ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿಗೆ ಚಟುವಟಿಕೆಗೆ ವಿನಾಯಿತಿ: ಗೊಬ್ಬರ ಮಾರಾಟ ಶೇ.45 ರಷ್ಟು ಹೆಚ್ಚಳ

|
Google Oneindia Kannada News

ನವದೆಹಲಿ, ಮೇ 4: ದೇಶದಲ್ಲಿ ಒಂದೆಡೆ ಕೊರೊನಾ ಬೀತಿ, ಇನ್ನೊಂದೆಡೆ ಲಾಕ್‌ಡೌನ್‌ನಿಂದಾಗಿ ಕಾರು, ದ್ವಿಚಕ್ರ ವಾಹನಗಳ ಮಾರಾಟ ಎಲ್ಲವೂ ಸಂಪೂರ್ಣವಾಗಿ ನಿಂತಿದೆ. ಇದರ ಮಧ್ಯೆ ಕೃಷಿ ಚಟುವಟಿಕೆಗಳಿಗೆ ಸರ್ಕಾರ ವಿನಾಯಿತಿ ನೀಡಿದ ಹಿನ್ನೆಲೆಯಲ್ಲಿ ರಸ ಗೊಬ್ಬರ ಮಾರಾಟ ಶೇ.45.1ರಷ್ಟು ಹೆಚ್ಚಳವಾಗಿದೆ.

Recommended Video

ಲಾಕ್ ಡೌನ್ ಸಮಯದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಮನೆಯಲ್ಲಿರದೇ ಏನ್ ಮಾಡ್ತಿದ್ದಾರೆ ನೋಡಿ | Upendra became Farmer

ಏಪ್ರಿಲ್ 2020ಕ್ಕೆ ಗೊಬ್ಬರ 20.56 ಟನ್‌ ಅಷ್ಟು ಮಾರಾಟವಾಗಿದೆ ಎಂದು ರಸಗೊಬ್ಬರ ಇಲಾಖೆ ಮಾಹಿತಿ ನೀಡಿದೆ.ಲಾಕ್‌ಡೌನ್ ಆರಂಭವಾಗುತ್ತಿದ್ದತೆ ಕೃಷಿ ಚಟುವಟಿಕೆಗಳಿಗೆ ಹೊಡೆತ ಬಿದ್ದಿತ್ತು, ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲಾರದೆ ನೀರಿನಲ್ಲಿ ಚೆಲ್ಲಿ ಬೇಸರ,ಆಕ್ರೋಶ ವ್ಯಕ್ತಪಡಿಸಿದ್ದರು. ಕೇವಲ ಗೊಬ್ಬರವಷ್ಟೇ ಅಲ್ಲದೆ ಬೀಜಗಳಿಗೂ ಬೇಡಿಕೆ ಬಂದಿದೆ.

ಮುಂಗಾರು ಆರಂಭಕ್ಕೂ ಮುನ್ನ ರೈತರಿಗೆ ಕೃಷಿ ಇಲಾಖೆ ಸಲಹೆಗಳುಮುಂಗಾರು ಆರಂಭಕ್ಕೂ ಮುನ್ನ ರೈತರಿಗೆ ಕೃಷಿ ಇಲಾಖೆ ಸಲಹೆಗಳು

ಪಂಜಾಬ್ , ಹರ್ಯಾಣಾ, ರಾಜಸ್ಥಾನದಲ್ಲಿ ಹೈಬ್ರಿಡ್ ಹತ್ತಿ, ಗೋಧಿಗೆ ಭಾರಿ ಬೇಡಿಕೆ ಬಂದಿದೆ.ಆದರೆ ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆ ಮೊದಲ ಸ್ಥಿತಿಯತ್ತ ಮರಳುತ್ತಿದೆ.

2018-19ರ ಮಾರಾಟಕ್ಕೂ 2020ರ ಮಾರಾಟಕ್ಕೂಇರುವ ವ್ಯತ್ಯಾಸ

2018-19ರ ಮಾರಾಟಕ್ಕೂ 2020ರ ಮಾರಾಟಕ್ಕೂಇರುವ ವ್ಯತ್ಯಾಸ

2018ರಲ್ಲಿ 12.96 ಲಕ್ಷ ಟನ್ ಗೊಬ್ಬರ ಮಾರಾಟವಾಗಿತ್ತು, 2019ರ ಏಪ್ರಿಲ್‌ನಲ್ಲಿ 14.7 ಲಕ್ಷ ಟನ್, ಇದೀಗ 2020ರ ಏಪ್ರಿಲ್‌ನಲ್ಲಿ ಬರೋಬ್ಬರಿ 20.56 ಲಕ್ಷ ಟನ್‌ ಅಷ್ಟು ಮಾರಾಟವಾಗಿದೆ.

ಯೂರಿಯಾ ಮಾರಾಟ ಪ್ರಮಾಣವೆಷ್ಟು?

ಯೂರಿಯಾ ಮಾರಾಟ ಪ್ರಮಾಣವೆಷ್ಟು?

ವಾರ್ಷಿಕ ಮಾರಾಟ ಬೆಳವಣಿಗೆ ಏಪ್ರಿಲ್‌ನಲ್ಲಿ ಶೇ.36.2ರಷ್ಟಿದೆ. ಯೂರಿಯಾ 2019ರಲ್ಲಿ 8.04 ಲಕ್ಷ ಟನ್, 2019ರಲ್ಲಿ 10.95 ಲಕ್ಷ ಟನ್. ಡಿ ಅಮೋನಿಯಮ್ ಫಾಸ್ಪೇಟ್ 2.97 ಲಕ್ಷ ಟನ್, ನೈಟ್ರೋಜನ್ ಫಾಸ್ಪರಸ್ ಸಲ್ಫರ್ ಕಾಂಪ್ಲೆಕ್ಸ್ ಗೊಬ್ಬರ3.9 ಲಕ್ಷ ಟನ್, ಮ್ಯೂರಿಯೇಟ್ ಆಫ್ ಪೊಟ್ಯಾಷ್ 1.33 ಲಕ್ಷ ಟನ್, ಸಿಂಗಲ್ ಸೂಪರ್ ಫಾಸ್ಪೇಟ್ 5.6 ಲಕ್ಷ ಟನ್‌ ಅಷ್ಟು ಮಾರಾಟವಾಗಿದೆ.

ರೈತರ ನೆರವಿಗೆ ಅಗ್ರಿ ವಾರ್ ರೂಂ, ಜಿಲ್ಲಾವಾರು ಸಹಾಯವಾಣಿರೈತರ ನೆರವಿಗೆ ಅಗ್ರಿ ವಾರ್ ರೂಂ, ಜಿಲ್ಲಾವಾರು ಸಹಾಯವಾಣಿ

ಇದು ಲಾಕ್‌ಡೌನ್ ಪರಿಣಾಮವಲ್ಲ

ಇದು ಲಾಕ್‌ಡೌನ್ ಪರಿಣಾಮವಲ್ಲ

ರಸಗೊಬ್ಬರ ಇಲಾಖೆಯ ಚಾರ್ಟ್ ನೀಡುವ ಮಾಹಿತಿ ಪ್ರಕಾರ ಗೊಬ್ಬರ ಇನ್ನಿತರೆ ಕೃಷಿಗೆ ಬೇಕಾಗಿರುವ ವಸ್ತುಗಳ ಬೇಡಿಕೆ ಕೇವಲ ಏಪ್ರಿಲ್‌ನಿಂದ ಆರಂಭವಾಗಿದ್ದಲ್ಲ. ನವೆಂಬರ್‌ನಿಂದ ಬೇಡಿಕೆ ದುಪ್ಪಟ್ಟಾಗಿತ್ತು ಎಂದು ತಿಳಿಸಿದ್ದಾರೆ.

ಮಳೆ ಆರಂಭವಾದರೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ

ಮಳೆ ಆರಂಭವಾದರೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ

ಇನ್ನೇನು ಮಳೆಗಾಲ ಆರಂಭವಾಗಲಿದೆ, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರಿನಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಿರುತ್ತದೆ. ರೈತರು ಸಾಕಷ್ಟು ಪ್ರದೇಶಗಳಲ್ಲಿ ಕೃಷಿ ಮಾಡುತ್ತಾರೆ.

English summary
Auto companies posted zero domestic sales of cars and two-wheelers in April, as manufacturing plants and dealer showrooms remained closed due to the nationwide lockdown. The same month, however, saw retail sales of fertiliser zoom by 45.1 per cent year-on-year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X