• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

91ನೇ ದಿನಕ್ಕೆ ಕಾಲಿಟ್ಟ ದಿಲ್ಲಿ ರೈತ ಚಳವಳಿ

|

ದಿಲ್ಲಿಯ ರೈತ ಹೋರಾಟಕ್ಕೆ ದಶ ದಿಕ್ಕುಗಳಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ ನಮ್ಮ ದೇಶದ ಪ್ರಭುತ್ವ ಹೋರಾಟವನ್ನು ಹತ್ತಿಕ್ಕಲು ಬೇಕಾದ ಎಲ್ಲಾ ರೀತಿಯ ಕುತಂತ್ರಗಳನ್ನೂ ಅನುಸರಿಸುತ್ತಿದೆ.

ಇಷ್ಟು ದೀರ್ಘವಾದ ಚಳವಳಿ ನಡೆಸಿದರೂ, ದಿನೇ ದಿನೇ ಚಳುವಳಿ ಗಟ್ಟಿಯಾಗುತ್ತಿದ್ದರೂ ಸರ್ಕಾರಕ್ಕೆ ಏಕೆ ತಾನು ಮಾಡಿದ್ದೇ ಸರಿ ಎಂಬ ಭಾವನೆ ಇದೆ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಇದೇ ಜನರಿಂದ, ರೈತರಿಂದ ಆಯ್ಕೆಯಾದ ಈ ಸರ್ಕಾರಕ್ಕೇಕೆ ಇಷ್ಟು ಸೆಡವು. ನಿನ್ನೆ ದಿಲ್ಲಿಯ ಚಳುವಳಿ ಕುರಿತಾಗಿ ಮಾನ್ಯ ಕೃಷಿ ಸಚಿವರು ಆಡಿರುವ ಮಾತುಗಳನ್ನು ಕೇಳಿ.

ವಿನಾಶದತ್ತ ಭಾಜಪ: ರೈತ ಮತಗಳ ಫಸಲು ಕೊಯಿಲಿಗಾಗಿ ಕಾದಿರುವ ಇತರೆ ಪಕ್ಷಗಳು

"ಗುಂಪು ಸಂಘಟನೆ ಮಾಡುವುದರಿಂದ ಕಾಯಿದೆಗಳನ್ನು ರದ್ದುಪಡಿಸಲಾಗುವುದಿಲ್ಲ" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತ ಚಳವಳಿಯನ್ನು ಅವಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಸಾನ್ ಸಂಯುಕ್ತ ಮೋರ್ಚಾ, ಸಚಿವ ತೋಮರ್ ಅವರಿಗೆ ತಕ್ಕ ಉತ್ತರ ನೀಡಿದೆ. " ಈಗ ಸಂಘಟಿತವಾಗಿರುವ ರೈತ ಚಳುವಳಿ ಸರ್ಕಾರವೇ ರೈತರಿಗೆ ತರಿಸಿರುವ ಸಿಟ್ಟು ಮತ್ತು ನೀಡಿರುವ ಸಂಕಟದ ಪ್ರಕಟಣೆ", ಇದೀಗ ರೈತರಿಗೆ ಎಲ್ಲಾ ದಿಕ್ಕುಗಳಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಾ. ನಿಮಗೆ ಮತ ಹಾಕಿದ್ದು ಇದೇ ಗುಂಪು ಎಂಬುದನ್ನು ಮರೆಯದಿರಿ. ಒಂದು ಪವಿತ್ರ ಚಳುವಳಿಯನ್ನು ಗುಂಪುಗಾರಿಕೆ ಎಂದು ಹೇಳಿ ಅವಮಾನಿಸುವುದು ತರವಲ್ಲ ಎಂದು ಮೋರ್ಚಾ ಹೇಳಿದೆ.

ಕೇಂದ್ರ ತಂದಿರುವ ಮೂರು ಕೃಷಿ ಕಾಯಿದೆಗಳ ವಿರುದ್ಧ ತೆಲಂಗಾಣ ರಾಜ್ಯದ ನಾರಾಯಣ ಪೇಟೆಯ ಮಕ್ತಲ್ ಪ್ರದೇಶದಲ್ಲಿ ಬೃಹತ್ ರ್‍ಯಾಲಿ ಹಾಗೂ ಜನರ ಸಭೆ 21 ಫೆಬ್ರವರಿಯಂದು ಆಯೋಜನೆಗೊಂಡಿತ್ತು. ಈ ಸಂಘಟನೆಯಲ್ಲಿ ಆಲ್ ಇಂಡಿಯಾ ಕಿಸಾನ್ ಮಜ್ದೂರು ಸಭಾ ಆಯೋಜಿಸಿತ್ತು.

ಫೆಬ್ರವರಿ 21 ರಂದು ತೆಮಿಳುನಾಡಿನ ರೈತ ಹೋರಾಟಗಾರರು ದಿಲ್ಲಿಯ ರೈತ ಚಳುವಳಿಯನ್ನು ಬೆಂಬಲಿಸಲು ದಿಲ್ಲಿಯತ್ತ ತಮಿಳುನಾಡು ಎಕ್ಸ್ ಪ್ರೆಸ್ ರೈಲು ಹತ್ತಲು ಹೊರಟಾಗ, ಪೊಲೀಸರು ಅವರನ್ನು ಎಳೆದು ಆಚೆ ಹಾಕಿದ್ದನ್ನು ಸಂಯುಕ್ತ ಕಿಸಾನ್ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಇದರಿಂದಾಗಿ ರೈತ ಹೋರಾಟಗಾರರು ದಿಲ್ಲಿಗೆ ಬರಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಾನುಕೂಲತೆ ಉಂಟಾಯಿತು.

ಅಮೆರಿಕಾದ 87 ರೈತ ಸಂಘಟನೆಗಳು ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ವಿಶ್ವವಾಣಿಜ್ಯ ಸಂಸ್ಥೆಯ ಒಪ್ಪಂದಗಳಿಂದ ಭಾರತೀಯ ರೈತರ ಬದುಕಿನಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಬಂದಿವೆ ಎಂಬುದನ್ನು ಆ ಸಂಘಟನೆಗಳು ಎತ್ತಿತೋರುತ್ತಿವೆ. ಅದೇ ರೀತಿ ರೈತ ಹೋರಾಟಕ್ಕೆ ಬೆಂಬಲವಾಗಿ ನಿನ್ನೆ ಆಸ್ಟ್ರೇಲಿಯಾದಲ್ಲಿ ಟ್ರಾಕ್ಟರ್ ರ್‍ಯಾಲಿ ಏರ್ಪಾಡಾಗಿತ್ತು. ದಿಲ್ಲಿಯಲ್ಲಿ ಚಳವಳಿ ನಿರತ ರೈತರಿಗೆ ಇದಕ್ಕಿಂತಾ ಹೆಚ್ಚಿನ, ಇನ್ನೂ ವ್ಯಾಪಕ ಬೆಂಬಲ ಎಲ್ಲಾ ದಿಕ್ಕುಗಳಿಂದಲೂ ಬರುವ ಕಾಲ ದೂರವಿಲ್ಲ. ಆದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವ ಹಾಗೆ ಕಾಣುತ್ತಿಲ್ಲ.

When 87 farm organizations from the United States of America extended their solidarity to the protesting farmers in India and Australian farmers organized tractor rally in support of farmers movement, Tamil Nadu police pulled off farmers from train on 21st February night when they boarded the train in Chennai Central to travel to New Delhi to extend their support to the ongoing protests.

English summary
The farmer struggle in Delhi has been supported from all over India. Know More..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X