಜನ ಕಾರ್ಮಿಕರ ಜೀವನ ನಿರ್ವಹಣೆಗೆ ನೇರವಾದ ಕಾರಣವಾಗಿದೆ. ಇದಷ್ಟೇ ಅಲ್ಲದೆ, ಸಕ್ಕರೆ ಕಾರ್ಖಾನೆಯ ಉಪ ಉತ್ಪನ್ನಗಳು ಹಾಗೂ ಇತರ ವಹಿವಾಟುಗಳಲ್ಲಿಯೂ ಸಾಗಾಣಿಕೆ ಕ್ಷೇತ್ರದಲ್ಲಿಯೂ ಬಹುತೇಕರ ಜನರ ಜೀವನಾವಲಂಬಿ ಕ್ಷೇತ್ರವಾಗಿ ಬೆಳೆದಿದೆ.

Highest ever Fair and Remunerative Price of 290 Rs per qtl approved for Sugarcane Farmers

ಹಿನ್ನೆಲೆ:

ರಾಜ್ಯ ಸರ್ಕಾರ ಹಾಗೂ ಇತರ ಭಾಗೀದಾರರ ಸಮಾಲೋಚನೆಯೊಂದಿಗೆ, ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಪ್ರಸ್ತಾವನೆಯ ಆಧಾರದ ಮೇಲೆ ನ್ಯಾಯಯುತ, ಲಾಭಕರ ಬೆಲೆಯ ತೀರ್ಮಾನ ಕೈಗೊಳ್ಳಲಾಗುತ್ತದೆ.

2017-18, 2018-19 ಮತ್ತು 2019-20 ಕಳೆದ ಈ ಮೂರು ಹಂಗಾಮುಗಳಲ್ಲಿ 6.2 ಲಕ್ಷ ಮೆಟ್ರಿಕ್‌ ಟನ್‌ (ಎಲ್‌ಎಂಟಿ), 38 ಎಲ್‌ಎಂಟಿ ಹಾಗೂ 59.60 (ಎಲ್‌ಎಂಟಿ)ಯಷ್ಟು ಸಕ್ಕರೆಯನ್ನು ರಫ್ತು ಮಾಡಲಾಗಿದೆ. ಈ ಪ್ರಸಕ್ತ ಹಂಗಾಮಿನಲ್ಲಿ 2020-2021 ಅಕ್ಟೊಬರ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ 60 ಎಲ್‌ಎಂಟಿ ಗುರಿ ಮೀರಿ, 70 ಎಲ್‌ಎಂಟಿಯಷ್ಟು ಒಪ್ಪಂದಗಳಿಗೆ ಸಹಿಯಾಗಿದೆ. 55ಎಲ್‌ಎಂಟಿಗೂ ಮೀರಿ, ಸಕ್ಕರೆಯನ್ನು ದೇಶದಿಂದ ರಫ್ತುಗೊಳಿಸಲಾಗಿದೆ. 23.08.21ರವರೆಗೆ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಉಳಿಸಿಕೊಳ್ಳದಂತೆ ಸಾಕಷ್ಟು ಚೇತರಿಕೆ ಕಂಡಿವೆ.

Highest ever Fair and Remunerative Price of 290 Rs per qtl approved for Sugarcane Farmers

ಸರ್ಕಾರವು ಹೆಚ್ಚುವರಿ ಕಬ್ಬನ್ನು ಎಥೆನಾಲ್‌ ಉತ್ಪನ್ನಕ್ಕಾಗಿ ಬಳಸುವಂತೆ ಸೂಚಿಸಲು ಸರ್ಕಾರವೂ ಉತ್ತೇಜನ ನೀಡುತ್ತಿದೆ. ಇದನ್ನು ಪೆಟ್ರೋಲ್‌ಗೆ ಪರ್ಯಾಯ ಇಂಧನವಾಗಿ ಬಳಸಬಹುದಾಗಿದೆ. ಈ ಹಸಿರು ಇಂಧನ ಬಳಕೆ ಹೆಚ್ಚಾದಂತೆ, ಕಚ್ಚಾ ತೈಲ ಆಮದಿನ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ. ಕಳೆದೆರಡು ಸಕ್ಕರೆಯ ಹಂಗಾಮಿನಲ್ಲಿ 2018-19, 2019-2020ಗಳಲ್ಲಿ 3.37 ಎಲ್‌ಎಂಟಿ ಮತ್ತು 9.26 ಎಲ್‌ಎಂಟಿ ಸಕ್ಕರೆಯನ್ನು ಎಥನಾಲ್‌ ಆಗಿ ಪರಿವರ್ತಿಸಲಾಗಿತ್ತು. ಇದು ಹೆಚ್ಚುವರಿ ಕಬ್ಬಿನ ಸಮಸ್ಯೆಗೆ ಹಾಗೂ ರೈತರಿಗೆ ಬಾಕಿ ಉಳಿಸುವ ಸಮಸ್ಯೆ ಎರಡಕ್ಕೂ ಪರಿಹಾರ ನೀಡುತ್ತಿದೆ.

ಕಳೆದ ಮೂರು ಹಂಗಾಮಿನಲ್ಲಿ 22ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯವನ್ನು ಸಕ್ಕರೆ ಕಾರ್ಖಾನೆ ಹಾಗೂ ಡಿಸ್ಟಿಲ್ಲರಿಗಳು ತಂದು ನೀಡಿವೆ. ತೈಲ ಮಾರುಕಟ್ಟೆಯ ಕಂಪನಿಗಳಲ್ಲಿ, ಎಥೆನಾಲ್‌ ಮಾರಾಟವು 2020-2021ರ ಈ ಹಂಗಾಮಿನಲ್ಲಿ 15ಸಾವಿರ ಕೋಟಿ ರೂಪಾಯಿ ಆದಾಯ ತಂದು ನೀಡಿದೆ. ಸಕ್ಕರೆ ಕಾರ್ಖಾನೆಗಳಿಗೆ ಓಎಂಸಿಗಳಿಂದಲೇ ಒಟ್ಟು ಆದಾಯದ ಶೇ 8.5ರಷ್ಟು ಆದಾಯವನ್ನು ಎಥೆನಾಲ್‌ ಮಾರಾಟದಿಂದ ದಕ್ಕಿದೆ. 2025ರ ಅವಧಿಯವರೆಗೆ ಈ ಪ್ರಮಾಣವು ಶೇ 20ರಷ್ಟು ಆಗಲಿ ಎಂಬ ಗುರಿಯನ್ನೂ ತಲುಪಲಾಗುವುದು.

Highest ever Fair and Remunerative Price of 290 Rs per qtl approved for Sugarcane Farmers

2019-2020ರ ಸಕ್ಕರೆ ಹಂಗಾಮಿನಲ್ಲಿ ₹75,845 ಕೋಟಿ ಬಾಕಿ ಉಳಿದಿತ್ತು. ಇದರಲ್ಲಿ 75,703 ಕೋಟಿ ರೂಪಾಯಿಗಳ ಬಾಕಿ ತೀರಿಸಲಾಗಿದೆ. 142 ಕೋಟಿ ರೂಪಾಯಿಗಳು ಮಾತ್ರ ಬಾಕಿ ಉಳಿದಿವೆ. ಸದ್ಯದ 2020-2021ರ ಸಾಲಿನಲ್ಲಿ 90,959 ಕೋಟಿ ರೂಪಾಯಿ ಬಾಕಿ ನೀಡುವುದಿದ್ದು, ಅದರಲ್ಲಿ 86,238 ಕೋಟಿ ರೂಪಾಯಿಗಳ ಲೆಕ್ಕವನ್ನು ಚುಕ್ತಾ ಮಾಡಲಾಗಿದೆ. ಸಕ್ಕರೆ ಉತ್ಪಾದನೆ ಹಾಗೂ ಎಥೆನಾಲ್‌ ಉತ್ಪಾದನೆಯ ಪ್ರಮಾಣದಲ್ಲಿಯ ಹೆಚ್ಚಳವು, ರೈತರಿಗೆ ಸಕಾಲದಲ್ಲಿ ಬಾಕಿ ನೀಡುವಂತೆ ಆಗುತ್ತಿದೆ. (ಮಾಹಿತಿ ಕೃಪೆ: ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ))

English summary
Keeping in view interest of sugarcane farmers (GannaKisan), the Cabinet Committee on Economic Affairs chaired by Hon’ble Prime Minister Shri Narendra Modi has approved Fair and Remunerative Price (FRP) of sugarcane for sugar season 2021-22 (October - September) at Rs. 290/- per quintal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X