ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಕೆಲಸಕ್ಕೆ ಬೈ ಹೇಳಿ ಕೃಷಿಯಲ್ಲಿ ಸಾಮ್ರಾಜ್ಯ ಕಟ್ಟಿಕೊಂಡ ಪ್ರಿನ್ಸಿಪಾಲ್ ದಂಪತಿ

|
Google Oneindia Kannada News

ಗದಗ, ಜುಲೈ 2: ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಬಹುತೇಕರು ಆರ್ಥಿಕ ಸಂಕಷ್ಟವನ್ನು ಅನುಭವಿಸಿದರು. ಅದರಲ್ಲೂ ಕೃಷಿ ಕ್ಷೇತ್ರವೂ ಲಾಕ್‌ಡೌನ್ ಹೊಡೆತಕ್ಕೆ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ.

Recommended Video

ಕೆಲಸಕ್ಕೆ ಬೈ ಹೇಳಿ ಕೃಷಿಗೆ ಹೊರಳಿದ ದಂಪತಿ-ಕೃಷಿಯಲ್ಲಿ ಸಾಮ್ರಾಜ್ಯ ಕಟ್ಟಿಕೊಂಡ ಪ್ರಿನ್ಸಿಪಾಲ್

ಆದರೆ, ಗದಗಿನ ತೋಂಟದಾರ್ಯ ಇಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾಗಿದ್ದ ಡಾ. ಪ್ರಕಾಶ್ ಹುಬ್ಬಳ್ಳಿ ತಮ್ಮ ಸರ್ಕಾಇ ಹುದ್ದೆಗೆ ಗುಡ್ ಬೈ ಹೇಳಿ ಸಾವಯವ ಕೃಷಿಯತ್ತ ಮುಖಮಾಡಿ, ಅದರಲ್ಲಿ ಸಫಲರಾಗಿದ್ದಾರೆ.

ಸಮಾನ ಅಭಿರುಚಿ ಹೊಂದಿರುವ ಡಾ. ಪ್ರಕಾಶ್ ದಂಪತಿ, ಕಲಘಟಗಿ ತಾಲ್ಲೂಕಿನ ಹಿಂಡಸಗೇರಿ ಗ್ರಾಮದಲ್ಲಿನ 4 ಎಕರೆ ಜಮೀನಿನಲ್ಲಿ ತರಕಾರಿ ಬೆಳೆಯುವ ಮೂಲಕ ಸಾವಯವ ಬೇಸಾಯ ಪ್ರಾರಂಭಿಸಿದರು. 40 ಬಗೆಯ ದೇಶೀಯ ತರಕಾರಿ ಹಾಗೂ 15 ಬಗೆಯ ವಿದೇಶಿ ತರಕಾರಿಗಳನ್ನು ಬೆಳೆಯುತ್ತಾರೆ.

Hubballi: Engineering College Principal Left Job to do Organic Farming with wife at Hindasageri village

ತರಕಾರಿ ಬೆಳೆಯಲು ಎರೆಹುಳು ಗೊಬ್ಬರ, ಬೇವಿನ ಹಿಂಡಿ, ಬೇವಿನ ಎಣ್ಣೆ, ಬೇವಿನ ಅಸ್ತ್ರ, ಅಗ್ನಿ ಅಸ್ತ್ರ, ಹುಳಿ ಮಜ್ಜಿಗೆ ಮುಂತಾದವುಗಳ ಮೂಲಕ, ಗಿಡಗಳ ಪೋಷಣೆ ಮಾಡುತ್ತಿದ್ದಾರೆ.

ನೇಷರ್ ಫಸ್ಟ್ ಫಾರ್ಮ್ ಎಂಬ ತಮ್ಮದೇ ಬ್ರ್ಯಾಂಡ್ ಕಟ್ಟಿಕೊಂಡು ಗ್ರಾಹಕರ ಮನೆ ಬಾಗಿಲಿಗೆ ಸರಬರಾಜು ಮಾಡುವ ಮೂಲಕ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ನೈಸರ್ಗಿಕ ಸಾವಯವ ವಿಧಾನದಲ್ಲಿ ಬೆಳೆದ ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಾರೆ ಡಾ. ಪ್ರಕಾಶ್ ದಂಪತಿ.

Hubballi: Engineering College Principal Left Job to do Organic Farming with wife at Hindasageri village

ತರಕಾರಿ ಬೆಳೆದು ವರ್ಷವಿಡೀ ಆದಾಯ ಪಡೆಯುತ್ತಿರುವ ಡಾ. ಪ್ರಕಾಶ್ ಹುಬ್ಬಳ್ಳಿ ದಂಪತಿಯ ಕಾರ್ಯ ಇತರರಿಗೂ ಮಾದರಿಯಾಗಿದೆ. ಕೋವಿಡ್ ಲಾಕ್‌ಡೌನ್‌ನಿಂದ ತತ್ತರಿಸಿರುವ ರೈತರು ಈ ರೀತಿಯ ಮಾರ್ಗಗಳನ್ನು ಅನುಸರಿಸಿ ಹೆಚ್ಚಿನ ಆದಾಯ ಪಡೆಯಬಹುದು.

English summary
Engineering College Principal Prakash Hubballi Left Job to do Organic Farming with wife at Hindasageri village Of Hubballi taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X