ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನ 37 ಆಣೆಕಟ್ಟು ದುರಸ್ತಿಗಾಗಿ ಹಣ ಬಿಡುಗಡೆಗೆ ರೈತರ ಆಗ್ರಹ

|
Google Oneindia Kannada News

ಚೆನ್ನೈ ಜು.6: ತಮಿಳುನಾಡು ರಾಜ್ಯದಲ್ಲಿ ದುರಸ್ತಿ ಎದುರು ನೋಡುತ್ತಿರುವ ಸುಮಾರು 37 ಆಣೆಕಟ್ಟುಗಳಿಗೆ ಹಣ ಬಿಡುಗಡೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ತಮಿಳುನಾಡು ರೈತರು ಒತ್ತಾಯಿಸಿದ್ದಾರೆ.

ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣೆ-2 (DRIP-2) ಯೋಜನೆ ಪ್ರಕಾರ 2020 ರಲ್ಲಿ ತಮಿಳುನಾಡಿನ ಮೆಟ್ಟೂರು, ಭವಾನಿಸಾಗರ ಮತ್ತು ಕೃಷ್ಣಗಿರಿ ಸೇರಿದಂತೆ ಒಟ್ಟು ಸುಮಾರು 37 ಅಣೆಕಟ್ಟುಗಳು ಅಂದಾಜು 610 ಕೋಟಿ ಅನುದಾನದಲ್ಲಿ ದುರಸ್ತಿಗೊಳ್ಳಲಿವೆ ಎಂದು ಕೇಂದ್ರ ಜಲ ಸಂಪನ್ಮೂಲ ಇಲಾಖೆ ತಿಳಿಸಿತ್ತು. ಆದರೆ ಅನುದಾನದ ಕೊರತೆಯಿಂದಾಗಿ ಬಹುತೇಕ ಆಣೆಕಟ್ಟುಗಳ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. ಕಾಮಗಾರಿ ಅರ್ಧ ಸ್ಥಿತಿಯಲ್ಲೇ ನಿಂತಿವೆ.

ಮೇಕೆದಾಟು ಯೋಜನೆ: ನಾಡಿನ ರಾಜಕಾರಣಿಗಳು ಮಾಡಿರುವ 7 ತಪ್ಪುಗಳು!ಮೇಕೆದಾಟು ಯೋಜನೆ: ನಾಡಿನ ರಾಜಕಾರಣಿಗಳು ಮಾಡಿರುವ 7 ತಪ್ಪುಗಳು!

ಆದ್ದರಿಂದ ಕೇಂದ್ರ ಸರ್ಕಾರ ಅಣೆಕಟ್ಟುಗಳ ದುರಸ್ತಿಗಾಗಿ ಸಂಬಂಧಿತ ಯೋಜನೆಗಳಡಿ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ರೈತರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

Farmers urge release of funds for repair of 37 dams in Tamil Nadu

ನೀರಿನ ಸಂರಕ್ಷಣೆಗೆ ಆಣೆಕಟ್ಟು ದುರಸ್ತಿ ಅಗತ್ಯ

ಈ ಕುರಿತು ಪ್ರತಿಕ್ರಿಯಿಸಿದ ವಿವಸಾಯಿಗಲ್ ಮುನ್ನೇತ್ರ ಕಳಗಂನ ಪ್ರಧಾನ ಕಾರ್ಯದರ್ಶಿಯಾದ ಕೆ.ಬಾಲಸುಬ್ರಮಣಿ, ಕೇಂದ್ರ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಆಗಾಗ ಆಣೆಕಟ್ಟುಗಳ ಲೆಕ್ಕ ಪರಿಶೋಧನೆ ಮಾಡಿದರೂ ಸಹ ಎರಡು ವರ್ಷಗಳಾದರೂ ಇನ್ನೂ ದುರಸ್ತಿ ಕಾರ್ಯ ಮುಗಿದಿಲ್ಲ. ನೀರಿನ ಹರಿವು ತಡೆದು ಸಂಕ್ಷಿಸಿಕೊಳ್ಳಲು ಅಣೆಕಟ್ಟುಗಳನ್ನು ಬಲಪಡಿಸಬೇಕು, ಅದಕ್ಕಾಗಿ ಒಟ್ಟು 37 ಆಣೆಕಟ್ಟುಗಳ ದುರಸ್ತಿ ತುರ್ತು ಅಗತ್ಯವಿದೆ ಎಂದು ರೈತರು ಆಗ್ರಹಿಸಿದ್ದಾರೆ.

Mekedatu; ಕರ್ನಾಟಕ ಡ್ಯಾಂಗೆ ಅನುದಾನ ಘೋಷಿಸುವುದು ಸರಿಯಲ್ಲMekedatu; ಕರ್ನಾಟಕ ಡ್ಯಾಂಗೆ ಅನುದಾನ ಘೋಷಿಸುವುದು ಸರಿಯಲ್ಲ

''ಸಮರ್ಪಕ ಮೂಲ ಸೌಕರ್ಯ ಇಲ್ಲದ ಹಿನ್ನೆಲೆಯಲ್ಲಿ ತಮಿಳುನಾಡಿನ ದಕ್ಷಿಣ ಭಾಗದಲ್ಲಿರುವ ರೈತರು ಮತ್ತು ಕಾವೇರಿ ತೀರದ ಪ್ರದೇಶದ ರೈತರು ನೀರು ಪಡೆಯಲು ಕಷ್ಟಪಡುತ್ತಿದ್ದಾರೆ, ಇದರಿಂದಾಗಿ ನೀರಿಲ್ಲದೇ ಅವರ ಜಮೀನುಗಳು ಬರಡಾಗಿವೆ. ಕುಡಿಯಲು ಸಹ ನೀರಿನ ಅಭಾವ ಸೃಷ್ಟಿಯಾಗುವ ಸಂಭವವಿದೆ'' ಎಂದು ಪ್ರತಿಪಾದಿಸಿದರು.

Farmers urge release of funds for repair of 37 dams in Tamil Nadu

ಭರವಸೆ ಈಡೇರಿಸುವಲ್ಲಿ ಸರ್ಕಾರ ವಿಫಲ

ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ನೀರಾವರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ವಂಗಲ್ ಹಾಗೂ ನೆರೂರ್ ಮಧ್ಯೆ ಚೆಕ್ ಡ್ಯಾಂ ನಿರ್ಮಿಸುವುದಾಗಿ ಭರವಸೆ ನೀಡಿ ನಂತರ ಯೋಜನೆಯನ್ನು ಕೈ ಬಿಟ್ಟಿದೆ. ನೀಡಿದ್ದ ಭರವಸೆ ಈಡೇರಿಸುವಲ್ಲಿ ಸರ್ಕಾರಗಳು ಪದೇ ಪದೆ ವಿಫಲವಾಗುತ್ತಿವೆ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ.

''ದುರಸ್ತಿ ಎದುರು ನೋಡುತ್ತಿರುವ ಇಷ್ಟು ಆಣೆಕಟ್ಟುಗಳನ್ನು ಸರಿಪಡಿಸಿದರೆ ಕುಡಿಯುವ ನೀರು, ನೀರಾವರಿ, ಪ್ರವಾಹ ನಿಯಂತ್ರಣ, ಜಲವಿದ್ಯುತ್ ಮತ್ತು ಅಂತರ್ಜಲ ಮರುಪೂರಣಕ್ಕೆ ಸಹಾಕಾರಿ ಆಗುತ್ತದೆ. ಇನ್ನು ತಿರುವಳ್ಳೂರ್ ನಗರದಲ್ಲಿ ಕುಡಿಯುವ ನೀರಿನ ಸಂಗ್ರಹಾಗಾರಗಳಲ್ಲಿ ನಿರ್ವಹಣೆ ಕೊರತೆಯಿಂದ ಕಸ ಕಡ್ಡಿ ಬಿದ್ದಿದ್ದು, ಗಿಡ ಗಂಟಿಗಳು ಬೆಳೆದಿವೆ. ಇದರಿಂದ ನೀರು ಹರಿದು ಬರಲು ಸಾಧ್ಯವಾಗುತ್ತಿಲ್ಲ'' ಎಂದು ಜಲಸಮಸ್ಯೆಗಳ ಕುರಿತು ರೈತರೊಬ್ಬರು ತಿಳಿಸಿದರು.

ತಮಿಳುನಾಡು ರಾಜ್ಯದ ಒಟ್ಟು ಉದ್ದೇಶಿತ 37 ಅಣೆಕಟ್ಟುಗಳಲ್ಲಿ ಸಾತನೂರು ಅಣೆಕಟ್ಟಿನಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಮೆಟ್ಟೂರು ಹಾಗೂ ಕೃಷ್ಣಗಿರಿ ಮತ್ತಿತರ 11 ಅಣೆಕಟ್ಟುಗಳನ್ನು ಪರೀಶೀಲಿಸಲಾಗುತ್ತಿದೆ ಎಂದು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

English summary
Farmers have requested the Union Government to release funds for repair of 37 dams in Tamil Nadu according to the Water Resources Department 37 dams would receive repair and reinforcement an estimated of Rs 610 Crore in 2020, but majority work still unfinished for due to lack of funds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X