ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5.9 ಲಕ್ಷ ಕೋಟಿ ಮೀರಿದ ರೈತರ ಸಾಲ

By Mahesh
|
Google Oneindia Kannada News

ನವದೆಹಲಿ, ಮೇ.7: ದೇಶದ ರೈತರಿಂದ ಬ್ಯಾಂಕ್ ಗಳಿಗೆ ಬರಬೇಕಿರುವ ಸಾಲ ಕಳೆದ ಮಾರ್ಚ್31ಕ್ಕೆ ಅನ್ವಯವಾಗುವಂತೆ 5,90,728 ಕೋಟಿ ರುಪಾಯಿಗಳಷ್ಟು ಸಾಲದ ಹಣ ದೇಶದ ರೈತರಿಂದ ಬ್ಯಾಂಕ್ ಗಳಿಗೆ ಬರಬೇಕಾಗಿದೆ ಎಂದು ಕೇಂದ್ರ ಕೃಷಿ ರಾಜ್ಯ ಸಚಿವ ಕೆವಿ ಥಾಮಸ್ ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.

ಈ ಮಾಹಿತಿಯನ್ನು ಲಿಖಿತ ಉತ್ತರದ ರೂಪದಲ್ಲಿ ನೀಡಿದ ಸಚಿವ ಕೆವಿ ಥಾಮಸ್ ಅವರು ನಬಾರ್ಡ್ ಮತ್ತು ರಿಸರ್ವ್ ಬ್ಯಾಂಕಿನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ರೈತರ ಸಾಲ 5.9 ಲಕ್ಷ ಕೋಟಿ ರೂಪಾಯಿ ಮೀರಿದೆ ಎಂದು ಥಾಮಸ್ ತಿಳಿಸಿದರು.

ಈ ಕೃಷಿ ಸಾಲ ಬಾಕಿ ಯಲ್ಲಿ ಪಂಜಾಬ್ ಮತ್ತು ಹರ್ಯಾಣದ ರೈತರಿಂದ ಕ್ರಮವಾಗಿ ರೂ 27,100 ಕೋಟಿ ಮತ್ತು 22,416 ಕೋಟಿ ರುಪಾಯಿ ಬಾಕಿ ಇದೆ ಎಂದು ತಿಳಿಸಿದರು. 2008 ರ ಸಾಲ ಮನ್ನಾ ಯೋಜನೆಯನ್ವಯ ಪಂಜಾಬ್ ನಲ್ಲಿ 4,21,278 ರೈತರು ಮತ್ತು ಹರ್ಯಾಣದಲ್ಲಿ 8,85,102 ರೈತರು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯಲ್ಲಿ ದೇಶದ 3ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಒಂದು ಕೋಟಿ ಇತರ ರೈತರು ಪ್ರಯೋಜನ ಪಡೆದಿದ್ದಾರೆ ಎಂದು ಸಚಿವ ಥಾಮಸ್ ಅವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X