ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

500ಕ್ಕೂ ಹೆಚ್ಚು ರೈತರ ಬಂಧನ - ತಪ್ಪಿದ ಅನಾಹುತ

By Ashwath
|
Google Oneindia Kannada News

ಬೆಂಗಳೂರು, ಜೂ.23: ಮುಖ್ಯಮಂತ್ರಿಗಳ ವಚನ ಭ್ರಷ್ಟತೆಯನ್ನು ಖಂಡಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತ ಸಂಘ ಹಾಗೂ ಹಸಿರು ಸೇನೆಯ 500ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಿಗ್ಗೆ 11 ಗಂಟೆ ಸುಮಾರಿಗೆ ನಗರ ರೈಲು ನಿಲ್ದಾಣದಿಂದ ವಿಧಾನ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಫ್ರೀಡಂಪಾರ್ಕ್‌‌ನಲ್ಲಿ ತಡೆದರು.

ಸೋಮವಾರದಿಂದ ಅಧಿವೇಶನ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ನಿಷೇಧಾಜ್ಞೆ ಹೇರಿದ್ದರೂ ಕಾರ್ಯಕರ್ತರು ಫ್ರೀಡಂ ಪಾರ್ಕ್‌ನಲ್ಲಿ ರಸ್ತೆಯಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಸರಿಸಿ ಒಳನುಗ್ಗಲು ಯತ್ನಿಸಿದರು. ಆಗ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ 500ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ತಪ್ಪಿದ ಅನಾಹುತ: ಬ್ಯಾರಿಕೇಡ್‌ಗಳನ್ನು ಸರಿಸಿ ಒಳನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ 10 ಬಿಎಂಟಿಸಿ ಬಸ್‌‌‌ನಲ್ಲಿ ಕೆಎಸ್‌ಆರ್‌ಪಿ ಮೈದಾನಕ್ಕೆ ಕಳುಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಕರೆದೊಯ್ಯಲು ಬಂದಿದ್ದ ಬಿಎಂಟಿಸಿ ಬಸ್‌‌ ಬ್ರೇಕ್‌ ವಿಫಲವಾಗಿ ಹಿಂದಕ್ಕೆ ಚಲಿಸಿ ನಿಂತಿದ್ದ ಪೊಲೀಸ್ ಜೀಪ್‌ಗೆ ಡಿಕ್ಕಿ ಹೊಡೆಯಿತು. ಒಂದೊಮ್ಮೆ ಬಸ್ಸು ತಪ್ಪಿ ಹಿಂದಕ್ಕೆ ನೇರವಾಗಿ ಚಲಿಸುತ್ತಿದ್ದರೆ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬರುವ ಸಾಧ್ಯತೆ ಇತ್ತು.

ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ರೈತ ಸೇನೆ ಪ್ರತಿಭಟನೆ ಮಾಡುವ ಮೊದಲು ದಾವಣಗೆರೆಯ ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣದ ಸದಸ್ಯರು ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ನವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.[ಅಧಿವೇಶನದ ಮೊದಲ ದಿನದ ಮುಖ್ಯಾಂಶಗಳು]

ಈ ಎರಡು ಪ್ರತಿಭಟನಾ ಮೆರವಣಿಗೆಯಿಂದಾಗಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆಯವರೆಗೆ ಮೆಜೆಸ್ಟಿಕ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನಗಳ ಓಡಾಟಕ್ಕೆ ಸ್ಥಳಾವಕಾಶವಿಲ್ಲದೆ ಸಂಚಾರ ಅಸ್ತವ್ಯಸ್ತವಾಯಿತು.

ಪ್ರತಿಭಟನೆಯ ಮತ್ತಷ್ಟು ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ

ಬಿಎಂಟಿಸಿ ಬಸ್‌ನ್ನು ತಳ್ಳುತ್ತಿರುವ ಪೊಲೀಸರು:

ಬಿಎಂಟಿಸಿ ಬಸ್‌ನ್ನು ತಳ್ಳುತ್ತಿರುವ ಪೊಲೀಸರು:

ಪ್ರತಿಭಟನೆಯನ್ನು ನಿಯಂತ್ರಿಸಲು ಬಂದಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಕರೆದೊಯ್ಯಲು ಬಂದಿದ್ದ ಬಿಎಂಟಿಸಿ ಬಸ್ಸನ್ನು ತಳ್ಳುತ್ತಿರುವುದು.

ಪೊಲೀಸ್‌ ಜೀಪ್‌ಗೆ ಗುದ್ದಿದ ಬಸ್‌:

ಪೊಲೀಸ್‌ ಜೀಪ್‌ಗೆ ಗುದ್ದಿದ ಬಸ್‌:

ಪ್ರತಿಭಟನಾಕಾರರನ್ನು ಕರೆದೊಯ್ಯಲು ಬಂದಿದ್ದ ಬಿಎಂಟಿಸಿ ಬಸ್‌‌ ಬ್ರೇಕ್‌ ವಿಫಲವಾಗಿ ಹಿಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಪೊಲೀಸ್ ಜೀಪ್‌ನ ಮುಂಭಾಗ ಜಖಂಗೊಂಡಿರುವುದು. ಒಂದೊಮ್ಮೆ ಬಸ್ಸು ತಪ್ಪಿ ನೇರವಾಗಿ ಹಿಂದಕ್ಕೆ ಚಲಿಸುತ್ತಿದ್ದರೆ ಭಾರಿ ಅನಾಹುತವಾಗುವ ಸಾಧ್ಯತೆಯಿತ್ತು.

ಪೊಲೀಸರು ರೈತರೊಂದಿಗೆ ಮಾತಿನ ಚಕಮಕಿ:

ಪೊಲೀಸರು ರೈತರೊಂದಿಗೆ ಮಾತಿನ ಚಕಮಕಿ:

ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವುದು.

ಒಳನುಗ್ಗಲು ಪ್ರಯತ್ನಿಸುತ್ತಿರುವ ರೈತರು

ಒಳನುಗ್ಗಲು ಪ್ರಯತ್ನಿಸುತ್ತಿರುವ ರೈತರು

ಫ್ರೀಡಂ ಪಾರ್ಕ್‌ನ ಮುಂಭಾಗದ ರಸ್ತೆಯಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಸರಿಸಿ ರೈತರು ಒಳನುಗ್ಗಲು ಪ್ರಯತ್ನಿಸುತ್ತಿರುವುದು.

 ರೈತರನ್ನು ಬಂಧಿಸಿದ ಪೊಲೀಸರು:

ರೈತರನ್ನು ಬಂಧಿಸಿದ ಪೊಲೀಸರು:

ರೈತರನ್ನು ಬಂಧಿಸಿ ಬಿಎಂಟಿಸಿ ಬಸ್ಸಿನಲ್ಲಿ ಕರೆದೊಯ್ಯುತ್ತಿರುವ ಪೊಲೀಸರು

 ರೈತರ ವಾಹನನದಲ್ಲೇ ಕರೆದೊಯ್ದ ಪೊಲೀಸರು:

ರೈತರ ವಾಹನನದಲ್ಲೇ ಕರೆದೊಯ್ದ ಪೊಲೀಸರು:

ರೈತರ ಸಂಖ್ಯೆ ಸಾಕಷ್ಟು ಇದ್ದರಿಂದ ಕೊನೆಗೆ ಅವರು ಬಂದಿದ್ದ ವಾಹನದಲ್ಲೇ ರೈತರನ್ನು ಬಂಧಿಸಿ ಕರೆದೊಯ್ಯಲಾಯಿತು.

 500ಕ್ಕೂ ಹೆಚ್ಚು ರೈತರಿಂದ ಪ್ರತಿಭಟನೆ:

500ಕ್ಕೂ ಹೆಚ್ಚು ರೈತರಿಂದ ಪ್ರತಿಭಟನೆ:

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತುಮಕೂರು ಜಿಲ್ಲೆಯ ಐನೂರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಯಾವುದೇ ಕಾರಣಕ್ಕೂ ಹೋರಾಟ ಕೈಬಿಡಲ್ಲ

ಯಾವುದೇ ಕಾರಣಕ್ಕೂ ಹೋರಾಟ ಕೈಬಿಡಲ್ಲ

ಬೆಳಗಾವಿ ಸುವರ್ಣ ಸೌಧದ ಅಧಿವೇಶನದ ವೇಳೆ ಮುಖ್ಯಮಂತ್ರಿಗಳು ರೈತರ ಸಮಸ್ಯೆಗಳನ್ನು ಬಗೆ ಹರಿಸಲು ವಿಧಾನಸೌಧದಲ್ಲಿ ಸಭೆ ಕರೆದು ವಿವರವಾಗಿ ಚರ್ಚಿಸುವುದಾಗಿ ತಿಳಿಸಿ ಮಾತಿಗೆ ತಪ್ಪಿ ವಚನ ಭ್ರಷ್ಟರಾಗಿದ್ದಾರೆ. ಹೀಗಾಗಿ ನಾವು ಈ ಹಿಂದೆ ಸರ್ಕಾರಕ್ಕೆ ಡೆಡ್‌ಲೈನ್‌ ನೀಡಿದ್ದರೂ ಸರ್ಕಾರ ನಮ್ಮ ಮಾತಿಗೆ ಬೆಲೆಯೇ ನೀಡುತ್ತಿಲ್ಲ. ಇಂದು ನಮ್ಮನ್ನು ಬಂಧಿಸಿದರೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ.
- ಕೋಡಿಹಳ್ಳಿ ಚಂದ್ರಶೇಖರ್‌‌, ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ

 ಟ್ರಾಫಿಕ್‌ ಜ್ಯಾಂ:

ಟ್ರಾಫಿಕ್‌ ಜ್ಯಾಂ:

ಈ ಎರಡು ರೈತ ಬಣಗಳ ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಪರ್ಯಾಯ ಮಾರ್ಗವನ್ನು ಪೊಲೀಸರು ಮೊದಲೇ ರೂಪಿಸಿದ್ದರು. ಆದರೂ ಸೋಮವಾರ ಮೆಜೆಸ್ಟಿಕ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್‌ ಜ್ಯಾಂ ಆಗಿತ್ತು.

 ರೈತರ ಮನವಿ ಸ್ವೀಕರಿಸಿದ ಸಚಿವರು:

ರೈತರ ಮನವಿ ಸ್ವೀಕರಿಸಿದ ಸಚಿವರು:

ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣದ ಪ್ರತಿಭಟನೆ ವೇಳೆ ಕಂದಾಯ ಸಚಿವ ಶ್ರೀನಿವಾಸ್‌ ಪ್ರಸಾದ್‌ ಫ್ರೀಡಂ ಪಾರ್ಕ್‌ಗೆ ಆಗಮಿಸಿ ಮನವಿಯನ್ನು ಸ್ವೀಕರಿಸಿದರು .ಬಳಿಕ ಮತನಾಡಿ ರೈತರ ಬೇಡಿಕೆಗಳನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿ‌ಸಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುವುದಾಗಿ ಹೇಳಿದರು.

English summary
Farmers in Karnataka on Monday staged a protest march under the banner of Rajya Raitha Sangha and Hasiru Sene demanding waiver of farm credit, permanent measures to check drought among others. Farmers marched from the railway station to Freedom Park and police stopped them when they tried to reach the Vidhana Soudha, the State Secretariat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X