ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು: ಸೂರ್ಯಕಾಂತಿ ಬೆಳೆಗೆ ಹಸಿರು ರೋಗ: ರೈತರಲ್ಲಿ ಆತಂಕ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು,ಜು5: ಮಳೆ ಕೊರತೆ ಹಾಗೂ ಹಸಿರು ರೋಗದ ಬಾಧೆಯಿಂದ ಸೂರ್ಯಕಾಂತಿ ಬೆಳೆ ಸಂಪೂರ್ಣ ಕಮರಿದ ಪರಿಣಾಮ ಜಿಲ್ಲೆಯಾದದ್ಯಾಂತ ಅನ್ನದಾತರು ಆತಂಕಗೊಂಡಿದ್ದಾರೆ. ಈ ಸಲ ಸೂರ್ಯಕಾಂತಿ ಬೆಳೆ ಕಡೆಗೆ ರೈತರು ಹೆಚ್ಚು ಒಲವು ತೋರಿದ್ದು ಸಾಲ ಮಾಡಿಕೊಂಡು ಬಿತ್ತಿದ್ದಾರೆ. ಆದರೆ ಬೆಳೆ ಅರಳದ ಕಾರಣ ರೈತರು ಕಷ್ಟಪಡುವಂತಾಗಿದೆ.

ಜಿಲ್ಲೆಯಲ್ಲಿ ಮಳೆಯಾಧರಿತ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯನ್ನು 8101 ಹೆಕ್ಟೇರ್ ಗುರಿಯಲ್ಲಿ 15279 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಒಟ್ಟು ಶೇಕಡಾ 188.61ರಷ್ಟು ಸಾಧನೆಯಾಗಿದೆ. ನೀರಾವರಿಯಲ್ಲಿ 1207ಹೆಕ್ಟೇರ್ ಪ್ರತಿಯಾಗಿ 2927ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿದ್ದು ಅಂದರೆ ಶೇಕಡಾ 242.50 ರಷ್ಟು ಬಿತ್ತನೆಯಾಗಿದೆ. ಕಳೆದ ಮೇ ತಿಂಗಳಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ಮಳೆಯಾಶ್ರಿತ ಪ್ರದೇಶದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಕಾಳು ಬಿತ್ತನೆಯತ್ತ ರೈತರು ಆಸಕ್ತಿ ವಹಿಸಿದ್ದರು. ಆದರೆ ಈಗ ಮಳೆ ಸುರಿಯಾದ ಕಾರಣ ರೈತಾಪಿ ವರ್ಗಾದಲ್ಲಿ ಆತಂಕ ತಂದಿದೆ. ಮೇ 2ನೇ ವಾರದ ಕೊನೆ ಭಾಗದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಮಳೆಯಾಶ್ರಿತ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಕಾಳು ಬಿತ್ತನೆಯತ್ತ ರೈತರು ಗಮನಹರಿಸಿದ್ದಾರೆ.

ರಾಯಚೂರು ರಾಜಕಾರಣ: ವಾಟ್ಸಪ್ ಸ್ಟೇಟಸ್‌ಗಳಲ್ಲಿ ಸದ್ದು ಮಾಡುತ್ತಿದೆ ಈ ಪೋಸ್ಟ್ರಾಯಚೂರು ರಾಜಕಾರಣ: ವಾಟ್ಸಪ್ ಸ್ಟೇಟಸ್‌ಗಳಲ್ಲಿ ಸದ್ದು ಮಾಡುತ್ತಿದೆ ಈ ಪೋಸ್ಟ್

ರೋಗ ಹಾಗೂ ಮಳೆ ಕೊರತೆಯಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕಳೆದ ಆರು ವರ್ಷದ ನಂತರ ಸೂರ್ಯಕಾಂತಿ ಬೆಳೆಯನ್ನು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ನೀರಾವರಿ ಪ್ರದೇಶ ಹಾಗೂ ಖುಷ್ಕಿ ಭೂಮಿ ಸೇರಿ ಎರಡರಲ್ಲೂ ರೈತರು ಸೂರ್ಯಕಾಂತಿಗೆ ಒಲವು ತೋರಿದ್ದಾರೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ನೀರಾವರಿ ಹಾಗೂ ಖುಷ್ಕಿಯಲ್ಲಿ ಒಟ್ಟು ಪ್ರಸಕ್ತ ಮುಂಗಾರು ಹಂಗಾಮಿಗೆ ನೀರಾವರಿ ಹಾಗೂ ಖುಷ್ಕಿಯಲ್ಲಿ ಒಟ್ಟು 7852 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಪ್ರದೇಶ ಎಂದು ಕೃಷಿ ಇಲಾಖೆ ಗುರಿ ನಿಗದಿಪಡಿಸಿತ್ತು. ಈಗಾಗಲೇ 17.753 ಹೆಕ್ಟೇರ್ ಪ್ರದೇಶದಲ್ಲಿ ರೈತರು ಸೂರ್ಯಕಾಂತಿ ಬಿತ್ತನೆ ಕೈಗೊಂಡಿದ್ದಾರೆ.

ಸೂರ್ಯಕಾಂತಿ ಬೆಳೆಗೆ ಹಸಿರು ರೋಗದ ಕಾಟ

ಸೂರ್ಯಕಾಂತಿ ಬೆಳೆಗೆ ಹಸಿರು ರೋಗದ ಕಾಟ

ಎಳ್ಳು 630 ಹೆಕ್ಟೇರ್ ಗುರಿಗೆ 448 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಎಣ್ಣೆಕಾಳಿನತ್ತ ರೈತರು ಆಕರ್ಷಿತರಾಗಿದ್ದು ನೀರಾವರಿ ಮತ್ತು ಖುಷ್ಕಿ ಸೇರಿ ಬಿತ್ತನೆ ಗುರಿ ಪ್ರಸಕ್ತ ಮುಂಗಾರು ಹಂಗಾಮಿಗೆ 9308 ಹೆಕ್ಟೇರ್ ಆಗಿದ್ದು ಮುಂಗಾರು ಮಳೆಯಾಗುವ ಮೊದಲೇ ರೈತರು 18206 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು ಶೇಕಡಾ 195.60 ರಷ್ಟು ಗುರಿ ಮೀರಿದ ಸಾಧನೆ ದಾಖಲಿಸಲಾಗಿದೆ. ಮಳೆ ಕೊರತೆ ಒಂದು ಕಡೆಯಾದರೆ ಸೂರ್ಯಕಾಂತಿ ಬೆಳೆಗೆ ಹಸಿರು ರೋಗದ ಕಾಟ ಶುರುವಾಗಿದ್ದರಿಂದ ರೈತರನ್ನು ಮತ್ತಷ್ಟು ಚಿಂತೆಗೆ ದೂಡಿದೆ.

ರಾಯಚೂರು; ಕಲುಷಿತ ನೀರು ಸೇವನೆ ಮಹಿಳೆ ಸಾವು, 40 ಜನರು ಅಸ್ವಸ್ಥರಾಯಚೂರು; ಕಲುಷಿತ ನೀರು ಸೇವನೆ ಮಹಿಳೆ ಸಾವು, 40 ಜನರು ಅಸ್ವಸ್ಥ

ಮುಂಗಾರು ಕೈ ಕೊಟ್ಟಿರುವುದರಿಂದ ಬೆಳೆಗೆ ಹಸಿರು ರೋಗ

ಮುಂಗಾರು ಕೈ ಕೊಟ್ಟಿರುವುದರಿಂದ ಬೆಳೆಗೆ ಹಸಿರು ರೋಗ

ಸುರಿದ ಅಕಾಲಿಕ ಮಳೆಯಿಂದ ರೈತರು ಖುಷಿಯಿಂದಲೇ ಸೂರ್ಯಕಾಂತಿ ಬೆಳೆ ಸೇರಿದಂತೆ ಇನ್ನಿತರ ಎಣ್ಣೆ ಕಾಳು ಬೆಳೆ ಬಿತ್ತನೆ ಮಾಡಿದರು. ಆದರೆ ಸರಿಯಾದ ಸಮಯಕ್ಕೆ ಮಳೆ ಬಾರದ ಪರಿಣಾಮ ಬೆಳೆಗೆ ಹಸಿರು ರೋಗ ಕಾಣಿಸಿಕೊಂಡಿದ್ದು ಹೀಗಾಗಿ ರೈತರಿಗೆ ದಾರಿ ಕಾಣದಂತಾಗಿದೆ.

ಕಡಿಮೆ ಅವಧಿಯಲ್ಲಿ ಬೆಳೆಯಬಹುದು ಎಂಬ ಆಸೆಯಿಂದ ರೈತರು ಸೂರ್ಯಕಾಂತಿ ಬಿತ್ತಿದ್ದಾರೆ. ಅದರೆ ಸಮರ್ಪಕ ಮಳೆ ಹಾಗೂ ಹಸಿರು ರೋಗದ ಕಾಟದಿಂದ ರೈತರು ಆತಂಕಗೊಂಡಿದ್ದಾರೆ ಎಂದು ರೈತ ಮುಖಂಡ ಜಿಂದಪ್ಪ ಹೇಳಿದರು. ಮೇ ತಿಂಗಳಿನಲ್ಲಿ ಮಳೆಯಿಂದ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಆದರೆ ಈಗ ಮುಂಗಾರು ಕೈ ಕೊಟ್ಟಿರುವುದರಿಂದ ಬೆಳೆಗೆ ಹಸಿರು ರೋಗ ಬಂದು ಚಿಕ್ಕತೆನೆ ಬಿಡುತ್ತಿದೆ. ಹೀಗಾಗಿ ಈ ಸಲ ಸಂಪೂರ್ಣ ನಷ್ಟ ಅನುಭವಿಸುವಂತಾಗಿದೆ ಎಂದು ರೈತ ರಂಗಪ್ಪ ಹೇಳಿದರು.

3,400 ಹೆಕ್ಟೇರ್‌ಗೂ ಅಧಿಕ ಸೂರ್ಯಕಾಂತಿ

3,400 ಹೆಕ್ಟೇರ್‌ಗೂ ಅಧಿಕ ಸೂರ್ಯಕಾಂತಿ

ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ರೈತರು ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ ಬೆಳೆಯನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆದಿದ್ದಾರೆ. ಇದನ್ನು ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ ಸುಮಾರು ನಾಲ್ಕು ಪಟ್ಟು ಅಧಿಕ ಎನ್ನಬಹುದು. ಮಾನ್ಸೂನ್ ಬೆಳೆಗಳ (ಖಾರೀಫ್) ಪೈಕಿ ಸೂರ್ಯಕಾಂತಿ ಬೆಳೆಯನ್ನು ಈ ಬಾರಿ ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವ್ಯಾಪ್ತಿಯ ರೈತರು ಹೇರಳವಾಗಿ ಬೆಳೆದಿದ್ದಾರೆ. ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ 2021ರಲ್ಲಿ 3,400 ಹೆಕ್ಟೇರ್‌ಗೂ ಅಧಿಕ ಸೂರ್ಯಕಾಂತಿ ಬೆಳೆಯಲಾಗಿತ್ತು.

ಸೂರ್ಯಕಾಂತಿ ಬೆಳೆಯುವಂತೆ ಉತ್ತೇಜನ ಅದೇ ರೀತಿ ಬೀದರ್ ನಲ್ಲಿ ಕಳೆದ ವರ್ಷ 1.80ಲಕ್ಷ ಹೆಕ್ಟೇರ್ ನಷ್ಟಿದ್ದ ಸೋಯಾ ಬೆಳೆ ಈ ಬಾರಿ 2.6ಲಕ್ಷ ಹೆಕ್ಟೇರ್ ಗೆ ಏರಿಕೆ ಆಗಿದೆ. ಇಲ್ಲಿಯೂ ಸಹ ರೈತರಿಗೆ ಸೂರ್ಯಕಾಂತಿ ಬೆಳೆಯುವಂತೆ ಪ್ರೋತ್ಸಾಹಿಸಲಾಗಿದೆ. ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಳೆಗಳಿಗೆ ಬೇಡಿಕೆ ಸೃಷ್ಟಿಯಾಗಿರುವುದರಿಂದ ರೈತರು ಆ ಬೆಳೆಗಳತ್ತ ಹೆಚ್ಚು ವಾಲುತ್ತಿರುವುದು ಕಂಡು ಬಂದಿದೆ.

ರಾಜ್ಯ ಸರ್ಕಾರದ ಪ್ರೋತ್ಸಾಹ

ರಾಜ್ಯ ಸರ್ಕಾರದ ಪ್ರೋತ್ಸಾಹ

ರಾಜ್ಯ ಸರ್ಕಾರದ ಪ್ರೋತ್ಸಾಹ ಮೂರು ವರ್ಷಗಳ ನಂತರ ಕೃಷಿ ಇಲಾಖೆ ಸೂರ್ಯ ಕಾಂತಿ ಬೀಜಗಳನ್ನು ರೈತರಿಗೆ ಪೂರೈಸುತ್ತಿದೆ. ಬೇಡಿಕೆ ಹೆಚ್ಚಾಗಿದ್ದರಿಂದ ಹಾಗೂ ಲಾಭದಾಯಕ ಬೆಲೆ ದೊರೆಯುವ ಹಿನ್ನೆಲೆ ರಾಜ್ಯ ಸರ್ಕಾರ ಸೂರ್ಯಕಾಂತಿ ಹೆಚ್ಚು ಬೆಳೆಯುವಂತೆ ರೈತರನ್ನು ಉತ್ತೇಜಿಸಲು ಸೂಚಿಸಿತ್ತು. ಅದರಂತೆ ಈ ಬಾರಿ ಸೂರ್ಯಕಾಂತಿ ಕೃಷಿಯಲ್ಲಿ ಏರಿಕೆ ಕಂಡು ಬಂದಿದೆ. ಈ ವರ್ಷ ಸೂರ್ಯಕಾಂತಿ ಮುಂದಿನ ವರ್ಷ ಮುಂಗಾರು ಸಮಯದಲ್ಲಿ ರೈತರು ಮತ್ತೊಂದು ಎಣ್ಣೆ ಕಾಳು ಬಳೆಯಾದ ನೆಲಗಡಲೆ ಯನ್ನು ಆಯ್ಕೆ ಮಾಡಿಕೊಂಡು ಅದನ್ನೇ ಹೆಚ್ಚಾಗಿ ಬೆಳೆಯಬಹುದು ಎಂದು ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
: Due to the lack of rain and green disease, sunflower crop has completely failed and farmers across raichur district are in despair. this time the farmers are more interested in sunflower crop and have taken loan and sown it. but the farmers are in trouble because the crops are not blooming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X