ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಡ್ರೈ ಬನಾನ"; ಬಾಳೆ ಉಳಿಸಿಕೊಳ್ಳಲು ಬಳ್ಳಾರಿ ರೈತನ ವಿನೂತನ ಪ್ರಯೋಗ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜೂನ್ 23: ಹಲವು ರೀತಿಯಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಿದ ರೈತ‌ರೊಬ್ಬರು ಆ ಸಂಕಷ್ಟದಿಂದ ಹೊರ ಬರಲು ಮಾಡಿದ ಉಪಾಯ ಈಗ ಮೆಚ್ಚುಗೆಗೆ ಪಾತ್ರವಾಗಿದೆ. ನೈಸರ್ಗಿಕ ವಿಕೋಪದಿಂದ, ಅಷ್ಟೇ ಅಲ್ಲದೇ ಲಾಕ್ ಡೌನ್ ನಿಂದಾಗಿ ನಷ್ಟ ಅನುಭವಿಸಿದ ಈ ರೈತ ಬೆಳೆ ಕೈಕೊಟ್ಟಾಗ, ಅದಕ್ಕೆ ಬೇರೆ ದಾರಿಯನ್ನೇ ಹುಡುಕಿದರು.

Recommended Video

Karnataka government Fixed Charges for COVID-19 Treatment in Private Hospitals | Oneindia Kannada

ಐದು ಎಕರೆಯಲ್ಲಿ ಬಾಳೆ ಬೆಳೆದಿದ್ದ ಇವರಿಗೆ ಲಾಕ್ ಡೌನ್ ಹೊಡೆತ ಕೊಟ್ಟಿತ್ತು. ಸರ್ಕಾರ ಘೋಷಿಸಿದ ಪರಿಹಾರವೂ ಕೈಕೊಟ್ಟಿತು. ಆದರೆ ಇದೇ ಸಂದರ್ಭದಲ್ಲಿ ವಿಶೇಷವಾದ ಉಪಾಯವನ್ನು ಕಂಡುಕೊಂಡರು ಇವರು. ಆಗಿರುವ ಆರ್ಥಿಕ ಸಂಕಷ್ಟವನ್ನು ಸರಿದಾರಿಗೆ ತರಲು ಪ್ರಯತ್ನಿಸಿದರು. ಆ ಉಪಾಯ ಯಾವುದು? ಬೆಳೆದ ಬೆಳೆ ಹೇಗೆ ಲಾಭ ತಂದುಕೊಟ್ಟಿತು? ಇಲ್ಲಿದೆ ಅದರ ವಿವರ...

ನೀರಿಲ್ಲದ ನೆಲದಲ್ಲಿ ಸಹಜ ಕೃಷಿಯಿಂದ ಗೆದ್ದ ಕೋಲಾರದ ರೈತನೀರಿಲ್ಲದ ನೆಲದಲ್ಲಿ ಸಹಜ ಕೃಷಿಯಿಂದ ಗೆದ್ದ ಕೋಲಾರದ ರೈತ

 ಮಣ್ಣುಪಾಲಾದ ಲಕ್ಷಾಂತರ ರೂಪಾಯಿ

ಮಣ್ಣುಪಾಲಾದ ಲಕ್ಷಾಂತರ ರೂಪಾಯಿ

ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ ಕೃಷಿಕ ಬಿ.ಗಂಗಾಧರ್ ಅವರು ಎರಡು ವರ್ಷದ ಹಿಂದೆ ಹದಿಮೂರು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದರು. ಆದರೆ ಮಳೆ ಗಾಳಿಗೆ ಸಿಲುಕಿ ಸಾಕಷ್ಟು ನಷ್ಟ ಅನುಭವಿಸಬೇಕಾಯಿತು. ಇದರಿಂದ ಬರೋಬ್ಬರಿ ಎಂಟು ಲಕ್ಷ ರೂಪಾಯಿ ಮಣ್ಣು ಪಾಲಾಯಿತು. ನಂತರ 5 ಎಕರೆಯಲ್ಲಿ ಬೆಳೆದ ಬಾಳೆ ಬೆಳೆಯೂ ಲಾಕ್ ಡೌನ್ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡಿದ್ದು ಗಾಯದ ಮೇಲೆ ಬರೆ ಎಳೆದಿತ್ತು.

 ಬಾಳೆ ಹಣ್ಣನ್ನು ಉಳಿಸಿಕೊಳ್ಳಲು ಹೊಸ ಪ್ರಯೋಗ

ಬಾಳೆ ಹಣ್ಣನ್ನು ಉಳಿಸಿಕೊಳ್ಳಲು ಹೊಸ ಪ್ರಯೋಗ

ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ 5000 ರೂಪಾಯಿ ಪರಿಹಾರ ನಿಡುತ್ತೇವೆ ಎಂದಿತ್ತು. ಆದರೆ ಈವರೆಗೂ ಇವರಿಗೆ ನಯಾ ಪೈಸೆ ಪರಿಹಾರ ಸಿಗಲಿಲ್ಲ. ಇದರಿಂದ ನೊಂದ ಈ ರೈತ ಸಡ್ಡು ಹೊಡೆದು ನಿಲ್ಲಲು ಮುಂದಾದರು. ವಿನೂತನ ಪ್ರಯೋಗಕ್ಕೆ ಕೈ ಹಾಕಿದರು. ಕೈ ತಪ್ಪುವ ಹಂತದಲ್ಲಿದ್ದ ಬಾಳೆ ಹಣ್ಣುಗಳನ್ನು ಹೇಗಾದರೂ ಮಾಡಿ ಉಪಯೋಗಿಸಿಕೊಳ್ಳಲೇಬೇಕು ಎಂದು ತೀರ್ಮಾ

 ಬಾಳೆ ಹಣ್ಣಿನ್ನು ಒಣಗಿಸುವ ಪ್ರಯೋಗ

ಬಾಳೆ ಹಣ್ಣಿನ್ನು ಒಣಗಿಸುವ ಪ್ರಯೋಗ

ಬಾಳೆ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದಾಯಿತು. ಹೀಗಾಗಿ ಗಿಡದಲ್ಲಿ ಹಣ್ಣಾಗಿ ಬೆಳೆದ ಬೆಳೆ ಕೈ ತಪ್ಪುವ ಹಂತದಲ್ಲಿತ್ತು. ಆಗ ರೈತ ಗಂಗಾಧರ್ ಅವರಿಗೆ ಹೊಳೆದದ್ದೇ ಆ ಬಾಳೆ ಹಣ್ಣುಗಳನ್ನು ಒಣಗಿಸಿ ಡ್ರೈ ಬನಾನ ತಯಾರಿಸುವ ಆಲೋಚನೆ. ಈ ಹಣ್ಣುಗಳನ್ನು ಒಣಗಿಸಿ ಉತ್ಪನ್ನ ತಯಾರಿಸಿದ್ದಾರೆ ಈ ರೈತ. ಈ ಉತ್ಪನ್ನಕ್ಕೆ ಮಾರುಟ್ಟೆಯಲ್ಲಿ ಒಳ್ಳೆ ಪ್ರತಿಕ್ರಿಯೆಯೂ ದೊರೆತಿದೆ. ರಾಜ್ಯದಲ್ಲೇ ಇದೊಂದು ವಿನೂತನ ಪ್ರಯೋಗವಾಗಿದೆ.

 ಒಣಗಿದ ಬಾಳೆ ಹಣ್ಣಿನಲ್ಲಿ ಏನೇನೆಲ್ಲಾ ಇದೆ...

ಒಣಗಿದ ಬಾಳೆ ಹಣ್ಣಿನಲ್ಲಿ ಏನೇನೆಲ್ಲಾ ಇದೆ...

ಒಣಗಿದ ಬಾಳೆ ಹಣ್ಣಿನಲ್ಲಿ 74.31 ಮಿ.ಗ್ರಾಂ. ಕ್ಯಾಲ್ಸಿಯಂ, 32.83 ಮಿ.ಗ್ರಾಂ ಕಬ್ಬಿಣಂಶ, 139.69 ಸೋಡಿಯಂ, 6.51 ನಷ್ಟು ಫೈಬರ್, 73.44 ನಷ್ಟು ಸಕ್ಕರೆ ಅಂಶ ಇದೆ ಎಂದು ರಾಯಚೂರು ಕೃಷಿವಿಜ್ಙಾನ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದ್ದು, ಇದನ್ನೇ ಬಂಡವಾಳ ಮಾಡಿಕೊಂಡರು ಇವರು. ಈ ಬಾಳೆ ಹಣ್ಣುಗಳನ್ನು ಒಣಗಿಸಿ, ಮಾರುಕಟ್ಟೆಗೆ ಪರಿಚಯಿಸಿ ಇದೀಗ ಆರ್ಥಿಕ ಸಂಕಷ್ಟದಿಂದ ಹೊರಬರುವ ನೂತನ ಪ್ರಯೋಗದಲ್ಲಿರುವ ರೈತ ಗಂಗಾಧರ್ ಅವರ ಬಗ್ಗೆ ಶ್ಲಾಘನೆಯೂ ವ್ಯಕ್ತವಾಗಿದೆ.

English summary
The ballari farmer Gangadhar has took up new experiment of preparing Dry Banana. Here is his success story,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X