ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮದ ನೀರಿನ ಸಮಸ್ಯೆಗೆ ಬಾವಿ ತೋಡಿ ಭಗೀರಥನಾದ ರೈತ

|
Google Oneindia Kannada News

ಅಹಮದಾಬಾದ್‌, ಜೂ.28: ನೀರಿನ ಕೊರತೆಯನ್ನು ನೀಗಿಸುವ ಪ್ರಯತ್ನದಲ್ಲಿ ಗುಜರಾತ್‌ನ ಡ್ಯಾಂಗ್ ಜಿಲ್ಲೆಯ ರೈತರೊಬ್ಬರು ತಮ್ಮ ಹಳ್ಳಿಯ ಜನರಿಗೆ ಬಾವಿಯನ್ನು ತೋಡಿದ್ದಾರೆ ಯಶ ಕಂಡಿದ್ದಾರೆ.

ಸಾಮಾನ್ಯವಾಗಿ, ಡ್ಯಾಂಗ್‌ಗೆ ಹೆಚ್ಚಿನ ಮಳೆಯಾಗುತ್ತದೆ. ಆದರೆ ಅದರ ಗುಡ್ಡಗಾಡು ಮತ್ತು ಕಲ್ಲಿನ ಭೂಪ್ರದೇಶದಿಂದಾಗಿ, ಬೇಸಿಗೆಯ ನಾಲ್ಕು ತಿಂಗಳುಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಇರುತ್ತದೆ. 60 ವರ್ಷದ ರೈತ ಗಂಗಾಭಾಯಿ ಪವಾರ್ ಅವರು ಗ್ರಾಮದ ನೀರಿನ ಸಮಸ್ಯೆಗೆ ಸರಪಂಚರಿಂದ ಸಹಾಯ ಪಡೆಯಲು ಪ್ರಯತ್ನಿಸಿದರು. ಆದರೆ ಅವರ ಬೇಡಿಕೆಗಳು ಈಡೇರದಿದ್ದಾಗ, ಅವರೇ ನೀರಿನ ಉದ್ದೇಶಕ್ಕಾಗಿ ಬಾವಿ ತೋಡಲು ಪ್ರಾರಂಭಿಸಿದರು.

ಸೂರ್ಯಕಾಂತಿ ಬೀಜ ಉತ್ಪಾದನೆಯ ಒಪ್ಪಂದಕ್ಕೆ ಬೆಂಗಳೂರು ಕೃಷಿ ವಿವಿ ಸಹಿ ಸೂರ್ಯಕಾಂತಿ ಬೀಜ ಉತ್ಪಾದನೆಯ ಒಪ್ಪಂದಕ್ಕೆ ಬೆಂಗಳೂರು ಕೃಷಿ ವಿವಿ ಸಹಿ

ಸುಮಾರು ಎರಡು ವರ್ಷಗಳ ನಂತರ ಅವರು ತಮ್ಮ ಗ್ರಾಮಕ್ಕಾಗಿ 32 ಅಡಿ ಬಾವಿ ತೋಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಗ್ರಾಮದ ಸರಪಂಚೆ ಗೀತಾಬೆನ್ ಗವಿತ್ ಅವರು ಪವಾರ್ ಅವರ ಶ್ರಮವನ್ನು ಶ್ಲಾಘಿಸಿ ಅಭಿನಂದಿಸಿದರು. ಗ್ರಾಮದ ಅರ್ಜುನ್ ಬಾಗುಲ್ ಮಾತನಾಡಿ, ಈ ಬಾವಿಯಿಂದ ಗ್ರಾಮಸ್ಥರ ದಾಹ ನೀಗಿಸಿ ನೀರಾವರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

Farmer Drilled Well to Solve Water Scarcity in Village

ಡ್ಯಾಂಗ್ ಜಿಲ್ಲೆಯಲ್ಲಿ, ಪ್ರತಿ ಮಾನ್ಸೂನ್‌ನಲ್ಲಿ ಸುಮಾರು 125 ಇಂಚು ಮಳೆ ದಾಖಲಾಗುತ್ತದೆ. ಆದಾಗ್ಯೂ, ಎಲ್ಲಾ ಮಳೆ ನೀರು ಸಮುದ್ರಕ್ಕೆ ಕೊಚ್ಚಿಕೊಂಡು ಹೋಗುತ್ತದೆ. ಇಲ್ಲಿನ ಗ್ರಾಮಸ್ಥರು ನೀರಿಗಾಗಿ ಹರಸಾಹಸ ಪಡಬೇಕಾಗಿದ್ದು, ನಿತ್ಯ ಬಳಕೆಗೆ ವ್ಯವಸ್ಥೆ ಇಲ್ಲದಾಗಿದೆ. ಇಲ್ಲಿನ ಹೆಚ್ಚಿನ ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತವಾಗಿದೆ. ನೀರಿನ ಕೊರತೆಯಿಂದಾಗಿ, ಅವರ ಮುಂದೆ ಜೀವನೋಪಾಯದ ಬಿಕ್ಕಟ್ಟು ಇದ್ದೇ ಇದೆ.

ಅಕ್ಕಿ ಬೆಲೆಯಲ್ಲಿ ಶೇಕಡಾ 10ರಷ್ಟು ಹೆಚ್ಚಳ: ಮತ್ತಷ್ಟು ಹೆಚ್ಚಾಗುವ ಆತಂಕಅಕ್ಕಿ ಬೆಲೆಯಲ್ಲಿ ಶೇಕಡಾ 10ರಷ್ಟು ಹೆಚ್ಚಳ: ಮತ್ತಷ್ಟು ಹೆಚ್ಚಾಗುವ ಆತಂಕ

ಏತನ್ಮಧ್ಯೆ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕಳೆದ ವಾರ ಬನಸ್ಕಾಂತ ಮತ್ತು ಪಟಾನ್‌ನ 135 ಹಳ್ಳಿಗಳಿಗೆ ಕುಡಿಯುವ ಮತ್ತು ನೀರಾವರಿಗಾಗಿ ನೀರು ಒದಗಿಸಲು ಹಲವು ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ. ಜೂನ್ 27 ರಂದು, ನೈಋತ್ಯ ಮಾನ್ಸೂನ್ ಅರಬ್ಬಿ ಸಮುದ್ರ ಮತ್ತು ಗುಜರಾತ್‌ನ ಹೆಚ್ಚಿನ ಭಾಗಗಳಲ್ಲಿ ಮುಂದುವರೆದಿದೆ. ಅದರ ಉತ್ತರದ ಮಿತಿಯು ದೀಸಾ ಮೂಲಕ ಹಾದುಹೋಗುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ರಾಜ್ಯ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಸೋಮವಾರ ರಾತ್ರಿ 8 ಗಂಟೆಯವರೆಗೆ 20 ತಾಲೂಕುಗಳಲ್ಲಿ ಮಳೆಯಾಗಿದೆ. ಡ್ಯಾಂಗ್ ಜಿಲ್ಲೆಯ ಅಹ್ವಾದಲ್ಲಿ 38ಮಿಮೀ ಮಳೆಯಾಗಿದೆ. ನಂತರ ಖೇರ್ಗಾಮ್, ನವಸಾರಿಯಲ್ಲಿ 25 ಮಿಮೀ ಮತ್ತು ವಾಘೈ, ಡ್ಯಾಂಗ್‌ನಲ್ಲಿ 10 ಮಿಮೀ ಮತ್ತು ಡೋಲ್ವನ್, ತಾಪಿ. ಅಹಮದಾಬಾದ್ ಸಮೀಪದ ಧೋಲೇರಾದಲ್ಲಿ 3 ಮಿಮೀ ಮಳೆಯಾಗಿದೆ.

English summary
A farmer in the Dang district of Gujarat has digged a well for the people of his village in an attempt to rectify the shortage of water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X