ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ APMC ಬಂದ್; ಎಚ್ಚೆತ್ತುಕೊಳ್ಳಬೇಕಾದ ಸಮಯ

|
Google Oneindia Kannada News

ಕೊರೊನಾ ಸಾಂಕ್ರಾಮಿಕದ ಎರಡನೆಯ ಅಲೆ ವೇಗವಾಗಿ ಹಬ್ಬುತ್ತಿದೆ. ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಆಗಾಗ ಕೈ ಶುಚಿಗೊಳಿಸಿಕೊಳ್ಳುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಹೀಗೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರ್ಕಾರ ಸೂಚಿಸಿರುವ ವಯೋಮಾನದವರು ಲಸಿಕೆ ಹಾಕಿಸಿಕೊಳ್ಳಬೇಕು. ಇಲ್ಲವಾದಲ್ಲಿ ಲಾಕ್ ಡೌನ್, ಸೀಲ್ ಡೌನ್ ನಂಥ ಕಠಿಣ ನಿಯಮಗಳನ್ನು ಸರ್ಕಾರ ತರಲೇಬೇಕಾದ ಪರಿಸ್ಥಿತಿ ಎದುರಾದೀತು.

ಗುಜರಾತ್ ನ ಪರಿಸ್ಥಿತಿ ನೋಡಿ...
ಈ ಸಾಂಕ್ರಾಮಿಕದ ಕಾರಣ ಗುಜರಾತ್ ನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳು ತಮ್ಮ ಚಟುವಟಿಕೆಗಳನ್ನು ಬಂದ್ ಮಾಡಿವೆ. ರೈತರು ಬೆಳೆದ ಬೆಳೆಯ ಮೇಲೆ ಕುಳಿತು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಬೆಳ್ಳಂಬೆಳಗ್ಗೆ ಕೃಷಿ ಮಾರುಕಟ್ಟೆಗಳಿಗೆ ಸಚಿವರುಗಳ ಭೇಟಿ, ರೈತರೊಂದಿಗೆ ಚರ್ಚೆಬೆಳ್ಳಂಬೆಳಗ್ಗೆ ಕೃಷಿ ಮಾರುಕಟ್ಟೆಗಳಿಗೆ ಸಚಿವರುಗಳ ಭೇಟಿ, ರೈತರೊಂದಿಗೆ ಚರ್ಚೆ

ಜೀರಿಗೆ, ಬೇಳೆಕಾಳುಗಳು, ಹರಳು, ಗೋಧಿ, ಆಲೂಗಡ್ಡೆ, ಈರುಳ್ಳಿ, ಹತ್ತಿ ಮಾರಾಟದ ಬಹುದೊಡ್ಡ ಮಾರುಕಟ್ಟೆ ರಾಜ್ ಕೋಟ್ ಎ.ಪಿ.ಎಂ.ಸಿ ಮುಂದಿನ ಆದೇಶದವರೆಗೆ ತನ್ನೆಲ್ಲಾ ಚಟುವಟಿಕೆಯನ್ನು ಬಂದ್ ಮಾಡಿದೆ.

 Gujarat APMC Closed Due To Coronavirus Surge

ರಾಜಕೋಟ್ ಜಿಲ್ಲೆಯ ಕಮ್ಟಾ ಗ್ರಾಮದ ರೈತ ತಾರ್ಷಿ ಬಾಯಿ ವೆಕಾರಿಯಾ ಬ್ಯುಸಿನೆಸ್ ಲೈನ್ ಪತ್ರಿಕೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೀಗೆ ಹೇಳಿಕೊಂಡಿದ್ದಾರೆ. " ಸರ್ಕಾರ ನಮ್ಮ ಗೋಧಿ ಬೆಳೆಯನ್ನು ಕೊಳ್ಳುತ್ತದೆಂದು ಕಾಯುತ್ತಿದ್ದೇವೆ. ನನ್ನ ಬಳಿ ಸುಮಾರು 50 ಕ್ವಿಂಟಾಲ್ ಗೋಧಿ ಇದೆ. ನನಗೆ ಹಣ ಬೇಕು. ಮಾರುಕಟ್ಟೆ ಬಂದ್ ಆಗಿದೆ. ಎಷ್ಟು ಕಾಲವೆಂಬುದೂ ಗೊತ್ತಿಲ್ಲ. ಈಗೇನು ಮಾಡಬೇಕೆಂದು ತೋಚುತ್ತಿಲ್ಲ".

ಏತನ್ಮಧ್ಯೆ ಈ ರೈತನಿಗೆ ಕೊರೊನಾ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಮನೆಯಲ್ಲೇ ಇದ್ದಾರೆ. ಗುಜರಾತ್ ನಲ್ಲಿ ರಾಜ್ ಕೋಟ್ ಎ.ಪಿ.ಎಂ.ಸಿ ಯ ಮಾದರಿಯಲ್ಲಿ ಇತರೆ ಎ.ಪಿ.ಎಂ.ಸಿಗಳೂ ಬಂದ್ ಮಾಡುತ್ತಿವೆ. ಗುಜರಾತ್ ನ ಪರಿಸ್ಥಿತಿ ಬೇರೆ ರಾಜ್ಯಗಳ ಜನರು ಊಹಿಸಿಕೊಂಡು ಮುನ್ನೆಚ್ಚರಿಕೆ ಕ್ರಮವಹಿಸುವುದು ಒಳ್ಳೆಯದು.

English summary
Due to surge in coronavirus cases, gujarat has closed APMC Market. It is time to take necessary precautions to avoid corona
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X