ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣಬೆ ಕೃಷಿ:ಅಣಬೆ ಘಟಕ ಸ್ಥಾಪನೆಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು ಆಗಸ್ಟ್11: ತಾಂತ್ರಿಕ ಪ್ರಗತಿ, ಪೌಷ್ಠಿಕಾಂಶ ಮತ್ತು ಸಹಾಯಕ ಆದಾಯದ ಮೂಲವಾಗಿರುವುದರಿಂದ ಭಾರತದಲ್ಲಿ ಮಶ್ರೂಮ್ ಕೃಷಿಯ ವೇಗ ಪಡೆದುಕೊಂಡಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಈ ಅಣಬೆ ಬೇಸಾಯ ಮಾಡುವತ್ತ ಒಲವು ತೋರುತ್ತಿದ್ದಾರೆ.

ತಾಂತ್ರಿಕತೆಯ ಪ್ರಗತಿಯ ಪರಿಣಾಮ ಇಂದು ಗುಡ್ಡಗಾಡು ಪ್ರದೇಶಗಳು ಹಾಗೂ ಇನ್ನಿತರ ಕಡೆಗಳಲ್ಲಿ ವಿವಿಧ ತಳಿಯ ಅಣಬೆಗಳನ್ನು ಬೆಳೆಯಲು ರೈತರಿಗೆ ಸಾಧ್ಯವಾಗಿದೆ. ಅಲ್ಲದೇ ಈ ಅಣಬೆ ಕೃಷಿ ಮಾಡುವವರನ್ನು ಸರ್ಕಾರವು ಸಹಾಯನ ಧನ ನೀಡುತ್ತಿದೆ. ತೋಟಗಾರಿಕೆ ಇಲಾಖೆ ಯು ಸಹ ಅಗತ್ಯ ಸಲಹೆ, ಸಹಾಯ ಮಾಡುತ್ತಿವೆ.

ಸ್ವಾವಲಂಬಿ ಜೀವನಕ್ಕೆ ಆಧಾರವಾದ ಅಣಬೆ ಬೇಸಾಯ

ಈ ನಿಟ್ಟಿನಲ್ಲಿ ಹೆಚ್ಚಿನ ರೈತರು ಅಣಬೆ ಬೇಸಾಯ ಆರಂಭಿಸುವಂತೆ ಉತ್ತೇಜಿಸಲು ಹರಿಯಾಣ ರಾಜ್ಯ ಸರ್ಕಾರವು ಅಣಬೆ ಘಟಕ ಸ್ಥಾಪಿಸುವ ರೈತರಿಗೆ ಸಹಾಯಧನ ನೀಡಲು ಮುಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹರಿಯಾಣದಲ್ಲಿ ಅಣಬೆ ಕೃಷಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ರೈತರು ಬೃಹತ್‌ ಪ್ರಮಾಣದಲ್ಲಿ ಅಣಬೆಗಳನ್ನು ಬೆಳೆಸಿ ಉತ್ತಮ ಇಳುವರಿ ಜತೆಗೆ ಉತ್ತಮ ಲಾಭವನ್ನೂ ಪಡೆದಿದ್ದಾರೆ.

Government Subsidy will provide for Built Mushroom Cultivation unit

ಇದನ್ನು ಮನಗಂಡ ರಾಜ್ಯ ಸರ್ಕಾರ ಇನ್ನಿತರ ರೈತರು ಅಣಬೆ ಕೃಷಿಗೆ ಆದ್ಯತೆ ನೀಡಬೇಕು. ಹೆಚ್ಚು ಬೆಳೆದು ಉತ್ತಮ ಆದಾಯ ಪಡೆಯಬೇಕು ಎಂದು ಬಯಸಿದೆ. ಈ ಕಾರಣಕ್ಕೆ ಅಣಬೆ ಕೃಷಿ ಮತ್ತು ಅಣಬೆ ಬೆಲೆಯುವ ರೈತರನ್ನು ಪ್ರೊತ್ಸಾಹಿಸುತ್ತಿದೆ. ಅವರಿಗೆ ಅಗತ್ಯ ನೆರವು ಒದಗಿಸುತ್ತಿದೆ.

ಇನ್ನು ಅಣಬೆ ಘಟಕ ಸ್ಥಾಪಿಸಲು ಇಚ್ಛಿಸುವ ರೈತರಿಂದ ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ರೈತರು ಲಿಂಕ್‌ ಮೂಲಕ https://hortnet.gov.in/?QUERY ಅರ್ಜಿ ಸಲ್ಲಿಸಬಹುದಾಗಿದೆ.

Government Subsidy will provide for Built Mushroom Cultivation unit

2 ವಿಧದ ಘಟಕಕ್ಕಾಗಿ ಅರ್ಜಿ ಸಲ್ಲಿಸಿ

ವೈಯಕ್ತಿಕ ಘಟಕ ಹಾಗೂ ಜಂಟಿ ಘಟಕ ಎಂದು ವಿಭಾಗಿಸಲಾಗಿದೆ. ರಾಜ್ಯ ಸರ್ಕಾರದಿಂದ ಅಣಬೆ ಕೃಷಿಗೆ ಸಹಾಯಧನ ಪಡೆಯಲು ಇಚ್ಛಿಸುವ ರೈತರು ಈ ಎರಡು ವಿಭಾಗಳಿಗೆ ಅರ್ಜಿ ಸಲ್ಲಿಸಬಹುದು. ಮೊದಲು ಅರ್ಜಿ ಸಲ್ಲಿಸದವರನ್ನು ಸಹಾಯಧನಕ್ಕಾಗಿ ಪರಿಗಣಿಸಲಾಗುವುದು ಎಂದು ಹರಿಯಾಣ ಸರ್ಕಾರ ತಿಳಿಸಿದೆ. ಯೋಜನೆ, ಸಹಾಯಧನ ಹಾಗೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ರೈತರು ಜಿಲ್ಲಾ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆ 1800 180 2021ಗೆ ಕರೆ ಮಾಡಿ ವಿಚಾರಿಸಬಹುದು ಎಂದು ತಿಳಿಸಲಾಗಿದೆ.

English summary
Government Subsidy will provide for Built Mushroom Cultivation unit
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X