• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೂಲ್ ಕಿಟ್ ಸೃಷ್ಟಿಕರ್ತರ ವಿವರ ನೀಡಿ: ಗೂಗಲ್‌, ಸಾಮಾಜಿಕ ತಾಣಗಳಿಗೆ ಪೊಲೀಸರ ಪತ್ರ

|

ನವದೆಹಲಿ, ಫೆಬ್ರವರಿ 6: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಹವಾಮಾನ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಮತ್ತು ಇತರರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ 'ಟೂಲ್‌ಕಿಟ್‌'ನ ಸೃಷ್ಟಿಕರ್ತರಿಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣ ಖಾತೆಗಳು, ಅವರ ಇ-ಮೇಲ್ ವಿಳಾಸ ಮತ್ತು ಯುಆರ್‌ಎಲ್‌ಗಳ ಬಗ್ಗೆ ಮಾಹಿತಿ ಒದಗಿಸುವಂತೆ ಗೂಗಲ್ ಮತ್ತು ಕೆಲವು ಸಾಮಾಜಿಕ ಜಾಲತಾಣ ದಿಗ್ಗಜ ಸಂಸ್ಥೆಗಳಿಗೆ ದೆಹಲಿ ಪೊಲೀಸರು ಸೂಚಿಸಿದ್ದಾರೆ.

ಭಾರತ ಸರ್ಕಾರದ ವಿರುದ್ಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಮರ ನಡೆಸುತ್ತಿರುವುದಕ್ಕಾಗಿ 'ಟೂಲ್ ಕಿಟ್' ಸೃಷ್ಟಿಸಿದ ಖಲಿಸ್ತಾನ ಪರವಾದಿಗಳ ಮೇಲೆ ದೆಹಲಿ ಪೊಲೀಸರ ಸೈಬರ್ ಘಟಕ ಗುರುವಾರ ಎಫ್‌ಐಆರ್ ದಾಖಲಿಸಿದೆ.

ಇಂದು ಬೃಹತ್ ಪ್ರತಿಭಟನೆ: ರಾಜ್ಯದಲ್ಲಿ ಹೆದ್ದಾರಿ ತಡೆ ಎಲ್ಲೆಲ್ಲಿ?ಇಂದು ಬೃಹತ್ ಪ್ರತಿಭಟನೆ: ರಾಜ್ಯದಲ್ಲಿ ಹೆದ್ದಾರಿ ತಡೆ ಎಲ್ಲೆಲ್ಲಿ?

ಗೂಗಲ್ ಹಾಗೂ ಇತರೆ ಸಂಸ್ಥೆಗಳಿಗೆ ಪತ್ರ ರವಾನಿಸಲಾಗಿದ್ದು, ಈ ಖಾತೆಗಳನ್ನು ಸೃಷ್ಟಿಸಿದ, ಸಾಮಾಜಿಕ ಮಾಧ್ಯಮಕ್ಕೆ ಟೂಲ್‌ಕಿಟ್‌ ಸೇರಿದಂತೆ ದಾಖಲೆಗಳನ್ನು ಅಪ್ಲೋಡ್ ಮಾಡಿದ ಜನರ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿದೆ ಎಂದು ಸೈಬರ್ ಘಟಕದ ಡಿಸಿಪಿ ಆನ್ಯೇಶ್ ರಾಯ್ ತಿಳಿಸಿದ್ದಾರೆ.

ಟೂಲ್‌ಕಿಟ್‌ನಲ್ಲಿ ಉಲ್ಲೇಖಿಸಿರುವ ನಿರ್ದಿಷ್ಟ ಸಾಮಾಜಿಕ ಮಾಧ್ಯಮ ಖಾತೆಗಳು, ಸೃಷ್ಟಿಕರ್ತರ ಇ-ಮೇಲ್ ವಿಳಾಸಗಳು ಮತ್ತು ಡೊಮೈನ್ ಯುಆರ್‌ಎಲ್‌ ವಿವರಗಳನ್ನು ನೀಡುವಂತೆ ಕೋರಲಾಗಿದೆ. ಈ ದಾಖಲೆಯನ್ನು ಬಳಿಕ ಗೂಗಲ್ ಡಾಕ್ ಮೂಲಕ ಅಪ್ಲೋಡ್ ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರೆಟಾ ಟ್ವೀಟ್‌ನಿಂದ ಭಾರತ ವಿರುದ್ಧದ ಅಂತಾರಾಷ್ಟ್ರೀಯ ಸಂಚು ಬಹಿರಂಗವಾಯ್ತೇ?ಗ್ರೆಟಾ ಟ್ವೀಟ್‌ನಿಂದ ಭಾರತ ವಿರುದ್ಧದ ಅಂತಾರಾಷ್ಟ್ರೀಯ ಸಂಚು ಬಹಿರಂಗವಾಯ್ತೇ?

ಸಂಬಂಧಿತ ಸಂಸ್ಥೆಗಳು ನೀಡುವ ಮಾಹಿತಿ ಆಧಾರದಲ್ಲಿ ತನಿಖೆ ಮುಂದುವರಿಸಲಾಗುವುದು. ಮೂಲ ದಾಖಲೆಯು ಟೂಲ್‌ಕಿಟ್‌ನ ಸೃಷ್ಟಿಕರ್ತರನ್ನು ಗುರುತಿಸಲು ಮತ್ತು ಅದನ್ನು ಹಂಚಿಕೊಂಡ ವ್ಯಕ್ತಿಯನ್ನು ಕಂಡುಹಿಡಿಯಲು ನೆರವಾಗಲಿದೆ. ಇದರಲ್ಲಿ ಸಂಚಿನ ಅಂಶಗಳು ಇರುವುದರಿಂದ ಇವುಗಳನ್ನು ಸೃಷ್ಟಿಸಿದ, ಸಂಪಾದಿಸಿದ ಮತ್ತು ಹಂಚಿಕೊಂಡ ವ್ಯಕ್ತಿಗಳನ್ನು ಪತ್ತೆಹಚ್ಚುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.

English summary
Delhi police in a letter to Google and social media entities asked to provide Emails, URLs and social media accounts details related to the creators of Toolkit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X