ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿ ಬೆಳೆಗಾರರಿಗೆ ಮುದ್ರಾಂಕ ಶುಲ್ಕದಿಂದ ವಿನಾಯಿತಿ?

|
Google Oneindia Kannada News

ಮಡಿಕೇರಿ, ಜುಲೈ 18; ಕಾಫಿ ಬೆಳೆಗಾರರು ಬರೆದುಕೊಡುವ ಫಾರಂ-3 ಡಿಕ್ಲರೇಷನ್‍ಗಳಿಗೆ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಕೊಡಗು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಸಂಬಂಧ ಈಗಾಗಲೇ ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಹ ಪತ್ರ ಬರೆಯಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಬರೆದುಕೊಡುವ ಫಾರಂ-3 ಡಿಕ್ಲರೇಷನ್‍ಗಳಿಗೆ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೊಡಗು: ಜಲಪ್ರಳಯದ ಆ ದಿನ ನೆನೆದರೆ ಜನ ಬೆಚ್ಚಿ ಬೀಳ್ತಾರೆ! ಕೊಡಗು: ಜಲಪ್ರಳಯದ ಆ ದಿನ ನೆನೆದರೆ ಜನ ಬೆಚ್ಚಿ ಬೀಳ್ತಾರೆ!

ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವಾರ ಭೇಟಿ ನೀಡಿದ್ದರು. ಆಗ ಚರ್ಚಿಸಿರುವಂತೆ ಕಾವೇರಿ ಫ್ರೂಟ್ಸ್ ಸಂಯೋಜಿತ ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡು ಮಾಡಿ, ಕಾಫಿ ಬೆಳೆಗಾರರು ಬರೆದುಕೊಡುವ ಫಾರಂ-3 ಡಿಕ್ಲರೇಷನ್‍ಗಳಿಗೆ ಮುದ್ರಾಂಕ ಶುಲ್ಕ ಆಕರಣೆಯಿಂದ ಬೇರೆ ರೈತರಿಗೆ ವಿನಾಯಿತಿ ನೀಡಿದಂತೆ ಕಾಫಿ ಬೆಳೆಗಾರರಿಗೂ ಸಹ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 ಮಳೆ ರೌದ್ರ ನರ್ತನ ಮಲೆನಾಡು ತತ್ತರ, ಕಾಫಿ ಬೆಳೆಗಾರರ ಬದುಕು ದುಸ್ತರ ಮಳೆ ರೌದ್ರ ನರ್ತನ ಮಲೆನಾಡು ತತ್ತರ, ಕಾಫಿ ಬೆಳೆಗಾರರ ಬದುಕು ದುಸ್ತರ

Form 3 Declaration Coffee Farmers Seek Relaxation From Stamp Duty

ಪತ್ರದಲ್ಲಿ ಮಾಡಿರುವ ಮನವಿ; ಸರ್ಕಾರದ ಆದೇಶದನ್ವಯ 2022ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಫಾರಂ-3 ಡಿಕ್ಲರೇಷನ್‍ಗಳು ಮತ್ತು ಅಡಮಾನದ ಕೃಷಿ ಸಾಲಗಳನ್ನು ಫ್ರೂಟ್ಸ್ ತಂತ್ರಾಂಶದಿಂದ ಬರುವ ಡಾಟಾ (ದತ್ತಾಂಶ)ವನ್ನು ಬಳಸಿಯೇ ನೋಂದಣಿ ಮಾಡಲು ಉಪ ನೋಂದಣಾಧಿಕಾರಿಗಳಿಗೆ ಆದೇಶಿಸಲಾಗಿದೆ.

ಮುಂಗಾರು ಮಳೆ; ಕಾಫಿ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು ಮುಂಗಾರು ಮಳೆ; ಕಾಫಿ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು

ಆದರೆ ಕರ್ನಾಟಕ ಅಗ್ರಿಕಲ್ಚರಲ್ ಕ್ರೆಡಿಟ್ ಆಪರೇಷನ್ಸ್ ಅಂಡ್ ಮಿಷಲೇನಿಯನ್ಸ್ ಪ್ರಾವಿಷನ್ಸ್ ಆಕ್ಟ್, 1974ರ ವಿವರಣೆಗಳು ಕಲಂ 2ರಲ್ಲಿ ಕೃಷಿ ಉದ್ದೇಶಗಳನ್ನು ವಿವರಿಸಿದ್ದಾರೆ. ನೋಂದಣಿ ಉಪಮಹಾಪರಿವೀಕ್ಷಕರು (ಆಡಳಿತ ಮತ್ತು ಕಾನೂನು), ಬೆಂಗಳೂರು ಇವರ ಪತ್ರದ ಸಂಖ್ಯೆ ಎಸ್.ಟಿ.ಪಿ /150/2007-08, ದಿನಾಂಕ 27/07/2007ರ ಪ್ರಕಾರ ಕಾಫಿ ಬೆಳೆಗಾರರು ಬರೆದುಕೊಡುವ ಡಿಪಾಸಿಟ್ ಆಪ್ ಟೈಟಲ್ ಡೀಡ್ಸ್/ ಫಾರಂ-3 ಡಿಕ್ಲರೇಷನ್‍ಗಳಿಗೆ ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ನೀಡಲು ನಿಯಮಗಳಲ್ಲಿ ಅವಕಾಶ ಇಲ್ಲ.

ಕಾವೇರಿ-ಫ್ರೂಟ್ಸ್ ಸಂಯೋಜಿತ ತಂತ್ರಾಂಶದಲ್ಲಿಯೂ ಸಹ ಫಾರಂ-3 ಡಿಕ್ಲರೇಷನ್‍ಗಳಿಗೆ ಮುದ್ರಾಂಕ ಶುಲ್ಕ ಆಕರಣೆ ಮಾಡಲು ಅವಕಾಶ ಕಲ್ಪಿಸಿರುವುದಿಲ್ಲ. ಇದರಿಂದಾಗಿ ಕಾಫಿ ಬೆಳೆಗಾರರು ಬ್ಯಾಂಕುಗಳಿಂದ ಪಡೆಯುವ ಪ್ಲಾಂಟೇಶನ್ ಜಮೀನು ಅಭಿವೃದ್ಧಿ ಸಾಲಗಳಿಗೆ ಸಂಬಂಧಪಟ್ಟ ಆಧಾರ ಪತ್ರಗಳು/ ಡಿಪಾಸಿಟ್ ಆಫ್ ಟೈಟಲ್ ಡೀಡ್ಸ್ ಹಾಗೂ ಫಾರಂ-3 ಡಿಕ್ಲರೇಷನ್‍ಗಳನ್ನು ನೋಂದಾಯಿಸಲು ಸಾಧ್ಯ ಆಗದಿರುವುದರಿಂದ ಕಾಫಿ ಬೆಳೆಗಾರರಿಗೆ ಬ್ಯಾಂಕ್ ಸಾಲ ಸಕಾಲಕ್ಕೆ ಸಿಗದೆ ತೊಂದರೆಯಾಗಿದೆ.

ಫ್ರೂಟ್ಸ್ ತಂತ್ರಾಂಶದಲ್ಲಿ ಕಾಫಿ ಬೆಳೆಯ ಸಾಲ ವಿತರಣೆಗೆ ಸಂಬಂಧಿಸಿದಂತೆ ಫಾರಂ-3 ಪ್ರಕ್ರಿಯೆ ಕೈಗೊಳ್ಳುವ ಹಂತದಲ್ಲಿ 'ಕಾಫಿ ಕ್ರಾಫ್ ಕೆನಾಟ್ ಬಿ ಸೆಲೆಕ್ಟೆಡ್ ಫಾರ್ ಫಾರಂ-3, ಕೈಂಡ್ಲಿ ಸೆಲೆಕ್ಟ್ ಮಾರ್ಟ್‍ಗೇಜ್ ಟ್ರಾಂಕ್ಸನ್' ಎಂಬ ಷರಾದೊಂದಿಗೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಇದರಿಂದಾಗಿ ರಾಜ್ಯ ಸರ್ಕಾರದ ಶೂನ್ಯ ಬಡ್ಡಿದರದ ಬೆಳೆ ಸಾಲ ವಿತರಣೆಗೆ ಅಡಚಣೆಯಾಗಿದೆ.

ಈ ಕುರಿತು ಅಧ್ಯಕ್ಷರು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಇವರು ತಿಳಿಸಿರುತ್ತಾರೆ. ಹಾಗೂ ಮುದ್ರಾಂಕ ಶುಲ್ಕ ವಿನಾಯಿತಿಗೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರು ಬರೆದುಕೊಡುವ ಫಾರಂ-3 ಡಿಕ್ಲರೇಷನ್‍ಗಳಿಗೆ ಮುದ್ರಾಂಕ ಶುಲ್ಕದಲ್ಲಿ ಬೇರೆ ರೈತರಿಗೆ ನೀಡಿದಂತೆ ಕಾಫಿ ಬೆಳೆಗಾರರಿಗೂ ಸಹ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಶೇ 44ರಷ್ಟು ಕಾಫಿ ಬೆಳೆ; ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಸೇರಿ ಸುಮಾರು 1197 ಚ. ಕಿ. ಮೀ. ಪ್ರದೇಶದಲ್ಲಿ ಕಾಫಿ ಕೃಷಿ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯದ ಒಟ್ಟು ಕಾಫಿ ಪ್ರದೇಶದ ಶೇ 44ರಷ್ಟು ಪ್ರದೇಶದಲ್ಲಿ ಕಾಫಿಯನ್ನು ಬೆಳೆಸಲಾಗುತ್ತಿದೆ.

ಕಾಫಿ ಪ್ರದೇಶದ ಬಹುಪಾಲು ಭಾಗವನ್ನು ಸಣ್ಣ ಬೆಳೆಗಾರರು, ಅಂದರೆ 10 ಹೆಕ್ಟೇರ್‌ಗಿಂತ ಕಡಿಮೆ ಹಿಡುವಳಿ ಹೊಂದಿರುವ ರೈತರು ಹೊಂದಿರುತ್ತಾರೆ. ಕೊಡಗು ವರ್ಷಕ್ಕೆ ಸುಮಾರು 1,10,730 ಮೆಟ್ರಿಕ್ ಟನ್ ಕಾಫಿಯನ್ನು ಉತ್ಪಾದಿಸುತ್ತಿದ್ದು, ಇದು ರಾಜ್ಯದ ಶೇ 50 ಮತ್ತು ದೇಶದ ಉತ್ಪಾದನೆಯ ಶೇ 35ರಷ್ಟಿದೆ.

ಕಾಫಿ ಕೃಷಿಯು ಕಾರ್ಮಿಕ ಪ್ರಧಾನವಾಗಿದ್ದು ಕೊಡಗಿನ ಕಾಫಿ ತೋಟಗಳಲ್ಲಿ ಶೇ 51ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ. ಸ್ಥಳೀಯ ಪ್ರದೇಶದ ನಿರ್ದಿಷ್ಟ ಪರಿಸರ ಸ್ಥಿತಿಯನ್ನು ಅವಲಂಬಿಸಿ ಕಾಫಿ ಕೃಷಿಯನ್ನು ಮಾಡಲಾಗುತ್ತಿದೆ.

Recommended Video

President Election 2022: ದೇಶಾದ್ಯಂತ ಶಾಸಕರು ,ಸಂಸದರಿಂದ ಮತ ಚಲಾವಣೆ ! | Politice | Oneindia Kannada

English summary
Coffee farmers seek relaxation from stamp duty in the time of form 3 declaration. Kodagu deputy commissioner Dr. Sateesha letter to Karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X