ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಕೊಳ್ಳದ ವಾಸ್ತವ ಚಿತ್ರಣ ಅಧ್ಯಯನ ಆರಂಭ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 07: ಕಾವೇರಿ ಕೊಳ್ಳದ ವಾಸ್ತವ ಚಿತ್ರಣದ ಅಧ್ಯಯನಕ್ಕೆ ಜಿ.ಎಸ್.ಝಾ ನೇತೃತ್ವದ ತಂಡ ಅಕ್ಟೋಬರ್ 7 ಮತ್ತು 8 ರಂದು ರಾಜ್ಯದಲ್ಲಿ ಪ್ರವಾಸ ಕೈಗೊಂಡಿದೆ. ಈ ಅಧ್ಯಯನದ ವರದಿ ಅಕ್ಟೋಬರ್ 18 ರಂದು ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಮಹತ್ವ ಪಡೆಯಲಿದೆ.

ಕಾವೇರಿ ಕೊಳ್ಳದ ವಾಸ್ತವ ಚಿತ್ರಣದ ಅಧ್ಯಯನ ನಡೆಸಿ ವರದಿ ಮಾಡಲು ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನಕ್ಕೆ ನೇಮಕಗೊಂಡಿರುವ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ. ಎಸ್. ಝಾ ಅವರ ನೇತೃತ್ವದ ಉನ್ನತ ಮಟ್ಟದ ತಾಂತ್ರಿಕ ತಂಡವು ಅಕ್ಟೋಬರ್ 7 ಮತ್ತು 8 ರಂದು ರಾಜ್ಯದಲ್ಲಿ ಪ್ರವಾಸ ಮಾಡಲಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ. ಬಿ.ಪಾಟೀಲ್ ಅವರು ಹೇಳಿದ್ದಾರೆ.

ಕೇಂದ್ರ ಜಲ ಆಯೋಗದ ಸದಸ್ಯ ಸೈಯದ್ ಮಸೂದ್ ಹುಸೇನ್ ಹಾಗೂ ಜಲ ಸಂಪನ್ಮೂಲ ಆಯೋಗದ ಕೃಷ್ಣಾ ಮತ್ತು ಗೋದಾವರಿ ಕಣಿವೆಯ ಮುಖ್ಯ ಅಭಿಯಂತ ಆರ್. ಕೆ. ಗುಪ್ತಾ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಹಿರಿಯ ಹಾಗೂ ತಾಂತ್ರಿಕ ಅಧಿಕಾರಿಗಳ ಜೊತೆಗೆ ರಾಜ್ಯದ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಹಾಗೂ ಕೃಷ್ಣರಾಜ ಸಾಗರ ಅಣೆಕಟ್ಟಿನ ಮುಖ್ಯ ಅಭಿಯಂತರ ಶಿವಕುಮಾರ್ ಅವರೂ ಈ ತಂಡದೊಂದಿಗೆ ಪ್ರವಾಸ ಮಾಡಲಿದ್ದಾರೆ.

Cauvery basin

ಭಾರತ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ಮೇರೆಗೆ ಆಗಮಿಸಿರುವ ಈ ಅಧ್ಯಯನ ತಂಡವು ಕಾವೇರಿ ಕೊಳ್ಳದ ಕೃಷ್ಣರಾಜ ಸಾಗರ, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಿಗೆ ಭೇಟಿ ನೀಡಿ, ನಾಲ್ಕೂ ಜಲಾಶಯಗಳಲ್ಲಿ ಲಭ್ಯವಿರುವ ನೀರು ಸಂಗ್ರಹದ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಿದ್ದಾರೆ.

ಕಾವೇರಿ ಕೊಳ್ಳದ ಮಂಡ್ಯ, ಮೈಸೂರು ನಗರಗಳು ಮತ್ತು ಸುತ್ತ-ಮುತ್ತಲ 600 ಗ್ರಾಮಗಳು ಹಾಗೂ ರಾಜ್ಯದ ರಾಜಧಾನಿ ಬೆಂಗಳೂರು ಮಹಾ ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಮುಂದಿನ ಬೇಸಿಗೆಯ ಅಂತ್ಯದವರೆಗೆ ಅಗತ್ಯವಿರುವ ನೀರು ಪ್ರಮಾಣದ ಬಗ್ಗೆಯೂ ಅಧ್ಯಯನ ತಂಡವು ಪರಿಶೀಲನೆ ನಡೆಸಲಿದೆ. ಅಂತೆಯೇ, ಮುಂಗಾರು ವೈಫಲ್ಯದಿಂದ ಅಲ್ಲಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಉಂಟಾಗಿರುವ ಬೆಳೆ ಹಾನಿ ಹಾಗೂ ನೀರಿನ ಲಭ್ಯತೆ ಕುರಿತು ವಾಸ್ತವ ಚಿತ್ರಣವನ್ನು ಅಂದಾಜು ಮಾಡಿ ವರದಿ ಸಲ್ಲಿಸಲಿದೆ.
ರಾಜ್ಯದ ಪ್ರವಾಸ ಪೂರ್ಣಗೊಂಡ ನಂತರ ಝಾ ನೇತೃತ್ವ ತಂಡವು ಶನಿವಾರ ಸಂಜೆಯೇ ತಮಿಳುನಾಡಿನ ಮೆಟ್ಟೂರಿಗೆ ತೆರಳಿ, ಅಲ್ಲಿನ ಜಲಾಶಯದ ನೀರು ಸಂಗ್ರಹದ ಪ್ರಮಾಣ ಹಾಗೂ ನೀರಾವರಿ ಪ್ರದೇಶದಲ್ಲಿನ ಬೆಳೆಗಳ ಪರಿಸ್ಥಿತಿಯನ್ನೂ ಅಧ್ಯಯನ ನಡೆಸಲಿದೆ. ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಕಾವೇರಿ ಕೊಳ್ಳದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ, ಝಾ ನೇತೃತ್ವದ ತಂಡವು ಅಕ್ಟೋಬರ್ 17 ರಂದು ಸುಪ್ರೀಂಕೋರ್ಟಿಗೆ ತನ್ನ ವಾಸ್ತವಾಂಶದ ವರದಿ ಸಲ್ಲಿಸಲಿದೆ ಎಂದು ಎಂ. ಬಿ. ಪಾಟೀಲ್ ಅವರು ಹೇಳಿದರು.

English summary
High level Technical team to visit Cauvery Basin assessing ground realities Ministry of Water Resources, River Development, and Ganga Rejuvenation has constituted a high-level technical team to visit the Cauvery basin area to assess the ground realities in the basin. GS Jha, Chairman, Central Water Commission
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X