ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು; ರೈತರಿಗೆ ಚಿಂತೆ ತಂದ ಕಾಲುವೆ ರಿಪೇರಿ ಕಾಮಗಾರಿ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು,ಜು1: ದೇಶದ ಬೆನ್ನೆಲುಬು ರೈತನಿಗೆ ಕೃಷಿಗಾಗಿ ನೀರು ಅಗತ್ಯ. ಆದರೆ, ಈ ನೀರು ಪೂರೈಸುವ ಕಾಲುವೆಯ ದುರಸ್ತಿ ಕಾರ್ಯದಲ್ಲಿ ಗೋಲಾಮಲ್ ನಡೆಯುತ್ತಿದ್ದು ದೇವದುರ್ಗ ತಾಲ್ಲೂಕಿನ ರೈತರ ನಿದ್ದೆಗೆಡಿಸಿದೆ. ರೈತರ ಬದುಕು ಹಸನಾಗಿಸುವ ಕಾಲುವೆಯ ದುರಸ್ತಿಗೆ ನಾಲ್ಕು ದಶಕಗಳ ನಂತರ ಚಾಲನೆ ಸಿಕ್ಕಿದರೂ ಇದೀಗ ಕಾಲುವೆಯ ದುರಸ್ತಿ ಭರದಿಂದ ಸಾಗಿದ್ದರೂ ಕೆಲಸದ ಗುಣಮಟ್ಟದಿಂದ ಕೂಡಿಲ್ಲ ಎಂದು ರೈತರು ರೊಚ್ಚಿಗೆದ್ದಿದ್ದಾರೆ.

ನಾರಾಯಣಪುರ ಬಲದಂಡೆ ಕಾಲುವೆ ಮರು ನಿರ್ಮಾಣ 14 ನೂರು ಕೋಟಿ ವೆಚ್ಚದಲ್ಲಿ ಆರಂಭವಾಗಿದೆ. ಆದರೆ ಕಾಮಗಾರಿಯು ಕಳಪೆ ಎಂಬ ಅಪಸ್ವರ ಕೇಳಿ ಬಂದರೂ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿದ ಕಾರಣ ಮರು ನಿರ್ಮಾಣ ಕಾಮಗಾರಿ ಅದೇ ರಾಗ ಅದೇ ಹಾಡು ಎಂಬಂತಾಗಿದೆ.

ನೀರಿಲ್ಲದೆ ನಲ್ಲಿ ಹಾಕುವುದು ಪ್ರಯೋಜನವೇನು? ರಾಯಚೂರು ಜನರ ಪ್ರಶ್ನೆ ನೀರಿಲ್ಲದೆ ನಲ್ಲಿ ಹಾಕುವುದು ಪ್ರಯೋಜನವೇನು? ರಾಯಚೂರು ಜನರ ಪ್ರಶ್ನೆ

ಈಗಾಗಲೇ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ, ಮಸರಕಲ್, ಗಬ್ಬೂರು, ಶಂಕರಬಂಡಿ ಡಿಸ್ಟಬ್ಯೂಟರ್ 15 ರಲ್ಲಿ ಲೈನಿಂಗ್ ಗಾಗಿ ಕಾಂಕ್ರಿಟ್ ಯಂತ್ರಗಳನ್ನು ಬಳಸಿ ಕೆಲಸ ಮಾಡಬೇಕು. ಆದರೆ ಜನರನ್ನು ಬಳಸಿ ಕೆಲಸ ಮಾಡುತ್ತಿದ್ದು ಸರಿಯಾಗಿ ಕೆಲಸ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ರಾಯಚೂರು ಜಿಲ್ಲಾಧಿಕಾರಿಯ ಹೆಸರಿನಲ್ಲಿಯೇ ಆನ್‌ಲೈನ್ ವಂಚಕರ ಕೈಚಳಕರಾಯಚೂರು ಜಿಲ್ಲಾಧಿಕಾರಿಯ ಹೆಸರಿನಲ್ಲಿಯೇ ಆನ್‌ಲೈನ್ ವಂಚಕರ ಕೈಚಳಕ

ಹಳೆ ಸಿಡಿಗಳನ್ನೇ ರಿಪೇರಿ ಕಾಮಗಾರಿ

ಹಳೆ ಸಿಡಿಗಳನ್ನೇ ರಿಪೇರಿ ಕಾಮಗಾರಿ

ವಿತರಣಾ ಕಾಲುವೆ 1ರಲ್ಲಿ ಮರು ನಿರ್ಮಾಣ ಕಾಮಗಾರಿಯಲ್ಲಿ ಸಿಡಿ ತೆಗೆದು ಹೊಸ ಸಿಡಿ ನಿರ್ಮಾಣ ಮಾಡಬೇಕು. ಆದರೆ ಅದು ಯಾವುದು ಮಾಡದೇ ಹಳೆ ಸಿಡಿಗಳನ್ನೇ ರಿಪೇರಿ ಮಾಡುತ್ತಾ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ರೈತರು ದೂರಿದ್ದಾರೆ. ವಿತರಣಾ ಕಾಲುವೆ 15, 16 ರಲ್ಲಿ ಕಾಮಗಾರಿ ನಡೆದಿದ್ದು ಅದರಲ್ಲಿ ಸಿಮೆಂಟ್ ಇದ್ದರೆ ಮರುಳು ಇರಲ್ಲ, ಮರುಳು ಇದ್ದರೆ ಸಿಮೆಂಟ್ ಕಡಿಮೆ ಕಾಣುತ್ತದೆ.

ಕೆನಾಲ್ ಕಾಲುವೆ ಅಂತಾ ಬಂದರೆ ಫೆವರ್ ಮಿಷನ್ ಇರಬೇಕು. ಆದರೆ ಯಾವುದೇ ಯಂತ್ರೋಪಕರಣಗಳು ಇಲ್ಲದೆ ಅಲ್ಲೇ ಕೆಲಸಕ್ಕೆ ಬಂದಿರುವಂತೆ ಗಾರೆ ಕೆಲಸಗಾರರನ್ನು ಮುಂದೆ ಇಟ್ಟುಕೊಂಡು ಕಾಮಗಾರಿ ನಡೆಸುತ್ತಿದ್ದಾರೆ. ಇದರಲ್ಲಿ ಯಾವುದೇ ಕಾಮಗಾರಿಗೆ ಯಾವ ಯಂತ್ರೋಪಕರಣ ಇಲ್ಲದೆ ಕಾಮಗಾರಿ ಮಾಡೋದು ಅಂದರೆ ಎನ್‌ಡಿಡಬ್ಲೂಯ ಕಂಪನಿ ಅಷ್ಟೇ ಎಂದು ದೂರುಲಾಗುತ್ತಿದೆ.

ಬಹುದಿನಗಳ ಕೆಲಸ ನೆರವೇರುತ್ತಿರುವುದು ಖುಷಿ ಪಡುವ ಸಂಗತಿ. ಆದರೆ ಕಾಮಗಾರಿ ಕಳಪೆಯಾಗಿದೆ ಅಂತಾ ದುಃಖ ಪಡಬೇಕೆ? ಎಂಬುದು ಒಂದೂ ಅರ್ಥವಾಗುತ್ತಿಲ್ಲ ಎಂಬುದು ರೈತರ ಅಳಲು.

ಗುತ್ತಿಗೆ ಪಡೆದ ಬಲಿಷ್ಠ ಏಜೆನ್ಸಿ ಕಳಪೆ ಕಾಮಗಾರಿ

ಗುತ್ತಿಗೆ ಪಡೆದ ಬಲಿಷ್ಠ ಏಜೆನ್ಸಿ ಕಳಪೆ ಕಾಮಗಾರಿ

ಕಣ್ಣ ಮುಂದೆ ನಡೆದರೂ ಎಲ್ಲಾ ಅಧಿಕಾರಿಗಳು ಮೌನ ವಹಿಸಿದ್ದು ನೋಡಿದರೆ ರೈತರಿಗೆ ಅನುಮಾನಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಈ ಕಾಮಗಾರಿ ಪ್ರಾರಂಭದ ದಿನವೇ ತೀರಾ ಕಳಪೆ ಆಗಿದ್ದ ಕಾರಣ ಇದನ್ನೇ ನಂಬಿದ ರೈತರಿಗೆ ಮೋಸ ಮಾಡಿದಂತೆ ಆಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕಾಮಗಾರಿ ಕಳಪೆ ಆಗದಂತೆ ಎಚ್ಚರ ವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರೈತರ ಹಿತಾಸಕ್ತಿಗಾಗಿ ಸರ್ಕಾರ ಈ ಕಾಲುವೆಗೆ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಸಂಬಂಧ ಗುತ್ತಿಗೆ ಪಡೆದ ಬಲಿಷ್ಠ ಏಜೆನ್ಸಿ ದುರಸ್ತಿ ಕೆಲಸ ಮಾಡುತ್ತಿದ್ದು ಕಳಪೆ ಕಾಮಗಾರಿದಿಂದಾಗಿ ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಮುಂಗಾರು ಮಳೆ ಕಾಲುವೆ ನೀರು ಬಳಸಿಕೊಂಡು ಕೃಷಿ ಮಾಡಬೇಕೆಂದು ಕೊಂಡಿದ್ದ ರೈತರು ಕಳಪೆ ಕಾಲುವೆ ಕಾಮಗಾರಿಯಿಂದ ಬೇಸತ್ತು ಹೋಗಿದ್ದಾರೆ. ದೇವದುರ್ಗ ತಾಲ್ಲೂಕಿನ ನಾನಾ ಕಡೆಗಳಲ್ಲಿ ನಡೆಯುತ್ತಿರುವ ನಾರಾಯಣಪುರ ಬಲದಂಡೆ ಉಪ ಕಾಲುವೆ ಕಾಮಗಾರಿಗಳು ಸಂಪೂರ್ಣ ಕಳೆಪೆ ಮಟ್ಟದಿಂದ ಕೂಡಿದೆ.

ಶೇಕಡಾ 80 ರಷ್ಟು ಕಾಮಗಾರಿ ಪೂರ್ಣ

ಶೇಕಡಾ 80 ರಷ್ಟು ಕಾಮಗಾರಿ ಪೂರ್ಣ

ದೇವದುರ್ಗ ತಾಲ್ಲೂಕಿನ ಶಾಸಕರು ತಾಲ್ಲೂಕು ತೀರಾ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯಿಂದ ತೆಗೆದು ಹಾಕಲು ಹಲವಾರು ಕಾಮಗಾರಿಗಳು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಇದರಲ್ಲಿ ಸುಮಾರು ಶೇಕಡಾ 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಹಲವಾರು ವರ್ಷಗಳಿಂದ ಬೇಡಿಕೆ ಇದ್ದ ಕಾಲುವೆ ಕಾಮಗಾರಿಗಳು ತಾಲ್ಲೂಕಿನಲ್ಲಿ ಅತಿ ಹೆಚ್ಚು ಕಾಮಗಾರಿ ಬೇಡಿಕೆ ಅಂದರೆ ಅದು ಕಾಲುವೆ ಕಾಮಗಾರಿಗಳು. ರೈತರಿಗೆ ಅನುಕೂಲ ತಕ್ಕಂತೆ ನಡೆಯಬೇಕಿದ್ದ ಕಾಮಗಾರಿ ತೀರಾ ಕಳಪೆಯಿಂದ ಕೂಡಿದ್ದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿ ತೀರಾ ಕಳಪೆ ಮಟ್ಟಕ್ಕೆ ಹೋಗಿದ್ದು ಇದನ್ನು ಹೇಳುವವರು ಕೇಳುವವರು ಯಾರು? ಇಲ್ಲವೆಂಬಂತೆ ನಡೆಯುತ್ತಿದೆ.

ರೈತರಿಗೆ ಅನುಕೂಲವಾಗುವಂತೆ ಕಾಮಗಾರಿ ಮಾಡಿಕೊಡಿ

ರೈತರಿಗೆ ಅನುಕೂಲವಾಗುವಂತೆ ಕಾಮಗಾರಿ ಮಾಡಿಕೊಡಿ

ದೇವದುರ್ಗ ತಾಲ್ಲೂಕಿನ ಶಾಸಕರ ಆಡಿಯೋ ಕೆಲ ತಿಂಗಳ ಹಿಂದೆ ವೈರಲ್ ಆಗಿತ್ತು. ಎಇಇ ಕಾಮಗಾರಿ ಮಾಡದೆ ನೀವು ಬಿಲ್ ಮಾಡುತ್ತಿರುವುದು ತುಂಬಾ ತಪ್ಪು ಅದು ಯಾವ ತರ ಮಾಡುವುದಕ್ಕೆ ಬರುತ್ತದೆ?, ಮಾಡಲು ಹೇಗೆ ಸಾಧ್ಯ? ಎಂದು ಕೆಲವೊಂದು ಅವಾಚ್ಯ ಶಬ್ದಗಳಿಂದ ಮಾತನ್ನು ಆಡಿರುವುದು ಕಂಡು ಬರುತ್ತದೆ. ಶಾಸಕರು ವಾದವೇನೆಂದರೆ ಕಾಮಗಾರಿ ಸಂಪೂರ್ಣವಾಗಿ ಗುಣಮಟ್ಟದಲ್ಲಿ ಕೂಡಿಕೊಂಡು ಇರಬೇಕು ಅಂತ. ಆದರೆ ಶಾಸಕರ ಮಾತಿಗೂ ಬೆಲೆ ಕೊಡದೆ ಡಿಎನ್‌ಡಬ್ಲೂಯ ಕಂಪನಿಯವರು ತೀರಾ ಕಳಪೆ ಮಟ್ಟ ಕಾಮಗಾರಿ ಮಾಡುತ್ತಿದ್ದಾರೆ. ರೈತರಿಗೆ ಅನುಕೂಲವಾಗುವಂತೆ ಕಾಮಗಾರಿ ಮಾಡಿಕೊಡಿ ಎಂಬುದು ಶಾಸಕರ ವಾದ.

Recommended Video

ಬಂಗಾರದ ಮನುಷ್ಯನ ಗೋಲ್ಡನ್ ಹಾರ್ಟ್: Neeraj Chopra ವಿನಮ್ರತೆ ನೋಡಿ ನೆಟ್ಟಿಗರು ಫಿದಾ |*Sports |OneIndia Kannada

English summary
Farmers of Devadurga taluk of Raichur worried on canal repair quality of work. Farmers demand to take up work again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X