ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ: ಕಸಿ ಮಾಡಿದ ಸಸಿ ಮಾರಾಟ, ಜಿಲ್ಲಾ ಫಲ-ಪುಷ್ಪ ಪ್ರದರ್ಶನ ಮೇಳ

|
Google Oneindia Kannada News

ಧಾರವಾಡ, ಜುಲೈ 12: ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ರೈತರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆ ಅಧೀನ ವಿವಿಧ ತೋಟಗಾರಿಕೆ ಕ್ಷೇತ್ರ, ನರ್ಸರಿಗಳಲ್ಲಿ 1.5 ಲಕ್ಷ ಹಣ್ಣಿನ, ಹೂವಿನ ಹಾಗೂ ಅಲಂಕಾರಿಕ ಸಸಿಗಳನ್ನು ಮತ್ತು ಕಸಿ ಮಾಡಿದ ಸಸಿಗಳನ್ನು ಸರ್ಕಾರ ನಿಗಧಿ ಪಡಿಸಿರುವ ರಿಯಾಯಿತಿ ದರದಲ್ಲಿ ಮಾರಟಕ್ಕೆ ಲಭ್ಯವಿವೆ. ಆಸಕ್ತಿ ಉಳ್ಳವರು ಕ್ಷೇತ್ರದ ಸಿಬ್ಬಂದಿಯನ್ನು ಸಂಪರ್ಕಿಸಿ ಇದರ ಲಾಭ ಪಡೆಯಬಹುದು.

ಧಾರವಾಡ ತಾಲೂಕು, ಜಿಲ್ಲಾ ನರ್ಸರಿ, ಧಾರವಾಡ, -ಸಿದ್ದಪ್ಪ ರಬ್ಬನಿ-9986526066, ಶಶಿಕಲಾ ಪಾಟೀಲ - 8951476035, ಧಾರವಾಡ ತಾಲೂಕು, ಕಣವಿ ಹೊನ್ನಾಪೂರ ತೋಟಗಾರಿಕೆ ಕ್ಷೇತ್ರ-ವರ್ಷ ಬೆಂಡಿಗೇರಿ-8867887191, ಎಚ್ ಜಮುನಾಳ-9880249047, ಕುಂದಗೋಳ ತಾಲೂಕು, ಜಿಗಳೂರು ತೋಟಗಾರಿಕೆ ಕ್ಷೇತ್ರ, ಜಿಗಳೂರು ಸುಬಿಯಾ ಆರ್ ಕೆಂಗೊಂಡ-8970812270, ಎಮ್ ಮಳಲಿ-9353032344, ಕಲಘಟಗಿ ತಾಲೂಕು, ದಾಸ್ತಿಕೊಪ್ಪ ತೋಟಗಾರಿಕೆ ಕ್ಷೇತ್ರ ಕುಮಾರಿ ಯಶಸ್ವಿನಿ ನಿಚ್ಚಣಕಿ-9611506210, ನವಲಗುಂದ ತಾಲೂಕು, ನವಲಗುಂದ ಕಛೇರಿ ನರ್ಸರಿ ಜ್ಯೋತಿ ಅಂಗಡಿ- 7019017214 ಸಂಪರ್ಕಿಸಬಹುದು.

ನರ್ಸರಿಗಳಲ್ಲಿ ಲಭ್ಯವಿರುವ ಸಸಿ, ಕಸಿಗಳ ವಿವರ: ದ್ವಿವಾಟೆ ಮಾವು-ಆಪುಸ ತಳಿ, ಪೇರಲ-ಐ49 ತಳಿ, ತೆಂಗು-TxD ಕುಬ್ಜ ತಳಿ, ತೆಂಗು ಅರಸಿಕೆರೆ ಟಾಲ್, ವಾಟರ್ ಆಪಲ್, ಪಪ್ಪಾಯ, ಲಿಂಬು, ನುಗ್ಗೆ, ಕರಿಬೇವು ಹಾಗೂ ವಿವಿಧ ಜಾತಿಯ ಹೂವಿನ ಹಾಗೂ ಅಲಂಕಾರಿಕ ಸಸಿಗಳು ಲಭ್ಯವಿವೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Fruit, Flower Plants and saplings for Sale, District Flower Show

ಜಿಲ್ಲಾ ಫಲ-ಪುಷ್ಪ ಪ್ರದರ್ಶನ ಮೇಳ
ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ತೋಟಗಾರಿಕೆ ಇಲಾಖೆ, ಮಹಾನಗರ ಪಾಲಿಕೆ, ಕೃಷಿ ಇಲಾಖೆ ಮತ್ತು ಫಲ-ಪುಷ್ಪ ಪ್ರದರ್ಶನ ಸಮಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 2022-23 ನೇ ಸಾಲಿನ ಫಲ-ಪುಷ್ಪ ಪ್ರದರ್ಶನ ಅಂಗವಾಗಿ ಅವಳಿ ನಗರಗಳಲ್ಲಿ ಸೆಪ್ಟಂಬರ್ 28 ರಿಂದ 30 ರವರೆಗೆ ಸರ್ಕಾರಿ ಸಂಸ್ಥೆ, ಅರೆ ಸರ್ಕಾರಿ ಸಂಸ್ಥೆ, ಖಾಸಗಿ ಸಂಸ್ಥೆ ಹಾಗೂ ಖಾಸಗಿ ಮನೆ ಉದ್ಯಾನವನಗಳ ಸರ್ಧೆಯನ್ನು ಏರ್ಪಡಿಸಲಾಗಿದೆ.

ಆಸಕ್ತರು ಸೆಪ್ಟಂಬರ್ 15 ರೊಳಗಾಗಿ ನಿಗದಿತ ಅರ್ಜಿ ನಮೂನೆಯನ್ನು ತೋಟಗಾರಿಕೆ ಇಲಾಖೆಯಿಂದ ಪಡೆದು ಹೆಸರನ್ನು ನೊಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ 0836-2957801 ಸಂಪರ್ಕಿಸಬಹುದು ಎಂದು ತೋಟಗಾರಿಕಾ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Fruit, Flower Plants and saplings for Sale, District Flower Show from Sept 28 organized by Dharwad Horticulture department
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X