ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಲಿಬಾರ್ ವರದಿ: ಸರ್ಕಾರ ಪತನಕ್ಕೆ ನಾಂದಿ

By Mahesh
|
Google Oneindia Kannada News

HD Devegowda
ಬೆಂಗಳೂರು, ಜೂ.18: ಹಾವೇರಿಯಲ್ಲಿ ನಡೆದ ರೈತರ ಮೇಲಿನ ಗೋಲಿಬಾರ್ ಕುರಿತಂತೆ ನ್ಯಾ. ಜಗನ್ನಾಥ್ ಅವರು ನೀಡಿರುವ ವರದಿಯ ಅಂಗೀಕಾರ ಸರ್ಕಾರದ ಪತನಕ್ಕೆ ನಾಂದಿಯಾಗಲಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಗುಡುಗಿದ್ದಾರೆ.

ಜೆಡಿಎಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಾಸ್ತವಾಂಶವನ್ನು ಮರೆ ಮಾಡಿ, ಗೋಲಿಬಾರ್ ನಡೆದಾಗ ರೈತರು ಇರಲಿಲ್ಲ. ಸತ್ತವರು ರಾಜಕೀಯ ಪಕ್ಷದ ಕಾರ್ಯಕರ್ತರು ಎನ್ನುತ್ತಿರುವ ಜಗನ್ನಾಥ ಶೆಟ್ಟಿ ಆಯೋಗದ ವರದಿ ಅನೇಕ ಸಂಶಯಗಳನ್ನು ಹುಟ್ಟು ಹಾಕುತ್ತದೆ ಎಂದಿದ್ದಾರೆ.

ಗಲಭೆ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ ಎನ್ನಲಾಗಿದೆ. ಹಾವೇರಿಗೆ ಬೆಂಗಳೂರಿನಿಂದ ಗೂಂಡಾಗಳನ್ನು ಕಳುಹಿಸಲಾಗಿತ್ತು. ಪೊಲೀಸರು ಮತ್ತು ವಾಹನದ ಮೇಲೆ ಕಲ್ಲು ತೂರಾಟ ನಡೆಸುತ್ತಿರುವಾಗ ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು ಎಂದು ವರದಿಯಲ್ಲಿ ತಿಳಿಸಿದ್ದಾರೆ.

ರಸಗೊಬ್ಬರ ಗಲಭೆಯಲ್ಲಿ ಮೃತರಾದ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಅವರ ಮನೆಗೆ ಸ್ವತಃ ಸಿಎಂ ಅವರೇ ಹೋಗಿ ಪರಿಹಾರ ನೀಡಿ ಬಂದಿದ್ದಾರೆ. ಮಾಧ್ಯಮಗಳಲ್ಲಿ ಗೋಲಿಬಾರ್ ದೃಶ್ಯಗಳು ಸಿಗುತ್ತವೆ. ನ್ಯಾಯಮೂರ್ತಿ ಮತ್ತೊಮ್ಮೆ ಕಣ್ಣರಳಿಸಿ ಅದನ್ನು ನೋಡಲಿ ಎಂದು ನುಡಿದರು.

ಸತ್ತವರು ರೈತರಲ್ಲ ಎಂದು ಯಾವ ಆಧಾರ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ವರದಿ ಅಂಗೀಕಾರಕ್ಕೆ ಮುನ್ನ ಸದನದಲ್ಲಿ ಚರ್ಚೆ ಆಗಬೇಕು. ಪಕ್ಷಭೇದ ಮರೆತು ಎಲ್ಲರೂ ವರದಿ ವಿರುದ್ಧ ದನಿ ಎತ್ತಬೇಕು ಎಂದು ದೇವೇಗೌಡ ಕರೆ ಕೊಟ್ಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X