ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತವನ್ನು ಸಾವಯವ ಕೃಷಿ ದೇಶವಾಗಿಸುವುದೇ ನಮ್ಮ ಗುರಿ - ಅನಂತ್ ಕುಮಾರ್

ಬೆಂಗಳೂರಿನ ಆಡುಗೋಡಿಯ ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಕೇಂದ್ರ (ಎನ್‍ಡಿಆರ್‍ಐ)ದಲ್ಲಿ ಅದಮ್ಯ ಚೇತನ ಸಂಸ್ಥೆಯ 71ನೇ 'ಹಸಿರು ಭಾನುವಾರ' ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಂದ್ರ ಸಚಿವ ಅನಂತ್ ಕುಮಾರ್ ಮಾತನಾಡಿದರು.

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 8: ದನ-ಕರುಗಳ ಸಗಣಿಯನ್ನು ಸಂಗ್ರಹಿಸಿ ಅದನ್ನು ಸಂಸ್ಕರಿಸಿ ಗೊಬ್ಬರವನ್ನಾಗಿಸಿ (ದೇಸಿ ಗೊಬ್ಬರ) ಪುನಃ ದೇಶದ ರೈತರಿಗೆ ವಿತರಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಸಹಾಯ ಧನ ನೀಡಲು ಸಿದ್ಧವಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಬೆಂಗಳೂರಿನಲ್ಲಿ ಘೋಷಿಸಿದ್ದಾರೆ.

ಬೆಂಗಳೂರಿನ ಆಡುಗೋಡಿಯ ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಕೇಂದ್ರ (ಎನ್‍ಡಿಆರ್‍ಐ)ದಲ್ಲಿ ಅದಮ್ಯ ಚೇತನ ಸಂಸ್ಥೆಯ 71ನೇ 'ಹಸಿರು ಭಾನುವಾರ' ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಂದ್ರ ಸಚಿವರು ಮಾತನಾಡಿದರು.

Govt is aiming at making Agriculture based on Organic based Fertilizer – Ananth Kumar

ನಾನು ಕೇವಲ ರಸಗೊಬ್ಬರ ಖಾತೆ ಸಚಿವ ಮಾತ್ರವಲ್ಲ ಜೈವಿಕ, ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳನ್ನೊಳಗೊಂಡಂತೆ ಎಲ್ಲ ರೀತಿಯ ಗೊಬ್ಬರಗಳ ಖಾತೆಗೆ ಸಚಿವ ಎಂದರು. ಈ ಹಿನ್ನೆಲೆಯಲ್ಲಿ ಹೇಗೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಇದೆಯೋ ಅದೇ ರೀತಿ ಕಳೆದ ಒಂದು ವರ್ಷದಲ್ಲಿ ನಾವು ಹೊಸ ಹೊಸ ರೀತಿಯ ಗೊಬ್ಬರಗಳನ್ನು ಮಾಡುವ ಬಗೆ ಮತ್ತು ಹೊಸ ಗೊಬ್ಬರಗಳನ್ನು ತಯಾರು ಮಾಡುವ ಸಂಶೋಧನೆಯನ್ನು ಮಾಡುವ ಇಂಡಿಯನ್ ಕೌನ್ಸಿಲ್ ಆಫ್ ಫರ್ಟಿಲೈಸರ್ಸ್ ಅಂಡ್ ನ್ಯೂಟ್ರಿಯಂಟ್ ರಿಸರ್ಚ್‍ನ್ನು (ಐ.ಸಿ.ಎಫ್.ಎನ್.ಆರ್) ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಾರಂಭಿಸಿದ್ದೇವೆ ಎಂದರು.

ನಮ್ಮ ದೇಶದ ಕೃಷಿಯನ್ನು ರಸಗೊಬ್ಬರ ಆಧಾರಿತ ಕೃಷಿಯಿಂದ ಸಾವಯವ ಗೊಬ್ಬರ ಆಧಾರಿತ ಕೃಷಿಯನ್ನಾಗಿ ಮಾಡುವುದು ಹಾಗೂ ಸಗಣಿಯೂ ಕೂಡ ನಮ್ಮ ದೇಶದ ರೈತರಿಗೆ ಒಂದು ಕೃಷಿಯೇತರ ಅದಾಯದ ಭಾಗವನ್ನಾಗಿಸುವುದು ನಮ್ಮ ಸರ್ಕಾರದ ಗುರಿ ಎಂದು ಅನಂತ ಕುಮಾರ್ ತಿಳಿಸಿದರು.
ದೇಸಿ ಗೊಬ್ಬರಕ್ಕಾಗಿ ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಕೇಂದ್ರ (ಎನ್‍ಡಿಆರ್‍ಐ), ಬೆಂಗಳೂರು ಡೈರಿ ಸಂಸ್ಥೆಯ ಮೂಲಕ ಸಗಣಿಯ ಸಂಗ್ರಹಣೆ, ಸಂಸ್ಕರಣೆ ಮತ್ತು ವಿತರಣೆಯ ಯೋಜನೆಗೆ ಕೈ ಜೋಡಿಸಲು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಸಿದ್ಧವಿದೆ ಎಂದು ಅನಂತ ಕುಮಾರ್ ಘೋಷಿಸಿದರು.

ಈ ದಿಸೆಯಲ್ಲಿ ಪೈಲಟ್ ಪ್ರಾಜೆಕ್ಸ್ ಗೆ ಭಾರತ ಸರ್ಕಾರ ನೆರವು ನೀಡಲು ಸಿದ್ಧ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಸಗಣಿಯನ್ನು ಸ್ಥಳೀಯ ಮಟ್ಟದಲ್ಲೇ ಸಂಗ್ರಹಿಸಿ, ಸಂಸ್ಕರಿಸಿ ವಿತರಿಸುವ ಕಾರ್ಯ ಆಗಬೇಕಿದೆ, ಇದರಿಂದ ಭಾರತವು ಸಾವಯವ ಗೊಬ್ಬರ ಆಧಾರಿತ ಕೃಷಿ ಆಧಾರಿತ ದೇಶವಾಗಲಿದೆ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟರು.

1927ನೇ ಇಸವಿಯಲ್ಲಿ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿ 15 ದಿನಗಳ ಕಾಲ ತಂಗಿದ್ದು ನಾನು ಒಬ್ಬ ಕೃಷಿಕ, ರೈತ ಎಂದು ಘೋಷಿಸಿ ಸಹಿ ಮಾಡಿದ ಜಾಗ ಬೆಂಗಳೂರಿನ ಆಡುಗೋಡಿಯ ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಕೇಂದ್ರ. ಇಂತಹ ಪವಿತ್ರ ಭೂಮಿಯಲ್ಲಿ ಇಂದು 71ನೇ ಹಸಿರು ಬೆಂಗಳೂರು ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿರುವುದು ಸಂತೋಷವಾಗುತ್ತಿದೆ ಎಂದರು.

1917ರಲ್ಲಿ ಬಿಹಾರದ ಮೋತಿಹಾರಿಯಲ್ಲಿ ರೈತರ ಪರವಾಗಿ ಗಾಂಧೀಜಿಯವರು ಚಂಪಾರಣ್ ಸತ್ಯಾಗ್ರಹವನ್ನು ಪ್ರಾರಂಭಿಸಿದ 100ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಕಾರ್ಯಕ್ರಮವನ್ನು 'ಸ್ವಚ್ಛಾಗ್ರಹ' ಎಂದು ಕರೆದಿದ್ದಾರೆ. ಗಾಂಧೀಜಿಯವರು ಭಾರತದಲ್ಲಿ ಪ್ರಾರಂಭಿಸಿದ ಪ್ರಥಮ ಸತ್ಯಾಗ್ರಹದ ಶತಮಾನೋತ್ಸವದ ಈ ಸಂದರ್ಭದಲ್ಲಿ ನಾವು ಸಸಿ ನೆಡುವ ಹಸಿರು ಭಾನುವಾರ ಕಾರ್ಯಕ್ರಮವನ್ನು ಇನ್ನು ಮುಂದೆ 'ಸಸ್ಯಾಗ್ರಹ' ಎಂದು ಕರೆಯೋಣ ಎಂದು ಅನಂತ ಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿ ವಾಹನದ ಓಡಾಟದ ಸಲುವಾಗಿ, ಬಹು ಮಹಡಿ ಕಟ್ಟಡಗಳನ್ನು ಕಟ್ಟುವ ಸಲುವಾಗಿ ಮರಗಳನ್ನು ಕಡಿಯುತ್ತಿದ್ದೇವೆ ಆದರೆ ಬಹುತೇಕವಾಗಿ ಅದಕ್ಕೆ ಪರ್ಯಾಯವಾಗಿ ಮರಗಳನ್ನು ಬೆಳೆಸುತ್ತಿಲ್ಲ. ಇದರಿಂದ ಹಸಿರನ್ನು, ಉಸಿರನ್ನು ಕಡಿಮೆಗೊಳಿಸಿ ಕೆಸರನ್ನು ಹೆಚ್ಚು ಮಾಡುತ್ತಿದ್ದೇವೆ. ನಮ್ಮ ಪೂರ್ವಿಕರು ನಮಗೆ ಬಿಟ್ಟು ಹೋದಷ್ಟು ಹಸಿರು-ಉಸಿರನ್ನು ನಾವು ಉಳಿಸಿಕೊಳ್ಳದೇ ಹೋದರೆ ನಮ್ಮ ಮುಂದಿನ ಪೀಳಿಗೆಯನ್ನು ನಾವು ನರಕಕ್ಕೆ ದೂಡಿದಂತೆ ಆಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ಈ ಹಿನ್ನೆಲೆಯಲ್ಲಿ ಈ ಸಸ್ಯಾಗ್ರಹವನ್ನು ನಾವು ಪ್ರತಿ ಬೀದಿಯಲ್ಲಿ, ಪ್ರತಿ ಊರಿನಲ್ಲಿ ಮಾಡಬೇಕಿದೆ. ಅದನ್ನು ಅದಮ್ಯ ಚೇತನ ಸಂಸ್ಥೆಯೊಂದೇ ಮಾಡಲು ಆಗುವುದಿಲ್ಲ ಆದ್ದರಿಂದ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರು 'ಸಸ್ಯ ಚೇತನ' ಎಂದು ಪ್ರಾರಂಭ ಮಾಡಿ ಸಂಸ್ಥೆಯು ಬಿಸಿಯೂಟವನ್ನು ಸರಬರಾಜು ಮಾಡುತ್ತಿರುವ ಶಾಲೆಗಳಲ್ಲಿ 'ಸಸ್ಯ ಚೇತನ ಮಂಡಳಿ'ಯನ್ನು ರಚಿಸಿ ಅವರು ತಿಂಗಳಿಗೊಮ್ಮೆ ಸಸಿ ನೆಡುವ ಕಾರ್ಯಕ್ರಮವನ್ನು ನಡೆಸಲಿ ಆಗ ಅದು ಬೆಂಗಳೂರಿನಲ್ಲಿ, ಹುಬ್ಬಳ್ಳಿ-ಧಾರವಾಡಗಳಲ್ಲಿ, ಹರಿಹರದಲ್ಲಿ, ಜೋಧಪುರದಲ್ಲಿ ಈ ಚಟುವಟಿಕೆ ನೂರಾರು ಕಡೆ ನಡೆಯುತ್ತದೆ ಎಂದು ಸಲಹೆ ನೀಡದರು.

ನಮ್ಮ ಬೆಂಗಳೂರು ಮಹಾನಗರದ ಪಾಲಿಕೆ ಸದಸ್ಯರುಗಳು, ಯುವ ಸಂಘಟನೆಗಳು, ದೇವಸ್ಥಾನಗಳ ಭಜನಾ ಮಂಡಲಿಯವರು ಮುಂತಾದವರು ಸೇರಿದಂತೆ ಸಮಾಜದ ವಿವಿಧ ವರ್ಗಗಳು, ಸಂಘ ಸಂಸ್ಥೆಗಳು ಸಸ್ಯ ಚೇತನ ಕಾರ್ಯಕ್ರಮವನ್ನು ನಡೆಸಬೇಕು ಎಂದು ಅನಂತ ಕುಮಾರ್ ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ರಾಜ್ಯಪಾಲರಾದ ಡಾ.ಎಂ ರಾಮಾಜೋಯಿಸ್, ವಿಜ್ಞಾನಿ ಹಾಗೂ ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಕೆ.ಪಿ.ರಮೇಶ, ಬಿಬಿಎಂಪಿ ಸದಸ್ಯರುಗಳಾದ ಶ್ರೀಮತಿ ಸರಸ್ವತಮ್ಮ, ಶ್ರೀಮತಿ ಸರಳಾ ಮಹೇಶ್‍ಬಾಬು, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರಾದ ಡಾ.ತೇಜಸ್ವಿನಿ ಅನಂತಕುಮಾರ್, ಶ್ರೀ ವಿದ್ಯಾಶಂಕರ ಮುಂತಾದವರು ಭಾಗವಹಿಸಿದ್ದರು.

English summary
Union Government is aiming at making Agriculture based on Organic based Fertilizer from Chemical Fertilizer said Union minister for Parliamentary Affairs, Chemical and Fertilizers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X