ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನಿಂದ ಮನೆಬಾಗಿಲಿಗೆ ಹಾಪ್‌ಕಾಮ್ಸ್ ಸೇವೆ

ಮನೆಬಾಗಿಲಿಗೆ ತರಕಾರಿ, ಹಣ್ಣು ಅಗತ್ಯವಸ್ತುಗಳನ್ನು ತಲುಪಿಸುವ ಹಾಪ್ಕಾಮ್ಸ್ ನ ಮಹತ್ವದ ಆನ್ಲೈನ್ ಸೇವೆ ಬೆಂಗಳೂರಿನ ಜಯನಗರ ಮತ್ತು ಇಂದಿರಾನಗರಗಳಲ್ಲಿ ಪ್ರಾಯೋಗಿಕವಾಗಿ ಇಂದಿನಿಂದ ಆರಂಭವಾಗುತ್ತಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಏಪ್ರಿಲ್ 6: ಮನೆಬಾಗಿಲಿಗೆ ತರಕಾರಿ, ಹಣ್ಣು ಅಗತ್ಯವಸ್ತುಗಳನ್ನು ತಲುಪಿಸುವ ಹಾಪ್ಕಾಮ್ಸ್ ನ ಮಹತ್ವದ ಆನ್ಲೈನ್ ಸೇವೆ ಇಂದಿನಿಂದ ಆರಂಭವಾಗುತ್ತಿದೆ.

ಪ್ರಾಯೋಗಿಕವಾಗಿ ಬೆಂಗಳೂರಿನ ಜಯನಗರ ಮತ್ತು ಇಂದಿರಾನಗರಗಳಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದೆ. ಯುನರವಿ ಎಂಬ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಹಾಪ್ಕಾಮ್ಸ್ ಈ ಸೇವೆ ಆರಂಭಿಸಿದೆ.

 Get vegetables and fruits from HOPCOMS at your doorstep from Today

ಎರಡೂ ನಗರಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದರೆ ಇದನ್ನು ನಗರದಾದ್ಯಂತ ವಿಸ್ತರಿಸುವ ಯೋಜನೆಯನ್ನು ಹಾಪ್ಕಾಮ್ಸ್ ಹಾಕಿಕೊಂಡಿದೆ. ಗ್ರಾಹಕರು 200 ರೂಪಾಯಿಯಿಂದ ಆರಂಭಿಸಿ 10,000 ರೂಪಾಯಿವರಗಿನ ವಸ್ತುಗಳನ್ನು ಖರೀದಿಸಬಹುದು. ಖರೀದಿಸಿದ 24 ಗಂಟೆಗಳೊಳಗೆ ವಸ್ತುಗಳು ಮನೆಬಾಗಿಲಿಗೆ ಬರಲಿವೆ.

ಸಕಾಲಕ್ಕೆ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸಿ ಮನಗೆಲ್ಲುವುದು ಹಾಪ್ಕಾಮ್ಸ್ ಯೋಜನೆಯಾಗಿದೆ. ಇದಕ್ಕಾಗಿ ಜಯನಗರ ಮತ್ತು ಇಂದಿರಾನಗರದಲ್ಲಿ 3-4 ಪಾಯಿಂಟ್ಗಳನ್ನು ತೆರೆಯಲಾಗುತ್ತದೆ. ಈ ಪಾಯಿಂಟ್ಗಳಿಂದ ಪದಾರ್ಥಗಳನ್ನು ಮನೆಬಾಗಿಲಗೆ ತಲುಪಿಸಲಾಗುತ್ತದೆ.

ಈ ಯೋಜನೆಯಲ್ಲಿ ಯುನರವಿ 20 ಲಕ್ಷ ಹೂಡಿಕೆ ಮಾಡಿದ್ದು ವಾಹನಗಳ ಒದಗಿಸುವ ಜವಾಬ್ದಾರಿಯೂ ಸಂಸ್ಥೆಯದ್ದೇ ಆಗಿದೆ. ಆನ್ಲೈನ್ ಸೇವೆಯಿಂದ ಶೇಕಡಾ 10 ರಷ್ಟು ಮಾರಾಟ ವೃದ್ಧಿಯಾಗುವ ಆಶಯವನ್ನು ಹಾಪ್ ಕಾಮ್ಸ್ ಹೊಂದಿದೆ.

ಸದ್ಯ ದಿನಕ್ಕೆ 30 ಲಕ್ಷ ವಹಿವಾಟಾಗುತ್ತಿದ್ದು, ಎಂಟಿಆರ್, ಕೆಎಂಎಫ್ ಉತ್ಪನ್ನಗಳ ಜತೆಗೆ ಮಿನರಲ್ ವಾಟರ್ ಗಳನ್ನೂ ಹಾಪ್ ಕಾಮ್ಸ್ ಗ್ರಾಹಕರಿಗೆ ಪೂರೈಸುತ್ತಿದೆ.

ಪೂರೈಕೆ ವೆಚ್ಚ ಎಷ್ಟು?

ಸದ್ಯ 200 -500 ರೂಪಾಯಿ ವರೆಗಿನ ಖರೀದಿಗೆ 20 ರೂಪಾಯಿ ಪೂರೈಕೆ ವೆಚ್ಚ ನೀಡಬೇಕು. 500 ರಿಂದ 10,000 ವರೆಗಿನ ಖರೀದಿಗೆ 60-80 ರೂಪಾಯಿ ಪೂರೈಕೆ ವೆಚ್ಚವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.

ಹಾಪ್ ಕಾಮ್ಸ್ ಲಿಂಕ್ ಇಲ್ಲಿದೆ.

English summary
Bengaluru city’s famous vegetable and fruits supplier HOPCOMS started its online service from today. In an experiment basis HOPCOMS plan to delivery things to doorsteps in Jayanagar and Indiranagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X