ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಹೈನು ಕೃಷಿಕರ ಕಲ್ಯಾಣಕ್ಕೆ ಶ್ರಮಿಸುವ ಮೂಲಕ ಹೆರಿಟೇಜ್ ಫುಡ್ಸ್ ವಿಶ್ವ ಕ್ಷೀರ ದಿನಾಚರಣೆ

|
Google Oneindia Kannada News

ಬೆಂಗಳೂರು, ಜೂನ್ 1: ಭಾರತದ ಅಗ್ರಗಣ್ಯ ಹೈನುಗಾರಿಕಾ ಸಂಸ್ಥೆಗಳಲ್ಲೊಂದಾದ ಹೆರಿಟೇಜ್ ಫುಡ್ಸ್ ಲಿಮಿಟೆಡ್ ರೈತರ ಸಬಲೀಕರಣ ಮತ್ತು ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕ ವಿಶ್ವ ಕ್ಷೀರ ದಿನವನ್ನು ಆಚರಿಸಿತು. ಕಂಪನಿ ತನ್ನ ಅಸ್ತಿತ್ವ ಇರುವ ಕಡೆಗಳಲ್ಲೆಲ್ಲ ಜಾನುವಾರು ನಿರ್ವಹಣೆ, ಹಾಲಿನ ಇಳುವರಿ, ಮೇವು ನಿರ್ವಹಣೆ ಮತ್ತು ವಿಮಾಸೌಲಭ್ಯವನ್ನು ಒದಗಿಸುವ ಮೂಲಕ ವಿಶ್ವ ಕ್ಷೀರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿತು. ಗ್ರಾಮೀಣ ಭಾರತದಲ್ಲಿ ಹೈನೋದ್ಯಮ ಇಂದಿಗೂ ಪ್ರಮುಖ ಜೀವನಾಧಾರ ಮೂಲವಾಗಿದ್ದು, ದೇಶದ ಕೃಷಿ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ವಿಶ್ವ ಕ್ಷೀರ ದಿನಾಚರಣೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಆರಂಭಿಸಿದ್ದು, ಸುಸ್ಥಿರತೆ, ಆರ್ಥಿಕ ಪ್ರಗತಿ, ಜೀವನಾಧಾರ ಮತ್ತು ಪೌಷ್ಟಿಕಾಂಶ ಕ್ಷೇತ್ರಗಳಿಗೆ ಹೈನೋದ್ಯಮದ ಕೊಡುಗೆಯನ್ನು ಗುರುತಿಸುವ ಉದ್ದೇಶದಿಂದ ಇದನ್ನು ಆಚರಿಸಲಾಗುತ್ತಿದೆ.

ಜೂನ್ 1- ವಿಶ್ವ ಹಾಲು ದಿನ: ಕ್ಷೀರೋದ್ಯಮಿ ಶಿಲ್ಪಾ ಯಶೋಗಾಥೆಜೂನ್ 1- ವಿಶ್ವ ಹಾಲು ದಿನ: ಕ್ಷೀರೋದ್ಯಮಿ ಶಿಲ್ಪಾ ಯಶೋಗಾಥೆ

ಹೆರಿಟೇಜ್ ಫುಡ್ಸ್, ಹೈನುಗಾರಿಕಾ ಕ್ಷೇತ್ರದ ಫಲವತ್ತತೆಯನ್ನು ಹೆಚ್ಚಿಸಲು ಮತ್ತು ಗ್ರಾಮೀಣ ಸಂಪನ್ಮೂಲದ ನೆಲೆಯನ್ನು ವಿಸ್ತರಿಸುವ ಉದ್ದೇಶದಿಂದ ರೈತರ ಜತೆ ಸಹಭಾಗಿತ್ವದ ಇತಿಹಾಸವನ್ನು ಹೊಂದಿದೆ. ಹೈನು ಕೃಷಿಕರ ಜೀವನ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಗಣನೀಯ ಕೊಡುಗೆ ನೀಡುವ ದೃಷ್ಟಿಕೋನದಿಂದ ಪ್ರೇರಿತವಾದ ಹೆರಿಟೇಜ್ ಫುಡ್ಸ್, ಹೆರಿಟೇಜ್ ಫಾರ್ಮರ್ಸ್ ವೆಲ್‍ಫೇರ್ ಟ್ರಸ್ಟ್ ಮೂಲಕ ಇದನ್ನು ವಿನ್ಯಾಸಗೊಳಿಸಿ ಅನುಷ್ಠಾನಕ್ಕೆ ತಂದಿದೆ.

12 ಸಾವಿರಕ್ಕೂ ಅಧಿಕ ಗ್ರಾಮಗಳ ನೆಟ್ವರ್ಕ್

12 ಸಾವಿರಕ್ಕೂ ಅಧಿಕ ಗ್ರಾಮಗಳ ನೆಟ್ವರ್ಕ್

ಹೆರಿಟೇಝ್ ಫುಡ್ಸ್ ಭಾರತದಾದ್ಯಂತ 12 ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಹಾಲು ಖರೀದಿ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಖರೀದಿಯಿಂದ ಹಿಡಿದು ಅಂತಿಮವಾಗಿ ಗ್ರಾಮಕರಿಗೆ ವಿತರಿಸುವರೆಗೂ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತದೆ. ಹೆರಿಟೇಜ್ ಫುಡ್ಸ್ ಪ್ರತಿದಿನ ಸುಮಾರು 3 ಲಕ್ಷ ರೈತರಿಂದ 14 ಲಕ್ಷ ಲೀಟರ್ ಹಾಲನ್ನು ದೇಶಾದ್ಯಂತ ಖರೀದಿಸುತ್ತಿದೆ ಹಾಗೂ ರೈತರು ತಮ್ಮ ಜಾನುವಾರು ನಿರ್ವಹಣೆ ಅಭ್ಯಾಸವನ್ನು ಸುಧಾರಿಸುವ ನಿಟ್ಟಿನಲ್ಲಿ ರೈತರ ಜತೆ ನಿಕಟವಾಗಿ ಸಂಬಂಧ ಇರಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಈ ಮೂಲಕ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಹಾಲಿನ ಉತ್ಪಾದನೆ ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

ರೈತರಿಗೆ ಉಚಿತವಾಗಿ ಪಶು ಆಹಾರ

ರೈತರಿಗೆ ಉಚಿತವಾಗಿ ಪಶು ಆಹಾರ

ಹೆರಿಟೇಜ್ ರೈತರ ಕಲ್ಯಾಣ ಟ್ರಸ್ಟ್ (ಎಚ್‍ಎಫ್‍ಡಬ್ಲ್ಯುಟಿ). 1720 ಟನ್ ಪಶು ಆಹಾರವನ್ನು ಎಲ್ಲ ರಾಜ್ಯಗಳಲ್ಲಿ ರೈತರಿಗೆ ಉಚಿತವಾಗಿ ವಿತರಿಸಿದೆ. ಇದು ಧೀರ್ಘಾವಧಿಯಲ್ಲಿ ಹಕ್ಕುದಾರರ ಮೌಲ್ಯ ಸೃಷ್ಟಿಯ ಉದ್ದೇಶಕ್ಕೆ ಪೂರಕವಾಗಿದ್ದು, ಇದು ರೈತರ ಸಬಲೀರಣದ ಮೂಲಕ ಗ್ರಾಮೀಣ ಸಾಮಾಜಿಕ ಹೂಡಿಕೆಯನ್ನು ಕೂಡಾ ವಿಸ್ತರಿಸಲು ನೆರವಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ಹೆರಿಟೇಜ್ ರೈತರ ಕಲ್ಯಾಣ ಟ್ರಸ್ಟ್ 2590 ಜಾನುವಾರು ಆರೋಗ್ಯ ಶಿಬಿರಗಳನ್ನು ಏರ್ಪಡಿಸಿದ್ದು, 2341 ಹಾಲು ಸಂಗ್ರಹ ಕೇಂದ್ರಗಳಿಗೂ ಇದರ ಪ್ರಯೋಜನ ದೊರಕಿದೆ. ಈ ಶಿಬಿರಗಳಲ್ಲಿ 163714 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ರೈತರಿಗೆ ಜಾನುವಾರು ನಿರ್ವಹಣೆ ಬಗ್ಗೆ ಎಲ್ಲ 2341 ಹಾಲು ಖರೀದಿ ಕೇಂದ್ರಗಳ ವ್ಯಾಪ್ತಿಯಲ್ಲಿ 2486 ವಿಡಿಯೊಗಳನ್ನು ಪ್ರದರ್ಶಿಸಲಾಗಿದೆ. ಒಟ್ಟು 1225 ಕೃತಕ ಗರ್ಭಧಾರಣೆ ಮಾಡಲಾಗಿದೆ. ಗ್ರಾಮೀಣ ಮಹಿಳೆಯರು ಹಣಕಾಸು ನೆರವು ಪಡೆಯಲು ಹೈನುಗಾರಿಕೆಯನ್ನು ಮುಖ್ಯವಾಹಿನಿಯ ಚಟುವಟಿಕೆಯಾಗಿ ಕೈಗೆತ್ತಿಕೊಂಡಿದ್ದಾರೆ.

 ಹೈನುಗಾರಿಕಾ ಕ್ಷೇತ್ರದಲ್ಲಿ ಮಹಿಳೆಯರು

ಹೈನುಗಾರಿಕಾ ಕ್ಷೇತ್ರದಲ್ಲಿ ಮಹಿಳೆಯರು

ಮಹಿಳೆಯರು ಹೆಚ್ಚು ಹೆಚ್ಚು ಹೈನುಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಿ ಮಹಿಳೆಯರ ಸಬಲೀಕರಣಕ್ಕೆ ಕಂಪನಿ ಕ್ರಮಗಳನ್ನು ಕೈಗೊಂಡಿದೆ. ಈ ಮೂಲಕ ಮಾಸಿಕ ಆದಾಯವನ್ನು ಖಾತರಿಪಡಿಸಿ, ಅವರ ಕುಟುಂಬ ನಿರ್ವಹಣೆಗೆ ಬೆಂಬಲ ನೀಡುತ್ತಿದೆ.

ಹೆರಿಟೇಜ್ ಫುಡ್ಸ್ ಲಿಮಿಟೆಡ್‍ನ ಕಾರ್ಯನಿರ್ವಾಹಕ ನಿರ್ದೇಶಕಿ ಬ್ರಹ್ಮಣಿ ಹೇಳುವಂತೆ, "ರೈತರ ಸಬಲೀಕರಣ ಮತ್ತು ಕಲ್ಯಾಣ ಹೆರಿಟೇಜ್ ಫುಡ್ಸ್‍ನ ಪ್ರಮುಖವಾದ ದೃಷ್ಟಿಕೋನ. ಈ ಕಾರಣಕ್ಕಾಗಿಯೇ 28 ವರ್ಷಗಳಷ್ಟು ಹಿಂದೆ ತನ್ನ ಕಾರ್ಯಚಟುವಟಿಕೆ ಕೈಗೊಂಡಿದೆ. ಹೈನುಗಾರಿಕೆ ಕ್ಷೇತ್ರದ ಸಬಲೀಕರಣದ ನಿಟ್ಟಿನಲ್ಲಿ ಪಶು ಆಹಾರ ವಿತರಣೆ, ಉಚಿತ ಜಾನುವಾರು ಚಿಕಿತ್ಸೆ, ಉತ್ತಮವಾಗಿ ಜಾನುವಾರು ನಿರ್ವಹಣಾ ಕ್ರಮಗಳ ಬಗ್ಗೆ ಶಿಕ್ಷಣ ನೀಡುವುದು, ಬ್ಯಾಂಕ್‍ಗಳಿಗೆ ಸಾಲದ ಹರಿವು ಸೌಲಭ್ಯವನ್ನು ಕಲ್ಪಿಸಿಕೊಡುವುದು ಮತ್ತಿತರ ಕ್ರಮಗಳನ್ನು ಕೈಗೊಂಡಿದೆ.

ಕೊರೊನಾಭೀತಿ: ಹೆರಿಟೇಜ್ ಹಾಲಿನ ಬಗ್ಗೆ ಆತಂಕ ಬೇಡ, ಸ್ವಚ್ಛತೆಗೆ ಆದ್ಯತೆಕೊರೊನಾಭೀತಿ: ಹೆರಿಟೇಜ್ ಹಾಲಿನ ಬಗ್ಗೆ ಆತಂಕ ಬೇಡ, ಸ್ವಚ್ಛತೆಗೆ ಆದ್ಯತೆ

ಕೊವಿಡ್ 19 ಸಂದರ್ಭದಲ್ಲಿ ಹೆರಿಟೇಜ್

ಕೊವಿಡ್ 19 ಸಂದರ್ಭದಲ್ಲಿ ಹೆರಿಟೇಜ್

ರೈತರ ಕಲ್ಯಾಣದ ನಿಟ್ಟಿನಲ್ಲಿ "ಆರೋಗ್ಯ ಮತ್ಯು ಆನಂದ" ಧ್ಯೇಯದೊಂದಿಗೆ ನಮ್ಮ ಕಾರ್ಯ ಮುಂದುವರಿಯಲ್ಲಿದ್ದು, ದಿನದಿಂದ ದಿನಕ್ಕೆ ಅವರ ಬದುಕು ಉತ್ತಮವಾಗುವಂತೆ ಮಾಡಲು ಕ್ರಮಗಳನ್ನು ಕೈಗೊಂಡಿದೆ. ಜತೆಗೆ ನಮ್ಮ ಎಲ್ಲ ಗ್ರಾಹಕರಿಗೆ ತಾಜಾ ಹಾಗೂ ಪೌಷ್ಟಿಕ ಹಾಲನ್ನು ಒದಗಿಸುವ ಮೂಲಕ ದೇಶಕ್ಕೆ ಪೌಷ್ಟಿಕತೆ ನೀಡಲು ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.

''ಹೆರಿಟೇಜ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಸುಲಲಿತವಾಗಿ ಪೂರೈಸಲು ಅಗತ್ಯ ಕ್ರಮ ಕೈಗೊಂಡಿದೆ. ಮನೆಗಳಿಗೇ ನೇರವಾಗಿ ವಿತರಿಸುವ ಹಾಗೂ ಇ-ಕಾಮರ್ಸ್ ವಾಹಿನಿ ಮೂಲಕ ಕ್ರಮಗಳನ್ನು ಕೈಗೊಂಡಿದೆ. ನಮ್ಮ ಗ್ರಾಹಕರು ಹೆಚ್ಚುವರಿ ಮುಂಜಾಗ್ರತಾ ಕ್ರಮವಾಗಿ ಹಾಲು/ ಮೊಸರು ಪ್ಯಾಕೆಟ್‍ಗಳನ್ನು ಬಳಸುವ ಮುನ್ನ ನೀರಿನಿಂದ ತೊಳೆದು, ಒರೆಸಿದ ಬಳಿಕ ಪ್ಯಾಕೆಟ್ ತೆರೆಯಬೇಕು'' ಎಂದು ಹೆರಿಟೇಜ್ ಫುಡ್ಸ್ ಲಿಮಿಡೆಟ್‍ನ ಕಾರ್ಯನಿರ್ವಾಹಕ ನಿರ್ದೇಶಕಿ ಬ್ರಹ್ಮಿಣಿ ನಾರಾ ಸಲಹೆ ನೀಡಿದ್ದಾರೆ.

ಸಿಎಂ ಪರಿಹಾರ ನಿಧಿಗೆ ಒಂದು ಕೋಟಿ ನೀಡಿದ ಹೆರಿಟೇಜ್ ಫುಡ್ಸ್ಸಿಎಂ ಪರಿಹಾರ ನಿಧಿಗೆ ಒಂದು ಕೋಟಿ ನೀಡಿದ ಹೆರಿಟೇಜ್ ಫುಡ್ಸ್

English summary
Heritage Foods Limited, leading dairy player in the country, celebrates World Milk Day by striving for farmers’ empowerment & welfare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X