ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಲಗ್ನಪತ್ರಿಕೆ"ಗಳಲ್ಲಿ ರೈತ ಪರ ಘೋಷಣೆ; ರೈತರ ಪ್ರತಿಭಟನೆಗೆ ಸಾಥ್

|
Google Oneindia Kannada News

ಚಂಡೀಗಢ, ಫೆಬ್ರುವರಿ 05: ದೆಹಲಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಹರಿಯಾಣದ ಕೆಲವು ರೈತರು ಭಿನ್ನ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸಲು ಮುಂದಾಗಿದ್ದಾರೆ.

ದೆಹಲಿ ಗಡಿಗಳಲ್ಲಿ ಕುಳಿತು ತಮ್ಮ ಪರ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡಲು ಲಗ್ನ ಪತ್ರಿಕೆಗಳಲ್ಲಿ ರೈತ ಪರ ಘೋಷಣೆಗಳನ್ನು ಮುದ್ರಿಸುತ್ತಿದ್ದಾರೆ. "ನೋ ಫಾರ್ಮರ್, ನೋ ಫುಡ್" (ರೈತರಿಲ್ಲವೆಂದರೆ ಆಹಾರವೂ ಇಲ್ಲ) ಎಂಬಂಥ ರೈತಪರ ಘೋಷಣೆಗಳನ್ನು ಹಾಗೂ ರೈತ ಸಂಘಟನೆ ಮುಖಂಡ ಸರ್ ಚೊಟ್ಟು ರಾಂ ಫೋಟೊವನ್ನು ಲಗ್ನ ಪತ್ರಿಕೆಯಲ್ಲಿ ಮುದ್ರಿಸಿ ಹೊಸ ರೀತಿಯಲ್ಲಿ ಬೆಂಬಲ ನೀಡುತ್ತಿದ್ದಾರೆ. ಮುಂದೆ ಓದಿ...

 ಹರಿಯಾಣದಲ್ಲೀಗ ಮದುವೆ ಸೀಸನ್

ಹರಿಯಾಣದಲ್ಲೀಗ ಮದುವೆ ಸೀಸನ್

ಹರಿಯಾಣದ ಹಲವು ಕಡೆಗಳಲ್ಲಿ ಇದೀಗ ಮದುವೆ ಸಮಾರಂಭಗಳು ಹೆಚ್ಚು ನಡೆಯುತ್ತಿವೆ. ಇದೇ ಅವಕಾಶವನ್ನು ರೈತರಿಗೆ ಬೆಂಬಲ ವ್ಯಕ್ತಪಡಿಸಲೂ ಕೆಲವು ರೈತರು ಬಳಸಿಕೊಳ್ಳುತ್ತಿದ್ದಾರೆ. ರೈತ ಮುಖಂಡರ ಚಿತ್ರಗಳನ್ನು, ಹಾಗೆಯೇ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಲಗ್ನ ಪತ್ರಿಕೆಯಲ್ಲಿ ಮುದ್ರಿಸಿ ಈ ಮೂಲಕ ಚಳವಳಿಯನ್ನು ಪ್ರಚುರಪಡಿಸುತ್ತಿರುವುದು ಕಂಡುಬಂದಿದೆ.

ಇದು ಘಾಜಿಪುರವೇ? ಭಾರತ-ಪಾಕ್ ಗಡಿಯೇ? ವಿಪಕ್ಷಗಳಿಂದ ತೀವ್ರ ಖಂಡನೆಇದು ಘಾಜಿಪುರವೇ? ಭಾರತ-ಪಾಕ್ ಗಡಿಯೇ? ವಿಪಕ್ಷಗಳಿಂದ ತೀವ್ರ ಖಂಡನೆ

"ಲಗ್ನ ಪತ್ರಿಕೆ ಮೂಲಕ ಪ್ರತಿಭಟನೆ ಬಗ್ಗೆ ತಿಳಿವಳಿಕೆ"

ತಮ್ಮ ಮನೆಯ ಮದುವೆ ಕಾರ್ಯದ ಲಗ್ನ ಪತ್ರಿಕೆಗಳಲ್ಲಿ ರೈತ ಪರ ಘೋಷಣೆಗಳನ್ನು ಹಾಗೂ ರೈತರ ಚಿತ್ರಗಳನ್ನು ಮುದ್ರಿಸಿಕೊಡುವಂತೆ ಕೋರಿಕೊಳ್ಳುತ್ತಿದ್ದಾರೆ. ಹಲವು ರೈತರು ಈಗಾಗಲೇ ಇಂಥ ಲಗ್ನಪತ್ರಿಕೆಗಳನ್ನು ಮುದ್ರಿಸಿ ಹಂಚಿದ್ದಾರೆ. ಇದು ಪ್ರತಿಭಟನೆ ಬಗ್ಗೆ ಎಲ್ಲರಿಗೂ ತಿಳಿಸುವ ಮಾರ್ಗವೂ ಆಗುತ್ತಿದೆ ಎಂದು ಪ್ರಿಂಟಿಂಗ್ ಪ್ರೆಸ್ ಮಾಲೀಕರೊಬ್ಬರು ತಿಳಿಸಿದ್ದಾರೆ.

 ರೈತ ನಾಯಕ ಚೊಟ್ಟು ರಾಂ ಅವರ ಚಿತ್ರ

ರೈತ ನಾಯಕ ಚೊಟ್ಟು ರಾಂ ಅವರ ಚಿತ್ರ

ನವೆಂಬರ್ 24, 1881ರಂದು ಚೊಟ್ಟು ರಾಂ ಅವರು ಜನಿಸಿದ್ದು, ರೈತರ ಪಾಲಿನ ದೇವರೆಂದೇ ಅವರು ಬಿಂಬಿತರಾಗಿದ್ದರು. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ರೈತರ ಸಬಲೀಕರಣಕ್ಕೆ ಹೋರಾಟ ಮಾಡಿದ್ದರು. ಬ್ರಿಟಿಷ್ ಆಡಳಿತದಲ್ಲಿ ರೈತರ ಹಕ್ಕುಗಳಿಗಾಗಿ ಹೋರಾಟ ನಡೆಸಿ ಮನೆ ಮಾತಾಗಿದ್ದರು. ಇದೀಗ ಅವರ ಭಾವಚಿತ್ರವನ್ನು ಇಲ್ಲಿನ ರೈತರು ಲಗ್ನಿಪತ್ರಿಕೆಗಳಲ್ಲಿ ಮುದ್ರಿಸುವ ಮೂಲಕ ರೈತ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಛಕ್ಕಾ ಜಾಮ್: ನಡುರಸ್ತೆಯಲ್ಲಿ ಸಿಲುಕಿದ ಜನರಿಗೆ ರೈತರಿಂದ ಆಹಾರ, ನೀರಿನ ವ್ಯವಸ್ಥೆಛಕ್ಕಾ ಜಾಮ್: ನಡುರಸ್ತೆಯಲ್ಲಿ ಸಿಲುಕಿದ ಜನರಿಗೆ ರೈತರಿಂದ ಆಹಾರ, ನೀರಿನ ವ್ಯವಸ್ಥೆ

"ರೈತರ ಪರ ನಾವು ನಿಂತಿದ್ದೇವೆ"

v ಸಾವಿರಾರು ರೈತರು ಈ ಕಾಯ್ದೆಗಳ ವಿರುದ್ಧ ಗಡಿಗಳಲ್ಲಿ ಹೋರಾಡುತ್ತಿದ್ದಾರೆ. ಅವರ ಪರವಾಗಿ ನಾವು ನಿಂತಿದ್ದೇವೆ. ನನ್ನ ಮಗನ ಮದುವೆ ಇದ್ದ ಕಾರಣ ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಮಗನ ಮದುವೆ ಕಾರ್ಡ್ ನಲ್ಲಿಯೇ ರೈತನಾಯಕನ ಫೋಟೊ ಹಾಕಿ, ಘೋಷಣೆ ಬರೆದು ರೈತರ ಹೋರಾಟವನ್ನು ಪ್ರಚುರ ಪಡಿಸುತ್ತಿದ್ದೇನ ಎಂದು ಹರಿಯಾಣದ ಪ್ರೇಮ್ ಸಿಂಗ್ ಗೋಯತ್ ಎಂಬ ರೈತರೊಬ್ಬರು ಹೇಳಿದರು.

ಕೇಂದ್ರ ಸರ್ಕಾರದ ಮೂರು ಕೃಷಿ ಸಂಬಂಧಿತ ಕಾನೂನುಗಳನ್ನು ರದ್ದು ಮಾಡಬೇಕು, ವಿದ್ಯುತ್ ಮಸೂದೆ-2020 ವಾಪಸು ಪಡೆಯಬೇಕು ಹಾಗು ಎಲ್ಲಾ ಕೃಷಿ ಉತ್ಪನ್ನಗಳಿಗೆ ಡಾ.ಎಂ.ಎಸ್. ಸ್ವಾಮಿನಾಥನ್ ವರದಿ ಅನ್ವಯ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ ಕಾನೂನನ್ನು ರಚಿಸಬೇಕೆಂದು ಆಗ್ರಹಿಸಲಾಗಿದೆ. ನವೆಂಬರ್ 26ರಿಂದಲೂ ಪ್ರತಿಭಟನೆಯನ್ನು ಮುಂದುವರೆಸಲಾಗಿದೆ.

English summary
Farmers in Haryana have found a new way to support the ongoing agitation of farmers by getting slogans like "no farmers, no food" and photos of peasant leader Sir Chhotu Ram printed on wedding invitation card
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X