ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಪ್‌ಕಾಮ್ಸ್: ಮತದಾನದ ಜಾಗೃತಿಗೆ ರಿಯಾಯಿತಿ ಮಾರಾಟ

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ವಿಧಾನಸಭಾ ಚುನಾವಣೆಗೆ ಮತದಾನದ ಪ್ರಮಾಣ ಹೆಚ್ಚಿಸಲು ರಿಯಾಯಿತಿ ದರದಲ್ಲಿ ಹಣ್ಣು, ತರಕಾರಿ ಮಾರಾಟ ಮೇಳ ಆಯೋಜಿಸಿ ಜಾಗೃತಿ ಮೂಡಿಸಲು ಹಾಪ್‌ಕಾಮ್ಸ್ ಮುಂದಾಗಿದೆ.

ಮೇ ಮೊದಲ ವಾರ ಮೇಳವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಶೇ.5ರ ರಿಯಾಯಿತಿಯಲ್ಲಿ ಮಾರಾಟ ನಡೆಸುವುದರ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆದು ಮತದಾನದ ಮಹತ್ವ ತಿಳಿಸಲು ಹಾಪ್ ಕಾಮ್ಸ್ ತೀರ್ಮಾನಿಸಿದೆ.

ಹಾಪ್‌ಕಾಮ್ಸ್: 20ಲಕ್ಷದೊರೆಗಿನ ಹಣ್ಣು-ತರಕಾರಿ ಖರೀದಿಗೆ ಟೆಂಡರ್ ಇಲ್ಲಹಾಪ್‌ಕಾಮ್ಸ್: 20ಲಕ್ಷದೊರೆಗಿನ ಹಣ್ಣು-ತರಕಾರಿ ಖರೀದಿಗೆ ಟೆಂಡರ್ ಇಲ್ಲ

ಮತದಾನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದಕ್ಕಾಗಿ ಅದರ ಮಹತ್ವವನ್ನು ತಿಳಿಸಿ ಮೇ 12ರಂದು ಮತದಾನ ಪ್ರಮಾಣವನ್ನು ಹೆಚ್ಚಿಸಬೇಕೆಂಬುಸು ನಮ್ಮ ಉದ್ದೇಶ ಎಂದು ಹಾಪ್‌ಕಾಮ್ಸ್ ಎಂಡಿ ವಿಶ್ವನಾಥ್ ತಿಳಿಸಿದ್ದಾರೆ.
ಹಾಪ್‌ಕಾಮ್ಸ್ ನ 224 ಮಳಿಗೆಗಳಲ್ಲಿಯೂ ರಿಯಾಯಿತಿ ದರದ ಮಾರಾಟ ನಡೆಯುವ ಸಾಧ್ಯತೆಯಿದ್ದು, ಖರೀದಿಗೆ ಆಗಮಿಸುವ ಗ್ರಾಹಕರಿಗೆ ಮತದಾನದ ಮಹತ್ವ ತಿಳಿಸುವ ಸಂದೇಶವನ್ನು ರವಾನಿಸಲಾಗುತ್ತದೆ.

Five percent rebate: Hopcoms initiative to promote tendering vote

ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಹಾಪ್‌ಕಾಮ್ಸ್ ಮೇಳವನ್ನು ಆಯೋಜಿಸಲಾಗುತ್ತಿತ್ತು. ಅವುಗಳಿಗೆ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೇಳದ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆದು ಮತದಾನಕ್ಕೆ ಅವರನ್ನು ಪ್ರೋತ್ಸಾಹಿಸಲು ಮೇಳವನ್ನು ಆಯೋಜಿಸಲಾಗುತ್ತದೆ.

English summary
In 224 outlets of Hopcoms citizens can purchase fruits and vegetables on 5 percent rebate on their price in May first week. The Hopcoms has taking out this initiative to create awareness about polling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X