ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸ್ ಮೂಲ ಯೋಜನೆ ರೈತ ವಿರೋಧಿ, ಶೋಭಾ

By Mrutyunjaya Kalmat
|
Google Oneindia Kannada News

Shobha Karandlaje slams NICE project
ಬೆಂಗಳೂರು, ಶಿವಮೊಗ್ಗ, ಜ. 19 : ನೈಸ್ ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಪ್ರಧಾನಿ ದೇವೇಗೌಡ ನಡುವೆ ಜಟಾಪಟಿ ಮುಂದುವರೆಯುತ್ತಿರುವ ಬೆನ್ನಲ್ಲೇ ಬಿಎಂಐಸಿ ಮೂಲ ಯೋಜನೆಯೇ ರೈತ ವಿರೋಧಿಯಾಗಿದೆ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೈಸ್ ನೇತೃತ್ವದಲ್ಲಿ ನಡೆಯುತ್ತಿರುವ ಬೆಂಗಳೂರು ಮೈಸೂರು ಕಾರಿಡಾರ್ ರಸ್ತೆ ಯೋಜನೆ ಸಂಪೂರ್ಣ ರೈತ ವಿರೋಧಿಯಾಗಿದೆ. ಮೂಲ ಯೋಜನೆಯಲ್ಲೇ ಇದು ಸಾಬೀತಾಗಿದೆ ಎಂದರು. ಆದರೆ, ಮಾಜಿ ಪ್ರಧಾನಿ ದೇವೇಗೌಡ ನೈಸ್ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ರೈತರ ಪರ ಹೋರಾಟ ನಡೆಸುತ್ತಿರುವ ಸ್ವಾರ್ಥ ರಾಜಕೀಯಕ್ಕಾಗಿ ಎಂದು ಗೌಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಎನ್ನಲು ನಾಚಿಕೆ

ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ ಅತ್ಯಂತ ಕೆಳದರ್ಜೆಯಲ್ಲಿ ಮಾತನಾಡಿರುವ ದೇವೇಗೌಡರನ್ನು ಮಾಜಿ ಪ್ರಧಾನಿ ಎಂದು ಕರೆಯಲು ನಾಚಿಕೆಯಾಗುತ್ತದೆ. ದೇಶದ ಅತ್ಯುನ್ನತ ಹುದ್ದೆಗೇರಿದ ವ್ಯಕ್ತಿಯೊಬ್ಬನ ಬಾಯಿಂದ ಮುಖ್ಯಮಂತ್ರಿಯೊಬ್ಬರಿಗೆ ಮಾತನಾಡುವ ಪರಿಯೇ ಇದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಎಂಐಸಿ ವಿವಾದಕ್ಕೆ ಸಂಬಂಧಿಸಿದಂತೆ ಅವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಅವರು ಆಡುತ್ತಿರುವ ಮಾತುಗಳು ಅವರ ಘನತೆಯನ್ನು ಪ್ರಶ್ನಿಸುವಂತಿದೆ. ದೇಶದಲ್ಲಿ ಅನೇಕ ಮಂದಿ ಪ್ರಧಾನಿಯಾಗಿ ಮಾಜಿಗಳಾಗಿದ್ದಾರೆ. ಆದರೆ, ದೇವೇಗೌಡನಂತಹ ಮಾಜಿ ಪ್ರಧಾನಿಯನ್ನು ನಾವು ಹಿಂದೆ ಕಂಡೂ ಇಲ್ಲ, ಮುಂದೆ ಇಂಥವರು ಹುಟ್ಟುವುದೂ ಇಲ್ಲ ಎಂದು ರಾಮುಲು ಕಿಡಿಕಾರಿದರು. ಶಿವಮೂಗ್ಗ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಶೀಘ್ರದಲ್ಲೇ 2000 ವೈದ್ಯರನ್ನು ನೇಮಿಸಿಕೊಳ್ಳುವುದಾಗಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X