ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಿನ ಕೊರತೆ ನಡುವೆಯೇ ದ್ರಾಕ್ಷಿ ಬೆಳೆದ ಕೋಲಾರ ರೈತನಿಗೆ ಕೊರೊನಾ ಪೆಟ್ಟು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 26: ಕೋಲಾರ ಜಿಲ್ಲೆಯಲ್ಲಿ ಮೊದಲೇ ನೀರಿನ ಬವಣೆಯಿಂದ ಕಂಗಾಲಾಗಿದ್ದ ರೈತರಿಗೆ ಈಗ ಕೊರೊನಾ ಕೂಡ ಏಟು ನೀಡಿದೆ. ಕೋಲಾರದಲ್ಲಿ ಅಂತರ್ಜಲ‌ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಅಲ್ಪಸ್ವಲ್ಪ ಬರುವ ನೀರಿನಲ್ಲಿ ದ್ರಾಕ್ಷಿ ಬೆಳೆದಿರುವ ರೈತನ ಆದಾಯದ ಕನಸಿಗೆ ಕೊರೊನಾ ತಣ್ಣೀರೆರಚಿದೆ.

Recommended Video

ಗುದ್ದಲಿ ಹಿಡಿದು ಉದ್ಯೋಗ ಖಾತ್ರಿ ಕೂಲಿ ಕೆಲಸ ಮಾಡಿದ ಶಾಸಕ ರೇಣುಕಾಚಾರ್ಯ..! | Renukacharya

ಕೋಲಾರ ಜಿಲ್ಲೆಯ ಕೆಜಿಎಫ್ ಸಮೀಪದ ಕೊತ್ತೂರು ಗ್ರಾಮದಲ್ಲಿನ ರೈತ ಮುನಿವೆಂಕಟಪ್ಪ ಎಂಬುವವರು ತಮ್ಮ ಮೂರು ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆ ಬೆಳೆದಿದ್ದಾರೆ. ಸಾಲಸೋಲ ಮಾಡಿ ಇಡೀ ಕುಟುಂಬ ಹಗಳಿರುಳೆನ್ನದೆ ದುಡಿದರ ಪರಿಣಾಮ ಉತ್ತಮ ಫಸಲು ಬಂದಿದೆ. ಆದರೆ ದ್ರಾಕ್ಷಿ ಬೆಳೆ ಕಟಾವಿಗೆ ಬಂದಿದರೂ ಕೊರೊನಾದಿಂದಾಗಿ ಸೂಕ್ತ ಮಾರುಕಟ್ಟೆ ಇಲ್ಲದೆ ತೋಟದಲ್ಲೇ ಕೊಳೆಯುವಂತಾಗಿದೆ. ಹೀಗಾಗಿ ರೈತ ಮುನಿವೆಂಕಟಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ.

 Grapes Farmer Not Getting Market Due To Coronavirus Effect In Kolar

 ಕೋಲಾರ ಗಡಿಯಲ್ಲಿ ಕಾಡಾನೆಗಳ ದಾಂಧಲೆ; ಲಕ್ಷಾಂತರ ಬೆಳೆ ನಾಶ ಕೋಲಾರ ಗಡಿಯಲ್ಲಿ ಕಾಡಾನೆಗಳ ದಾಂಧಲೆ; ಲಕ್ಷಾಂತರ ಬೆಳೆ ನಾಶ

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಎರಡು ಸಾವಿರ ಅಡಿಗಳಿಂದ ನೀರು ತೆಗೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ‌ ಮಧ್ಯೆ ದ್ರಾಕ್ಷಿ ಬೆಳೆದಿರುವ ರೈತ, ತಮ್ಮ ಜಮೀನಿನಲ್ಲಿ ಐದರಿಂದ ಆರು ಬೋರ್​ವೆಲ್​ಗಳನ್ನು ಕೊರೆಸಿ ಕೈಸುಟ್ಟುಕೊಂಡಿದ್ದಾರೆ. ಹೀಗಿರುವಾಗ ಆರು ತಿಂಗಳ‌ ಹಿಂದೆ ಮತ್ತೊಂದು ಬೋರ್​​ವೆಲ್ ಕೊರೆಸಿ, ಕೃಷಿ ಹೊಂಡದ ನೆರವಿನಿಂದ ದ್ರಾಕ್ಷಿ ಬೆಳೆದಿದ್ದಾರೆ. ಇದೀಗ ಇವರ ಆದಾಯದ ಕನಸು ನುಚ್ಚುನೂರಾಗಿದೆ.

 Grapes Farmer Not Getting Market Due To Coronavirus Effect In Kolar

 ಕುಸಿದಿದೆ ಟೊಮಾಟೊ ರೇಟ್; ಟೊಮಾಟೊ ಬೆಳೆದ ರೈತನ ಸಂಕಷ್ಟ ಕೇಳೋರಿಲ್ಲ... ಕುಸಿದಿದೆ ಟೊಮಾಟೊ ರೇಟ್; ಟೊಮಾಟೊ ಬೆಳೆದ ರೈತನ ಸಂಕಷ್ಟ ಕೇಳೋರಿಲ್ಲ...

ಸರ್ಕಾರ ನಮ್ಮಂಥವರ ಸಮಸ್ಯೆ ಆಲಿಸಿ ಬೆಳೆ ಪರಿಹಾರ ನೀಡಬೇಕೆಂದು ಮುನಿವೆಂಕಟಪ್ಪ ಕುಟುಂಬ ಮನವಿ ಮಾಡಿಕೊಂಡಿದೆ.

English summary
Farmer Munivenkatappa, who grown grapes in 3 acres at kotturu village in kolar district not getting good market for his crops by coronavirus effect
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X