ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Flipkart ಮೂಲಕ ನಿಮ್ಮನೆಗೆ ತಾಜಾ ಮಾವಿನ ಹಣ್ಣು ತರಿಸಿಕೊಳ್ಳಿ

|
Google Oneindia Kannada News

ಬೆಂಗಳೂರು, ಮೇ 26: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್‌ಕಾರ್ಟ್ ಮತ್ತು ಕರ್ನಾಟಕ ರಾಜ್ಯ ಮಾವು ಇಲಾಖೆ ಮತ್ತು ಮತ್ತು ರಾಜ್ಯ ಮಾವು ಮಂಡಳಿ ಇಂದು ಒಡಂಬಡಿಕೆಗೆ ಸಹಿ ಹಾಕಿವೆ. ಹೀಗಾಗಿ, ಇನ್ನು ಮುಂದೆ ಫ್ಲಿಪ್ ಕಾರ್ಟ್ ವೇದಿಕೆಯಲ್ಲಿ ಜನರು ತಾಜಾ ಮಾವಿನ ಹಣ್ಣಗಳನ್ನು ಪಡೆಯಬಹುದು.

ಈ ಮೂಲಕ ಫ್ಲಿಪ್ ಕಾರ್ಟ್ ಈ ಋತುವಿನಲ್ಲಿ ಬೆಂಗಳೂರು ನಗರ, ಕೋಲಾರ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ದೊರೆಯುವ ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಜನರಿಗೆ ತಲುಪಿಸಲಿದೆ. ಈ ಪಾಲುದಾರಿಕೆ ರೈತರಿಗೆ ಬಹು ಅಗತ್ಯದ ಮಾರುಕಟ್ಟೆಯನ್ನು ಒದಗಿಸುತ್ತದೆ ಮತ್ತು ಈ ಪರೀಕ್ಷಾ ಸಮಯದಲ್ಲಿ ಸಂಭಾವ್ಯ ಆದಾಯವನ್ನು ಸೃಷ್ಟಿಸುತ್ತದೆ.

ಹವ್ಯಕರ ಸಿಗ್ನೇಚರ್ ಫುಡ್: ಕಿಕ್ಕುಹೊಡೆಯೋ ಅಪ್ಪೆ ಹುಳಿ ಅಂದ್ರೆ... ಬಾಯಲ್ಲಿ ನೀರು!ಹವ್ಯಕರ ಸಿಗ್ನೇಚರ್ ಫುಡ್: ಕಿಕ್ಕುಹೊಡೆಯೋ ಅಪ್ಪೆ ಹುಳಿ ಅಂದ್ರೆ... ಬಾಯಲ್ಲಿ ನೀರು!

ಫ್ಲಿಪ್‌ಕಾರ್ಟ್ ತಮ್ಮಲ್ಲಿ ನೋಂದಣಿಯಾಗುವ ಮಾವು ಮಂಡಳಿಯ ರೈತ ಉತ್ಪಾದಕ ಸಂಸ್ಥೆಗಳು / ಮಾರಾಟಗಾರರು, ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಮಾರಾಟದ ವೇದಿಕೆ ಒದಗಿಸುತ್ತದೆ. ಕಂಪನಿ ನಂತರ ಆ್ಯಪ್ ಬಳಕೆ ಮತ್ತು ಬಳಕೆದಾರರ ಸಂಪರ್ಕವನ್ನು ಬಳಸುವ ಕುರಿತು ತರಬೇತಿ ಮತ್ತು ಸಾಮರ್ಥ್ಯ ಹೆಚ್ಚಳದದ ತರಬೇತಿ ನೀಡಲಿದೆ. ಮಾವಿನ ಮಂಡಳಿಯೊಂದಿಗೆ, ಭಾರತೀಯ ಅಂಚೆ ಕಚೇರಿಗಳು ಈ ಋತುವಿನಲ್ಲಿ ಕೊನೆಯ ಮೈಲಿ ವಿತರಣಾ

ಫ್ಲಿಪ್‌ಕಾರ್ಟ್‌ ವೆಬ್ ಸೈಟ್ ಮೂಲಕ ಬುಕ್ ಮಾಡಿ

ಫ್ಲಿಪ್‌ಕಾರ್ಟ್‌ ವೆಬ್ ಸೈಟ್ ಮೂಲಕ ಬುಕ್ ಮಾಡಿ

ಫ್ಲಿಪ್‌ಕಾರ್ಟ್‌ ವೆಬ್ ಸೈಟ್ ಮೂಲಕ ಗ್ರಾಹಕರು ಅಲ್ಫೊನ್ಸೊ, ಬಾದಾಮಿ, ಅಪೂಸ್, ಬಂಗನ್‌ಪಲ್ಲಿ, ಕೇಸರ್, ನೀಲಂ, ಹಿಮಾಮ್ ಪಸಂದ್, ಸೆಂಡೂರ್ ಮತ್ತು ಮಲ್ಲಿಕಾ ಸೇರಿದಂತೆ ವಿವಿಧ ಮಾವುಗಳನ್ನು 3 ಕೆಜಿಯವರೆಗೆ ಆರ್ಡರ್ ಮಾಡಬಹುದಾಗಿದೆ. ಬೆಂಗಳೂರು ನಗರ, ಕೋಲಾರ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳು ರೈತರ ಉತ್ಪಾದನಾ ಸಂಘಟನೆಗಳ (ಎಫ್ ಪಿಓ) ಗಳಿಂದ ಫ್ಲಿಪ್ ಕಾರ್ಟ್ ಮೂಲಕ ಮಾವು ಮಾರಾಟ

ರೀಟೈಲ್ ಕಂಪನಿಗಳೊಂದಿಗೆ ಸಹಭಾಗಿತ್ವ

ರೀಟೈಲ್ ಕಂಪನಿಗಳೊಂದಿಗೆ ಸಹಭಾಗಿತ್ವ

ಕಳೆದ ಕೆಲವು ತಿಂಗಳುಗಳಲ್ಲಿ, ಫ್ಲಿಪ್‌ಕಾರ್ಟ್ ವಿವಿಧ ಎಫ್‌ಎಂಸಿಜಿ ಮತ್ತು ಚಿಲ್ಲರೆ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಅದೇ ರೀತಿ ಈಗ ಮಾವಿನ ಬೆಳೆಗಾರರು ಮತ್ತು ರೈತ ಸಮುದಾಯದ ಜೀವನೋಪಾಯವನ್ನು ಬೆಂಬಲಿಸಲು ರೈತ ಉತ್ಪಾದಕ ಸಂಸ್ಥೆಯ ಸಮುದಾಯಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಿದೆ.

ಕೋಲಾರದ ಮಾವು ಬೆಳೆಗಾರ ಸಹಾಯಕ್ಕೆ ಬಂದಿದೆ ಆನ್ ಲೈನ್ ವಹಿವಾಟುಕೋಲಾರದ ಮಾವು ಬೆಳೆಗಾರ ಸಹಾಯಕ್ಕೆ ಬಂದಿದೆ ಆನ್ ಲೈನ್ ವಹಿವಾಟು

ಫ್ಲಿಪ್‌ಕಾರ್ಟ್ ಗ್ರೂಪ್‌ನ ರಜನೀಶ್ ಕುಮಾರ್

ಫ್ಲಿಪ್‌ಕಾರ್ಟ್ ಗ್ರೂಪ್‌ನ ರಜನೀಶ್ ಕುಮಾರ್

ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿದ ಫ್ಲಿಪ್‌ಕಾರ್ಟ್ ಗ್ರೂಪ್‌ನ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ರಜನೀಶ್ ಕುಮಾರ್, ''ಇದು ದೇಶದ ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಸವಾಲಿನ ಸಮಯ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ದೊಡ್ಡ ವರ್ಗಗಳಿಗೆ ಅನುಕೂಲವಾಗುವ ಪರಿಸರ ವ್ಯವಸ್ಥೆಯ ಸಹಭಾಗಿತ್ವವನ್ನು ಒಟ್ಟುಗೂಡಿಸಲು ನಾವು ಸಂತೋಷಪಡುತ್ತೇವೆ. . ಮಾವಿನ ಮಂಡಳಿ, ಕರ್ನಾಟಕ ಸರ್ಕಾರ ಮತ್ತು ಭಾರತೀಯ ಅಂಚೆ ಕಚೇರಿಯೊಂದಿಗೆ ಸೇರುವ ಮೂಲಕ, ನಾವು ರೈತ ಸಮುದಾಯವನ್ನು ಬೆಂಬಲಿಸಲು ನಮ್ಮ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದ್ದೇವೆ ಮತ್ತು ಗ್ರಾಹಕರು ಮಾವಿನ ಋತುವನ್ನು ಆನಂದಿಸಲು ಅವಕಾಶ ಕಲ್ಪಿಸಲಿದ್ದಾರೆ. ಅವರು ಪ್ರತಿವರ್ಷ ಈ ಋತುವಿಗಾಗಿ ಎದುರು ನೋಡುತ್ತಿರುತ್ತಾರೆ'' ಎಂದಿದ್ದಾರೆ.

ತೋಟಗಾರಿಕೆ ವಿಭಾಗದ ಕಾರ್ಯದರ್ಶಿರಾಜೇಂದ್ರ ಕಟಾರಿಯಾ

ತೋಟಗಾರಿಕೆ ವಿಭಾಗದ ಕಾರ್ಯದರ್ಶಿರಾಜೇಂದ್ರ ಕಟಾರಿಯಾ

ರಾಜ್ಯ ತೋಟಗಾರಿಕೆ ವಿಭಾಗದ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಮಾವಿನ ಇಲಾಖೆ ಮತ್ತು ಮಾರುಕಟ್ಟೆ ಸಹಕಾರ ಮಂಡಳಿಯ ಅಧ್ಯಕ್ಷ ರಾಜೇಂದ್ರ ಕಟಾರಿಯಾ, ''ರಾಜ್ಯ ಮಾವು ಮಂಡಳಿಯು ಮಾವು ಮಾರುಕಟ್ಟೆಗೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುವ ಮೂಲಕ ಗಮನಾರ್ಹ ಸಾಮರ್ಥ್ಯಗಳನ್ನು ಮತ್ತು ವಿಶಿಷ್ಟ ವ್ಯವಹಾರ ಮಾದರಿಯನ್ನು ಪರಿಚಯಿಸುತ್ತದೆ. ಮಾವಿನ ಬೆಳೆಗಾರರು / ವ್ಯಾಪಾರಿಗಳಿಗಾಗಿ ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್‌ಪಿಒ) ತರುವುದು, ಆ ಮೂಲಕ ಪರಿಸ್ಥಿತಿಗಳನ್ನು ನಿವಾರಿಸುವುದು ಮತ್ತು ಅವುಗಳ ಉತ್ಪನ್ನಗಳಿಗೆ ಕಾರ್ಯಸಾಧ್ಯವಾದ ಮಾರುಕಟ್ಟೆಯನ್ನು ಸೃಷ್ಟಿಸುವುದು ಮಂಡಳಿಯ ಯೋಜನೆಗಳಲ್ಲಿ ಪ್ರಮುಖವಾದವುಗಳಾಗಿವೆ. ಫ್ಲಿಪ್ ಕಾರ್ಟ್ ಮತ್ತು ಕರ್ನಾಟಕ ರಾಜ್ಯ ಮಾವು ಮಂಡಳಿ ಎರಡೂ ಇ-ಕಾಮರ್ಸ್ ಮೂಲಕ ರೈತರನ್ನು ಮಾರುಕಟ್ಟೆಗೆ ಪರಿಚಯಿಸಲು ಮಹತ್ವದ ವ್ಯವಹಾರಗಳನ್ನು ಸಾಧಿಸಲು ಸಕ್ರಿಯವಾಗಿ ಸಹಕರಿಸಿದೆ'' ಎಂದಿದ್ದಾರೆ.

English summary
e-commerce marketplace Flipkart and Karnataka State Mango Department and Marketing Corporation signed a memorandum of understanding (MoU) on Tuesday, enabling mango farmers sell their fresh produce online through the Flipkart platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X