ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲುತ್ತಿಲ್ಲ ಮಳೆ: ಮುಂಗಾರು ಹಂಗಾಮಿನಲ್ಲಿ ಶೇ.13ರಷ್ಟು ಭತ್ತ ಬಿತ್ತನೆ ಕುಸಿತ

|
Google Oneindia Kannada News

ಬೆಂಗಳೂರು, ಆಗಸ್ಟ್ 10: ಸದ್ಯದ ಮುಂಗಾರು ಹಂಗಾಮಿನಲ್ಲಿ ಆಗಸ್ಟ್ 05ವರೆಗೆ ದೇಶದಲ್ಲಿ 274.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತಿನೆ ಆಗುವ ಮೂಲಕ ಕಳೆದ ವರ್ಷಕ್ಕಿಂತಲೂ ಶೇ.13ರಷ್ಟು ಭತ್ತ ಬಿತ್ತನೆ ಕುಸಿತ ಕಂಡಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

ಈ ಕುರಿತು ಸೋಮವಾರ ಕೃಷಿ ಸಚಿವಾಲಯ ಬಿಡುಗಡೆ ಮಾಡಿದ ವರದಿ ಅಂಕಿ ಅಂಶಗಳು ಈ ಮಾಹಿತಿಯನ್ನು ಬಹಿರಂಗ ಮಾಡಿವೆ. ಮಳೆ ಕೊರತೆಯ ಕಾರಣದಿಂದ ದೇಶದ ಪ್ರಮುಖ ಭತ್ತ ಬಿತ್ತನೆ ರಾಜ್ಯಗಳಲ್ಲಿ ಭತ್ತ, ಗೋಧಿ ಉತ್ಪಾದನೆಯಲ್ಲಿ ಕುಸಿತ ಕಂಡಿದೆ. ಅಲ್ಲದೇ ಸರ್ಕಾರ ಇವುಗಳ ಸಂಗ್ರಹಣೆಯನ್ನು ಅಷ್ಟಾಗಿ ಮಾಡಿಕೊಳ್ಳದಿರುವುದು ಈ ಬಗ್ಗೆ ಆತಂಕ ಹೆಚ್ಚು ಮಾಡಿದೆ.

ಆಗಸ್ಟ್ 5ರವರೆಗೆ ಭತ್ತನೆ ಬಿತ್ತನೆ ರಾಜ್ಯಗಳಲ್ಲಿ ಒಟ್ಟು 274.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 314.14 ಲಕ್ಷ ಹೆಕ್ಟೇರ್ ಬಿತ್ತನೆ ಮಾಡುವ ಮೂಲಕ ಪ್ರಗತಿ ಸಾಧಿಸಲಾಗಿತ್ತು. ಅತಿ ಹೆಚ್ಚು ಭತ್ತ ಬೆಳೆಯುವ ದೇಶದ ರಾಜ್ಯಗಳಾದ ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ, ಮಧ್ಯಪ್ರದೇಶ, ಒಡಿಶಾ ಹಾಗೂ ತೆಲಂಗಾಣಗಳಲ್ಲಿ ಮಳೆ ಕೊರತೆ ಹಾಗೂ ಇನ್ನಿತರ ಕಾಣಗಳಿಂದಾಗ ಈ ಬಾರಿ ಕಡಿಮೆ ಬಿತ್ತನೆ ಆಗಿದೆ.

Due to lack of rain 13% reduction paddy sowing in monsoon season

ಮಳೆ ಕೊರತೆಯ ವಿವರ

ಅತೀ ಹೆಚ್ಚು ಭತ್ತ ಬಿತ್ತುವ ರಾಜ್ಯಗಳಾದ ಪಶ್ಚಿಮ ಉತ್ತರ ಪ್ರದೇಶದಲ್ಲಿ ಶೇ.36ರಷ್ಟು ಮಳೆ ಅಭಾವ ಉಂಟಾಗಿದ್ದರೆ, ಪೂರ್ವ ಉತ್ತರ ಪ್ರದೇಶದಲ್ಲಿ ಶೇ.43ರಷ್ಟ ಮಳೆ ಕೊರತೆ ನಿರ್ಮಾಣವಾಗಿದೆ. ಅದೇ ರೀತಿ ಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ಕ್ರಮವಾಗಿ ಶೇ.38 ಹಾಗೂ ಶೇ.45ರಷ್ಟು ಮಳೆ ಕಡಿಮೆ ಆಗುವ ಮೂಲಕ ಭತ್ತ ಬಿತ್ತನೆಗೆ ಇಳಿಕೆಗೆ ಕಾರಣವಾಗಿದೆ. ಇನ್ನು ಭಾರತ ಹವಾಮಾನ ಇಲಾಖೆಯ (ಐಎಂಡಿ) ವರದಿ ಪ್ರಕಾರ ಪಶ್ಚಿಮ ಬಂಗಾಳವು ಈ ವರ್ಷ ಆಗಸ್ಟ್ 8ರವರೆಗೆ ಶೇ.46ರಷ್ಟು ಮುಂಗಾರಿನ ಕೊರತೆ ಎದುರಿಸಿದೆ ಎಂದು ತಿಳಿದು ಬಂದಿದೆ.

ಅಕ್ಕಿ ಜಾಗತಿಕ ರಫ್ತಿನಲ್ಲಿ ಭಾರತ ಪಾಲು ಶೇ.40

ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡುವ ದೇಶಗಳ ಪೈಕಿ ಭಾರತ ಶೇ.40 ಪಾಲನ್ನು ಹೊಂದಿದೆ. ಇದೀಗಿ ಮಳೆ ಕೊರತೆಯಿಂದ ಭಾರತದಲ್ಲಿ ಅಕ್ಕಿ ಉತ್ಪಾದನೆ ಕುಂಠಿತಗೊಂಡಿರುವುದು ಜಾಗತಿಕ ವ್ಯಾಪಾರದ ಮೇಲೂ ಪರಿಣಾಮ ಭಿರು ಸಾಧ್ಯತೆ ಇದೆ ಎಂದು ಆಹಾರ ತಜ್ಞರು ವಿಶ್ಲೇಷಿಸಿದ್ದಾರೆ.

Due to lack of rain 13% reduction paddy sowing in monsoon season

2021-22ರ ವರ್ಷದಲ್ಲಿ (ಜೂನ್-ಜುಲೈ ಅವಧಿ) 129.66 ಮಿಲಿಯನ್ ಟನ್‌ಗಳಷ್ಟು ಅಕ್ಕಿ ಉತ್ಪಾದನೆ ಮಾಡಿ ಭಾರತ ದಾಖಲೆ ಬರೆದಿತ್ತು. ಅದೇ ವರ್ಷ ಆರ್ಥಿಕ ಸಾಲಿನಲ್ಲಿ ದೇಶ 21.2 ಮಿಲಿಯನ್ ಟನ್ ಅಕ್ಕಿಯನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡಿತ್ತು ಎಂದು ಮೂಲಗಳು ತಿಳಿಸಿವೆ.

Recommended Video

Modi Declared Total Income and Assets: ಕಳೆದ ವರ್ಷಕ್ಕಿಂತ 84 ಲಕ್ಷ ಆಸ್ತಿ ಕಳೆದುಕೊಂಡ ಮೋದಿ *India |OneIndia

English summary
Due to lack of rain 13% reduction paddy sowing in monsoon session, data by central ministry of agriculture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X